Franz Beckenbauer: ವಿಶ್ವಕಪ್ ವಿಜೇತ ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕೆನ್‌ಬೌರ್ ನಿಧನ
Franz Beckenbauer: ಬೇಯರ್ನ್ ಕ್ಲಬ್ ಜರ್ಮನಿಯ ಪ್ರಬಲ ಫುಟ್ಬಾಲ್ ಕ್ಲಬ್ ಆಗಿ ಹೊರಹೊಮ್ಮುವಲ್ಲಿ ಬೆಕೆನ್‌ಬೌರ್ ಪಾತ್ರ ಮಹತ್ವದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರ್ಮನಿಯು ಫುಟ್ಬಾಲ್ ರಂಗದ ಪವರ್‌ಹೌಸ್ ಆಗುವಲ್ಲೂ ಪ್ರಮುಖ ಪಾತ್ರ ವಹಿಸಿದರು.
ದಿಗ್ಗಜ ಫುಟ್ಬಾಲ್ ಆಟಗಾರ ಫ್ರಾಂಜ್ ಬೆಕೆನ್‌ಬೌರ್(Franz Beckenbauer) ನಿಧನರಾಗಿದ್ದಾರೆ. 1974ರಲ್ಲಿ ಫುಟ್ಬಾಲ್ ವಿಶ್ವಕಪ್ ಗೆದ್ದ ಪಶ್ಚಿಮ ಜರ್ಮನಿ ತಂಡದ ನಾಯಕತ್ವ ವಹಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬೆಕೆನ್‌ಬೌರ್, ತಮ್ಮ 78ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಒಮ್ಮೆ ಆಟಗಾರನಾಗಿ ವಿಶ್ವಕಪ್ ಗೆದ್ದಿದ್ದ ಬೆಕೆನ್‌ಬೌರ್, 1990ರಲ್ಲಿ ಜರ್ಮನಿ ತಂಡದ ಮ್ಯಾನೇಜರ್ ಆಗಿ ಮತ್ತೊಮ್ಮೆ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. 1972ರಲ್ಲಿ ಪಶ್ಚಿಮ ಜರ್ಮನಿ ತಂಡದ ಪರ ಯುರೋಪಿಯನ್ ಚಾಂಪಿಯನ್‌ಶಿಪ್ ಗೆದ್ದ ದಾಖಲೆಯೂ ಇವರ ಹೆಸರಲ್ಲಿದೆ. ಕಳೆದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ಇಂದು ವಿಧಿವಶರಾಗಿದ್ದಾರೆ ಎಂದು ಜರ್ಮನ್ ಫುಟ್ಬಾಲ್ ಫೆಡರೇಶನ್ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದೆ.
ಬೇಯರ್ನ್ ಮ್ಯೂನಿಚ್ ಫುಟ್ಬಾಲ್ ಕ್ಲಬ್ ಪರ ಯುರೋಪಿಯನ್ ಕಪ್‌ನಲ್ಲಿ ಬೆಕೆನ್‌ಬೌರ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ತಂಡದಲ್ಲಿ ಪ್ರಬಲ ಪ್ರಬಲ ಆಟಗಾರನಾಗಿ ಸತತ ಮೂರು ಯುರೋಪಿಯನ್ ಕಪ್ ಗೆದ್ದಿದ್ದಾರೆ.
ಆಟಗಾರನಾಗಿ ಮತ್ತು ತರಬೇತುದಾರನಾಗಿ ವಿಶ್ವಕಪ್ ಗೆದ್ದ ವಿಶ್ವದ ಕೇವಲ ಮೂರನೇ ಆಟಗಾರ ಬೆಕನ್‌ಬೌರ್. ತಮ್ಮ ಸೊಗಸಾದ ಆಟದ ಶೈಲಿ ಮತ್ತು ಸಹಜ ನಾಯಕತ್ವದಿಂದಾಗಿ ಕೈಸರ್ (Der Kaiser) ಅಥವಾ ‘ಚಕ್ರವರ್ತಿ’ ಎಂಬ ಅಡ್ಡಹೆಸರು ಇವರಿಗಿಡಲಾಗಿದೆ.
ಬೇಯರ್ನ್ ಕ್ಲಬ್ ಜರ್ಮನಿಯ ಪ್ರಬಲ ಫುಟ್ಬಾಲ್ ಕ್ಲಬ್ ಆಗಿ ಹೊರಹೊಮ್ಮುವಲ್ಲಿ ಬೆಕೆನ್‌ಬೌರ್ ಪಾತ್ರ ಮಹತ್ವದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರ್ಮನಿಯು ಫುಟ್ಬಾಲ್ ರಂಗದ ಪವರ್‌ಹೌಸ್ ಆಗುವಲ್ಲೂ ಪ್ರಮುಖ ಪಾತ್ರ ವಹಿಸಿದರು.
ವಿಭಾಗ