ಮೇಲ್ಛಾವಣಿ ಕಿತ್ತು ತಲೆ ಮೇಲೇ ಉದುರುವ ಕಲ್ಲು, ಸಿಮೆಂಟ್ ; ಬಳ್ಳಾರಿ ಸರ್ಕಾರಿ ಶಾಲೆಯ ದುಸ್ಥಿತಿ, ವಿಡಿಯೋ ನೋಡಿ-ballari news stone cement falling from the roof state of govt school in bellary video news uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೇಲ್ಛಾವಣಿ ಕಿತ್ತು ತಲೆ ಮೇಲೇ ಉದುರುವ ಕಲ್ಲು, ಸಿಮೆಂಟ್ ; ಬಳ್ಳಾರಿ ಸರ್ಕಾರಿ ಶಾಲೆಯ ದುಸ್ಥಿತಿ, ವಿಡಿಯೋ ನೋಡಿ

ಮೇಲ್ಛಾವಣಿ ಕಿತ್ತು ತಲೆ ಮೇಲೇ ಉದುರುವ ಕಲ್ಲು, ಸಿಮೆಂಟ್ ; ಬಳ್ಳಾರಿ ಸರ್ಕಾರಿ ಶಾಲೆಯ ದುಸ್ಥಿತಿ, ವಿಡಿಯೋ ನೋಡಿ

Sep 18, 2024 06:47 PM IST Umesh Kumar S
twitter
Sep 18, 2024 06:47 PM IST

ಬಳ್ಳಾರಿ: ಸರ್ಕಾರಿ ಶಾಲೆಯನ್ನು ಉಳಿಸಿ ಎನ್ನುವ ಕರ್ನಾಟಕ ಸರ್ಕಾರದ ಬೊಬ್ಬೆ ಕೇವಲ ಮೈಕ್ ಮುಂದೆ ಮಾತ್ರ ಅನ್ನೋದು ಸಾಕಷ್ಟು ಬಾರಿ ಸಾಬೀತಾಗಿದೆ. ಇದಕ್ಕೊಂದು ಮತ್ತೊಂದು ತಾಜಾ ಉದಾಹರಣೆ ಬಳ್ಳಾರಿಯ ದೇವಲಾಪುರದಲ್ಲಿರುವ ಈ ಸರ್ಕಾರಿ ಶಾಲೆಯ ಅವ್ಯವಸ್ಥೆ. ಹೌದು ಇಲ್ಲಿ ಮೇಲ್ಛಾವಣಿ ಕಿತ್ತು ಮಕ್ಕಳ ತಲೆ ಮೇಲೆ ಸಿಮೆಂಟ್, ಕಲ್ಲು ಬೀಳುತ್ತಿದ್ದು ಯಾವಾಗ ಬೇಕಾದರೂ ಅದು ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ಮಕ್ಕಳು ಭೀತಿಯಿಂದಲೇ ಶಾಲೆಯೊಳಗೆ ಕೂರುತ್ತಿದ್ದಾರೆ. ಗೋಡೆಗಳು ಶಿಥಿಲವಾಗಿದ್ದು, ಈ ಶಾಲೆಯಲ್ಲಿ ಕುಡಿಯಲೂ ನೀರಿಲ್ಲ. ಹೀಗಾಗಿ ಅಪಾಯದಿಂದ ತಪ್ಪಿಸಿಕೊಳ್ಳಲು ಈ ಶಾಲೆಯ ಮಕ್ಕಳು ಹೊರ ವರಾಂಡದಲ್ಲಿ ಕುಳಿತು ಪಾಠ ಕೇಳತೊಡಗಿದ್ದಾರೆ.

More