ತಹಶೀಲ್ದಾರ್ ಇಲ್ಲದ ಕಚೇರಿ; ದೀಪಾವಳಿ, ರಾಜ್ಯೋತ್ಸವ ಮುಗಿಸಿ ಬಂದ್ರೆ ಆಯ್ತಲ್ವಾ? ಸಿಬ್ಬಂದಿಗೆ ಸಚಿವ ಕೃಷ್ಣಭೈರೇಗೌಡ ಕ್ಲಾಸ್
ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು ಬೆಂಗಳೂರಿನ ಕೆಆರ್ ಪುರಂ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಸಿಬ್ಬಂದಿ ಗೈರು ಇದ್ದರೂ ಪುಸ್ತಕದಲ್ಲಿ ಗೈರು ಮಾಡದ್ದಕ್ಕೆ ಮುಖ್ಯಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ನಿಮ್ಮೊಂದಿಗೆ ಬಹಳ ಗೌರವಾಗಿ ಕೇಳುತ್ತಿದ್ದೇನೆ, 9 ದಿನ ಸಿಬ್ಬಂದಿ ಗೈರು ಇದ್ದರೂ ನೀವು ಏಕೆ ಮಾರ್ಕ್ ಮಾಡಿಲ್ಲ, ನಿಮಗೆ ಕೇಳುವವರು ಯಾರೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಭೇಟಿ ಸಮಯದಲ್ಲಿ ತಹಶೀಲ್ದಾರ್, ವಿಶೇಷ ತಹಶೀಲ್ದಾರ್ ಕೂಡಾ ಇಲ್ಲ, ಅವರೆಲ್ಲಾ ಎಲ್ಲಿ ಹೋಗಿದ್ದಾರೆ. ಇಷ್ಟ ಬಂದಾಗ ಹೋಗಬಹುದು, ಇಷ್ಟ ಬಂದಾಗ ಬರಬಹುದು, ಹಾಗಾದರೆ ಇಲ್ಲಿ ಜವಾಬ್ದಾರಿ ವಹಿಸಿಕೊಳ್ಳುವವರು ಯಾರು? ನಿನ್ನೆ ಬಂದಿದ್ದಾರೆ ಎಂದರೆ ಇಂದು ಬರುವ ಅವಶ್ಯಕತೆ ಏನು? ದೀಪಾವಳಿ ರಾಜ್ಯೋತ್ಸವ ಮುಗಿಸಿ ಬಂದ್ರೆ ಆಯ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.