ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ; 25 ದಿನಗಳಲ್ಲಿ 2.43 ಕೋಟಿ ರೂ. ನಗದು, ಚಿನ್ನ, ಬೆಳ್ಳಿ ಪದಾರ್ಥ ಸಂಗ್ರಹ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ; 25 ದಿನಗಳಲ್ಲಿ 2.43 ಕೋಟಿ ರೂ. ನಗದು, ಚಿನ್ನ, ಬೆಳ್ಳಿ ಪದಾರ್ಥ ಸಂಗ್ರಹ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ; 25 ದಿನಗಳಲ್ಲಿ 2.43 ಕೋಟಿ ರೂ. ನಗದು, ಚಿನ್ನ, ಬೆಳ್ಳಿ ಪದಾರ್ಥ ಸಂಗ್ರಹ

Nov 21, 2024 10:45 PM IST Rakshitha Sowmya
twitter
Nov 21, 2024 10:45 PM IST

ಚಾಮರಾಜನಗರ: ಜಿಲ್ಲೆಯ ಮಲೆ‌ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 25 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಬರೋಬ್ಬರಿ 2.43 ಕೋಟಿ ನಗದು, ಚಿನ್ನ, ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ. ಬುಧವಾರ ಮುಂಜಾನೆಯಿಂದ ತಡರಾತ್ರಿವರೆಗೂ ಮಲೆ‌ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವರ್ಗ ಹುಂಡಿ ಎಣಿಕೆ ಮಾಡಿದೆ. ಶ್ರೀ ಕ್ಷೇತ್ರದ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಎಣೆಕೆ ಕಾರ್ಯ ನಡೆದಿದೆ. ಮಾಸಿಕ ಹುಂಡಿ ಎಣಿಕೆಯಲ್ಲಿ 2,43,65,775 ರೂಪಾಯಿ ನಗದು, 62 ಗ್ರಾಂ ಚಿನ್ನ, 2.512 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ ಅಮಾನ್ಯವಾಗಿರುವ 2000 ರೂಪಾಯಿ ಮುಖ ಬೆಲೆಯ 22 ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿದೆ.

More