ಗಾಂಧೀಜಿ ಮಾತನ್ನು ಕಾಂಗ್ರೆಸ್‌ನವರು ಮರೆತಂತೆ ಇದೆ; ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ಎಂಎಲ್‌ಸಿ ಸಿಟಿ ರವಿ ಕಿಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗಾಂಧೀಜಿ ಮಾತನ್ನು ಕಾಂಗ್ರೆಸ್‌ನವರು ಮರೆತಂತೆ ಇದೆ; ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ಎಂಎಲ್‌ಸಿ ಸಿಟಿ ರವಿ ಕಿಡಿ

ಗಾಂಧೀಜಿ ಮಾತನ್ನು ಕಾಂಗ್ರೆಸ್‌ನವರು ಮರೆತಂತೆ ಇದೆ; ಸಚಿವ ದಿನೇಶ್‌ ಗುಂಡೂರಾವ್‌ ವಿರುದ್ಧ ಎಂಎಲ್‌ಸಿ ಸಿಟಿ ರವಿ ಕಿಡಿ

Published Oct 04, 2024 02:09 PM IST Rakshitha Sowmya
twitter
Published Oct 04, 2024 02:09 PM IST

ಒಂದೆಡೆ ಮುಡಾ ಸೈಟ್‌ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಹೆಚ್‌ಡಿ ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದರೆ ಮತ್ತೊಂದೆಡೆ ದಿನೇಶ್‌ ಗಾಂಧಿ ವಿಚಾರದಲ್ಲಿ ಸಿಟಿ ರವಿ ಗರಂ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್‌ ದಾಮೋದರ್ ಸಾವರ್ಕರ್ ಬಗ್ಗೆ ಸಚಿವ ದಿನೇಶ್​ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಕಾಂಗ್ರೆಸ್‌ ನಾಯಕರ ಮೇಲೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್‌ಸಿ ಸಿಟಿ ರವಿ, ನನಗೆ ಅಧಿಕಾರವಿದ್ದರೆ ಸಂಪೂರ್ಣ ಕಸಾಯಿ ಖಾನೆಯನ್ನು ಬ್ಯಾನ್ ಮಾಡುವೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಕಾಂಗ್ರೆಸ್‌ನವರು ಅದನ್ನು ಮರೆತಂತೆ ಇದೆ. ದಿನೇಶ್ ಗುಂಡೂರಾವ್ ಕಸಾಯಿ ಖಾನೆ ಮತ್ತು ದನದ ಮಾಂಸವನ್ನ ಬೆಂಬಲಿಸಲು ಹೊರಟ್ಟಿದ್ದಾರೆ. ಮೂಲಭೂತವಾದ ಹಾಗೂ ರಾಷ್ಟ್ರೀಯವಾದಕ್ಕೆ ಬಹಳ ವ್ಯತ್ಯಾಸವಿದೆ ಎಂದು ಸಿಟಿ ರವಿ ಹೇಳಿದ್ದಾರೆ.

More