ದರ್ಶನ್ ಭೇಟಿ ಮಾಡಿದ ರಚಿತಾ ರಾಮ್; ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಡಿಂಪಲ್ ಕ್ವೀನ್
ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ದರ್ಶನ್ ಭೇಟಿ ಮಾಡಲು ಪ್ರತಿದಿನ ಕನ್ನಡ ಚಿತ್ರರಂಗದ ಅನೇಕ ಸ್ಟಾರ್‌ಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬರುತ್ತಿದ್ದಾರೆ. ಗುರುವಾರ ನಟಿ ರಚಿತಾ ರಾಮ್ ಕೂಡಾ ದರ್ಶನ್ ಭೇಟಿ ಆಗಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ ರಾಮ್, ದರ್ಶನ್ ಅವರನ್ನು ನೆನೆದು ಬಹಳ ಭಾವುಕರಾದರು. ಬಿಂದಿಯಾ ರಾಮ್ ಆಗಿದ್ದ ನಾನು ರಚಿತಾ ರಾಮ್ ಆಗಲು ಕಾರಣ ದರ್ಶನ್. ಅವರನ್ನು ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ, ನಾನು ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.