logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತುಟಿಯ ಮೇಲಿನ ಮಚ್ಚೆಯಿಂದ ಗುಣ ತಿಳಿಯುತ್ತದೆ; ಕೆಳ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ ಇದ್ದರೆ ಏನರ್ಥ ನೋಡಿ

ತುಟಿಯ ಮೇಲಿನ ಮಚ್ಚೆಯಿಂದ ಗುಣ ತಿಳಿಯುತ್ತದೆ; ಕೆಳ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ ಇದ್ದರೆ ಏನರ್ಥ ನೋಡಿ

Suma Gaonkar HT Kannada

Sep 20, 2024 02:59 PM IST

google News

ತುಟಿಯ ಅಂಚಿನ ಮಚ್ಚೆ

    • ಕೆಲವರಿಗೆ ತುಟಿಯ ಮೇಲೆ ಅಥವಾ ತುಟಿಯ ಒಳಭಾಗದಲ್ಲಿ ಮಚ್ಚೆ ಇರುತ್ತದೆ. ಈ ರೀತಿಯ ಮಚ್ಚೆಯು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಯಾವ ರೀತಿ ನಿಮ್ಮ ವ್ಯಕ್ತಿತ್ವ ಇದೆ ಎಂದು ತಿಳಿದುಕೊಳ್ಳಲು ಈ ಬರಹವನ್ನು ಓದಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)
ತುಟಿಯ ಅಂಚಿನ ಮಚ್ಚೆ
ತುಟಿಯ ಅಂಚಿನ ಮಚ್ಚೆ

ಮೇಲಿನ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ

ಮೇಲಿನ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ ಇದ್ದಲ್ಲಿ ಅವರ ಮಾತಿನಲ್ಲಿ ಮಾರ್ಮಿಕತೆ ಇರುತ್ತದೆ. ಇವರ ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಭಯವಿರುತ್ತದೆ. ಮಾಡುವ ಕೆಲಸ ಕಾರ್ಯಗಳು ಸರಿಯಾದ ಮಾರ್ಗದಲ್ಲಿ ಇದ್ದರೂ ತಪ್ಪಾಗಬಹುದೆಂಬ ಭಯದಿಂದ ಹಿನ್ನೆಡೆ ಅನುಭವಿಸುತ್ತಾರೆ. ಇವರು ಸಾಮಾನ್ಯವಾಗಿ ಯಾರಿಗೂ ತೊಂದರೆ ನೀಡುವುದಿಲ್ಲ. ಕೇವಲ ತಮ್ಮ ಕೆಲಸಕ್ಕೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಕೇವಲ ಕುಟುಂಬದ ಸದಸ್ಯರಿಗೆ ಸಹಾಯ ಮಾಡುವುದು ಇವರ ವಿಶೇಷತೆ. ಅನಾವಶ್ಯಕವಾಗಿ ಯಾರೊಂದಿಗೂ ಜಗಳವಾಡುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸುಲಭವಾಗಿ ಇವರು ಎಲ್ಲರನ್ನೂ ನಂಬುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ರಹಸ್ಯ ಕಾಪಾಡಿಕೊಳ್ಳುತ್ತಾರೆ

ಆದರೆ ತಮ್ಮ ಸ್ವಂತ ಕೆಲಸ ಕಾರ್ಯಗಳ ವಿಚಾರವನ್ನು ರಹಸ್ಯವಾಗಿ ಇಡುತ್ತಾರೆ. ಸೋಲನ್ನು ಸಂತೋಷದಿಂದ ಆಸ್ವಾದಿಸುತ್ತಾರೆ. ಆದರೆ ಗೆಲ್ಲಲೇ ಬೇಕೆಂಬ ಹಠದಿಂದ ಯಶಸ್ಸನ್ನು ಗಳಿಸುತ್ತಾರೆ. ಗುರು ಹಿರಿಯರಿಗೆ ಗೌರವ ನೀಡುವುದಲ್ಲದೆ ಪ್ರೀತಿಯನ್ನು ಹಂಚುತ್ತಾರೆ. ಸುಲಭವಾಗಿ ಯಾರಿಗೂ ಹಣದ ಸಹಾಯ ಮಾಡುವುದಿಲ್ಲ. ಕಷ್ಟದ ದಿನಗಳಿದ್ದರೂ ಬೇರೆಯವರಿಂದ ಸಹಾಯ ಬಯಸುವುದಿಲ್ಲ. ಕೂಡಿಟ್ಟ ಹಣವು ಖರ್ಚಾದರೂ ಮತ್ತೆ ಹಣವನ್ನು ಉಳಿಸುವ ಚಾತುರ್ಯ ಇರುತ್ತದೆ. ಸಾಮಾನ್ಯವಾಗಿ ಇವರ ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಇರುತ್ತದೆ.

ಕಪ್ಪು ಮಚ್ಚೆಯು ಕಾಣದೆ ತುಟಿಯ ಒಳಭಾಗದಲ್ಲಿ ಇದ್ದರೆ

ಕಪ್ಪು ಮಚ್ಚೆಯು ಕಾಣದೆ ತುಟಿಯ ಒಳಭಾಗದಲ್ಲಿ ಇದ್ದರೆ ಇವರ ಮನಸ್ಸನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ತಪ್ಪುಗಳನ್ನುಸರಿಪಡಿಸುವುದು ಇವರ ಹೆಗ್ಗಳಿಕೆ. ಬೇರೆಯವರ ತಪ್ಪಿಗೆ ಅವರನ್ನು ನಿಂದಿಸದೆ ಸರಿಪಡಿಸುವ ದೊಡ್ಡತನ ಇವರಿಗೆ ಇರುತ್ತದೆ. ಇವರಿಗೆ ಕೋಪವು ಬರುವುದಿಲ್ಲ. ಒಂದು ವೇಳೆ ಕೋಪಗೊಂಡಲ್ಲಿ ಉದ್ವೇಗದಿಂದ ವರ್ತಿಸುತ್ತಾರೆ. ಇವರು ಆಡುವ ಮಾತಿನಲ್ಲಿ ಹಲವು ಅರ್ಥಗಳು ಇರುತ್ತವೆ. ಸಮಾಜದಲ್ಲಿನ ಒಳಿತಿಗಾಗಿ ಶ್ರಮಪಟ್ಟು ಕೆಲಸ ನಿರ್ವಹಿಸುತ್ತಾರೆ. ಪರೋಪಕಾರದ ಗುಣ ಚಿಕ್ಕ ವಯಸ್ಸಿನಲ್ಲಿಯೇ ಇರುತ್ತದೆ. ತಾತ ಅಥವಾ ಅಜ್ಜಿಯ ಮೇಲೆ ವಿಶೇಷ ಗೌರವ ತೋರುತ್ತಾರೆ. ವಂಶದ ಆಸ್ತಿಯಲ್ಲಿ ಇವರಿಗೆ ಸಿಂಹ ಪಾಲು ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ತೋರದೆ ಹೋದಲ್ಲಿ ತೊಂದರೆ ಅನುಭವಿಸುತ್ತಾರೆ.

ಕೆಳ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ ಇದ್ದರೆ

ಕೆಳ ತುಟಿಯಲ್ಲಿ ಕಾಣುವಂತೆ ಕಪ್ಪು ಮಚ್ಚೆ ಇದ್ದಲ್ಲಿ ಮಾಡುವ ಖರ್ಚಿನ ಮೇಲೆ ಹಿಡಿತವಿರುವುದಿಲ್ಲ. ಬೇರೆಯವರ ಮನಸ್ಸನ್ನು ಲೆಕ್ಕಿಸದೆ ಮಾತನಾಡುವ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದರಿಂದ ಕುಟುಂಬದವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಇವರುಗಳಿಗೆ ವಿಶೇಷವಾದಂತಹ ಪ್ರತಿಭೆ ಇರುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನವು ಇವರಿಗೆ ದೊರೆಯುತ್ತದೆ. ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ.

ದೀರ್ಘಕಾಲದ ಪ್ರವಾಸವನ್ನು ಇಷ್ಟಪಡುತ್ತಾರೆ

ತಮ್ಮದೇ ಆದ ಗುಂಪಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುವ ಇವರು ಸಹಪಾಠಿಗಳ ಯಶಸ್ಸಿಗೂ ಕಾರಣರಾಗುತ್ತಾರೆ. ದೀರ್ಘಕಾಲದ ಪ್ರವಾಸವನ್ನು ಇಷ್ಟಪಡುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಅನಾವಶ್ಯಕ ವಾದವಿವಾದಗಳು ಇರುತ್ತವೆ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಹಣದ ಕೊರತೆ ಇವರನ್ನು ಬಾಧಿಸುವುದಿಲ್ಲ. ಸಾಂಪ್ರದಾಯಿಕ ಕಲೆಗಳಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ. ಜೀವನದಲ್ಲಿ ಏನಾದರೂ ಒಂದು ದೊಡ್ಡ ಸಾಧನೆ ಮಾಡುವುದು ಇವರ ಗುರಿಯಾಗಿರುತ್ತದೆ. ಮಕ್ಕಳನ್ನು ವಿಶೇಷ ಅಕ್ಕರೆಯಿಂದ ಬೆಳೆಸುತ್ತಾರೆ.

ಕೆಳ ತುಟಿಯ ಒಳಭಾಗದಲ್ಲಿ ಕಪ್ಪುಮಚ್ಚೆ ಇದ್ದಲ್ಲಿ

ಕೆಳ ತುಟಿಯ ಒಳಭಾಗದಲ್ಲಿ ಕಪ್ಪುಮಚ್ಚೆ ಇದ್ದಲ್ಲಿ ಬುದ್ಧಿವಂತಿಕೆಯಿಂದ ಬೇರೆಯವರ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಆದರೆ ತಮ್ಮಲ್ಲಿರುವ ವಿಚಾರಗಳನ್ನು ರಹಸ್ಯವಾಗಿ ಇಡುತ್ತಾರೆ. ಉಪಯೋಗವಾಗಬಲ್ಲ ಕೆಲಸಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಬೇರೆಯವರ ಅಧೀನದಲ್ಲಿ ಕೆಲಸ ನಿರ್ವಹಿಸಲು ಇಷ್ಟಪಡುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುತ್ತಾರೆ.

ಸ್ವಂತ ಮನೆಯ ಕನಸು

ಕಷ್ಟವೆನಿಸಿದರು ಸ್ವಂತ ಉದ್ದಿಮೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರ ಮನದಲ್ಲಿರುವ ವಿಚಾರಗಳು ಎಲ್ಲರಿಗೂ ಸಹಕಾರಿಯಾಗುತ್ತದೆ. ಕುಟುಂಬದ ಒಳಿತಿಗಾಗಿ ಯಾವುದೇ ಸಂದರ್ಭವನ್ನು ಎದುರಿಸುತ್ತಾರೆ. ತಂದೆ ತಾಯಿಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಸ್ವಂತ ಮನೆಯ ಕನಸು ಆತ್ಮೀಯರ ಸಹಕಾರದಿಂದ ಕೈಗೂಡುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ. ಕುಟುಂಬದ ಹೆಣ್ಣು ಮಕ್ಕಳಿಗೆ ವಿಶೇಷವಾದಂತಹ ಅನುಕೂಲತೆಗಳನ್ನು ಕಲ್ಪಿಸುತ್ತಾರೆ. ಮಾತನಾಡಲು ಆರಂಭಿಸಿದರೆ ಕೊನೆ ಇರುವುದಿಲ್ಲ. ಇವರ ಮಾತುಕತೆಗೆ ಕೇಳುಗರಿಗೆ ಬೇಸರ ಉಂಟಾಗುತ್ತದೆ. ಗೌರವ ಡಾಕ್ಟರೇಟ್ ನಂತಹ ಪ್ರಶಸ್ತಿಗಳು ಇವರಿಗೆ ಲಭಿಸುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ