ಕಟಕ ರಾಶಿ ಭವಿಷ್ಯ ಜುಲೈ 13; ಇಂದು ವೃತ್ತಿ ಬದುಕಲ್ಲಿ, ವೈಯಕ್ತಿಕ ಜೀವನದಲ್ಲಿ ಡಿಪ್ಲೋಮ್ಯಾಟಿಕ್ ಆಗಿದ್ದರೆ ಒಳಿತು
Jul 13, 2024 09:54 AM IST
ಕಟಕ ರಾಶಿ ಭವಿಷ್ಯ ಜುಲೈ 13; ಇಂದು ವೃತ್ತಿ ಬದುಕಲ್ಲಿ, ವೈಯಕ್ತಿಕ ಜೀವನದಲ್ಲಿ ಡಿಪ್ಲೋಮ್ಯಾಟಿಕ್ ಆಗಿದ್ದರೆ ಒಳಿತು ಎನ್ನುತ್ತಿದೆ ರಾಶಿಫಲ.
Cancer Daily Horoscope July 13, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕ ಅಥವಾ ಕಟಕ ರಾಶಿ. ಜುಲೈ 13 ರ ಕಟಕ ರಾಶಿ ಭವಿಷ್ಯ ಪ್ರಕಾರ, ಇಂದು ವೃತ್ತಿ ಬದುಕಲ್ಲಿ, ವೈಯಕ್ತಿಕ ಜೀವನದಲ್ಲಿ ಡಿಪ್ಲೋಮ್ಯಾಟಿಕ್ ಆಗಿದ್ದರೆ ಒಳಿತು ಎನ್ನುತ್ತಿದೆ ರಾಶಿಫಲ.
ಕಟಕ ರಾಶಿಯವರ ಪಾಲಿಗೆ ಈ ದಿನ (ಜುಲೈ 13) ಮಿಶ್ರ ಫಲದ ದಿನವಾಗುವ ಸಾಧ್ಯತೆ ಇದೆ. ಹೀಗಾಗಿ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸ್ವಲ್ಪ ಡಿಪ್ಲೋಮ್ಯಾಟಿಕ್ ಆಗಿ ಕೆಲಸ ಮಾಡಿದರೆ ಅನುಕೂಲ. ಕಚೇರಿ ರಾಜಕೀಯದಿಂದ ದೂರವಿರುವುದು ಉತ್ತಮ. ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಹಣವನ್ನು ಖರ್ಚು ಮಾಡಿ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಕಟಕ ರಾಶಿಯವರ ಪ್ರೇಮ ಜೀವನ (Cancer Love Horoscope): ಕಟಕ ರಾಶಿಯವರಾಗಿದ್ದು ಒಬ್ಬಂಟಿಯಾಗಿರುವವರಿಗೆ ಈ ದಿನ ಶುಭ ದಿನವೆಂಬ ಅನುಭವ ಉಂಟಾದೀತು. ಒಂಟಿ ಜಂಟಿಯಾಗುವುದಕ್ಕೆ ಪೂರಕ ಸನ್ನಿವೇಶದಲ್ಲಿ ಇಂದು ಅವರು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ನಿಮ್ಮ ಮಾಜಿ ಪ್ರೇಮಿಯಿಂದ ಅಂತರ ಕಾಯ್ದುಕೊಳ್ಳಿ. ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಕೆಲವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಮಾತನಾಡಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ಸಂಗಾತಿಗೆ ನೀವು ಅಚ್ಚರಿಯ ಉಡುಗೊರೆಯನ್ನು ನೀಡಬಹುದು. ನಿಮ್ಮ ಪ್ರೇಮಿಯೊಂದಿಗೆ ನೀವು ರೊಮ್ಯಾಂಟಿಕ್ ಡಿನ್ನರ್ ಅಥವಾ ಲಾಂಗ್ ಡ್ರೈವ್ ಹೋಗುವ ಬಗ್ಗೆ ಪ್ಲಾನ್ ಮಾಡಬಹುದು. ಸಂಬಂಧದ ಕುರಿತು ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಬಹುದು. ಮಿಥುನ ರಾಶಿಯ ವಿವಾಹಿತರು ತಮ್ಮ ಹಳೆಯ ಪ್ರೇಮ ಸಂಬಂಧದ ಬಗ್ಗೆ ತಮ್ಮ ಸಂಗಾತಿಯೊಂದಿಗೆ ಚರ್ಚಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು.
ಕಟಕ ರಾಶಿ ದಿನ ಭವಿಷ್ಯ ಜುಲೈ 11; ಉದ್ಯೋಗ, ಆದಾಯ, ಆರೋಗ್ಯ
ಕಟಕ ರಾಶಿ ವೃತ್ತಿ ಭವಿಷ್ಯ (Cancer Professional Horoscope): ಹೊಸ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಸಂಜೆಯವರೆಗಿನ ಸಮಯವು ತುಂಬಾ ಅನುಕೂಲಕರ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಸಂದರ್ಶನದಲ್ಲಿ ಯಶಸ್ವಿಯಾಗುತ್ತಾರೆ. ಕಚೇರಿ ರಾಜಕೀಯದಿಂದ ದೂರವಿರಿ. ಇಂದು ನೀವು ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಯ ಜವಾಬ್ದಾರಿಯನ್ನು ಪಡೆಯಬಹುದು. ನೀವು ಕೆಲವು ಕಾರ್ಯಗಳಿಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಐಟಿ, ಅನಿಮೇಷನ್ ಮತ್ತು ಎಂಜಿನಿಯರಿಂಗ್ ವೃತ್ತಿಪರರಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ಕೆಲವರು ಕೆಲಸ ಬದಲಾಯಿಸಲು ಯೋಜಿಸಬಹುದು.
ಕಟಕ ರಾಶಿ ಆರ್ಥಿಕ ಜೀವನ (Cancer Money Horoscope): ಇಂದು ಆರ್ಥಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿರುವಿರಿ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಕೆಲವರು ಚಿನ್ನ ಅಥವಾ ಆಭರಣಗಳನ್ನು ಖರೀದಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಂಜೆಯವರೆಗಿನ ಸಮಯ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಉಳಿಯುತ್ತದೆ. ಆದಾಗ್ಯೂ, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ. ಕೆಲವರಿಗೆ ಆಸ್ತಿ ವಿಚಾರದಲ್ಲಿ ಸಂಬಂಧಿಕರೊಂದಿಗೆ ಕಲಹ ಉಂಟಾಗಬಹುದು.
ಕಟಕ ರಾಶಿ ಆರೋಗ್ಯ ಜಾತಕ (Cancer Health Horoscope): ಈ ರಾಶಿಯ ಬಹುತೇಕರ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಆದಾಗ್ಯೂ, ಇಂದು ಕೆಲವರಿಗೆ ಗಂಟಲು ನೋವು ಅಥವಾ ಕಣ್ಣಿನ ಸೋಂಕು ಕಾಡಬಹುದು. ಯಾವುದೇ ಸಂದರ್ಭದಲ್ಲೂ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಹಿರಿಯರು ಕೀಲು ನೋವು ಅಥವಾ ನಿದ್ರಾಹೀನತೆಯಿಂದ ಬಳಲಬಹುದು. ಕೆಲವು ಜನರು ಚರ್ಮ ಅಥವಾ ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಯಾವುದಕ್ಕೂ ನಿಮ್ಮ ಆಹಾರದಲ್ಲಿ ಅಗತ್ಯಕ್ಕೆ ತಕ್ಕಂತೆ ಪ್ರೋಟೀನ್ ಮತ್ತು ಇತರೆ ಪೌಷ್ಟಿಕಾಂಶ ಸಮೃದ್ಧವಾಗಿರುವ ಆಹಾರಗಳನ್ನು ಬಳಸಿ. ಆರೋಗ್ಯದ ಬಗ್ಗೆ ಗಮನ ಕೊಡಬೇಕಾದ್ದು ಅವಶ್ಯ.
ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.
ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.