logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Feng Shui Plants: ಹಣದ ಸಮಸ್ಯೆಯಿಂದ ಕಂಗಾಲಾಗಿದ್ದೀರಾ, ಹಾಗಿದ್ರೆ ಈ 4 ಗಿಡಗಳನ್ನು ಮನೆಗೆ ತನ್ನಿ

Feng Shui Plants: ಹಣದ ಸಮಸ್ಯೆಯಿಂದ ಕಂಗಾಲಾಗಿದ್ದೀರಾ, ಹಾಗಿದ್ರೆ ಈ 4 ಗಿಡಗಳನ್ನು ಮನೆಗೆ ತನ್ನಿ

HT Kannada Desk HT Kannada

Feb 18, 2024 03:54 PM IST

google News

ಅದೃಷ್ಟ ತರುವ ಸಸ್ಯಗಳು

    • Feng Shui Plants: ನಕಾರಾತ್ಮಕ ಶಕ್ತಿಯು ಯಾವಾಗಲೂ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಗಿಡಗಳನ್ನು ಮನೆಯಲ್ಲಿಡುವುದರಿಂದ ಧನಾತ್ಮಕತೆ, ಅದೃಷ್ಟ ಮತ್ತು ಹಣ ನಿಮ್ಮದಾಗುತ್ತದೆ. ಹಾಗಾದರೆ ಆ ನಾಲ್ಕು ಗಿಡಗಳು ಯಾವುವು? ಅವುಗಳನ್ನು ಮನೆಯ ಯಾವ ಜಾಗದಲ್ಲಿಡುವುದು ಒಳ್ಳೆಯದು?
ಅದೃಷ್ಟ ತರುವ ಸಸ್ಯಗಳು
ಅದೃಷ್ಟ ತರುವ ಸಸ್ಯಗಳು (HT File Photo)

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಕೆಲವು ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಅದೃಷ್ಟ ಮತ್ತು ಸಂಪತ್ತು ತರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮನೆಯಲ್ಲಿ ಬೆಳೆಸುವ ಸಸ್ಯಗಳು ಬಗ್ಗೆ ಹೇಳುವುದಾದರೆ ಪ್ರತಿಯೊಬ್ಬರ ಮನಸ್ಸಿಗೆ ಮೊದಲು ಬರುವ ಸಸ್ಯವೇ ಮನಿ ಪ್ಲಾಂಟ್‌. ಆದರೆ ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಮಾತ್ರವಲ್ಲದೆ ಇತರ ಸಸ್ಯಗಳು ಸಹ ನಿಮಗೆ ಅದೃಷ್ಟವನ್ನು ತರುತ್ತವೆ. ಅವುಗಳು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುತ್ತದೆ ಎಂಬ ನಂಬಿಕೆಯಿದೆ. ಫೆಂಗ್ ಶೂಯಿಯಲ್ಲಿ ಜೀವನದ ಸಮಸ್ಯೆಗಳನ್ನು ನಿವಾರಿಸಲು ಅನೇಕ ಪರಿಹಾರಗಳಿವೆ. ಈ ಗಿಡಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿರುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನೀವು ಕೆಲಸ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಅಥವಾ ಸಾಲ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ನೀವು ಕೆಲಸ ಮತ್ತು ವ್ಯಾಪಾರದಲ್ಲಿ ಯಶಸ್ವಿಯಾಗಲು ಬಯಸುವಿರಾ? ಹಾಗಾದರೆ ಈ ಫೆಂಗ್ ಶೂಯಿ ಗಿಡಗಳನ್ನು ಮನೆಯಲ್ಲಿ ಇಡಿ. ಅವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಇದನ್ನೂ ಓದಿ: Dream Catcher: ಏನಿದು ಡ್ರೀಮ್‌ ಕ್ಯಾಚರ್‌? ಮನೆ, ಕಚೇರಿಗಳಲ್ಲಿ ಇದನ್ನು ಬಳಸುವುದರ ಹಿಂದಿನ ಕಾರಣ ಹೀಗಿದೆ

ಮನಿ ಪ್ಲಾಂಟ್

ಹೆಸರೇ ಸೂಚಿಸುವಂತೆ ನಿಮಗೆ ಹಣ, ಸಂಪತ್ತನ್ನು ತಂದುಕೊಡುವ ಸಸ್ಯಗಳ ಪಟ್ಟಿಯಲ್ಲಿ ಮೊದಲಿಗೆ ಇರುವುದು ಮನಿ ಪ್ಲಾಂಟ್‌. ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮನಿ ಪ್ಲಾಂಟ್ ಅನ್ನು ಮನೆಗೆ ತನ್ನಿ. ಇದು ತುಂಬಾ ಅದೃಷ್ಟದ ಗಿಡ ಎಂದು ಪರಿಗಣಿಸಲಾಗಿದೆ. ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಹಣದ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಮನಿ ಪ್ಲಾಂಟ್ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಇದು ನಿಮಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಈ ಗಿಡವನ್ನು ಅದೃಷ್ಟದ ಸೂಚಕವೆಂದು ಪರಿಗಣಿಸಲಾಗಿದೆ.

ಬಿದಿರು ಗಿಡ

ಬಿದಿರಿನ ಗಿಡ ಮನೆಯಲ್ಲಿರುವುದು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮನೆಯ ಪೂರ್ವ ಮೂಲೆಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿದಿರಿನ ಗಿಡವನ್ನು ಸರಿಯಾದ ಜಾಗದಲ್ಲಿ ಇಟ್ಟರೆ ಅದೃಷ್ಟ ದುಪ್ಪಟ್ಟಾಗುತ್ತದೆ. ಆ ವ್ಯಕ್ತಿಗೆ ಸಂಪತ್ತು, ಕೀರ್ತಿ ಮತ್ತು ಸಂತೋಷಕ್ಕೆ ಕೊರತೆಯಿರುವುದಿಲ್ಲ. ಮನೆಯ ಸದಸ್ಯರ ಏಳ್ಗೆಗಾಗಿ ಬಿದಿರಿನ ಗಿಡದೊಂದಿಗೆ ಲಾಫಿಂಗ್‌ ಬುದ್ಧನ ಪ್ರತಿಮೆಯನ್ನು ಸ್ಟಡಿ ಟೇಬಲ್‌ ಮೇಲೆ ಇರಿಸಿ. ನಿಮ್ಮ ಯಶಸ್ಸಿನ ಹಾದಿ ಸುಗಮವಾಗುತ್ತದೆ.

ಡೈನಿಂಗ್‌ ಟೇಬಲ್‌ ಮೇಲೆ ಇಟ್ಟರೆ ಮನೆಗೆ ಸಂತೋಷ ಮತ್ತು ಶ್ರೇಯಸ್ಸನ್ನು ತರುತ್ತದೆ. ಮಲಗುವ ಕೋಣೆಯಲ್ಲಿ ಇಟ್ಟರೆ ಪತಿ-ಪತ್ನಿಯರ ಬಾಂಧವ್ಯ ಗಟ್ಟಿಯಾಗುತ್ತದೆ. ಪ್ರೀತಿಯ ಜೀವನ ಮಧುರವಾಗುತ್ತದೆ. ಲಿವಿಂಗ್ ರೂಮ್‌ನ ಪೂರ್ವ ಅಥವಾ ದಕ್ಷಿಣ ಮೂಲೆಯಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ ಎಂದು ನಂಬಲಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಣಕಾಸಿನ ತೊಂದರೆಗಳನ್ನು ತೊಡೆದುಹಾಕಲು ಮನೆಯ ಈಶಾನ್ಯ ಮೂಲೆಯಲ್ಲಿ ಬಿದಿರಿನ ಗಿಡವನ್ನು ಇರಿಸಿ.

ಇದನ್ನೂ ಓದಿ: Vastu Tips: ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದು ಒಳ್ಳೆಯದು..? ನಿದ್ರೆಗೂ ಇದೆ ವಾಸ್ತು ನಿಯಮ

ಜೇಡ್‌ ಪ್ಲಾಂಟ್‌

ಇದನ್ನು ಕ್ರಾಸುಲಾ ಗಿಡ ಅಥವಾ ಕುಬೇರ ಸಸ್ಯ ಎಂದು ಕರೆಯಲಾಗುತ್ತದೆ. ನೀವು ದೀರ್ಘಕಾಲದಿಂದ ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ಅದಕ್ಕೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯೂ ಕಾರಣ ಆಗಿರಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಜೇಡ್ ಪ್ಲಾಂಟ್‌ ಅನ್ನು ಬೆಳೆಸಬಹುದು.

ಪೀಸ್‌ ಲಿಲಿ

ಮನೆಯಲ್ಲಿನ ಆರ್ಥಿಕ ಸ್ಥಿರತೆಗಾಗಿ ಪೀಸ್‌ ಲಿಲ್ಲಿಯನ್ನು ನೆಡಬೇಕು. ಈ ಗಿಡವನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಇಟ್ಟುಕೊಳ್ಳುವುದು, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ. ಆರ್ಥಿಕ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ.

ತುಳಸಿ ಗಿಡ

ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಲಕ್ಷ್ಮೀ ದೇವಿಯ ಸಾಕಾರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿದರೆ ಆರ್ಥಿಕ ಪರಿಸ್ಥಿತಿಯಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

 

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ