ಉಪವಾಸದಲ್ಲಿ ಹಣ್ಣುಗಳನ್ನು ಮಾತ್ರ ತಿಂತಿದ್ದೀರಾ? ಈ ತಪ್ಪುಗಳಿಂದ ನೀವೇ ಅನಾರೋಗ್ಯವನ್ನ ಆಹ್ವಾನಿಸುತ್ತೀರಿ
Oct 05, 2024 10:56 AM IST
ನವರಾತ್ರಿ ಉಪವಾಸದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ.
- ನವರಾತ್ರಿಯ ಇಡೀ ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ಪೂಜಿಸಲಾಗುತ್ತೆ. ಈ ವೇಳೆ ಉಪವಾಸವಿದ್ದರೆ ಹಣ್ಣುಗಳನ್ನು ತಿನ್ನುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉಪವಾಸದಲ್ಲಿ ಆಹಾರದ ಕ್ರಮವನ್ನು ತಿಳಿಯಿರಿ.
ನವರಾತ್ರಿಯಲ್ಲಿ ಅನೇಕ ಜನರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಕೆಲವರು ದಿನವಿಡೀ ಹಣ್ಣುಗಳನ್ನು ಮಾತ್ರ ತಿನ್ನುತ್ತಾರೆ. ಉಪವಾಸದ ದಿನಗಳಲ್ಲಿ ಸಾತ್ವಿಕ ಆಹಾರವನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ, ನೀವು ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದರೆ, ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಉಪವಾಸದ ಸಮಯದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಗಳಿವೆ.
ತಾಜಾ ಫೋಟೊಗಳು
ನೀರು ಕುಡಿಯುವುದು
ಉಪವಾಸದ ಸಂದರ್ಭದಲ್ಲಿ ಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ವಿಶೇಷವಾಗಿ ಸೌತೆಕಾಯಿ, ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ ಮುಂತಾದ ರಸಭರಿತ ಮತ್ತು ನೀರಿನ ಹಣ್ಣುಗಳನ್ನು ತಿನ್ನುವಾಗ ಈ ನಿಯಮವನ್ನು ಅನುಸರಿಸಬೇಕು. ಅಲ್ಲದೆ, ಸೇಬು, ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಯಾವ ಸಮಯದಲ್ಲಿ ಹಣ್ಣುಗಳನ್ನು ತಿನ್ನಬೇಕು?
ವೈಜ್ಞಾನಿಕವಾಗಿ ಹಣ್ಣುಗಳನ್ನು ತಿನ್ನಲು ಎಲ್ಲಾ ಸಮಯವೂ ಸರಿ ಎಂದು ಹೇಳಬಹುದು. ಆದರೆ ಆಯುರ್ವೇದದಲ್ಲಿ ರಾತ್ರಿಗಿಂತ ಹಗಲಿನಲ್ಲಿ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಸೇಬಿನಿಂದ ಹಿಡಿದು ಬಾಳೆಹಣ್ಣು, ದಾಳಿಂಬೆ, ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದಾದರೆ ಮೊದಲು ಒಣ ಹಣ್ಣುಗಳಂತಹ ಲಘು ತಿಂಡಿಗಳ ನಂತರ ಹಣ್ಣುಗಳನ್ನು ತಿನ್ನಬೇಕು.
ಹುಳಿ ಮತ್ತು ಸಿಹಿ ಹಣ್ಣು ತಿನ್ನುವ ಮುನ್ನ ಈ ನಿಯಮ ಪಾಲಿಸಿ
ಹುಳಿ ಮತ್ತು ಸಿಹಿ ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು. ಇವುಗಳ ರುಚಿ ವಿಭಿನ್ನವಾಗಿರುವುದು ಒಂದು ಕಾರಣವಾದರೆ ಅವುಗಳನ್ನು ಒಟ್ಟಿಗೆ ಬೆರೆಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಇನ್ನೊಂದು ಕಾರಣ. ಹಾಗಾಗಿ ಒಂದಾನೊಂದು ಬಗೆಯ ಹಣ್ಣುಗಳನ್ನು ತಿನ್ನಿ. ಎಲ್ಲವನ್ನೂ ಬೆರೆಸಿ ತಿನ್ನಬೇಡಿ.
ಸಿಪ್ಪೆಯೊಂದಿಗೆ ತಿನ್ನುವ ಹಣ್ಣಿಗೆ ಒತ್ತು ನೀಡಿ
ಸಿಪ್ಪೆ ತೆಗೆಯದೆ ತಿನ್ನುವ ಹಣ್ಣುಗಳಿಗೆ ಒತ್ತು ನೀಡಬೇಕು. ಆಗ ಮಾತ್ರ ಅನುಕೂಲವಾಗುತ್ತದೆ. ಹಣ್ಣಿನ ಸಿಪ್ಪೆ ದೇಹಕ್ಕೆ ಅಗತ್ಯವಿರುವ ಫೈಬರ್ ಅನ್ನು ಒದಗಿಸುತ್ತದೆ. ಇಂಥ ಹಣ್ಣುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಮಲಬದ್ಧತೆಯೂ ದೂರವಾಗುತ್ತದೆ.
ದಿನವಿಡೀ ಹಣ್ಣುಗಳು ತಿನ್ನುವುದು ಒಳ್ಳೆಯದಾ?
ನೀವು ಒಂಬತ್ತು ದಿನಗಳ ಕಾಲ ನವರಾತ್ರಿ ಉಪವಾಸ ಮಾಡುತ್ತಿದ್ದರೆ, ನೀವು ದಿನವಿಡೀ ಕೇವಲ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಹಣ್ಣುಗಳು ಫ್ರಕ್ಟೋಸ್ ಅನ್ನು ಹೊಂದಿರುತ್ತವೆ, ಇದು ನೈಸರ್ಗಿಕ ಸಕ್ಕರೆಯಾಗಿದೆ. ಹೆಚ್ಚು ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಇರುವ ಆಲೂಗಡ್ಡೆ ಮತ್ತು ಕಡಲೆಕಾಯಿಯಂತಹ ಪದಾರ್ಥಗಳನ್ನೂ ಸೇವಿಸಲು ಒತ್ತು ನೀಡಿ.