logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date: 9ನೇ ತಾರೀಕು ಹುಟ್ಟಿದವರು ಸಹಾಯ ಪಡೆಯುವುದಕ್ಕಿಂತ ಸಹಾಯ ಮಾಡುವುದೇ ಹೆಚ್ಚು, ಹೊಗಳಿಕೆಗೆ ಮನಸೋತು ಮೋಸ ಹೋಗುವಿರಿ

Birth Date: 9ನೇ ತಾರೀಕು ಹುಟ್ಟಿದವರು ಸಹಾಯ ಪಡೆಯುವುದಕ್ಕಿಂತ ಸಹಾಯ ಮಾಡುವುದೇ ಹೆಚ್ಚು, ಹೊಗಳಿಕೆಗೆ ಮನಸೋತು ಮೋಸ ಹೋಗುವಿರಿ

HT Kannada Desk HT Kannada

Mar 09, 2024 07:00 AM IST

google News

ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)

    • Birth Date Astrology: 9ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ ಎಚ್‌. ಸತೀಶ್‌ ಅವರು ನೀಡಿದ ಮಾಹಿತಿ ಇಲ್ಲಿದೆ.
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)

ಯಾವುದೇ ತಿಂಗಳ 9ನೇ ತಾರೀಕು ಹುಟ್ಟಿದವರು, ಪುರುಷರಾಗಲಿ ಸ್ತ್ರೀಯರಾಗಲಿ ಅವರಿಗೆ ಅಧಿಕಾರದ ಗದ್ದುಗೆ ದೊರೆಯುತ್ತದೆ. ಇವರಿಗೆ ಚಿಕ್ಕ ವಯಸ್ಸಿನಿಂದಲೇ ನಾಯಕತ್ವದ ಗುಣ ಲಭಿಸಿರುತ್ತದೆ. ಒಳ್ಳೆಯ ಆತ್ಮವಿಶ್ವಾಸ ಮತ್ತು ಗೆಲ್ಲಲೇ ಬೇಕೆಂಬ ಛಲ ಜೀವನದಲ್ಲಿನ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ಮಾಡುತ್ತದೆ. ವಿದ್ಯಾಭ್ಯಾಸವು ಕಡಿಮೆ ಇದ್ದರೂ ಬುದ್ದಿಶಕ್ತಿಗೆ ಕೊರತೆ ಇರುವುದಿಲ್ಲ. ತನ್ನ ಜೊತೆ ಇರುವವರಿಗೆ ಸಹ ಬಾಳುವ ರೀತಿಯನ್ನು ತೋರಿಸುವಿರಿ. ಬೇರೆಯವರಿಗೆ ನೀತಿ ಬೋಧನೆ ಮಾಡುವಿರಿ. ಕೆಟ್ಟ ಗುಣಗಳು ಇರುವವರಿಂದ ದೂರ ಉಳಿಯುವಿರಿ. ದೇವರಲ್ಲಿ ನಂಬಿಕೆ ಇರುತ್ತದೆ. ಮಾಡಬೇಕಾದ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಇವರಿಗೆ ನಿದ್ದೆ ಮಾಡುವುದೆಂದರೆ ಇಷ್ಟವಾಗುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಅನಾವಶ್ಯಕವಾಗಿ ಮುಂದೂಡುವುದಿಲ್ಲ. ಬೇರೆಯವರಿಂದ ಸಹಾಯ ಪಡೆಯುವುದರ ಬದಲು ಸಹಾಯ ಮಾಡುವುದೇ ಹೆಚ್ಚು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿಯನ್ನು ವಹಿಸುವಿರಿ. ತಂದೆ ತಾಯಿಗಳಲ್ಲದೆ ಬೇರೆಯವರ ಪ್ರಶಂಸೆಯು ದೊರೆಯುತ್ತದೆ. ಬೇರೆಯವರ ಅಧೀನದಲ್ಲಿ ಕೆಲಸ ಮಾಡದೆ ಉದ್ಯಮದ ಚುಕ್ಕಾಣಿ ಹಿಡಿಯುವಿರಿ. ನಿಮ್ಮ ಮಾತು ಮತ್ತು ನಿರ್ಣಯಗಳನ್ನು ಒಪ್ಪಿಕೊಳ್ಳುವವರಿಗೆ ಬೆಂಗಾವಲಾಗಿ ನಿಲ್ಲುವಿರಿ. ಉದ್ದಿಮೆಯೊಂದರ ನಿರ್ವಹಣೆಯ ಅಧಿಕಾರವು ನಿಮಗೆ ದೊರೆಯುತ್ತದೆ. ತಂದೆಯವರು ಅನುಸರಿಸಿದ ಮಾರ್ಗದಲ್ಲಿ ನಡೆದು ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಆರೋಗ್ಯವನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ.

ಮಕ್ಕಳು ಮತ್ತು ಸೋದರರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಕಾರಣವಿಲ್ಲದೆ ಕೋಪಕ್ಕೆ ಒಳಗಾಗುವುದಿಲ್ಲ. ಕೋಪದಲ್ಲಿ ತಪ್ಪು ಮಾಡಿದರು ನಂತರ ಪಶ್ಚಾತಾಪ ಪಡುವಿರಿ. ಹೊಗಳಿಕೆಗೆ ಮರುಳಾಗಿ ಯಾವುದೇ ರೀತಿಯ ಅನುಕೂಲವನ್ನು ಕಲ್ಪಿಸುವಿರಿ. ಎಲ್ಲರೂ ನಿಮ್ಮನ್ನು ಹೋಗಬೇಕೆಂಬ ಮನಸಿರುತ್ತದೆ. ಮಾಡುವ ತಪ್ಪನ್ನು ತಿದ್ದಿಕೊಳ್ಳುವುದರಲ್ಲಿ ಮೊದಲಿಗರು. ಬೇರೆಯವರ ಬುದ್ಧಿಮಾತಿಗೆ ವಿರೋಧ ವ್ಯಕ್ತಪಡಿಸುವಿರಿ. ಜೀವನ ನಡೆಸಲು ನಿಮ್ಮದೇ ಆದಂತಹ ಕಾನೂನನ್ನು ರೂಪಿಸಿಕೊಳ್ಳುವಿರಿ. ಕೆಲವೊಮ್ಮೆ ಹೊಗಳಿಕೆಗೆ ಮನಸೋತು ಮೋಸ ಹೋಗುವಿರಿ. ಒಂದು ವೇಳೆ ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ ಅದನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಯಾರಿಗೂ ತಿಳಿಯದಂತೆ ಒಬ್ಬರೇ ದೇವರಲ್ಲಿ ಇಷ್ಟವಾದ ವರವನ್ನು ಬೇಡುವಿರಿ.

ಸೂರ್ಯನ ಪೂಜೆ ಮಾಡುವುದೆಂದರೆ ಆಸಕ್ತಿ. ಇವರಿಗಿಂತ ವಯಸ್ಸಿನಲ್ಲಿ ಹಿರಿಯರಾದವರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೆ ಸಹಾಯ ಮಾಡುವುದರಲ್ಲಿ ಇವರೇ ಮೊದಲಿಗರು. ಸಭೆ ಸಮಾರಂಭಗಳಲ್ಲಿ ನಿಮ್ಮದೇ ಕಾರುಬಾರು. ಎಲ್ಲರೂ ಮೆಚ್ಚುವ ರೀತಿಯಲ್ಲಿ ಮಾತನಾಡುವುದಂದರೆ ಬಲು ಇಷ್ಟ. ಅಧಿಕಾರಕ್ಕಾಗಿ ತಪ್ಪು ದಾರಿಯನ್ನು ಹಿಡಿಯುವುದಿಲ್ಲ. ಒಳ್ಳೆಯ ಫಲಗಳು ದೊರೆಯುವವರೆಗೂ ಕಾಯುವುದರಲ್ಲಿ ಸಂತೋಷಪಡುತ್ತಾರೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ.

ನಿಮ್ಮ ಕೀರ್ತಿ ಪ್ರತಿಷ್ಠೆಗೆ ಸರಿಹೊಂದುವ ಜನರೊಂದಿಗೆ ಮಾತ್ರ ಸ್ನೇಹವನ್ನು ಬೆಳೆಸುವಿರಿ. ಅತಿಯಾದ ಜ್ವರ ನಿಮ್ಮನ್ನು ಕಾಡಬಹುದು. ಕೇವಲ ವೈದ್ಯಕೀಯ ಚಿಕಿತ್ಸೆಯನ್ನು ಅವಲಂಬಿಸದೆ ಯೋಗ ಪ್ರಾಣಾಯಾಮದಂತಹ ದೈಹಿಕ ವ್ಯಾಯಾಮಕ್ಕೆ ಒತ್ತು ಕೊಡುವಿರಿ. ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸುವಿರಿ. ಸಾರ್ವಜನಿಕ ಸಂಘ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ರಾಜಕೀಯದಲ್ಲಿ ಇರುವವರು ಉನ್ನತ ಅಧಿಕಾರಕ್ಕೆ ಗಳಿಸುತ್ತಾರೆ. ಆದರೆ ಅತಿಯಾದ ಆಸೆ ಇರುವುದಿಲ್ಲ. ಕಷ್ಟ ಎನಿಸಿದರೂ ನಿಮ್ಮ ಗುರಿಯನ್ನು ತಲುಪಿವಿರಿ. ದಾಂಪತ್ಯ ಜೀವನದಲ್ಲಿ ಪರಸ್ಪರ ಉತ್ತಮ ಅನ್ಯೋನ್ಯತೆ ಇರುತ್ತದೆ.

ಹಿರಿಯ ಮಗನಿಂದ ಅಥವಾ ಹಿರಿಯ ಮಗಳಿಂದ ನಿಮ್ಮೆಲ್ಲ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಇರದು. ಆದರೆ ಉದ್ಯೋಗದಲ್ಲಿ ಮಾಡದ ತಪ್ಪಿಗೆ ದಂಡ ತೆರ ಬೇಕಾಗಬಹುದು. ಸಹನೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವುದು ಅತಿ ಸುಲಭ. ಎದುರು ಮಾತನಾಡಲು ಸಾಧ್ಯವಾಗದೆ ಹೋದವರು ಪರೋಕ್ಷವಾಗಿ ತೊಂದರೆ ನೀಡಬಹುದು. ಸದಾ ಕಾಲ ಎಚ್ಚರದಿಂದಲೇ ಇರಬೇಕಾಗುತ್ತದೆ. ಇಳಿ ವಯಸ್ಸಿನಲ್ಲಿಯೂ ನಿಮ್ಮದೇ ಆಡಳಿತ. ವಿದ್ಯಾರ್ಥಿಗಳಲ್ಲಿಯೂ ಸಹ ನಾಯಕತ್ವದ ಗುಣ ಸಹಜವಾಗಿ ಬರುತ್ತದೆ. ಪತಿ ಪತ್ನಿಯರು ಇದೇ ಸಂಖ್ಯೆಯಲ್ಲಿ ಜನಿಸಿದ್ದರೆ ವಾದ ವಿವಾದ ಸದಾ ಕಾಲವು ಇರಲಿದೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ