logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ 5 ರಾಶಿಯವರ ಹಠದ ಸ್ವಭಾವವೇ ಸಮಸ್ಯೆಗಳಿಗೆ ಕಾರಣ; ದಾಂಪತ್ಯದಲ್ಲಿ ಹೊಂದಾಣಿಕೆಗೆ ಹೋರಾಟ ಮಾಡ್ತಾರೆ -Zodiac Signs

ಈ 5 ರಾಶಿಯವರ ಹಠದ ಸ್ವಭಾವವೇ ಸಮಸ್ಯೆಗಳಿಗೆ ಕಾರಣ; ದಾಂಪತ್ಯದಲ್ಲಿ ಹೊಂದಾಣಿಕೆಗೆ ಹೋರಾಟ ಮಾಡ್ತಾರೆ -Zodiac Signs

Raghavendra M Y HT Kannada

Sep 16, 2024 12:12 PM IST

google News

Zodiac Signs: ಕೆಲವೊಂದು ರಾಶಿಯವರು ಮದುವೆಗಾಗಿ ದೊಡ್ಡ ಹೋರಾಟಗಳನ್ನೇ ಮಾಡುತ್ತಾರೆ. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಿರ್ಲಕ್ಷ್ಯ ಮೂಲಗ ದೊಡ್ಡ ತಲೆನೋವಾಗುತ್ತಾರೆ. ಯಾಕೆ ಹೀಗೆ ಅನ್ನೋದನ್ನ ತಿಳಿಯಿರಿ.

    • Zodiac Signs: ತನ್ನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಂಡು ಅವರ ಆಸೆಗಳನ್ನು ಪೂರೈಸಿದರೆ ಅರ್ಧದಷ್ಟು ಸಮಸ್ಯೆಗಳನ್ನು ಬಗೆಹರಿಯುತ್ತವೆ. ಆದರೆ ಈ 5 ರಾಶಿಯ ಪುರುಷರ ನಡೆ ಪತ್ನಿ ಅಥವಾ ಸಂಗಾತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತೆ. ಈ ರಾಶಿಯವರ ಸ್ವಭಾವ ಹೇಗಿರುತ್ತೆ ಅನ್ನೋದನ್ನು ತಿಳಿಯಿರಿ.
Zodiac Signs: ಕೆಲವೊಂದು ರಾಶಿಯವರು ಮದುವೆಗಾಗಿ ದೊಡ್ಡ ಹೋರಾಟಗಳನ್ನೇ ಮಾಡುತ್ತಾರೆ. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಿರ್ಲಕ್ಷ್ಯ ಮೂಲಗ ದೊಡ್ಡ ತಲೆನೋವಾಗುತ್ತಾರೆ. ಯಾಕೆ ಹೀಗೆ ಅನ್ನೋದನ್ನ ತಿಳಿಯಿರಿ.
Zodiac Signs: ಕೆಲವೊಂದು ರಾಶಿಯವರು ಮದುವೆಗಾಗಿ ದೊಡ್ಡ ಹೋರಾಟಗಳನ್ನೇ ಮಾಡುತ್ತಾರೆ. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಿರ್ಲಕ್ಷ್ಯ ಮೂಲಗ ದೊಡ್ಡ ತಲೆನೋವಾಗುತ್ತಾರೆ. ಯಾಕೆ ಹೀಗೆ ಅನ್ನೋದನ್ನ ತಿಳಿಯಿರಿ.

Zodiac Signs: ಕೆಲವು ರಾಶಿಯ ಪುರುಷರಿಗೆ ಮದುವೆ ಅನ್ನೋದು ಜೀವನದಲ್ಲಿನ ದೊಡ್ಡ ಸವಾಲು ಆಗಿರುತ್ತದೆ. ಯಾಕೆಂದರೆ ಅವರಲ್ಲಿನ ಕೆಲವು ಸ್ವಭಾವಗಳು ಇದೆಕ್ಕೆಲ್ಲಾ ಕಾರಣವಾಗಿರುತ್ತವೆ. ಇವರಿಗೆ ತಾಳ್ಮೆ ಮತ್ತು ತಿಳುವಳಿಕೆ ಕಡಿಮೆ ಇರುತ್ತದೆ. ಈ ರಾಶಿಯ ಪುರುಷಕರು ಬದ್ಧತೆ ಹಾಗೂ ಪರಿಣಾಮಕಾರಿಯಾಗಿ ಸಂವಹನ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಒತ್ತಡ ಹಾಗೂ ಭಿನ್ನಾಭಿಪ್ರಾಯದಿಂದ ಸಂಬಂಧಗಳು ಖಚಿತವಾಗುವುದಿಲ್ಲ. ಇವರಿಗೆ ತಾಳ್ಮೆಯ ಪರೀಕ್ಷೆ ಎದುರಾಗುತ್ತದೆ. ಸತತ ಹೋರಾಟದ ಫಲವಾಗಿ ಮದುವೆಯಾಗಿದ್ದರೂ ಇವರಿಗೆ ವೈವಾಹಿಕ ಜೀವನ ಹೆಚ್ಚು ಕಷ್ಟಕರವಾಗಿರುತ್ತದೆ. ಮುಂದೆ ಎದುರಾಗುವ ಸವಾಲುಗಳು ತಿಳಿಯಿದಿರುವುದರಿಂದ ಅದರ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ರಾಶಿಯವರು ನೀವಾಗಿದ್ದರೆ ಜ್ಯೋತಿಷ್ಯ ತಜ್ಞರಿಂದ ಮಾಹಿತಿ ಪಡೆಯಿರಿ. ಮುಂದಾಗುವ ಅನಾಹುತಗಳನ್ನು ತಪ್ಪಿಸಿಕೊಳ್ಳುವುದು ಜೀವನದಲ್ಲಿ ಸಂತೋಷಕ್ಕೆ ಮಾರ್ಗವಾಗಿರುತ್ತದೆ. ಯಾವ ರಾಶಿಯ ಪುರುಷರ ಗುಣಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ಮೇಷ ರಾಶಿ

ಮೇಷ ರಾಶಿಯ ಪುರುಷರು ಒಂದೇ ಕ್ಷಣದಲ್ಲಿ ಕೋಪಗೊಳ್ಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಠಾತ್ ಆಗಿ ಬದಲಾಗುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಕೈಗೊಳ್ಳುವ ನಿರ್ಧಾರಗಳು ಯಾವಾಗೂ ಸುರಕ್ಷಿತವಾಗಿರುವುದಿಲ್ಲ. ಇದು ಭಾವನಾತ್ಮಕ ಪ್ರಕ್ಷುದ್ಧತೆಗೆ ಕಾರಣವಾಗಿರುತ್ತೆ. ಏಕಾಂಗಿಯಾಗಿ ಮತ್ತು ಸ್ವಾತಂತ್ರ್ಯವಾಗಿ ಇರಲು ಇಷ್ಟಪಡುತ್ತಾರೆ. ತಮ್ಮ ಸಂಗಾತಿಯ ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ. ಇವರಿಗೆ ಬದ್ಧತೆ ಇರುವುದಿಲ್ಲ. ಇಂಥ ಪುರುಷರಿಗೆ ಭಾವನಾತ್ಮಕ ಬುದ್ಧಿವಂತಿಕೆ, ಸಹಾನುಭೂತಿ ಹಾಗೂ ಸಂಹವನ ಕೌಶಲ್ಯಗಳನ್ನು ಪರಿಣಾಮಕಾರಿಯಾಗುವಂತೆ ಮಾಡಬೇಕು.

ಸಿಂಹ ರಾಶಿ

ಈ ರಾಶಿಯ ಪುರುಷರು ತಮ್ಮ ಸಂಗಾತಿಗಿಂತ ಮತ್ಮ ಅಗತ್ಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಸಂಗಾತಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ತಮ್ಮ ಮಹತ್ವಾಕಾಂಕ್ಷೆಗಳು ಹಾಗೂ ಆಸೆಯಗಳನ್ನು ಪರಿಗಣಿಸುತ್ತಾರೆ. ಪತ್ನಿಯನ್ನು ಕೇರ್ ಮಾಡಲ್ಲ. ಇವರಿಗೆ ಹೆಮ್ಮೆ ಜೊತೆಗೆ ಅಹಂಕಾರವು ಇರುತ್ತದೆ. ಇವರ ಕೆಲವೊಂದು ನಡೆಗಳು ದಾಂಪತ್ಯದಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತವೆ.

ಧನು ರಾಶಿ

ಇವರು ಸ್ವಾತಂತ್ರ್ಯವನ್ನು ತುಂಬಾ ಇಷ್ಟಪಡುತ್ತಾರೆ. ಇವರ ಮೊಂಡುತನ ಸಂಗಾತಿಯನ್ನು ಬೇಸರೆಗೂಳಿಸುತ್ತೆ. ತಮ್ಮ ದಾಂಪತ್ಯದ ಜೀವನದ ಜವಾಬ್ದಾರಿಯನ್ನು ಮರೆತಿರುತ್ತಾರೆ. ಧನು ರಾಶಿಯವರಿಗೆ ಸ್ವಂತ ಯೋಚನಾ ಶಕ್ತಿಯ ಕೊರತೆ ಇರುತ್ತದೆ. ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ಭಾವನಾತ್ಮಕ ಅನ್ಯೋನ್ಯತೆಗಾಗಿ ಹೋರಾಟ ಮಾಡುವಂತ ಪರಿಸ್ಥಿತಿಯನ್ನು ಅವರೇ ತಂದುಕೊಂಡಿರುತ್ತಾರೆ. ಇವರಿಗೆ ಸುರಕ್ಷಿತ ಮತ್ತು ಸ್ಥಿರವಾದ ಸಂಬಂಧವನ್ನು ನಿರ್ಮಿಸಲು ಸವಾಲಾಗಿರುತ್ತೆ. ತಮ್ಮ ಜವಾಬ್ದಾರಿಯ ಬಗ್ಗೆ ಇವರಿಗೆ ಒತ್ತಿ ಹೇಳಬೇಕಾದ ಅನಿವಾರ್ಯತೆ ಇರುತ್ತೆ.

ಮಕರ ರಾಶಿ

ಮಕರ ರಾಶಿಯ ಪುರುಷರಿಗೆ ಉದ್ಯೋಗದಲ್ಲಿ ಆಸಕ್ತಿ ಹೆಚ್ಚಾಗಿರುತ್ತೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಂಬಂಧಗಳಿಗಿಂತ ವೃತ್ತಿಜೀವನವೇ ಮುಖ್ಯವಾಗಿರುತ್ತದೆ. ಇದು ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಇವರೊಂದಿಗೆ ಹೇಗೆ ಜೀವನ ನಡೆಸಬೇಕು ಎನ್ನುವಷ್ಟರ ಮಟ್ಟಿಗೆ ಸಂಗಾತಿಗೆ ಬೇಸರವನ್ನು ತರಿಸುತ್ತಾರೆ. ಇವರ ಸ್ವಭಾವದಲ್ಲಿ ಬದಲಾವಣೆ ಆದರೆ ದಾಂಪತ್ಯ ಜೀವನ ಸಂತೋಷ ಹಾಗೂ ಸುಖಕರವಾಗಿರುತ್ತದೆ. ಆದರೆ ಮಕರ ರಾಶಿಯ ಪುರುಷರು ತಾವು ನಡೆಯುತ್ತಿರುವ ರೀತಿಯ ಬಗ್ಗೆ ಯೋಚಿಸಿ ತಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಂಡು ಪತ್ನಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗುತ್ತದೆ

ಕುಂಭ ರಾಶಿ

ಕುಂಭ ರಾಶಿಯ ಪುರುಷರು ಕೂಡ ಸ್ವಲ್ಪ ಭಿನ್ನವಾಗಿ ಕಾಣುತ್ತಾರೆ. ಸಂಗಾತಿಯನ್ನು ಸರಿಯಾಗಿ ರೀತಿಯಲ್ಲಿ ನೋಡಿಕೊಳ್ಳುವುದಿಲ್ಲ. ಭಾನಾತ್ಮಕ ಸಂಬಂಧಕ್ಕಾಗಿ ಹೋರಾಟ ಮಾಡುವಂತ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಇವರಲ್ಲಿ ಸಾಕಷ್ಟು ಅನ್ಯೋನ್ಯತೆಯ ಕೊರತೆ ಎದ್ದು ಕಾಣುತ್ತಿರುತ್ತೆ. ಸುರಕ್ಷಿತ ಮತ್ತು ಸ್ಥಿರವಾದ ಸಂಬಂಧವನ್ನು ನಿರ್ಮಿಸಲು ಸವಾಲುಗಳು ಇರುತ್ತವೆ. ಉತ್ತಮ ಪತಿಯಾಗಲು ತಮ್ಮ ಯೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಪತ್ನಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಮಾಡಿಕೊಳ್ಳಬೇಕು. ಅವರ ನಂಬಿಕೆಯನ್ನು ಗಳಿಸಬೇಕು. ಸುಳ್ಳು ಹೇಳಬಾರದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ