ಅಕ್ಟೋಬರ್‌ನಲ್ಲಿ ವಿಪರೀತ ರಾಜಯೋಗ; ಸವಾಲುಗಳಿಂದ ಯಶಸ್ಸಿನವರೆಗೆ, ಈ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
Sep 23, 2024 04:29 PM IST
ಅಕ್ಟೋಬರ್‌ನಲ್ಲಿ ವಿಪರೀತ ರಾಜಯೋಗ ಇದ್ದು, ಒಂದು ರಾಶಿಯವರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಆ ರಾಶಿಯ ವಿವರ ನೀಡಲಾಗಿದೆ.
- ನಿಮ್ಮ ದಿನನಿತ್ಯದ ಜೀವನ ಮತ್ತು ವೃತ್ತಿ ಜೀವನಕ್ಕೆ ಅನುಗುಣವಾಗಿ ನೀವು ನಡೆದುಕೊಳ್ಳುತ್ತಿದ್ದರೆ ನಿಮಗೆ ಸಮಸ್ಯೆಗಳು, ಸವಾಲುಗಳು ಕಡಿಮೆ. ಆಸೆಯೇ ದುಃಖಕ್ಕೆ ಮೂಲ. ಹೀಗಾಗಿ ಹೆಚ್ಚು ಆಸೆ ಇರುವವರು ಹೆಚ್ಚು ದುಡಿಯಬೇಕಾಗುತ್ತೆ. ಅಕ್ಟೋಬರ್ ತಿಂಗಳಲ್ಲಿ ವಿಪರೀತ ರಾಜಯೋಗವಿದೆ. ಇದು ಒಂದು ರಾಶಿಯ ಪರಿಣಾಮ ಬೀರುತ್ತೆ. ಇದರ ವಿವರ ಇಲ್ಲಿದೆ.
ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಕ್ರಮಣವಾದಗ, ರಾಶಿಗಳಲ್ಲಿ ಸ್ಥಾನಗಳ ಆಧಾರದ ಮೇಲೆ ಕೆಲವು ರಾಜಯೋಗಗಳು ಉಂಟಾಗುತ್ತದೆ. ದೈಹಿಕ ಮತ್ತು ಯೋಗಕ್ಷೇಮದ ಅಂಶಗಳನ್ನು ರಾಜಯೋಗ ನೀಡುತ್ತೆ. 2024ರ ಅಕ್ಟೋಬರ್‌ನಲ್ಲಿ ಪ್ರಮುಖ ವಿಪರೀತ ರಾಜಯೋಗ ಉಂಟಾಗಲಿದೆ. ಇದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಒಂದೇ ಒಂದು ರಾಶಿಯ ಮೇಲೆ ಹೆಚ್ಚಿನ ಪ್ರಭಾವ ಇರಲಿದೆ. ವಿಪರೀತ ರಾಜಯೋಗದಿಂದ ವೃಷಭ ರಾಶಿಯವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಕಾಣುತ್ತಾರೆ. ಈ ಸಂದರ್ಭದಲ್ಲಿ ಶುಭ, ಅಶುಭ ಫಲಿತಾಂಶಗಳು ಇರುತ್ತವೆ.
ತಾಜಾ ಫೋಟೊಗಳು
ಏನಿದು ವಿಪರೀತ ರಾಜಯೋಗ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ನಿಗೂಢ ಹಾಗೂ ಅಗ್ರ ರಾಜ ಯೋಗಗಳಲ್ಲಿ ವಿಪರೀತ ರಾಜಯೋಗ ಕೂಡ ಒಂದು. ಪ್ರತಿಕೂಲ ವಿಜಯ ಸಂಕೇತವಾಗಿದ್ದು, ಯೋಗವು 6, 8 ಅಥವಾ 12ನೇ ಮನೆಯ ಅಧಿಪತಿಗಳು ಪರಸ್ಪರ ಸಹಯೋಗದಲ್ಲಿದ್ದಾಗ ಈ ಯೋಗ ರೂಪಗೊಳ್ಳುತ್ತೆ. ವಿಪರೀತ ಎಂಬುದರ ಅರ್ಥವನ್ನು ನೋಡುವುದಾದರೆ ವಿಪರೀತ ಎಂಬುದು ಸಂಸ್ಕೃತ ಪದವಾಗಿದ್ದು, ಇದು ವಿರುದ್ಧ ಎಂಬ ಅರ್ಥವನ್ನು ಕೊಡುತ್ತೆ. ಯಾವುದೇ ಗ್ರಹಗಳ ಸಮ್ಮಿಲದಿಂದ ಹೊರಹೊಮ್ಮುವ ಯಾವುದೇ ಫಲಿತಾಂಶವು ಋಣಾತ್ಮಕ ಭಾವಗಳಿಂದ ಅಧಿಪತಿಗಳಿಂದ ಪೀಡಿಸಲ್ಪಡುತ್ತದೆ. ಅದನ್ನು ಯೋಗವೆಂದು ನಿರೂಪಿಸಲಾಗಿದೆ. ತುಂಬಾ ಸಿಂಪಲ್ ಆಗಿ ಹೋಳೋದಾದ್ರೆ ದುಷ್ಟ ಭಾವದ ಅಧಿಪತಿಗಳ ದುರ್ಬಲತೆಯು ಈ ಯೋಗ ಹೊರಹೊಮ್ಮಲು ಕಾರಣವಾಗುತ್ತೆ.
ವಿಪರೀತ ರಾಜಯೋಗದಲ್ಲಿ ಬರುವ ಮೂರು ರಾಜಯೋಗಗಳು
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿಪರೀತ ರಾಜಯೋಗ ಇರುವವರಿಗೆ ಸವಾಲುಗಳು ಅಧಿಕವಾಗಿರುತ್ತವೆ. ಕಷ್ಟುಗಳು, ವಿವಿಧ ರೀತಿಯಲ್ಲಿ ನಷ್ಟಗಳು, ವೇದನೆಗಳು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಪರೀತ ರಾಜಯೋಗದಲ್ಲಿ ಹಲವು ವಿಧಗಳಿವೆ. ಹರ್ಷ ರಾಜಯೋಗ, ಸರಳ ರಾಜಯೋಗ ಹಾಗೂ ವಿಮಲಾ ರಾಜಯೋಗ ಮೂರರು ಕೂಡ ವಿಪರೀತ ರಾಜಯೋಗಗಳು.
2024ರ ಅಕ್ಟೋಬರ್‌ನಲ್ಲಿ ವೃಷಭ ರಾಶಿಯವರ ಭವಿಷ್ಯ ಹೇಗಿರುತ್ತೆ?
ಅಕ್ಟೋಬರ್‌ನಲ್ಲಿ ವಿಪರೀತ ರಾಜಯೋಗ ವೃಷಭ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಶುಭ ಅಶುಭ ಫಲಿತಾಂಶಗಳು ಏನೆಲ್ಲಾ ಇವೆ ಎಂಬುದನ್ನು ತಿಳಿಯುವುದಾದರೆ, ಅಕ್ಟೋಬರ್‌ನಲ್ಲಿ ಕೇತುವಿನ ಜೊತೆ ಶುಕ್ರ, ಬುಧ ಮತ್ತು ಸೂರ್ಯ ಈ ಮೂರು ಗ್ರಹಗಳು ಹೊರ ಬರುತ್ತವೆ. ಆದ್ದರಿಂದ ಆಕ್ಟೋಬರ್‌ನಲ್ಲಿ ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರದ ತಜ್ಞರು ವಿವರಿಸಿದ್ದಾರೆ.
ವೃಷಭ ರಾಶಿಯಲ್ಲೇ ಗುರು ವಿಕೃತವಾಗಿರುತ್ತಾನೆ. ಶನಿಯು ಕೂಡ ದುಷ್ಟ. ಈ ಎರಡೂ ಪ್ರಮುಖ ಗ್ರಹಗಳು ದೋಷಪೂರಿತವಾಗಿವೆ. ಇನ್ನ ವೃಷಭ ರಾಶಿಯವರಿಗೆ ಬುಧ ಪ್ರಮುಖ ಗ್ರಹ. ಬುಧನು ಕರುಣೆ ತೋರಿದರೆ ಈ ರಾಶಿಯವರು ಪಾರಾಗುತ್ತಾರೆ. ಆಗ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಬುಧ ಶುಕ್ರನ ಸ್ಥಾನ ಪಲ್ಲಟವೂ ಇರುತ್ತೆ. ಅಕ್ಟೋಬರ್ 10 ರಿಂದ ಉತ್ತಮ ಫಲಿತಾಂಶಗಳು ಇರುತ್ತವೆ. 6ನೇ ಸ್ಥಾನದಲ್ಲಿ ಬುಧ, ಶುಕ್ರ ಸಂಯೋಗ ಒಳ್ಳೆಯಾದರೆ ಈ ರಾಶಿಯವರಿಗೆ ಹೆಚ್ಚಿನ ಶುಭಫಲಗಳಿವೆ.
ವೃಷಭ ರಾಶಿಯರಿಗೆ ವ್ಯಾಪಾರದಲ್ಲಿ ಉತ್ತಮ ಫಲಿತಾಂಶಗಳಿವೆ. ಹೊಸ ವ್ಯಾಪಾರವನ್ನು ಪ್ರಯತ್ನಿಸಲು ನಿಮಗೆ ಕೆಟ್ಟ ಸಮಯ ಇರಲ್ಲ. ಯೋಜನೆಗಳನ್ನು ಚೆನ್ನಾಗಿ ಜಾರಿಗೆ ತರಬೇಕು. ನಿಮ್ಮ ವ್ಯವಹಾರದ ಜ್ಞಾನ ಹೆಚ್ಚಾಗುತ್ತೆ. ನಿಮ್ಮಿಂದಲೇ ತಪ್ಪುಗಳು ಆಗುವ ಸಾಧ್ಯತೆ ಇರುತ್ತೆ. ಎಚ್ಚರಿಕೆಯಿಂದ ವ್ಯವಹಾರದಲ್ಲಿ ಮುಂದುವರಿಯಿರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.