ಆಯುಧ ಪೂಜೆಗೆ ಶುಭ ಸಮಯ ಯಾವಾಗ? ಮನೆ, ಕೆಲಸದ ಸ್ಥಳದಲ್ಲಿನ ಆಯುಧಗಳಿಗೆ ಪೂಜೆ ಮಾಡುವ ಮಹತ್ವ ತಿಳಿಯಿರಿ
Oct 11, 2024 11:11 AM IST
ಆಯುಧ ಪೂಜೆಗೆ ಶುಭ ಸಮಯ ಯಾವಾಗ, ಪೂಜೆಯ ಮಹತ್ವವನ್ನು ತಿಳಿಯಿರಿ
- ಆಯುಧ ಪೂಜೆ: ಅಕ್ಟೋಬರ್ 11 ರಂದು ಆಯುಧಪೂಜೆ ಮಾಡಲಾಗುತ್ತದೆ. ಪೂಜೆ ಮಾಡಲು ಶುಭ ಸಮಯ ಯಾವಾಗ? ಈ ಪೂಜೆಯನ್ನು ಹೇಗೆ ಮಾಡುವುದು? ಅದರ ಮಹತ್ವ ಹಾಗೂ ಆಯುಧ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ನೀಡಲಾಗಿದೆ.
ಶರನ್ನವರಾತ್ರಿಯ ಒಂಬತ್ತನೇ ದಿನದಂದು ಮಹಾ ನವಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯ ಕೊನೆಯ ಮೂರು ದಿನಗಳು ಪೂಜೆಗಳನ್ನು ಮಾಡಲು ಪ್ರಮುಖವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ನವಮಿಯಂದು ಆಯುಧಪೂಜೆ ಮಾಡುತ್ತಾರೆ. ಈ ವರ್ಷ ಅಷ್ಟಮಿ ಮತ್ತು ನವಮಿ ತಿಥಿಗಳು ಒಂದೇ ದಿನದಲ್ಲಿ ಕೆಲವೇ ಗಂಟೆಗಳ ವ್ಯತ್ಯಾಸದೊಂದಿಗೆ ಬಂದಿವೆ. ಇದರಿಂದಾಗಿ ಆಯುಧಪೂಜೆಗೆ ಸೂಕ್ತ ಸಮಯ ಯಾವುದು ಎಂಬ ಗೊಂದಲ ಉಂಟಾಗಿದೆ. ಧೃಕ್ ಪಂಚಾಂಗದ ಪ್ರಕಾರ, ನವಮಿ ತಿಥಿ ಅಕ್ಟೋಬರ್ 11 ರಂದು ಮಧ್ಯಾಹ್ನ 12.06 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಕ್ಟೋಬರ್ 12 ರಂದು ಬೆಳಿಗ್ಗೆ 10.58 ಕ್ಕೆ ಕೊನೆಗೊಳ್ಳುತ್ತದೆ. ನಂತರ ದಶಮಿ ತಿಥಿ ಪ್ರಾರಂಭವಾಗುತ್ತದೆ. ಮಧ್ಯಾಹ್ನ 1.30 ರಿಂದ 2.17 ರವರೆಗೆ ಆಯುಧಪೂಜೆ ಮಾಡಲು ಶುಭ ಮುಹೂರ್ತ.
ತಾಜಾ ಫೋಟೊಗಳು
ಆಯುಧ ಪೂಜೆಯ ಮಹತ್ವ
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಸೇರಿದಂತೆ ಅನೇಕ ರಾಜ್ಯಗಳು ಆಯುಧಪೂಜೆಯನ್ನು ಆಚರಿಸುತ್ತವೆ. ಈ ಶುಭದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಉಪಯೋಗಿಸುವ ಕೆಲಸದ ಪರಿಕರಗಳನ್ನು ಸ್ವಚ್ಛಗೊಳಿಸಿ ಪೂಜಿಸುತ್ತಾರೆ. ಆಯುಧಗಳಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಆಯುಧಗಳು ಮತ್ತು ಸಲಕರಣೆಗಳನ್ನು ಪೂಜಿ ಮಾಡಿ, ಧನ್ಯವಾದಗಳನ್ನು ಸಲ್ಲಿಸಲಾಗುತ್ತದೆ. ಕೆಲವರು ತಮ್ಮ ಪುಸ್ತಕಗಳನ್ನು ಪೂಜೆಯಲ್ಲಿ ಇಟ್ಟು ಪೂಜಿಸುತ್ತಾರೆ.
ಆಯುಧ ಪೂಜೆ ಏಕೆ ಮಾಡಬೇಕು?
ಪುರಾಣಗಳ ಪ್ರಕಾರ, ಈ ಪೂಜೆಯ ಸಮಯದಲ್ಲಿ ರಾಕ್ಷಸ ಮಹಿಷಾಸುರನ ವಿರುದ್ಧ ಹೋರಾಡಲು ಎಲ್ಲಾ ದೇವರುಗಳು ದುರ್ಗಾ ದೇವಿಗೆ ತಮ್ಮ ಆಯುಧಗಳನ್ನು ನೀಡಿದರು. ಹೀಗೆ ದೇವಿ ತನ್ನ ಎಂಟು ಕೈಗಳಲ್ಲಿ ಅನೇಕ ಆಯುಧಗಳನ್ನು ಹಿಡಿದು ಯುದ್ಧಕ್ಕೆ ಹೊರಟಳು. ಒಂಬತ್ತು ದಿನಗಳ ಸುದೀರ್ಘ ಯುದ್ಧದಲ್ಲಿ ರಾಕ್ಷಸನನ್ನು ಅಂತಿಮವಾಗಿ ಸಂಹಾರ ಮಾಡಲಾಯಿತು. ನಂತರ, ದೇವತೆಗಳು ಆಯುಧಗಳನ್ನು ಹಿಂದಕ್ಕೆ ತೆಗೆದುಕೊಂಡು ರಾಕ್ಷಸನನ್ನು ಕೊಂದು ಜಯವನ್ನು ನೀಡಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅಂದಿನಿಂದ ಆಯುಧಪೂಜೆ ರೂಢಿಯಲ್ಲಿದೆ.
ಆಯುಧಪೂಜೆಯ ಹಿಂದಿನ ಇನ್ನೊಂದು ಕಾರಣವನ್ನೂ ಹೇಳಲಾಗುತ್ತದೆ. ಪಾಂಡವರು ಅರಣ್ಯ ವನವಾಸಕ್ಕೆ ಹೋಗುವಾಗ ಜಮ್ಮಿ ಮರದಲ್ಲಿ ತಮ್ಮ ಆಯುಧಗಳನ್ನು ಸಂಗ್ರಹಿಸಿಡುತ್ತಾರೆ. ಅಂದಿನಿಂದ ಅವರು ಜಮ್ಮಿ ಮರವನ್ನು ಪೂಜಿಸಲು ಪ್ರಾರಂಭಿಸಿದರು. ತಮ್ಮ ವನವಾಸವನ್ನು ಮುಗಿಸಿ ವಾಪಸ್ ಬಂದ ಬಳಿಕ ತಮ್ಮ ಆಯುಧಗಳಿಗೆ ಪೂಜೆಯನ್ನು ಮಾಡುತ್ತಾರೆ. ನಂತರ ಕೌರವರೊಡನೆ ಯುದ್ಧಕ್ಕೆ ಹೋದರು. ಈ ಯುದ್ಧದಲ್ಲಿ ಪಾಂಡವರು ವಿಜಯಿಯಾದರು. ಈ ಸಂದರ್ಭದಲ್ಲಿಯೂ ಆಯುಧಗಳನ್ನು ವಿಜಯದ ಸಂಕೇತವಾಗಿ ಪೂಜಿಸಲಾಯಿತು.
ಮತ್ತೊಂದು ಪುರಾಣದ ಪ್ರಕಾರ, ತಾಯಿ ಚಾಮುಂಡೇಶ್ವರಿ ಮಹಿಷಾಸುರರನ್ನು ಸಂಹರಿಸಿದ ಬಳಿಕ ಆ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋಗುತ್ತಾಳೆ. ಆ ಆಯುಧವನ್ನು ಪೂಜಿಸಲಾಯಿತು. ಆ ನಂತರ ಆಯುಧ ಪೂಜೆಯನ್ನಾಗಿ ಆಚರಿಸುತ್ತಾ ಬರಲಾಗಿ ಎಂದು ಹೇಳುತ್ತಾರೆ.
ಆಯುಧ ಪೂಜೆಯನ್ನು ಹೇಗೆ ಮಾಡಬೇಕು?
ಪೂಜೆಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ. ಅದರ ನಂತರ, ಎಲ್ಲಾ ಉಪಕರಣಗಳು ಮತ್ತು ಆಯುಧಗಳನ್ನು ಸ್ವಚ್ಛಗೊಳಿಸಬೇಕು ಮತ್ತು ದೂರ ಇಡಬೇಕು. ಅರಿಶಿನ, ಕುಂಕುಮ ಮತ್ತು ಶ್ರೀಗಂಧವನ್ನು ಲೇಪಿಸಿ. ಕೆಲವು ಪುಸ್ತಕಗಳು ಮತ್ತು ವ್ಯಾಪಾರಿಗಳು ತಮ್ಮ ಪುಸ್ತಕಗಳನ್ನು ಈ ಮಂಗಳಕರ ದಿನದಂದು ಪೂಜಿಸುತ್ತಾರೆ. ವಾಹನಗಳಿಗೂ ಪೂಜೆ ನಡೆಯುತ್ತದೆ. ತಮ್ಮ ಉಪಕರಣಗಳಿಗೆ ಅರಿಶಿನ ಕುಂಕುಮ ಹಚ್ಚುತ್ತಾರೆ. ನಂತರ ಹೂವು, ಹಣ್ಣುಗಳನ್ನು ಅರ್ಪಿಸುತ್ತಾರೆ. ಈ ವೇಳೆ ವೇದ ಮಂತ್ರಗಳನ್ನು ಪಠಿಸಲಾಗುತ್ತೆ. ಈ ರೀತಿ ಮಾಡುವುದರಿಂದ ಭಕ್ತರು ತಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಅವರಿಗೆ ಯಾವುದೇ ಹಾನಿಯಾಗದಂತೆ ದೇವರ ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.