logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಲ್ಲವು ಅದೃಷ್ಟದ ಸಂಕೇತ, ಗಲ್ಲದ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ, ಭವಿಷ್ಯ; ಗಲ್ಲದಲ್ಲಿ ಗುಳಿ ಇದ್ರೆ ಏನರ್ಥ

ಗಲ್ಲವು ಅದೃಷ್ಟದ ಸಂಕೇತ, ಗಲ್ಲದ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ, ಭವಿಷ್ಯ; ಗಲ್ಲದಲ್ಲಿ ಗುಳಿ ಇದ್ರೆ ಏನರ್ಥ

Reshma HT Kannada

Sep 24, 2024 06:30 AM IST

google News

ಗಲ್ಲದ ಆಕಾರದಿಂದ ವ್ಯಕ್ತಿತ್ವ ತಿಳಿಯಿರಿ

    • ಮುಖದಲ್ಲಿನ ಪ್ರತಿ ಭಾಗವು ಅಂದವನ್ನು ಸೂಚಿಸುತ್ತದೆ, ಮಾತ್ರವಲ್ಲ ಕೆಲವು ಭಾಗವು ಅದೃಷ್ಟದ ಸಂಕೇತವೂ ಹೌದು. ಮುಖದ ಭಾಗಗಳ ಮೂಲಕ ವ್ಯಕ್ತಿತ್ವ ತಿಳಿಯಬಹುದು. ಗಲ್ಲದ ಆಕಾರ ಹೇಗಿದ್ದರೆ ಅದೃಷ್ಟ, ನಿಮ್ಮ ಗಲ್ಲ ಹೇಗಿದೆ ಪರೀಕ್ಷಿಸಿ, ಇದಕ್ಕೆ ತಕ್ಕಂತೆ ನಿಮ್ಮ ಭವಿಷ್ಯ, ಅದೃಷ್ಟ ತಿಳಿಯಿರಿ.  (ಬರಹ: ಎಚ್‌. ಸತೀಶ್, ಜ್ಯೋತಿಷಿ) 
ಗಲ್ಲದ ಆಕಾರದಿಂದ ವ್ಯಕ್ತಿತ್ವ ತಿಳಿಯಿರಿ
ಗಲ್ಲದ ಆಕಾರದಿಂದ ವ್ಯಕ್ತಿತ್ವ ತಿಳಿಯಿರಿ (PC: Canva)

ತುಟಿ, ಮೂಗು, ಕೆನ್ನೆಯಂತೆ ಗಲ್ಲದ ಆಕಾರದ ಮೂಲಕವೂ ನಮ್ಮ ವ್ಯಕ್ತಿತ್ವ ತಿಳಿಯಬಹುದು. ಗಲ್ಲದಲ್ಲಿ ಕೆಲವರಿಗೆ ಗುಳಿ ಇರುತ್ತದೆ. ಇದು ಅದೃಷ್ಟವನ್ನು ಸೂಚಿಸುತ್ತದೆ. ಗಲ್ಲದ ಆಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿ ಇದ್ದು, ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ಗಲ್ಲದ ಆಕಾರದ ಮೂಲಕವೇ ತಿಳಿಯಬಹುದು. ಹಾಗಾದರೆ ನಿಮ್ಮ ಗಲ್ಲದ ಆಕಾರ ಹೇಗಿದೆ, ಅದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ತಿಳಿಯಿರಿ. ಸೊಗಸಾದ ಗಲ್ಲವು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯದಲ್ಲಿ ಇದು ಒಬ್ಬ ವ್ಯಕ್ತಿಯ ಅದೃಷ್ಟದ ಬಗ್ಗೆಯೂ ತಿಳಿಸುತ್ತದೆ. ಗಲ್ಲದಲ್ಲಿ 20ಕ್ಕೂ ಹೆಚ್ಚಿನ ವೈವಿಧ್ಯಗಳು ಕಾಣಸಿಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಉಬ್ಬಿದ, ಗುಳಿ ಇರುವ ಗಲ್ಲ

ಗಲ್ಲ ಕೆನ್ನೆಯಂತೆ ಉಬ್ಬಿದಂತೆ ಇರುತ್ತದೆ. ಕೆನ್ನೆಗಳಲ್ಲಿ ಗುಳಿಗಿದ್ದಂತೆ ಗಲ್ಲಗಳಲ್ಲಿಯೂ ಗುಳಿ ಇರುತ್ತದೆ. ಇಂತಹವರ ಜೀವನ ಸದಾಕಾಲ ಸುಖ ಸಂತೋಷದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಇವರು ಒಂದೇ ರೀತಿಯ ಸಂಪಾದನೆಯನ್ನು ಅವಲಂಬಿಸಿರುವುದಿಲ್ಲ. ವಿವಿಧ ರೀತಿಯಲ್ಲಿ ಹಣ ಗಳಿಸುವ ಇವರ ಜೀವನದಲ್ಲಿ ಶಾಂತಿ ನೆಮ್ಮದಿಗೆ ಕೊರತೆ ಇರುವುದಿಲ್ಲ. ಸಮಯ ಒದಗಿದಾಗ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಇವರ ಬಳಿ ಎರಡಕ್ಕಿಂತಲೂ ಹೆಚ್ಚಿನ ವಾಹನಗಳಿರುತ್ತವೆ. ವಂಶದಿಂದ ದೊರಕಿದ ಸ್ವಂತ ಮನೆಯು ಇವರದಾಗುತ್ತದೆ. ಇವರು ಆಸ್ತಿ ಗಳಿಸಲು ಹೆಚ್ಚಾಗಿ ಹಣವನ್ನು ಖರ್ಚು ಮಾಡಲು ಇಷ್ಟಪಡುವುದಿಲ್ಲ. ಹಸಿದವರಿಗೆ ತಿನ್ನಲು ಆಹಾರ ನೀಡುವಲ್ಲಿ ಸಂತಸವನ್ನು ಕಾಣುತ್ತಾರೆ. ಇವರ ಬಗ್ಗೆ ತಪ್ಪು ಗ್ರಹಿಕೆಯಿಂದ ದೂರವಾದವರನ್ನು ಸ್ನೇಹದಿಂದ ಬರಮಾಡಿಕೊಳ್ಳುತ್ತಾರೆ. ಇವರ ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಈಕೆಯ ಸಂಗಾತಿಯು ವ್ಯಾಪಾರದಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಾರೆ. ಹಣದ ತೊಂದರೆ ಉಂಟಾದರೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವರು.

ಸ್ತ್ರೀಯರಿಗೆ ಗಲ್ಲದಲ್ಲಿ ಗುಳಿ ಇದ್ದರೆ…

ಸ್ತ್ರೀಯರಾದಲ್ಲಿ ಅವರು ಬಳಸುವ ಬಟ್ಟೆಗಳು ಮತ್ತು ಧರಿಸುವ ಒಡವೆಗಳ ಬಗ್ಗೆ ವಿಶೇಷವಾದಂತಹ ಕಾಳಜಿ ಇರುತ್ತದೆ. ಅವರು ತಮ್ಮ ಮಕ್ಕಳನ್ನು ವಿಶೇಷವಾದ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ನೀಡುವುದಿಲ್ಲ. ದಾಂಪತ್ಯ ಜೀವನದಲ್ಲಿ ಇವರಿಂದಾಗಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಪತಿ ಮಾಡುವ ತಪ್ಪುಗಳನ್ನು ಸರಿಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಪುರುಷರಾದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಪತ್ನಿಯ ಸಲಹೆಯನ್ನು ಕೇಳುತ್ತಾರೆ. ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವಿಶೇಷವಾದ ಗಮನ ಕೊಡುತ್ತಾರೆ. ಇವರು ಒಂದೇ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಎರಡಕ್ಕಿಂತಲೂ ಹೆಚ್ಚು ಬಾರಿ ಉದ್ಯೋಗವನ್ನು ಬದಲಿಸುತ್ತಾರೆ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬಾಳುತ್ತಾರೆ. ಇವರುಗಳು ತಂದೆಯನ್ನು ಪ್ರೀತಿಯಿಂದ ಕಾಪಾಡುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ವಿಶ್ರಾಂತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇವರ ಜೀವಿತಾವಧಿಯಲ್ಲಿ ಮಕ್ಕಳು ಉನ್ನತ ಮಟ್ಟವನ್ನು ತಲುಪುತ್ತಾರೆ. ಸಣ್ಣಪುಟ್ಟ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗುತ್ತಾರೆ. ಬೇರೆಯವರ ಪ್ರೀತಿ ವಿಶ್ವಾಸ ಮತ್ತು ಗೌರವ ದೂರವಾಗಬಹುದೆಂಬ ಭಯದಿಂದ ಯಾರಿಗೂ ಇವರು ಸಾಲವಾಗಿ ಹಣವನ್ನು ನೀಡುವುದಿಲ್ಲ.

ಸಂಬಂಧಿಕರ ಜೊತೆ ಮನಸ್ತಾಪವೂ ಆಗಬಹುದು

ಕಲಾವಿದರಾಗಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ವಿದೇಶದಲ್ಲಿ ನೆಲೆಸಲು ಸಾಧ್ಯವಾಗುತ್ತದೆ. ಇವರ ತಾತ ಅಥವಾ ಅಜ್ಜಿ ಅವರು ಮಾಡುತ್ತಿದ್ದ ಪುರಾತನಕಾಲದ ಕೆಲಸವನ್ನು ಇವರು ಮುಂದುವರಿಸುತ್ತಾರೆ. ಆತ್ಮೀಯರ ಮತ್ತು ಬಂಧು ಬಳಗದವರ ಹಣಕಾಸಿನ ಮತ್ತು ಭೂಮಿಗೆ ಸಂಬಂಧಪಟ್ಟ ವಿವಾದಗಳನ್ನು ಮಾತಿನ ಮೂಲಕ ಬಗೆಹರಿಸುವರು. ಸಂಚಾರ ಮಾಡುವುದೆಂದರೆ ಇವರಿಗೆ ಬಹು ಪ್ರೀತಿ. ಮನೆಯವರಾಗಲಿ ಅಥವಾ ಹೊರಗಿನವರಾಗಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ತಿಂಡಿ ತಿನಿಸು ನೀಡುವಲ್ಲಿ ಸಂತಸಗೊಳ್ಳುತ್ತಾರೆ. ಬೇರೆಯವರಿಗೆ ಅರ್ಥವಾಗದ ವಿಚಾರಗಳು ಇವರಿಗೆ ಸುಲಭವಾಗಿ ಮನನವಾಗುತ್ತದೆ. ಮಾಡಿದ ತಪ್ಪನ್ನು ಒಪ್ಪಿಕೊಂಡು ಸಂಬಂಧ ಪಟ್ಟ ಜನರೊಂದಿಗೆ ಕ್ಷಮೆ ಕೇಳುವ ಗುಣ ಇವರಲ್ಲಿ ಇರುತ್ತದೆ. ಇವರು ಸುಮ್ಮನೆ ಇದ್ದರು ವಿವಾದಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಅವಶ್ಯಕವಾದ ಓಡಾಟಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ರಕ್ತದ ಒತ್ತಡವು ಇವರನ್ನು ಕಾಡಬಹುದು. ಇವರ ಬಗ್ಗೆ ಅಸೂಯೆ ಪಡುವ ಜನರು ಇವರೊಂದಿಗೆ ಇರುತ್ತಾರೆ. ತಾಯಿಯ ಕಡೆ ಸಂಬಂಧಿಕರಲ್ಲಿ ಹಣಕಾಸಿನ ವಿಚಾರದಲ್ಲಿ ವಾದವಿವಾದಗಳು ಇರಲಿವೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ