logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ದೇವಾನುದೇವತೆಗಳ ಈ ವಿಗ್ರಹಗಳನ್ನು ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಇಡಬಾರದು

Vastu Tips: ದೇವಾನುದೇವತೆಗಳ ಈ ವಿಗ್ರಹಗಳನ್ನು ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಇಡಬಾರದು

HT Kannada Desk HT Kannada

Mar 18, 2024 06:00 AM IST

google News

ಕೋಪದ ಭಂಗಿಯಲ್ಲಿರುವ ದುರ್ಗಾದೇವಿ (ಎಡಚಿತ್ರ), ನಾಟ್ಯದ ಭಂಗಿಯಲ್ಲಿರುವ ವಿಗ್ರಹ (ಬಲಚಿತ್ರ)

    • ಮನೆಯಲ್ಲಿ ಪೂರ್ಣ ತೇಜಸ್ಸು, ಚೈತನ್ಯ ಹಾಗೂ ಧನಾತ್ಮಕ ಶಕ್ತಿ ತುಂಬಿಕೊಳ್ಳುವ ಜಾಗವೆಂದರೆ ಪೂಜಾ ಕೋಣೆ. ಆದ್ದರಿಂದಲೇ ಪೂಜಾ ಕೋಣೆಯಲ್ಲಿ ನೀವು ಸ್ಥಾಪಿಸುವ ದೇವತೆಗಳ ಮೂರ್ತಿ ಇಲ್ಲವೇ ಫೋಟೋಗಳ ಬಗ್ಗೆ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರವೇ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ, ಸಮಸ್ಯೆಗಳಿಲ್ಲದ ಶಾಂತಿಯುತ ಬದುಕು ನಿಮ್ಮದಾಗುತ್ತದೆ.
ಕೋಪದ ಭಂಗಿಯಲ್ಲಿರುವ ದುರ್ಗಾದೇವಿ (ಎಡಚಿತ್ರ), ನಾಟ್ಯದ ಭಂಗಿಯಲ್ಲಿರುವ ವಿಗ್ರಹ (ಬಲಚಿತ್ರ)
ಕೋಪದ ಭಂಗಿಯಲ್ಲಿರುವ ದುರ್ಗಾದೇವಿ (ಎಡಚಿತ್ರ), ನಾಟ್ಯದ ಭಂಗಿಯಲ್ಲಿರುವ ವಿಗ್ರಹ (ಬಲಚಿತ್ರ)

ಹಿಂದೂ ಧರ್ಮದಲ್ಲಿ ಪೂಜೆಗೆ ಅದರದೇ ಆದ ವಿಶೇಷತೆಗಳಿವೆ. ಕುಲದೇವರು, ನಿಮ್ಮ ಜಾತಕದ ಪ್ರಕಾರ ಪೂಜಿಸಬೇಕಿರುವ ದೇವರು, ಹೀಗೆ ದೇವಾನು ದೇವತೆಗಳ ಪ್ರೀತಿ ಗಳಿಸುವ ಸಲುವಾಗಿ ದೇವರ ವಿಗ್ರಹಗಳು, ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಹೀಗೆ ಪ್ರತಿದಿನ ಪೂಜೆ ಮಾಡುವುದರಿಂದ ಮನೆ-ಮನಸ್ಸು ಎರಡಕ್ಕೂ ಒಂದು ರೀತಿಯ ಪಾಸಿಟಿವ್‌ ವೈಬ್ಸ್‌ ಬರುತ್ತದೆ ಎಂಬ ನಂಬಿಕೆ. ಈ ಧನಾತ್ಮಕ ಶಕ್ತಿ ನಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಚೈತನ್ಯಗೊಳಿಸುತ್ತದೆ. ನಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಅದರಿಂದ ನಾವು ಪ್ರಗತಿ, ಸಮೃದ್ಧಿ ಮತ್ತು ಶಾಂತಿಯನ್ನು ಕಂಡುಕೊಳ್ಳಬಹುದು.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ಆದರೆ ನೆಚ್ಚಿನ ದೇವತೆಗಳನ್ನು, ವಿಗ್ರಹಗಳನ್ನು ಅಥವಾ ದೇವತೆಗಳ ಭಾವಚಿತ್ರಗಳನ್ನು ಮನೆಯಲ್ಲಿ ಪೂಜಿಸುವ ಮೊದಲು, ಆ ವಿಗ್ರಹಗಳಿಗೆ ಸಂಬಂಧಿಸಿದಂತೆ ಇರುವ ನಂಬಿಕೆಗಳ ಕುರಿತು ನೀವು ತಿಳಿದುಕೊಳ್ಳಲೇಬೇಕು. ಜೊತೆಗೆ ದೇವರ ಕೋಣೆಯಲ್ಲಿ ಇಡಲೇಬಾರದ ವಸ್ತುಗಳು ಯಾವುದೆನ್ನುವುದರ ಮಾಹಿತಿ ಇಲ್ಲಿದೆ.

ವಾಸ್ತು ಪ್ರಕಾರ ಪೂಜಾ ಕೋಣೆಯಲ್ಲಿ ದೇವತೆಗಳ ವಿಗ್ರಹಗಳನ್ನು ಸರಿಯಾದ ದಿಕ್ಕುಗಳಲ್ಲಿ ಅಂದರೆ ಈಶಾನ್ಯ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಕು. ಇದರಿಂದ ಮನೆಯಲ್ಲಿ ಹಾಗೂ ಮನೆಯವರ ಮನಸ್ಸುಗಳಲ್ಲಿ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ. ತಿಳಿದೋ ತಿಳಿಯದೆಯೋ ನಿಮ್ಮ ಪೂಜಾ ಕೋಣೆಯಲ್ಲಿ ಕೆಲವು ದೇವತೆಗಳ ಫೋಟೋ ಅಥವಾ ವಿಗ್ರಹವನ್ನು ಇರಿಸಬಾರದು. ಇದು ಮನೆಯಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇವಾಲಯಗಳಲ್ಲಿ ಮಾತ್ರ ಪೂಜಿಸಲ್ಪಡುವ ಭೃತವನಾಥ, ಮಹಾಕಾಳಿ, ಶನಿದೇವರು ಹಾಗೂ ರಾಹು-ಕೇತುಗಳ ಫೋಟೋಗಳನ್ನೂ ಯಾವುದೇ ಸಂದರ್ಭದಲ್ಲೂ ಮನೆಯಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಪ್ರತಿಷ್ಠಾಪಿಸಬಾರದು.

ಈ ವಸ್ತುಗಳನ್ನು ಪೂಜಾ ಕೋಣೆಯಿಂದ ದೂರವಿರಿಸಿ:

ತಿಳಿಯದೆಯೇ ನೀವು ಮುರಿದ ದೇವರ ವಿಗ್ರಹಗಳನ್ನು ಪೂಜಾ ಕೋಣೆಯಲ್ಲಿರಿಸಿದರೆ ಇಂದೇ ಅದನ್ನು ಮನೆಯಿಂದ ಹೊರಹಾಕಿ. ಯಾಕಂದರೆ ಶಾಸ್ತ್ರದ ಪ್ರಕಾರ ದೇವರ ಮುರಿದ ವಿಗ್ರಹ ಮನೆಗೆ ಕೆಡುಕಾಗುವ ಸೂಚಕವಾಗಿದೆ. ಇದು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಕುಟುಂಬದಲ್ಲಿ ವೈಷಮ್ಯವನ್ನು ಉಂಟುಮಾಡುತ್ತದೆ. ಅಲ್ಲದೆ ಒಣಗಿದ ಹೂವುಗಳನ್ನು ಸಹ ಕಾಲಕಾಲಕ್ಕೆ ಪೂಜಾ ಕೊಠಡಿಯಿಂದ ತೆಗೆದುಹಾಕಬೇಕು. ಧೂಪ, ದೀಪ, ಅಗರಬತ್ತಿಗಳನ್ನು ಬೆಳಗಿಸಿದ ನಂತರ ಉಪಯೋಗಿಸಿದ ಬೆಂಕಿ ಕಡ್ಡಿಗಳನ್ನು ಅಥವಾ ಬೆಂಕಿ ಪೊಟ್ಟಣವನ್ನು ದೇವರ ಮನೆಯಲ್ಲಿರಿಸಿದರೆ ಪೂಜೆಯ ಫಲ ನಿಮಗೆ ಸಿಗದೇ ಹೋದೀತು.

ಯಾವ ವಿಗ್ರಹಗಳನ್ನು ದೇವರಕೋಣೆಯಲ್ಲಿ ಪೂಜಿಸಬಾರದು ?

ಇಡೀ ಮನೆಗೆ ಧನಾತ್ಮಕ ಶಕ್ತಿಯನ್ನು ಪಸರಿಸುವ ಶಕ್ತಿ ಕೇಂದ್ರವೇ ದೇವರಕೋಣೆ. ಆದ್ದರಿಂದಲೇ ಇಂತಹ ಪವಿತ್ರ ಸ್ಥಳದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಮಾರ್ಬಲ್ ನಿಂದ ತಯಾರಿಸಿದ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು. ಅಲ್ಲದೆ ರುದ್ರ ಮುದ್ರೆಯೊಂದಿಗೆ ಯಾವುದೇ ದೇವತೆಯ ವಿಗ್ರಹಗಳನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಬಾರದು. ನರ್ತಿಸುವ ಭಂಗಿಯಲ್ಲಿರುವ ವಿಗ್ರಹವನ್ನು ಅಪ್ಪಿತಪ್ಪಿಯೂ ಪೂಜಾ ಕೋಣೆಯಲ್ಲಿ ಇಡಬಾರದು.

ಶಿವನನ್ನು ಆರಾಧಿಸುವ ಅನೇಕರು ಶಿವಲಿಂಗವನ್ನು ಮನೆಯ ದೇವರ ಗುಡಿಯಲ್ಲಿಡಲು ಬಯಸುತ್ತಾರೆ. ಆದರೆ ಶಿವಲಿಂಗದ ಬದಲು ಶಿವ ಮತ್ತು ಪಾರ್ವತಿಯರ ಚಿತ್ರವನ್ನು ಒಟ್ಟಿಗೆ ಇಡುವುದು ಹೆಚ್ಚು ಶುಭಕರ.. ಕೋಪದ ರೂಪದಲ್ಲಿರುವ ಶಿವನ ಮೂರ್ತಿಯನ್ನೂ ಪ್ರತಿಷ್ಠಾಪಿಸಬಾರದು. ನೀವು ಮನೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ಸ್ಥಾಪಿಸಲು ಬಯಸಿದರೆ, ಮಹಿಷಾಸುರ ಮರ್ದಿನಿ ಅವತಾರದ ಇಲ್ಲವೇ ಕೋಪದ ಭಂಗಿಯಲ್ಲಿರುವ ದೇವಿಯ ವಿಗ್ರಹವನ್ನು ತಪ್ಪಿಯೂ ಪ್ರತಿಷ್ಠಾಪಿಸಬಾರದು. ಹಾಗೆಯೇ ಮನೆಯಲ್ಲಿ ದುರ್ಗಾದೇವಿಯ ವಾಹನವಾದ ಸಿಂಹದ ಬಾಯಿ ಮುಚ್ಚಿದ ವಿಗ್ರಹವನ್ನು ಮಾತ್ರ ಇಡಬೇಕು. ಸಿಂಹ ಬಾಯಿ ತೆರೆದ ವಿಗ್ರಹ ಇಡಬಾರದು. ಮನೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವು ಕುಳಿತ ಭಂಗಿಯಲ್ಲಿದ್ದರೆ ಸಂಪತ್ತು ನಿಮ್ಮನ್ನು ಅರಸಿ ಬರುತ್ತಲೇ ಇರುತ್ತದೆ.

ಪೂಜಾ ಕೋಣೆಯಲ್ಲಿರಲಿ ಇಂತಹ ವಿಗ್ರಹಗಳು:

ಪೂಜಾ ಕೋಣೆಯಲ್ಲಿ ದೇವರ ಭಾವಚಿತ್ರಗಳನ್ನು ಜೋಡಿಸಬಹುದು. ಜೊತೆಗೆ ಚಿನ್ನ, ಬೆಳ್ಳಿ, ಹಿತ್ತಾಳೆ ಅಥವಾ ಮಣ್ಣಿನಿಂದ ಮಾಡಿದ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಬಹುದು. ವಾಸ್ತು ಪ್ರಕಾರ, ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಶುಭಕರವಾಗಿದೆ. ಆದರೆ ಮನೆಯಲ್ಲಿ ಒಂದೇ ಗಣೇಶನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಹಾಗೆಯೇ ಗಣೇಶನ ಎಡಭಾಗದಲ್ಲಿ ಲಕ್ಷ್ಮಿ ಮತ್ತು ಬಲಭಾಗದಲ್ಲಿ ಸರಸ್ವತಿ ಇರುವಂತೆ ನೋಡಿಕೊಳ್ಳಿ.

ಒಟ್ಟಿನಲ್ಲಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅನಗತ್ಯವೆನ್ನುವ ವಸ್ತುಗಳನ್ನು ಇಟ್ಟುಕೊಂಡರೆ ಅಥವಾ ಸೂಕ್ತವಲ್ಲದ ಭಂಗಿಯ ದೇವರ ವಿಗ್ರಹಗಳಿದ್ದರೆ, ಈ ಕೂಡಲೇ ಅವುಗಳನ್ನು ಮನೆಯ ದೇವರ ಕೋಣೆಯಿಂದ ಹೊರಹಾಕಿ. ಇಲ್ಲವಾದರೆ, ಹಣದ ಸಮಸ್ಯೆ, ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ