ವಾಸ್ತು ಟಿಪ್ಸ್: ಉಪ್ಪು ಸೇರಿದಂತೆ ಈ ವಸ್ತುಗಳನ್ನು ನೆರೆಹೊರೆಯವರ ಬಳಿ ಎಂದಿಗೂ ಉಚಿತವಾಗಿ ಪಡೆಯಲೇಬೇಡಿ
Dec 19, 2024 10:28 PM IST
ಉಪ್ಪು, ಸೂಜಿ ಸೇರಿದಂತೆ ಕೆಲವು ವಸ್ತುಗಳನ್ನು ಎಂದಿಗೂ ಉಚಿತವಾಗಿ ಪಡೆಯಬೇಡಿ
Vastu Tips: ಮನೆಯಲ್ಲಿ ಏನಾದರೂ ವಸ್ತುಗಳು ಇಲ್ಲದಿದ್ದರೆ, ಖಾಲಿಯಾಗಿದ್ದರೆ ತಕ್ಷಣಕ್ಕೆ ಅವುಗಳನ್ನು ಅಕ್ಕಪಕ್ಕದವರ ಮನೆ ಅಥವಾ ಸಂಬಂಧಿಕರ ಮನೆಯಿಂದ ಪಡೆದು ತರುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಚಿತವಾಗಿ ಪಡೆಯಬಾರದು. ಆ ವಸ್ತುಗಳು ಯಾವುವು ನೋಡೋಣ.
ವಾಸ್ತು ಟಿಪ್ಸ್: ನೆರೆಹೊರೆಯವರು ಎಂದರೆ ಕಷ್ಟ ಸುಖಗಳನ್ನು ವಿಚಾರಿಸುತ್ತಾರೆ, ನಾವೂ ಕೂಡಾ ಅವರೊಂದಿಗೆ ಆತ್ಮೀಯವಾಗಿ ಇದ್ದಷ್ಟೂ ಸಮಸ್ಯೆಯ ದಿನಗಳಲ್ಲಿ ಅವರು ಸಹಾಯ ಮಾಡುತ್ತಾರೆ. ಇನ್ನು ಸಾಮಾನ್ಯವಾಗಿ ಮನೆಯಲ್ಲಿ ಯಾವುದಾದರೂ ವಸ್ತು ಇಲ್ಲವೆಂದರೆ, ಅದನ್ನು ಕೂಡಲೇ ಹೋಗಿ ಅಂಗಡಿಗೆ ತರಲು ಸಾಧ್ಯವಾಗದಿದ್ದರೆ, ನಮಗೆ ಬಹಳ ಆತ್ಮೀಯರಾಗಿರುವ ನೆರೆಹೊರೆಯವರ ಬಳಿ ಕೇಳಿ ಪಡೆಯುತ್ತೇವೆ. ನಂತರ ಅದನ್ನು ವಾಪಸ್ ಮಾಡುತ್ತೇವೆ.
ತಾಜಾ ಫೋಟೊಗಳು
ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಚಿತವಾಗಿ ಪಡೆಯಬಾರದು, ಹೀಗೆ ಮಾಡಿದರೆ ಆ ವಸ್ತುಗಳಿಂದ ನಿಮಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಬಹುದು, ನಿಮ್ಮ ಆರ್ಥಿಕ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು.
ಯಾವ ವಸ್ತುಗಳನ್ನು ಉಚಿತವಾಗಿ ಪಡೆಯಬಾರದು ನೋಡೋಣ
ಸೂಜಿ: ಧಾರ್ಮಿಕ ನಂಬಿಕೆಗಳ ಪ್ರಕಾರ, ಬಟ್ಟೆ ಹೊಲಿಯಲು ಬಳಸುವ ಸೂಜಿಯನ್ನು ತೆಗೆದುಕೊಳ್ಳಬಾರದು. ಅವರ ಸೂಜಿಯನ್ನು ಬಳಸುವುದು ನಮಗೆ ಅಶುಭ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳಗಳು, ತೊಂದರೆಗಳು ಹೆಚ್ಚಾಗುತ್ತವೆ. ಆರ್ಥಿಕ ಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ನಕಾರಾತ್ಮಕ ಶಕ್ತಿ ಹರಡುತ್ತದೆ.
ಎಣ್ಣೆ: ಮನೆಯಲ್ಲಿ ಅಡುಗೆ ಮಾಡುವಾಗ ಎಣ್ಣೆ ಖಾಲಿಯಾದಾಗ ನಮ್ಮ ನೆರೆಹೊರೆಯವರ ಸಹಾಯವನ್ನು ನಾವು ಅನೇಕ ಬಾರಿ ತೆಗೆದುಕೊಳ್ಳುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಎಣ್ಣೆ ಸಮೃದ್ಧಿಗೆ ಸಂಬಂಧಿಸಿದೆ. ಇಂತಹ ಎಣ್ಣೆಯನ್ನು ಉಚಿತವಾಗಿ ಪಡೆಯುವುದರಿಂದ ನಿಮ್ಮ ಆರ್ಥಿಕ ನೆಮ್ಮದಿ ಹಾಳಾಗುತ್ತದೆ. ಒಂದು ವೇಲೆ ಸಾಸಿವೆ ಎಣ್ಣೆಯನ್ನು ಇತರರಿಂದ ಉಚಿತವಾಗಿ ಪಡೆದರೆ ಸಾಲದ ಸುಳಿಯಲ್ಲಿ ಸಿಲುಕುತ್ತೀರಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಉಪ್ಪು: ಉಪ್ಪಿನ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ವಾಸ್ತು ಶಾಸ್ತ್ರದಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪನ್ನು ಯಾರಿಂದಲೂ ಉಚಿತವಾಗಿ ತೆಗೆದುಕೊಳ್ಳಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪ್ಪು ಶನಿ ಗ್ರಹದೊಂದಿಗೆ ಸಂಬಂಧಿಸಿದೆ. ನೀವು ಯಾರ ಬಳಿಯಾದರೂ ಉಪ್ಪು ಪಡೆಯಬೇಕಾದರೆ ಅವರಿಗೆ ಹಣ ಅಥವಾ ನಿಮ್ಮ ಬಳಿ ಇರುವ ಯಾವುದಾದರೂ ವಸ್ತುವನ್ನು ನೀಡಿ. ಉಪ್ಪನ್ನು ಉಚಿತವಾಗಿ ಕೇಳಿ ಬಳಸುವುದರಿಂದ ನಿಮ್ಮ ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮ ಹಾಳಾಗಬಹುದು. ಪರಿಣಾಮವಾಗಿ ಮುಂದೆ ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಖಡ್ಗ ಇಟ್ಟುಕೊಳ್ಳುವುದು ಶುಭವೋ, ಸಮಸ್ಯೆಯೋ?
ಕಬ್ಬಿಣ: ಧಾರ್ಮಿಕ ನಂಬಿಕೆಗಳ ಪ್ರಕಾರ ಕಬ್ಬಿಣವು ಶನಿ ಗ್ರಹದೊಂದಿಗೆ ಸಂಬಂಧಿಸಿದೆ. ಹಾಗಾಗಿ ನಾವು ಇತರರಿಗೆ ಸೇರಿದ ಕಬ್ಬಿಣದ ವಸ್ತುಗಳನ್ನು ಉಚಿತವಾಗಿ ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಸಾಲದ ನೋವು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಹೆಚ್ಚಾಗುತ್ತದೆ. ದೈಹಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.
ಪರ್ಸ್: ಅನೇಕ ಬಾರಿ ಕೆಲವರು ಪರ್ಸ್‌ಗಳನ್ನು ಉಚಿತವಾಗಿ ಪಡೆಯುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ನೀವು ಬೇರೆಯವರ ಪರ್ಸ್ ಉಪಯೋಗಿಸುವುದು ಒಳ್ಳೆಯದಲ್ಲ. ಪರ್ಸ್ ಅನ್ನು ಇತರರಿಗೆ ಉಡುಗೊರೆಯಾಗಿ ನೀಡಬೇಡಿ ಅಥವಾ ತೆಗೆದುಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಮ್ಮ ಸಂಪತ್ತು ಮತ್ತು ಪ್ರಭಾವ ಇತರರಿಗೆ ಹೋಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.