LIVE UPDATES
Dhruva Sarja: ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!
Entertainment News in Kannada Live December 3, 2024: Dhruva Sarja: ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!
Dec 03, 2024 08:18 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
ಮನರಂಜನೆ News in Kannada Live:Dhruva Sarja: ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!
- ಮಾರ್ಟಿನ್ ಸಿನಿಮಾ ಸೋಲಿನ ಬೆನ್ನಲ್ಲೇ, ಧ್ರುವ ಸರ್ಜಾ ಜತೆಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಈ ಸಿನಿಮಾ ಮೂರು ವರ್ಷಗಳ ಹಿಂದೆಯೇ ಘೋಷಣೆ ಆಗಿದೆ. ಅಷ್ಟಕ್ಕೂ ಆ ಚಿತ್ರವೇ ಮುಂದುವರಿಯಲಿದ್ಯಾ ಅಥವಾ ಹೊಸ ಕಥೆ ಜತೆ ಈ ಜೋಡಿ ಮತ್ತೆ ಬರಲಿದ್ಯಾ ಎಂಬುದು ಸದ್ಯದ ಕುತೂಹಲ.
ಮನರಂಜನೆ News in Kannada Live:UI ಸಿನಿಮಾದ ಯಶಸ್ವಿಗಾಗಿ ರಿಯಲ್ ಸ್ಟಾರ್ ಉಪೇಂದ್ರ ದೇಗುಲ ದರ್ಶನ; ವನದುರ್ಗೆಗೆ ಸರ್ವಾಂಲಂಕಾರ ಸೇವೆ ಸಲ್ಲಿಸಿದ ನಟ
- UI The Movie: ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾವು ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಉಪೇಂದ್ರ ಅವರು ಚಿತ್ರದ ಯಶಸ್ಸಿಗಾಗಿ ವಿವಿಧ ದೇಗುಲಗಳ ದರ್ಶನ ಮಾಡುತ್ತಿದ್ದಾರೆ. ಬಂಟ್ವಾಳದ ಮೊಡಂಕಾಪು ಎಂಬಲ್ಲಿರುವ ವನದುರ್ಗಾ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ತನ್ನ ತಂಡದೊಂದಿಗೆ ಭೇಟಿ ನೀಡಿದ್ದಾರೆ.
ಮನರಂಜನೆ News in Kannada Live:Lakshmi Baramma: ಸತ್ಯ ಹೇಳಲು ತಾನೇ ಬಂದ ಲಕ್ಷ್ಮೀ; ಕಾವೇರಿಗೆ ಕಾದಿದೆ ಬಿಗ್ ಶಾಕ್, ವೈಷ್ಣವ್‌ಗೆ ಇಂದೇ ತಿಳಿಯಲಿದೆ ಸತ್ಯ
- ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂದಲದ ಗೂಡಾಗಿದೆ. ವೀಕ್ಷಕರು ದಿನಕ್ಕೊಂದೊಂದು ಕಥೆ ನೋಡಿ ಏನಾಗ್ತಾ ಇದೆ ಎಂದು ಕಂಡು ಹಿಡಿಯಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ.
ಮನರಂಜನೆ News in Kannada Live:Renukaswamy Murder Case: ವಿಚಾರಣೆ ಮುಂದೂಡಿದ ಹೈಕೋರ್ಟ್; ಈ ಬಾರಿಯೂ ಪವಿತ್ರಾ ಗೌಡಗೆ ಸಿಗಲಿಲ್ಲ ಬೇಲ್
- ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ಪವಿತ್ರಾ ಗೌಡ ಅವರಿಗೆ ಈ ಬಾರಿಯೂ ಬೇಲ್ ಸಿಕ್ಕಿಲ್ಲ. ಆದರೆ ಪವಿತ್ರಾ ಪರ ವಕೀಲರು ಮಂಡಿಸಿದ ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು 3 ದಿನಗಳ ಕಾಲ ಮುಂದೂಡಿದೆ.
ಮನರಂಜನೆ News in Kannada Live:ಐದು ದಿನಗಳ ಅಂತರದಲ್ಲಿ ಉಪ್ಪಿ ‘UI’, ಕಿಚ್ಚ ಸುದೀಪ್ ‘ಮ್ಯಾಕ್ಸ್’ ಬಿಡುಗಡೆ; ಏನಂತಾರೆ ರಿಯಲ್ ಸ್ಟಾರ್ ಉಪೇಂದ್ರ?
- ಡಿಸೆಂಬರ್ 2024ರ ಎರಡು ದೊಡ್ಡ ಸಿನಿಮಾಗಳಾದ ಯುಐ ಮತ್ತು ಮ್ಯಾಕ್ಸ್ ಕೇವಲ ಐದು ದಿನಗಳ ಅಂತರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಕ್ಕಿಂತ ಮೊದಲು ಅಂದರೆ ಡಿಸೆಂಬರ್ 20ರಂದು ಯುಐ ರಿಲೀಸ್ ಆಗಲಿದೆ.
ಮನರಂಜನೆ News in Kannada Live:Pushpa 3 Update: 'ಪುಷ್ಪ 3' ಸಿನಿಮಾದ ಟೈಟಲ್ ರಿವೀಲ್; ವಿಷಯ ಕೇಳಿ ಖುಷಿಯಾದ ಅಲ್ಲು ಅರ್ಜುನ್ ಅಭಿಮಾನಿಗಳು
- ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಬಿಡುಗಡೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಲ್ಲು ಅರ್ಜುನ್ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಆ ಸಂತಸ ಇಮ್ಮಡಿಯಾಗುವ ಇನ್ನೊಂದು ವಿಚಾರ ಹೊರಬಿದ್ದಿದೆ. ಪುಷ್ಪ 3 ಸಿನಿಮಾದ ಹೆಸರು ರಿವೀಲ್ ಆಗಿದೆ.
ಮನರಂಜನೆ News in Kannada Live:ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್, ರಚಿತಾ ರಾಮ್ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ
- Ayogya 2 Movie: ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ತಾರಾಗಣದ ಸೂಪರ್‌ಹಿಟ್ ಕನ್ನಡ ಸಿನಿಮಾ ಅಯೋಗ್ಯದ ಮುಂದುವರೆದ ಭಾಗ ಘೋಷಣೆಯಾಗಿದೆ. ಅಯೋಗ್ಯ 2 ಸಿನಿಮಾ 2025ರ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಮನರಂಜನೆ News in Kannada Live:Sikandar ka Muqaddar: ಹಾವ-ಭಾವದಲ್ಲಿ ಅವ್ಯಕ್ತವಾಗಿ ಅಭಿವ್ಯಕ್ತಿ, ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು ಡಾ ರೂಪಾ ರಾವ್ ಬರಹ
- ಡಾ ರೂಪಾ ರಾವ್ ಬರಹ ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಹಾವಭಾವದಲ್ಲಿ ಅವ್ಯಕ್ತವಾಗಿ ಸಂಗತಿಗಳ ಅಭಿವ್ಯಕ್ತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ ಓದಿ.
ಮನರಂಜನೆ News in Kannada Live:Ramachari Serial: ರಾಮಾಚಾರಿ ಮನೆಯಲ್ಲಿ ತುಂಬಿದೆ ಮೌನ; ನಾರಾಯಣಾಚಾರ್ಯರ ಮಾತಲ್ಲಿದೆ ಒಗಟು
- ನಾರಾಯಣಾಚಾರ್ಯರು ಕಿಟ್ಟಿ ಜನ್ಮ ರಹಸ್ಯ ಹೇಳಿದ್ದಾರೆ. ಕಿಟ್ಟಿ ಮದುವೆ ಆದರೆ ಸಮಸ್ಯೆ ಆಗುತ್ತದೆ ಎಂಬ ವಿಚಾರವನ್ನು ಮನೆಯವರ ಬಳಿ ಹಂಚಿಕೊಂಡಿದ್ದಾರೆ. ಆ ವಿಚಾರ ಕೇಳಿದ ತಕ್ಷಣ ಎಲ್ಲರಿಗೂ ಶಾಕ್ ಆಗಿದೆ.
ಮನರಂಜನೆ News in Kannada Live:Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಮರಳಿ ಬರ್ತಿದ್ದಾಳೆ ಶಿವು ತಾಯಿ
- ಅಣ್ಣಯ್ಯ ಧಾರಾವಾಹಿಯಲ್ಲಿ ದಿನೇ ದಿನೇ ಕಥೆ ತಿರುವು ಪಡೆದುಕೊಳ್ಳುತ್ತಿದೆ. ಅಣ್ಣಯ್ಯನ ತಾಯಿ ಬದುಕಿದ್ದಾಳೆ ಎನ್ನುವ ಮಾಹಿತಿಯೇ ಇರಲಿಲ್ಲ. ಆದರೆ ಅವಳು ಈಗ ಜೈಲಿನಿಂದ ಮರಳಿ ಬರುತ್ತಿದ್ದಾಳೆ. ಕಥೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಮನರಂಜನೆ News in Kannada Live:ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ; ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಪೊಸ್ಟರ್ ರಿಲೀಸ್
- ನಿರ್ದೇಶಕ ಸಂದೀಪ್ ಸಿಂಗ್ ಅವರ ಮುಂಬರುವ ಹಿಸ್ಟೋರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್ ಅಭಿನಯಿಸಲಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರದಲ್ಲಿ ಈಗಾಗಲೇ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮನರಂಜನೆ News in Kannada Live:Uttarakaanda Movie: ‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ; ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ
- ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸದ್ಯ ಯಾವುದೇ ಸುದ್ದಿ ಇಲ್ಲ ಪ್ರಚಾರವೂ ಇಲ್ಲ ಎಂಬ ಕಾರಣಕ್ಕೆ ಈ ಸಿನಿಮಾ ತೆರೆಗೆ ಬರುವುದಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಈ ಅನುಮಾನಕ್ಕೆ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಮನರಂಜನೆ News in Kannada Live:ತಾನೇ ಪಾಶ್ ಸಮಿತಿ ರಚಿಸಿ, ತಾನೇ ತಡೆ ಹಿಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ; ತರಾತುರಿಯಲ್ಲಿ ಸಮಿತಿ ರಚನೆಯಾಗಿದ್ದು ಯಾಕೆ?
- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 11 ಸದಸ್ಯರ POSH ಸಮಿತಿಯೊಂದನ್ನು ರಚಿಸಿತ್ತು. ಈಗ ಚುನಾವಣೆಯ ನೆಪವೊಡ್ಡಿ ಆ ಸಮಿತಿಯನ್ನು ತಡೆ ಹಿಡಿದಿದೆ. ತರಾತುರಿಯಲ್ಲಿ ಸಮಿತಿ ರಚನೆಯಾಗಿದ್ದು ಯಾಕೆ? ಇದೇನು ಕಣ್ಣೊರೆಸುವ ತಂತ್ರವಾ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಮನರಂಜನೆ News in Kannada Live:ಸೀತಾ ರಾಮ ಧಾರಾವಾಹಿ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಸಂದರ್ಶನ; ಮುದ್ದು ಕಣ್ಮಣಿ ಸಿಹಿ ಬಗ್ಗೆ ಹೇಳಿದ್ದೇನು ನೋಡಿ
- ಸೀತಾ ರಾಮ ಧಾರಾವಾಹಿಯ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಅವರ ಮಾತಿನಲ್ಲಿ ತೆರೆಹಿಂದಿನ ಶ್ರಮದ ಬಗ್ಗೆ ಒಂದಷ್ಟು ವಿಷಯ ಇಲ್ಲಿದೆ. ಡೈಲಾಗ್ ರೈಟರ್ ಪಾಡೇನು, ಕಥೆ ಬೋರಾಯ್ತು ಎಂದು ಹೇಳುವ ಜನ ಅರ್ಥಮಾಡಿಕೊಳ್ಳಬೇಕಾದ ಸಾಕಷ್ಟು ಅಂಶಗಳನ್ನು ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ ಓದಿ.