logo
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 12, 2024: Vettaiyan: ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ದಾಟಿದ ವೇಟ್ಟೈಯನ್; ಎರಡೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್‌
Vettaiyan: ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ದಾಟಿದ ವೇಟ್ಟೈಯನ್; ಎರಡೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್‌

Entertainment News in Kannada Live October 12, 2024: Vettaiyan: ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ದಾಟಿದ ವೇಟ್ಟೈಯನ್; ಎರಡೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್‌

Oct 12, 2024 08:28 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Oct 12, 2024 08:28 PM IST

Entertainment News in Kannada Live:Vettaiyan: ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ದಾಟಿದ ವೇಟ್ಟೈಯನ್; ಎರಡೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್‌

  • ವೇಟ್ಟೈಯನ್ ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 2: ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ವೇಟ್ಟೈಯನ್ ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ವೇಟ್ಟೈಯನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ತುಂಬಾ ಚೆನ್ನಾಗಿ ಆಗಿದೆ. ಸಿನಿಮಾ ಬಿಡುಗಡೆಯಾಗಿ ಎರಡನೇ ದಿನಕ್ಕೆ ಆದ ಲಾಭ ಎಷ್ಟು ಎಂಬ ಮಾಹಿತಿ ಇಲ್ಲಿದೆ. 
Read the full story here

Oct 12, 2024 07:39 PM IST

Entertainment News in Kannada Live:ರಾಹಾ ಹೆಸರಿನಲ್ಲಿ ಆನೆಯನ್ನು ದತ್ತು ಪಡೆದ ರಾಮ್‌ ಚರಣ್‌; ಮಗು ಹುಟ್ಟಿ ಒಂದೇ ತಿಂಗಳಲ್ಲಿ ಆಲಿಯಾ ಭಟ್‌ಗೆ ಕಾದಿತ್ತು ಅಚ್ಚರಿ

  • ರಾಹಾ ಹುಟ್ಟಿದ ಒಂದು ತಿಂಗಳ ನಂತರ ಒಮ್ಮೆ ವಾಕಿಂಗ್‌ಗೆ ಹೋದಾಗ ಯಾರೋ ಬಂದು ಆನೆ ಬಂದಿದೆ ಎಂದರಂತೆ. ಅದನ್ನು ಕೇಳಿ ಆಶ್ವರ್ಯಗೊಂಡು ಪ್ರಶ್ನಿಸಿದಾಗ ರಾಮ್‌ ಚರಣ್‌ ಆನೆ ಕಳಿಸಿದ್ದಾರೆ ಎಂದು ಹೇಳಿದರಂತೆ. 
Read the full story here

Oct 12, 2024 06:47 PM IST

Entertainment News in Kannada Live:BBK 11: ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ, ಇನ್ನು ಏನೆಲ್ಲ ಇದೆ ನೋಡಿ ಜನರ ಉಡುಗೊರೆ; ವಾರದ ಕಥೆ ಕಿಚ್ಚನ ಜೊತೆ

  • ಬಿಗ್‌ ಬಾಸ್‌ ಸೀಸನ್‌ 11ರ ಆಟ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜನರಿಂದ ಸ್ಪರ್ಧಿಗಳಿಗೆ ಬಂತು ನಾನಾ ರೀತಿಯ ಉಡುಗೊರೆ. ಈ ವಾರದ ಕಥೆ ಕಿಚ್ಚನ ಜೊತೆ ಹೇಗಿರಲಿದೆ ಎಂಬುದರ ಸುಳಿವು ಇದೀಗ ಸಿಕ್ಕಿದೆ. ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ ದೊರೆತಿದೆ. 
Read the full story here

Oct 12, 2024 05:22 PM IST

Entertainment News in Kannada Live:ನಿರೀಕ್ಷಿತ ದಿನಾಂಕದಂದು OTTಯಲ್ಲಿ ಬಿಡುಗಡೆಯಾಗದ ಕೃಷ್ಣಂ ಪ್ರಣಯ ಸಖಿ; ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ ಅಭಿಮಾನಿಗಳು

  • Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದಿದ್ದಾರೆ. ಆದರೆ ಕಾಯುವಿಕೆಯನ್ನು ಇನ್ನಷ್ಟು ದಿನ ಮುಂದೂಡುವ ಪ್ರಸಂಗ ಎದುರಾಗಿದೆ. ಇನ್ನೆಷ್ಟು ದಿನ ಕಾಯಬೇಕು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. 
Read the full story here

Oct 12, 2024 04:55 PM IST

Entertainment News in Kannada Live:ಸೈನೈಡ್ ಪ್ರೀಕ್ವೆಲ್: 30 ವರ್ಷದ ಸಂಶೋಧನೆಯ ನಂತರ ಸಿದ್ಧವಾಗಿದೆ ಚಿತ್ರಕಥೆ, ಏಕಕಾಲಕ್ಕೆ ವೆಬ್‌ಸರಣಿ, ಸಿನಿಮಾ ಕನಸು ಹೊತ್ತ ನಿರ್ದೇಶಕ

  • Cyanide Movie Prequel: ಸೈನೈಡ್ ಸಿನಿಮಾ ಮೂಲಕ ಎಲ್‌ಟಿಟಿಇ ಹೋರಾಟಗಾರರ ಕಥೆಯನ್ನು ಕನ್ನಡಕ್ಕೆ ತಂದಿದ್ದ ನಿರ್ದೇಶಕ ಎಎಂಆರ್‌ ರಮೇಶ್ ಇದೀಗ ಅದೇ ಸಿನಿಮಾದ ಪ್ರಿಕ್ವೆಲ್ (ಹಿಂದಿನ ಭಾಗ) ಕೆಲಸ ಶುರು ಮಾಡಿದ್ದಾರೆ. 30 ವರ್ಷಗಳ ಅವಿರತ ಶ್ರಮದಿಂದ ರೂಪುಗೊಂಡ ಕಥೆಯನ್ನು ಅವರು' ಎಚ್‌ಟಿ ಕನ್ನಡ' ಜೊತೆಗೆ ಹಂಚಿಕೊಂಡಿದ್ದಾರೆ.
Read the full story here

Oct 12, 2024 03:29 PM IST

Entertainment News in Kannada Live:ಬಿಡುಗಡೆಗೆ ಮುನ್ನವೇ ಹಾಡುಗಳಿಂದ ಹಿಟ್ ಆಗಿತ್ತು ಈ ಸಿನಿಮಾ; ಕೃಷ್ಣಂ ಪ್ರಣಯ ಸಖಿ ಚಿತ್ರದ ಕೇಳಲೇಬೇಕೆನಿಸುವ ಎಂಟು ಗೀತೆಗಳಿವು

  • ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದಿದ್ದರು. ಆದರೆ ಈಗ ಆ ಕಾತರಕ್ಕೆ ಉತ್ತರ ಸಿಕ್ಕಿದೆ. ಅಕ್ಟೋಬರ್‌ 11ರಿಂದ OTT ಸ್ಟ್ರೀಮಿಂಗ್‌ ಆರಂಭವಾಗಿದೆ. 
Read the full story here

Oct 12, 2024 02:33 PM IST

Entertainment News in Kannada Live:Lakshmi Baramma: ನೀನು ಒಬ್ಳು ತಾಯಿನಾ? ಎಂದು ಪ್ರಶ್ನೆ ಮಾಡಿದ ವೈಷ್ಣವ್‌; ಬೆಟ್ಟದ ಮಾದಪ್ಪನಿಂದ ಹೊರಬಂತು ಸತ್ಯ

  • ತಾಯಿ ಮೇಲೆ ಮುನಿಸಿಕೊಂಡ ವೈಷ್ಣವ್‌: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ವೈಷ್ಣವ್‌ಗೆ ಎಲ್ಲ ಸತ್ಯ ಗೊತ್ತಾಗಿದೆ. ಕಾವೇರಿ ಎಷ್ಟು ಕೆಟ್ಟವಳು ಎಂಬ ಸತ್ಯ ಗೊತ್ತಾಗಿ ಅವನು ಕೋಪಗೊಂಡಿದ್ದಾನೆ. ಪಾಪದ ಕೀರ್ತಿ ಪ್ರಾಣವೇ ಹೋಗಿದೆ. 
Read the full story here

Oct 12, 2024 02:16 PM IST

Entertainment News in Kannada Live:ಮಗನಿಗಾಗಿ ಅಪ್ಪನ ತ್ಯಾಗ: ರಾಮ್‌ಚರಣ್‌ ಗೇಮ್‌ ಚೇಂಜರ್‌ ಚಿತ್ರಕ್ಕಾಗಿ ತಮ್ಮ ವಿಶ್ವಂಭರ ಸಿನಿಮಾ ರಿಲೀಸ್‌ ಮುಂದೂಡಿದ ಚಿರಂಜೀವಿ

  • ರಾಮ್‌ ಚರಣ್‌ ಅಭಿನಯದ ಗೇಮ್ ಚೇಂಜರ್ ಸಿನಿಮಾ ಇದೇ ವರ್ಷ ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರವನ್ನು ಜನವರಿಗೆ ಮುಂದೂಡಲಾಗಿದೆ. ಚಿತ್ರತಂಡ ಹೊಸ ರಿಲೀಸ್‌ ದಿನಾಂಕವನ್ನು ಅನೌನ್ಸ್‌ ಮಾಡಿದೆ. ರಾಮ್‌ ಚರಣ್‌ ಫ್ಯಾನ್ಸ್‌, ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

Read the full story here

Oct 12, 2024 01:49 PM IST

Entertainment News in Kannada Live:Annayya Serial: ಕ್ಷಮಿಸು ಎನ್ನುತ್ತಲೇ ಪಾರುಗೆ ತಾಳಿ ಕಟ್ಟಲು ರೆಡಿಯಾದ ಶಿವು, ಮದುವೆ ಮನೆಯಲ್ಲಿ ಹರಿಯಿತು ಕಣ್ಣೀರಿನ ಕೋಡಿ

  • ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಆಗ್ತಾ ಇದೆ. ಆದರೆ ಮದುವೆ ಗಂಡು, ಹೆಣ್ಣಿಗೆ ಈ ಮದುವೆ ಇಷ್ಟವೇ ಇಲ್ಲ. ಕ್ಷಮಿಸು ಎನ್ನುತ್ತಲೇ ಪಾರುಗೆ ತಾಳಿ ಕಟ್ಟಲು ಶಿವು ರೆಡಿಯಾಗಿದ್ದಾನೆ. ಪಾರು ಭಯ ಹೆಚ್ಚುತ್ತಲೇ ಇದೆ. 
Read the full story here

Oct 12, 2024 01:17 PM IST

Entertainment News in Kannada Live:ವಿಜಯದಶಮಿ ಶುಭದಿನದಂದು ವಿಭಿನ್ನ ವಿಶ್ವವನ್ನೇ ತೋರಿದ ವಿಶ್ವಂಭರ ಸಿನಿಮಾ ಟೀಸರ್‌; ಮೆಗಾಸ್ಟಾರ್‌ ಚಿರಂಜೀವಿ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ

  • ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ವಿಶ್ವಂಭರ ಟೀಸರ್‌ ರಿಲೀಸ್‌ ಆಗಿದೆ. ದಸರಾ ಹಬ್ಬದ ಪ್ರಯುಕ್ತ ಚಿತ್ರತಂಡ ಚಿರಂಜೀವಿ ಅಭಿಮಾನಿಗಳಿಗೆ ವಿಶ್ವಾಂಭರ ಟೀಸರ್‌ ರಿಲೀಸ್‌ ಮಾಡುವ ಮೂಲಕ ಗಿಫ್ಟ್‌ ನೀಡಿದೆ. ಟೀಸರ್‌ ನೋಡಿದವರು ಚಿರಂಜೀವಿ ಆಕ್ಷನ್‌ ಸೀನ್ಸ್‌ ಸೂಪರ್‌ ಆಗಿದೆ ಎನ್ನುತ್ತಿದ್ದಾರೆ.

Read the full story here

Oct 12, 2024 12:00 PM IST

Entertainment News in Kannada Live:ಥಿಯೇಟರ್‌ನಲ್ಲಿ ಹಿಂದೆ ಉಳಿದ್ರೂ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ದಳಪತಿ ವಿಜಯ್‌‌ ಸಿನಿಮಾ; 14 ದೇಶಗಳಲ್ಲಿ ಟ್ರೆಂಡಿಗ್‌ನಲ್ಲಿರುವ ಗೋಟ್‌

  • ದಳಪತಿ ವಿಜಯ್‌ ಅಭಿನಯದ ದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಹೇಳಿಕೊಳ್ಳುವಂತೆ ಸದ್ದು ಮಾಡದಿದ್ದರೂ ಒಟಿಟಿಯಲ್ಲಿ ಧೂಳು ಎಬ್ಬಿಸುತ್ತಿದೆ. ಸದ್ಯಕ್ಕೆ ಗೋಟ್‌ ಸಿನಿಮಾ ಗ್ಲೋಬಲ್‌ ರೇಂಜ್‌ನಲ್ಲಿ ಟಾಪ್‌ 5 ಸ್ಥಾನದಲ್ಲಿದ್ದು ಟ್ರೆಂಡ್‌ ಆಗುತ್ತಿದೆ.

Read the full story here

Oct 12, 2024 09:37 AM IST

Entertainment News in Kannada Live:ಸೊಸೆಗೆ ಮೋಸ ಮಾಡಿದ್ರೆ ಮಗ ಅನ್ನೋದು ಮರೆತು ಪೊಲೀಸರಿಗೆ ಹಿಡಿದು ಕೊಡ್ತೀನಿ, ತಾಂಡವ್‌ಗೆ ಧರ್ಮರಾಜ್‌ ವಾರ್ನಿಂಗ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 11ರ ಎಪಿಸೋಡ್‌ನಲ್ಲಿ ಪತಿ ಧರ್ಮರಾಜ್‌ಗೆ ಕುಸುಮಾ ಮಗನ ಬಗ್ಗೆ ಎಲ್ಲಾ ನಿಜ ಹೇಳಿ ಗೋಳಾಡುತ್ತಾಳೆ. ಮಗನ ವರ್ತನೆಗೆ ಶಾಕ್‌ ಆದ ಧರ್ಮರಾಜ್‌ ಸೊಸೆಗೆ ಮೋಸ ಮಾಡಿದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ತೀನಿ ಅಂತ ಎಚ್ಚರಿಸುತ್ತಾನೆ.

Read the full story here

Oct 12, 2024 07:44 AM IST

Entertainment News in Kannada Live:ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌; ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್‌ ಆಯ್ತು?

  • ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಶುಕ್ರವಾರ ಕನ್ನಡ ಸೇರಿ 5 ಭಾಷೆಗಳಲ್ಲಿ ತೆರೆ ಕಂಡಿದೆ. ಸಿನಿಮಾಗೆ ದೊರೆತ ರೆಸ್ಪಾನ್ಸ್‌ ನೋಡಿ ಎಪಿ ಅರ್ಜುನ್‌ ಹಾಗೂ ಚಿತ್ರತಂಡ ಖುಷಿಯಾಗಿದೆ. ಮೊದಲ ದಿನ ಸಿನಿಮಾ 6.2 ಕೋಟಿ ಕಲೆಕ್ಷನ್‌ ಮಾಡಿದೆ. ಮುಂದಿನ ವಾರ ಸಿನಿಮಾ ಇತರ ಭಾಷೆಗಳಲ್ಲಿ ರಿಲೀಸ್‌ ಆಗಲಿದ್ದು ಕಲೆಕ್ಷನ್‌ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ.

Read the full story here

Oct 12, 2024 06:13 AM IST

Entertainment News in Kannada Live:ಮಾರ್ಟಿನ್‌ ಭಾಗ 2 ಯಾವಾಗ ರಿಲೀಸ್‌? ಅಭಿಮಾನಿಗಳ ಆಸೆಗೆ ನಿರ್ದೇಶಕ ಎಪಿ ಅರ್ಜುನ್‌ ಹೇಳಿದ್ದೇನು?

  • ಧ್ರುವಸರ್ಜಾ ಅಭಿನಯದ ಮಾರ್ಟಿನ್‌ ಚಿತ್ರವನ್ನು ಸಿನಿಪ್ರಿಯರು ಅಪ್ಪಿ ಒಪ್ಪಿಕೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶದಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಇದರ ಬಗ್ಗೆ ನಿರ್ದೇಶಕ ಎಪಿ ಅರ್ಜುನ್‌ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾರ್ಟಿನ್‌ 2 ಬಗ್ಗೆ ಕೂಡಾ ಮಾತನಾಡಿದ್ದಾರೆ. 

Read the full story here

    ಹಂಚಿಕೊಳ್ಳಲು ಲೇಖನಗಳು