Entertainment News in Kannada Live October 4, 2024: OTT Comedy Movie: ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್ ಸಿನಿಮಾ; 8 ವರ್ಷಗಳಲ್ಲಿ 26 ಬಾರಿ ರಿಮೇಕ್ ಆದ ಚಿತ್ರವಿದು
Oct 04, 2024 09:03 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- Khel Khel Mein OTT: ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗಲಿಲ್ಲ. ಸಿನಿಮಾದಲ್ಲಿನ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರೂ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿಲ್ಲ. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ.
- ಬಿಗ್ ಬಾಸ್ ಶುರುವಾಗಿ ಆರು ದಿನಗಳಾಗಿವೆ. ಈ ಆರು ದಿನಗಳಲ್ಲಿ ಸ್ಪರ್ಧಿಗಳು ಅನ್ಯೋನ್ಯವಾಗಿದ್ದಕ್ಕಿಂತ ಹೆಚ್ಚು ಕಿತ್ತಾಟದಲ್ಲಿ, ಮಾತಿಗೆ ಮಾತು ಬೆಳೆಸಿ ಮನೆಯ ಶಾಂತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗಲೇ ಇದೇ ಶೋ ನಿಲ್ಲಿಸುವಂತೆ ಕೋರಿ ದೂರುಗಳೂ ದಾಖಲಾಗುತ್ತಿವೆ.
- Pepe OTT: ಆಗಸ್ಟ್ 30ರಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು ವಿನಯ್ ರಾಜ್‌ಕುಮಾರ್ ನಟನೆಯ ಪೆಪೆ ಸಿನಿಮಾ. ಇದೀಗ ಇದೇ ಚಿತ್ರ ಒಟಿಟಿ ಅಂಗಳ ಪ್ರವೇಶಿಸಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನದು, ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ? ಇಲ್ಲಿದೆ ಮಾಹಿತಿ.
- ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಧ್ರುವ ಸರ್ಜಾ ಆಗಮಿಸಿದ್ದಾರೆ. ಶಿವಣ್ಣನ ಬಗ್ಗೆ ಮಾತನಾಡಿದ ಧ್ರುವ, ಮಾರ್ಟಿನ್ ರಿಲೀಸ್‌ಗೆ ಶಿವರಾಜ್‌ಕುಮಾರ್ ಅವರು ಮಾಡಿದ ಸಹಾಯ ಎಂಥದ್ದು ಎಂಬುದನ್ನು ಹೇಳಿಕೊಂಡಿದ್ದಾರೆ.
- ಕನ್ನಡ ಕಿರುತೆರೆಯಲ್ಲಿ ಈ ವಾರ ಅಚ್ಚರಿಯ ಬದಲಾವಣೆಗಳು ಘಟಿಸಿವೆ. ಟಾಪ್ ಐದರಲ್ಲಿ ಇದ್ದರೂ, ಅಗ್ರ ಸ್ಥಾನಕ್ಕೆ ಬಾರದೇ ಅಲ್ಲೇ ಇರುತ್ತಿದ್ದ ಸೀರಿಯಲ್‌ವೊಂದು ಈ ವಾರ ಮೊದಲ ಸ್ಥಾನ ಅಲಂಕರಿಸಿದೆ. ಹಾಗಾದರೆ ಈ ವಾರ ಯಾವೆಲ್ಲ ಸೀರಿಯಲ್‌ಗಳಿಗೆ ಎಷ್ಟೆಷ್ಟು ಟಿಆರ್‌ಪಿ ಸಿಕ್ಕಿದೆ. ಟಾಪ್ 10 ಕನ್ನಡ ಧಾರಾವಾಹಿಗಳು ಯಾವವು? ಇಲ್ಲಿದೆ ಮಾಹಿತಿ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಳನಟ ಮೋಹನ್ ರಾಜ್ ಗುರುವಾರ ನಿಧನರಾಗಿದ್ದಾರೆ. ಮೋಹನ್, ಹೆಚ್ಚಾಗಿ ತೆಲುಗಿನಲ್ಲಿ ಬಾಲಕೃಷ್ಣ, ಮೋಹನ್ ಬಾಬು ಮತ್ತು ವೆಂಕಟೇಶ್ ಅವರೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ. ಲಾರಿ ಡ್ರೈವರ್, ಸಮರಸಿಂಹ ರೆಡ್ಡಿ ಮತ್ತು ಅಸೆಂಬ್ಲಿ ರೌಡಿ ಜೊತೆಗೆ, ಅವರು ಅನೇಕ ಸಿನಿಮಾ ಖಳನಟನಾಗಿ ತೆಲುಗು ಪ್ರೇಕ್ಷಕರ ಅಭಿಮಾನ ಗಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ನವರಾತ್ರಿ ಮೊದಲ ದಿನ ಗುರುವಾರ, ಹರ್ಷಿಕಾ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಭುವನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 3ರ ಎಪಿಸೋಡ್‌ನಲ್ಲಿ ಭಾಗ್ಯಾ ಶ್ರೇಷ್ಠಾಳನ್ನು ಹುಡುಕಿಕೊಂಡು ಅವಳ ಮನೆಗೆ ಹೋಗುತ್ತಾಳೆ. ಬಾಗಿಲು ಬಡಿದರೂ, ಕಾಲ್ ಮಾಡಿದರೂ ಶ್ರೇಷ್ಠಾ ಬಾಗಿಲು ತೆಗೆಯುವುದಿಲ್ಲ. ಅದೇ ಸಮಯಕ್ಕೆ ಅಲ್ಲಿಗೆ ತಾಂಡವ್ ಬರುತ್ತಾನೆ. ಗಂಡನನ್ನು ನೋಡಿ ಭಾಗ್ಯಾ ಬಚ್ಚಿಟ್ಟುಕೊಳ್ಳುತ್ತಾಳೆ.
- ಅಮೃತಧಾರೆ ಸೀರಿಯಲ್ ಇಂದಿನ ಸಂಚಿಕೆ (ಅಕ್ಟೋಬರ್ 04): ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಚಂಡಿಯಾಗಿದ್ದಾಳೆ. ಜೈದೇವ್ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಿದ್ದಾಳೆ. ಇನ್ನೊಂದೆಡೆ ಜೈದೇವ್ ವಿರುದ್ಧ ಭೂಮಿಕಾ ಆನಂದ್ ಮಹತ್ವದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
- ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುಗೆ ಆಪತ್ತು ಕಾದಿದೆ. ಪಾರು ಹೆಸರು ಬದಲಾಯಿಸಿದ್ದಾರೆ. ಇಷ್ಟ ಇಲ್ಲದ ಮದುವೆಗೆ ಒಪ್ಪಿಕೊಂಡಂತಾಗಿದೆ. ಅಪ್ಪನ ಮಾತು ಕೇಳಿ ಕಣ್ಣೀರು ಹಾಕುತ್ತಾ ಇದ್ದಾಳೆ. ಈಗ ಅಣ್ಣನಿಗೂ ಸತ್ಯ ಗೊತ್ತಾಗಿದೆ.
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಕೊಯಂಬತ್ತೂರಿನ ಈಶಾ ಫೌಂಡೇಶನ್‌ಗೆ ತೆರಳಿ ಲಿಂಗಭೈರವಿ ದರ್ಶನ ಪಡೆದಿದ್ದಾರೆ. ಸಚಿವೆ ಕೊಂಡಾ ಸುರೇಖಾ ಹೇಳಿಕೆ ನಂತರ ಡಿಸ್ಟರ್ಬ್ ಆಗಿದ್ದ ಸ್ಯಾಮ್, ದೇವಿ ದರ್ಶನ ಪಡೆದಿದ್ದಾರೆ. ದೇವಸ್ಥಾನ ಭೇಟಿಯ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ನವರಾತ್ರಿ ಶುಭಾಶಯ ಕೋರಿದ್ದಾರೆ.
ಕಳೆದ 4 ದಿನಗಳಿಂದ ಬಿಗ್‌ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಜಗದೀಶ್, ಲಾಯರ್ ಅಲ್ಲವಂತೆ. ಆತ ನಕಲಿ ಪಿಯುಸಿ ಮಾರ್ಕ್ಸ್‌ಕಾರ್ಡ್ ತಯಾರಿಸಿ ಡಿಗ್ರಿ ಹಾಗೂ ಲಾಯರ್ ಪದವಿ ಮಾಡಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಲಾಯರ್ ಲೈಸನ್ಸ್ ಪದವಿ ಪಡೆದಿದ್ದಾರೆ ಎಂದು ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಟಾಸ್ಕ್ ಸಮಯದಲ್ಲಿ ಧನ್‌ರಾಜ್ ಆಚಾರ್ ಜೊತೆ ಜಗಳವಾಡಿ, ಬಾಡಿ ಶೇಮಿಂಗ್ ಮಾಡಿದ್ದ ಲಾಯರ್ ಜಗದೀಶ್ ಮರುದಿನ ಅವರ ಕ್ಷಮೆ ಕೇಳಿದ್ದಾರೆ. ಬೆಳಗ್ಗೆ ಡ್ಯಾನ್ಸ್ ಮಾಡುತ್ತಾ ಧನರಾಜ್ ಆಚಾರ್ ಕೈ ಕುಲುಕಿ, ಹಗ್ ಮಾಡಿ ಸಾರಿ ಅದು ಆಟದ ಒಂದು ಭಾಗವಷ್ಟೇ, ಪರ್ಸನಲ್ ಏನೂ ಇಲ್ಲ ಎಂದಿದ್ದಾರೆ.