Entertainment News in Kannada Live September 17, 2024: ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ, ಚಂದನವನದಲ್ಲಿ 25 ವರ್ಷ ಪೂರೈಸಿದ ಖುಷಿಯಲ್ಲಿ ಅನು ಪ್ರಭಾಕರ್
Sep 17, 2024 05:54 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- ಅನು ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಗ್ಗ ಚಿತ್ರತಂಡ ಅವರನ್ನು ವಿಶೇಷವಾಗಿ ಅಭಿನಂದಿಸಿದೆ. ಇತ್ತ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಶಾಸ್ತ್ರವೂ ಅದೇ ವೇದಿಕೆ ಮೇಲೆ ನೆರವೇರಿದೆ.
- ಹಿಂದಿಯ ಬರ್ಲಿನ್ ಸಿನಿಮಾ ಕಳೆದ ಶುಕ್ರವಾರ ಅಂದರೆ ಸೆಪ್ಟೆಂಬರ್ 13ರಂದು ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕೇವಲ ಹಿಂದಿಯಲ್ಲಿ ಮಾತ್ರ ಸ್ಟ್ರೀಮ್ ಆಗುತ್ತಿರುವ ಈ ಸಿನಿಮಾ, ಕೇವಲ ಮೂರೇ ದಿನಗಳಲ್ಲಿ 50 ಮಿಲಿಯನ್ ನಿಮಿಷಗಳ ವೀಕ್ಷಣೆ ಕಂಡು ಹೊಸ ಮೈಲಿಗಲ್ಲು ತಲುಪಿದೆ.
- ಮಹಿಳಾ ಕಲಾವಿದರನ್ನು ಮಲಯಾಳಂ ಚಿತ್ರರಂಗದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ ಎಂಬ ಆರೋಪದ ಮೇಲೆ ಅಲ್ಲಿನ ಸರ್ಕಾರ, ನಿವೃತ್ತ ಜಸ್ಟಿಸ್ ಹೇಮಾ ಅವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಇದೀಗ ಅದೇ ಮಾದರಿ ಸಮಿತಿ ಕರ್ನಾಟಕದಲ್ಲೂ ಆಗಬೇಕು ಎಂಬ ಕುರಿತು ಚೇಂಬರ್‌ನಲ್ಲಿ ಸಭೆ ನಡಯಿತು. ಸಭೆಯ ಪ್ರಮುಖಾಂಶಗಳು ಇಲ್ಲಿವೆ.
- ದೇಸಾಯಿ ಮನೆಗೆ ಸೊಸೆಯಾಗಿ ಬಂದ ಬಳಿಕ, ಮೊದಲಿದ್ದ ಖುಷಿ ಸೀತಾ ಮುಖದಲ್ಲಿ ಕಾಣಿಸುತ್ತಿಲ್ಲ. ರಾಮನ ಪ್ರೀತಿ ಸಿಗುತ್ತಿದೆಯಾದರೂ, ಅದರ ನಡುವೆ ಸಿಹಿ ಎಲ್ಲಿ ನನ್ನ ಕೈಯಿಂದ ಜಾರಿ ಹೋಗುತ್ತಾಳೋ ಎಂಬ ಭಯದಲ್ಲಿಯೇ ಉಸಿರಾಡುತ್ತಿದ್ದಾಳೆ.
- ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಸಿದ್ದಾರ್ಥ್ ಜೊತೆ ಮಾತಾಡುತ್ತಾ ಮೈ ಮರೆತಿದ್ದಾಳೆ. ಇತ್ತ ತಾನು ಮನೆಗೆ ಹೋಗಬೇಕಿದೆ ಎಂಬುದನ್ನೂ ಅವಳು ಮರೆತಂತಿದೆ. ಈ ಸಂದರ್ಭದಲ್ಲಿ ಶಿವು ಏನ್ಮಾಡ್ತಾನೆ ಕಾದು ನೋಡಬೇಕಿದೆ.
- ಅಮೃತಧಾರೆ ಸೆಪ್ಟೆಂಬರ್ 17ರ ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್ 17ರ ಸಂಚಿಕೆಯಲ್ಲಿ ಮಲ್ಲಿಗೆ ಸೀಮಂತ ನಡೆಸಲು ದಿವಾನ್ ಮನೆಯಲ್ಲಿ ಸಿದ್ಧತೆ ನಡೆದಿದೆ. ಇದೇ ಸಮಯದಲ್ಲಿ ಗಂಡ-ಹೆಂಡತಿ ಜಗಳವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಡಿ ಎಂದು ಭೂಮಿಕಾ ಪಾರ್ಥನಿಗೆ ಒಂದಿಷ್ಟು ದಾಂಪತ್ಯ ರಹಸ್ಯಗಳನ್ನು ಹೇಳಿಕೊಟ್ಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರದ ಎಪಿಸೋಡ್. ಮದುವೆ ತಡೆಯಲು ಒಳಗೆ ಹೋಗಲು ಪ್ರಯತ್ನಿಸುವ ಕುಸುಮಾಳನ್ನು ರೆಸಾರ್ಟ್ ಸಿಬ್ಬಂದಿ ತಡೆಯುತ್ತಾರೆ. ಅಷ್ಟರಲ್ಲಿ ಪೂಜಾ ಕೂಡಾ ಅಲ್ಲಿಗೆ ಬರುತ್ತಾಳೆ. ಸತ್ಯ ಗೊತ್ತಿದ್ದರೂ ಇಷ್ಟು ದಿನಗಳ ಕಾಲ ಸತ್ಯ ಮುಚ್ಚಿಟ್ಟಿದ್ದ ಪೂಜಾ ಮೇಲೆ ಕುಸುಮಾ ಕೋಪಗೊಳ್ಳುತ್ತಾಳೆ.
- ಸಾವಿತ್ರಿ ಮನೆಯಲ್ಲಿರುವ ಶ್ರಾವಣಿಗೆ ಅವಳಿಗೆ ಅಪ್ಪನ ಮೇಲಿರುವ ಅಭಿಮಾನ ಕಂಡು ಅಚ್ಚರಿ. ಯಾರಿಗೂ ಹತ್ತಿರವಾಗದ ಲಲಿತಾದೇವಿ ಸುಬ್ಬು ಮುಂದೆ ಮನಬಿಚ್ಚಿ ಮಾತಾಡಿದ್ರು. ಉತ್ಸವಕ್ಕೆ ತಯಾರು ಮಾಡಲು ಶ್ರಾವಣಿಗೆ ಸಾವಿತ್ರಿಯ ಸಹಾಯ. ಈ ಎಲ್ಲದರ ನಡುವೆಯೂ ಸಾವಿತ್ರಿಗೆ ಶ್ರಾವಣಿ ಮಿನಿಸ್ಟರ್ ಮಗಳು ಎಂಬುದು ತಿಳಿಯಲೇ ಇಲ್ಲ.
ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ 2024 ಕಾರ್ಯಕ್ರಮ ಸೆಪ್ಟೆಂಬರ್ 20, 21 ಹಾಗೂ 22 ರಂದು ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ವಾಹಿನಿಯು ಕಾರ್ಯಕ್ರಮದ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸಿನಿಮಾ ಜಂಜಾಟಗಳಿಂದ ಬ್ರೇಕ್ ಪಡೆದು ಕಾಂತಾರ ನಟಿ ಸಪ್ತಮಿ ಗೌಡ ಅಮೆರಿಕ ಹೋಗಿ ಬಂದಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಸಪ್ತಮಿ ತಮ್ಮ ಇನ್‌ಸ್ಟಾಗ್ರಾಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಪ್ತಮಿ ಅಭಿನಯದ ಯುವ ಸಿನಿಮಾ ಬಿಡುಗಡೆ ಆಗಿತ್ತು. ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಚಿತ್ರದಲ್ಲಿ ಸಪ್ತಮಿ ನಟಿಸುತ್ತಿದ್ದಾರೆ.