ಅಣ್ಣಯ್ಯ ಧಾರಾವಾಹಿ: ಪಾರುವನ್ನು ಹುಡುಕಿ ಬಂದ ಅಣ್ಣ, ಸಿದ್ದಾರ್ಥ್ ಬಗ್ಗೆ ಸತ್ಯ ಇಂದೇ ತಿಳಿಯುತ್ತಾ? ಏನ್ ಮಾಡ್ತಾನೆ ಶಿವು?
ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಸಿದ್ದಾರ್ಥ್ ಜೊತೆ ಮಾತಾಡುತ್ತಾ ಮೈ ಮರೆತಿದ್ದಾಳೆ. ಇತ್ತ ತಾನು ಮನೆಗೆ ಹೋಗಬೇಕಿದೆ ಎಂಬುದನ್ನೂ ಅವಳು ಮರೆತಂತಿದೆ. ಈ ಸಂದರ್ಭದಲ್ಲಿ ಶಿವು ಏನ್ಮಾಡ್ತಾನೆ ಕಾದು ನೋಡಬೇಕಿದೆ.
ಹಿಂದಿನ ಸಂಚಿಕೆಯಲ್ಲಿ ಹೇಗಾದರೂ ಮಾಡಿ ನನ್ನ ಸಿದ್ದಾರ್ಥ್ ಹತ್ತಿರ ಕರೆದುಕೊಂಡು ಹೋಗಬೇಕು ಎಂದು ಶಿವು ಹತ್ತಿರ ಪಾರು ಕೇಳಿಕೊಂಡಿರುತ್ತಾಳೆ. ಅದರಂತೆ ಅವನು ಅವಳನ್ನು ಕರೆದುಕೊಂಡು ಮೈಸೂರಿಗೆ ಬಂದಿದ್ದಾನೆ. ಆದರೆ ಮನೆಯಲ್ಲಿ ಬರುವಾಗ ತಾನು ಕಾಲೇಜ್‌ಗೆ ಹೋಗಬೇಕು ಎಂದು ಸುಳ್ಳು ಹೇಳಿ ಅವಳು ಅವನನ್ನು ಒಪ್ಪಿಸಿಕೊಂಡು ಬಂದಿರುತ್ತಾಳೆ. ಇನ್ನು ಅವಳ ತಾಯಂದಿರು ಅದೇ ಕಾರಣಕ್ಕೆ ಅವಳನ್ನು ಹೊರಗಡೆ ಕಳಿಸಿರುತ್ತಾರೆ. ಆದರೆ ಅವಳು ಸಿದ್ದಾರ್ಥ್ ಬರ್ತಡೆ ಇದೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿ ಕರೆದುಕೊಂಡು ಬಂದಿರುತ್ತಾಳೆ. ಅವಳಿಗೆ ಸತ್ಯ ಹೇಳಿದರೆ ಎಲ್ಲಿ ತನ್ನನ್ನು ಕರೆದುಕೊಂಡು ಬರುವುದಿಲ್ಲವೋ ಎಂದು ಅನುಮಾನ ಬಂದು ಈ ರೀತಿ ಮಾಡಿದ್ದಾಳೆ.
ಸುಳ್ಳು ಹೇಳಿದ ಪಾರು
ಹೀಗೆ ಮಾಡ್ತಾ ಇರೋದಕ್ಕೆ ಅವಳಿಗೂ ಬೇಸರ ಇದೆ. ಆದರೆ ಗತಿ ಇಲ್ಲದೆ ಅವಳು ಈ ರೀತಿ ಮಾಡಲೇಬೇಕಿದೆ. ಇನ್ನು ಅವಳು ಹೋಗಿ ತಲುಪಿದ ತಕ್ಷಣ ಹೇಳುತ್ತಾಳೆ. “ನಾನು ಸಿದ್ದಾರ್ಥ್‌ನ ಮೀಟ್ ಆಗೋಕೆ ಬಂದಿರೋದು ಮಾವಾ” ಎಂದು. ಆದರೂ ಅವನು ಏನೂ ಅಂದುಕೊಳ್ಳದೇ ಸುಮ್ಮನಿರುತ್ತಾನೆ. ನಂತರ ಸಿದ್ದಾರ್ಥ್ ಅವಳನ್ನು ಒಂದು ಕಡೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವಳಿಗೆ ಒಂದು ದೊಡ್ಡ ಉಡುಗೊರೆ ಕಾದಿರುತ್ತದೆ. ಅದೇನೆಂದರೆ ಒಂದು ಕ್ಲೀನಿಕ್. ಅದರಲ್ಲಿ ಪಾರ್ವತಿ ಹೆಸರು ಬರೆದಿರುತ್ತದೆ.
ಅದನ್ನು ನೋಡಿದ ತಕ್ಷಣ ಪಾರ್ವತಿಗೆ ತುಂಬಾ ಸಂತೋಷ ಆಗುತ್ತದೆ. ಅವಳು ಸಿದ್ದಾರ್ಥ್‌ನನ್ನು ಅಪ್ಪಿಕೊಳ್ಳುತ್ತಾಳೆ. ಅವಳು ತಬ್ಬಿಕೊಂಡಾಗ ಸಿದ್ದಾರ್ಥ್ ಅವಳ ಖುಷಿಯನ್ನು ನೋಡಿ ತಾನೂ ಸಮಾಧಾನ ಪಡುತ್ತಾನೆ. ಅಲ್ಲಿ ಇಂಗ್ಲೀಷ್‌ನಲ್ಲಿ ಹೆಸರು ಬರೆದಿದ್ದರಿಂದ ಅದನ್ನು ಓದಲು ಆಗದೇ ಶಿವು “ ಇಲ್ಲಿ ಏನು ಬರೆದಿದೆ” ಎಂದು ಕೇಳುತ್ತಾನೆ. ಆಗ ಅವನು ಹೇಳುತ್ತಾನೆ. ಇಲ್ಲಿ ಪಾರ್ವತಿ ಎಂಬಿಬಿಎಸ್ ಎಂದು ಬರೆದಿದೆ ಎಂದು. ಅದನ್ನು ನೋಡಿ ಶಿವುಗೂ ಆನಂದ ಆಗುತ್ತದೆ. ಅದಾದ ಮೇಲೆ ಬರ್ತಡೆ ಪಾರ್ಟಿ ಇರುತ್ತದೆ.
ಬರ್ತಡೆ ಪಾರ್ಟಿ
ಬರ್ತಡೇ ಪಾರ್ಟಿ ನಡೆಯುತ್ತಾ ಇರುತ್ತದೆ. ಅದನ್ನು ನೋಡಿ ಪಾರು ತುಂಬಾ ಖುಷಿಯಾಗ್ತಾಳೆ. ಪಾರ್ಟಿಯಲ್ಲಿ ಶಿವುನಾ ಕೆಲವರು ರೇಗಿಸುತ್ತಾರೆ. ಅವನ ಹತ್ತಿರ ಕುಡಿ ಎಂದು ಹೇಳುತ್ತಾರೆ. ಆದರೆ ಅವನು ಕುಡಿಯುವುದಿಲ್ಲ. ಇವನು ಹೇಗೆ ಕುಡಿಯುವುದಿಲ್ಲ ನಾನು ನೋಡೇ ಬಿಡ್ತೀನಿ ಎಂದು ಇನ್ನೊಬ್ಬ ಹೇಳುತ್ತಾನೆ. ನಂತರ ಪಾರು ಒಂದು ಗ್ಲಾಸ್ ನಲ್ಲಿ ಜ್ಯೂಸ್ ತಂದು ಅವನಿಗೆ ಕೊಡುತ್ತಾಳೆ. ಅದನ್ನು ಶಿವು ಕುಡಿಯಲು ಮುಂದಾಗುತ್ತಾನೆ. ಅಷ್ಟರಲ್ಲಿ ಇನ್ನೂ ಪಾರು ಬಂದಿಲ್ಲ ಎಂದು ಅವಳ ತಂದೆ ಅಣ್ಣನಿಗೆ ಕಾಲ್ ಮಾಡಿ ಹೇಳುತ್ತಾನೆ. ಅಷ್ಟರಲ್ಲಿ ಅವಳ ಅಣ್ಣನಿಗೆ ಕೋಪ ಬರುತ್ತದೆ. ಎಷ್ಟು ಹೊತ್ತಾದರೂ ಅವಳು ಯಾಕೆ ಮನೆಗೆ ಬರಲಿಲ್ಲ ಎನ್ನುವ ಪ್ರಶ್ನೆ ಅವನ ಮನಸ್ಸಿನಲ್ಲೂ ಬರುತ್ತದೆ. ಎಲ್ಲರೂ ಅವಳನ್ನೆ ಹುಡುಕಿಕೊಂಡು ಹೋಗಲು ನಿರ್ಧರಿಸುತ್ತಾರೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.