ಬಾಡಿಗೆ ತಾಯಿ ಮೇಲೆ ಕೆಂಡಕಾರುತ್ತಿದ್ದಾನೆ ಶ್ರೀರಾಮ! ಸಿಹಿ ಕೈ ತಪ್ಪಿ ಹೋಗ್ತಾಳೆ ಅನ್ನೋ ಆತಂಕದಲ್ಲಿದ್ದಾಳೆ ಹೆತ್ತಮ್ಮ ಸೀತಾ-kannada television news seetha rama serial latest episode highlights seetha is worried about losing sihi mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಾಡಿಗೆ ತಾಯಿ ಮೇಲೆ ಕೆಂಡಕಾರುತ್ತಿದ್ದಾನೆ ಶ್ರೀರಾಮ! ಸಿಹಿ ಕೈ ತಪ್ಪಿ ಹೋಗ್ತಾಳೆ ಅನ್ನೋ ಆತಂಕದಲ್ಲಿದ್ದಾಳೆ ಹೆತ್ತಮ್ಮ ಸೀತಾ

ಬಾಡಿಗೆ ತಾಯಿ ಮೇಲೆ ಕೆಂಡಕಾರುತ್ತಿದ್ದಾನೆ ಶ್ರೀರಾಮ! ಸಿಹಿ ಕೈ ತಪ್ಪಿ ಹೋಗ್ತಾಳೆ ಅನ್ನೋ ಆತಂಕದಲ್ಲಿದ್ದಾಳೆ ಹೆತ್ತಮ್ಮ ಸೀತಾ

ದೇಸಾಯಿ ಮನೆಗೆ ಸೊಸೆಯಾಗಿ ಬಂದ ಬಳಿಕ, ಮೊದಲಿದ್ದ ಖುಷಿ ಸೀತಾ ಮುಖದಲ್ಲಿ ಕಾಣಿಸುತ್ತಿಲ್ಲ. ರಾಮನ ಪ್ರೀತಿ ಸಿಗುತ್ತಿದೆಯಾದರೂ, ಅದರ ನಡುವೆ ಸಿಹಿ ಎಲ್ಲಿ ನನ್ನ ಕೈಯಿಂದ ಜಾರಿ ಹೋಗುತ್ತಾಳೋ ಎಂಬ ಭಯದಲ್ಲಿಯೇ ಉಸಿರಾಡುತ್ತಿದ್ದಾಳೆ.

ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿ (Image\ Zee5)

ಸೀತಾ ರಾಮ ಸೀರಿಯಲ್‌ನಲ್ಲಿ ಸೀತೆಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಇಷ್ಟು ದಿನ ಸಣ್ಣ ಗೂಡಲ್ಲಿ, ತಾನಾಯ್ತು ತನ್ನ ಮಗಳಾಯ್ತು ಎಂದು ಕಷ್ಟ ಇದ್ದರೂ ನಗುತ್ತಲೇ ಜೀವನ ಸಾಗಿಸುತ್ತಿದ್ದಳು. ಆದರೆ, ಯಾವಾಗ ರಾಮ್‌ನ ಮದುವೆಯಾದಳೋ, ಅಲ್ಲಿಂದ ಆಕೆಯ ಬದುಕೇ ಬದಲಾಯ್ತು. ಮದುವೆಗೂ ಮುನ್ನ ಎದುರಿಸುತ್ತಿದ್ದ ಸಮಸ್ಯೆಗಳೇ ಬೇರೆಯಾಗಿದ್ದವು. ಆ ಸಮಸ್ಯೆಗಳು ಹೇಗೋ ಬಗೆಹರಿಯುವಂಥವೇ ಇದ್ದವು. ಆದರೆ, ಮದುವೆ ಬಳಿಕ ಎದುರಾದ ಸಂಕಷ್ಟ ಮಾತ್ರ ಸೀತೆಯನ್ನು ಪಾತಾಳಕ್ಕೆ ನೂಕಿವೆ. ಸಿಹಿಯ ಹುಟ್ಟಿನ ರಹಸ್ಯಕ್ಕೆ ಸಂಬಂಧಿಸಿದಂತೆ, ಯಾರಿಗೂ ಹೇಳದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾಳೆ.

ಅಪ್ಪನನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದು, ಅದಕ್ಕಾಗಿ ಹಣ ಹೊಂದಿಸುವ ಸಲುವಾಗಿ ಸೀತಾ ಆಯ್ಕೆ ಮಾಡಿಕೊಂಡಿದ್ದು, ಬಾಡಿಗೆ ತಾಯ್ತನವನ್ನ. ಜತೆಗಿದ್ದ ಅಣ್ಣ ಕೈ ಜೋಡಿಸದ ಆ ಹೊತ್ತಲ್ಲಿ, ಒಂಟಿ ಹೆಣ್ಣುಮಗಳು ಶತಾಯಗತಾಯ ಅಪ್ಪನ ಸಲುವಾಗಿ ಯಾರದೋ ಜೀವವನ್ನು ತನ್ನ ಮಡಲಿಗೆ ಹಾಕಿಕೊಂಡು 9 ತಿಂಗಳು ಗರ್ಭದಲ್ಲಿ ಇಟ್ಟುಕೊಂಡು ಸಾಕಿದಳು. ಆದರೆ, ಮಗು ಕೈಗೆ ಬಂದ ಮೇಲೆ, ಹಣವೂ ಇಲ್ಲ, ಅಪ್ಪನೂ ಇಲ್ಲ. ಅತಂತ್ರ ಸ್ಥಿತಿಗೆ ಜಾರಿದಳು. ಸರೋಗಸಿ ಬಗ್ಗೆ ಹೇಳಿದ ವೈದ್ಯರಿಂದಲೂ ಏನೂ ಸಹಾಯ ಆಗಲಿಲ್ಲ. ಕೊನೆಗೆ ಆ ಮಗು ಸೀತಾಳ ಮಡಿಲಲ್ಲಿಯೇ ತಂದೆ ಮುಖ ನೋಡದೇ ಒಂಟಿಯಾಗಿ ಬೆಳೆಯಿತು.

ದೊಡ್ಮನೆ ಸೊಸೆಯಾದರೂ ಹೆಚ್ಚಾಯ್ತು ಸಂಕಷ್ಟ

ಇದೀಗ ದೇಸಾಯಿ ಮನೆಗೆ ಸೊಸೆಯಾಗಿ ಬಂದ ಬಳಿಕ, ಮೊದಲಿದ್ದ ಖುಷಿ ಸೀತಾ ಮುಖದಲ್ಲಿ ಕಾಣಿಸುತ್ತಿಲ್ಲ. ರಾಮನ ಪ್ರೀತಿ ಸಿಗುತ್ತಿದೆಯಾದರೂ, ಅದರ ನಡುವೆ ಸಿಹಿ ಎಲ್ಲಿ ನನ್ನ ಕೈಯಿಂದ ಜಾರಿ ಹೋಗುತ್ತಾಳೋ ಎಂಬ ಭಯದಲ್ಲಿಯೇ ಉಸಿರಾಡುತ್ತಿದ್ದಾಳೆ ಸೀತಾ. ಇಲ್ಲಿಯವರೆಗೂ ಇರದ ಮೇಘಶ್ಯಾಮ ಮತ್ತು ಶಾಲಿನಿಯ ಆಗಮನ, ಸರೋಗಸಿ ಮಾಡಿಸಿದ ಡಾ. ಅನಂತಲಕ್ಷ್ಮೀಯ ಆಗಮನದಿಂದಲೂ ಸೀತಾ ಕಂಗಾಲಾಗಿದ್ದಾಳೆ. ಇದೆಲ್ಲದರ ನಡುವೆ ಮೇಘಶ್ಯಾಮ್‌ ಮತ್ತು ರಾಮ್‌ ಸ್ನೇಹಿತರು ಎಂಬ ಸತ್ಯ ತಿಳಿದ ಬಳಿಕ ಸೀತಾ ಮತ್ತಷ್ಟು ಅಳುಕಿನಲ್ಲಿದ್ದಾಳೆ.

ಶ್ಯಾಮ್‌ ಮಗು ಹುಡುಕಿಕೊಡುವ ಪಣ ತೊಟ್ಟ ರಾಮ್

ಹೀಗಿರುವಾಗಲೇ ಮಗುವಿನ ಬಗ್ಗೆ ರಾಮ್‌ ಬಳಿ ಎಲ್ಲ ವಿಚಾರ ಹೇಳಿಕೊಂಡಿದ್ದಾನೆ ಮೇಘಶ್ಯಾಮ್. ಶ್ಯಾಮನ ನೋವಿಗೆ ಸ್ಪಂದಿಸಿರುವ ರಾಮ್‌, ಹೇಗಾದ್ರೂ ಮಾಡಿ ಆ ಮಗುವನ್ನು ಪಡೆದೇ ತೀರೋಣ ಎಂದಿದ್ದಾನೆ. ಸರೋಗಸಿ ಮದರ್‌ಗೆ ಆ ಮಗುವನ್ನು ಇಟ್ಟುಕೊಳ್ಳುವ ಹಕ್ಕಿಲ್ಲ ಎಂದು ಶ್ಯಾಮನ ಮುಂದೆ ಪ್ರತಿಪಾದಿಸಿದ್ದಾನೆ. ಸೀತಾಳ ಮುಂದೆಯೂ ಇದೇ ಮಾತನ್ನು ಹೇಳಿದ್ದಾನೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಆ ಸರೋಗಸಿ ತಾಯಿಯ ಬಗ್ಗೆ ಮಾಹಿತಿ ಕಲೆಹಾಕಲು ರಾಮ- ಶ್ಯಾಮ ಮುಂದಾಗಿದ್ದಾರೆ. ದಾಖಲೆ ಪತ್ರಗಳಿಗೆ ಹುಡುಕಾಟ ನಡೆಸಿದ್ದಾರೆ. ‌

ಸಿಹಿ ಕೈತಪ್ಪಿ ಹೋಗಲಿದ್ದಾಳೆ ಎಂಬ ಆತಂಕದಲ್ಲಿ ಸೀತಾ

ಸದ್ಯ ರಾಮನ ಮನೆಯಲ್ಲಿಯೇ ಶ್ಯಾಮ್‌ ಮತ್ತು ಶಾಲಿನಿ ವಾಸವಿದ್ದಾರೆ. ಶ್ಯಾಮ ಮತ್ತು ಸಿಹಿ ನಡುವಿನ ಸಂಬಂಧವೂ ದಿನದಿಂದ ದಿನಕ್ಕೆ ಗಾಢವಾಗುತ್ತಿದೆ. ಇಷ್ಟು ದಿನ ಸೀತಾ ಕಡೆಯಿಂದಲೇ ಶುಗರ್‌ ಇಂಜೆಕ್ಷನ್‌ ಹಾಕಿಸಿಕೊಳ್ಳುತ್ತಿದ್ದ ಸಿಹಿ, ಇದೀಗ ಶ್ಯಾಮ್‌ ಅಂಕಲ್‌ ಕಡೆಯಿಂದಲ ಇಂಜೆಕ್ಷನ್‌ ಮಾಡಿಸಿಕೊಳ್ಳುತ್ತಿದ್ದಾಳೆ. ನಾನೇ ಇಂಜೆಕ್ಷನ್‌ ಹಾಕ್ತಿದ್ನಲ್ಲ ಅಂತ ಸೀತಾ ಕೇಳಿದರೆ, ಸೀತಮ್ಮ ಡಾಕ್ಟ್ರ ಅಂಕಲ್‌ ಸೂಜಿ ಚುಚ್ಚಿದರೆ, ಗೊತ್ತೆ ಆಗಲ್ಲ ಎಂದಿದ್ದಾಳೆ. ಶಾಲೆಗೆ ಹೋಗುವ ಅವಸರದಲ್ಲಿ ಶ್ಯಾಮ್‌, ಶಾಲಿನಿಗೆ ಮುತ್ತು ನೀಡಿದ ಸಹಿ, ಅಲ್ಲೇ ಇದ್ದ ಸೀತಾಗೆ ನೀಡದೇ ಹೋಗಿದ್ದಾಳೆ. ಇದೆಲ್ಲವನ್ನು ನೋಡಿದ ಸೀತಾಗೆ, ಸಿಹಿ ನನ್ನಿಂದ ದೂರವಾಗ್ತಾಳೆ ಅನ್ನೋ ಆತಂಕ ಕಾಡುತ್ತಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

mysore-dasara_Entry_Point