Entertainment News in Kannada Live September 18, 2024: ಸದ್ದಿಲ್ಲದೆ ಶೂಟಿಂಗ್ ಪೂರೈಸಿ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ ಜೀಬ್ರಾ ಚಿತ್ರತಂಡ; ಇದು ಡಾಲಿ ಧನಂಜಯ್ 26ನೇ ಸಿನಿಮಾ
Sep 18, 2024 03:37 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಜೊತೆಯಾಗಿ ನಟಿಸಿರುವ ಜೀಬ್ರಾ ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿದೆ. ಇದು ಡಾಲಿ ಹಾಗೂ ಸತ್ಯದೇವ್ ಇಬ್ಬರಿಗೂ 26ನೇ ಸಿನಿಮಾ. ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ.
ಈ ಬಾರಿ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡೋದು ಫೈನಲ್ ಆಗಿದೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಹೆಸರು ಕೂಡಾ ಕೇಳಿ ಬಂದಿದೆ. ಇವರ ಜೊತೆಗೆ ಹೊಸದಾಗಿ ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ, ನಾಯಕಿ ಅಮೂಲ್ಯ ಭಾರಧ್ವಾಜ್, ಒಲವಿನ ನಿಲ್ದಾಣ ಧಾರಾವಾಹಿಯ ಆಕಾಶ್ ನಾಯಕ್ ಹೆಸರು ಕೂಡಾ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಸೇರಿದೆ.
ಸೆಪ್ಟೆಂಬರ್ 13 ರಂದು ತೆರೆ ಕಂಡಿದ್ದ ವಿಕ್ಕಿ ವರುಣ್ ನಟನೆಯ ಕಾಲಾಪತ್ಥರ್ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ವಿಕ್ಕಿ ವರುಣ್‌ಗೆ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅಕ್ಟೋಬರ್ ಕೊನೆಯ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.
ಸ್ಯಾಂಡಲ್‌ವುಡ್ ಬುದ್ಧಿವಂತ ಉಪೇಂದ್ರ ಇಂದು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಉಪೇಂದ್ರ ಹುಟ್ಟುಹಬ್ಬದ ಅಂಗವಾಗಿ ಯುಐ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಜೊತೆಗೆ ಉಪೇಂದ್ರ ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ತಾವು ನಟಿಸುತ್ತಿರುವ 45 ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.
- ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಸಿದ್ದಾರ್ಥ್ ಬರ್ತಡೆ ಪಾರ್ಟಿ ನಡೆಯುತ್ತಾ ಇದೆ. ಆದರೆ ಕುಡಿಯೋದಿಲ್ಲ ಎಂದು ಹೇಳಿದ ಶಿವುಗೆ ಮೋಸ ಮಾಡಿ ಕುಡಿಸಿದ್ದಾರೆ. ನಂತರ ಏನಾಯ್ತು ಅನ್ನೋದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ.
- ಅಮೃತಧಾರೆಯಲ್ಲಿ ಸೀಮಂತ ಸಂಭ್ರಮ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ಮಲ್ಲಿಯ ಸೀಮಂತ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ಭೂಮಿಕಾಳ ಮನಸ್ಸಿಗೆ ನೋವಾಗುವಂತಹ ಹಲವು ಸಂಗತಿಗಳು ನಡೆದಿವೆ. ಶಕುಂತಲಾದೇವಿಯ ಮನೆಹಾಳ ಸ್ನೇಹಿತೆಯರು ಮನೆಗೆ ಬಂದಿದ್ದು, ವಟವಟ ಎನ್ನುತ್ತಿದ್ದಾರೆ.
- ಸಾವಿತ್ರಿ ಸಹಾಯದೊಂದಿಗೆ ರಾತ್ರಿಯೆಲ್ಲಾ ಕೂತು ತಂಬಿಟ್ಟು, ಹೂವಿನ ಮಾಲೆ ಮಾಡಿದ ಶ್ರಾವಣಿ, ಸುಬ್ಬುವನ್ನ ಶ್ರಾವಣಿ ಗಂಡ ಎಂದ ಸಾವಿತ್ರಿಗೆ ಸಿಗಲಿಲ್ಲ, ಮಿನಿಸ್ಟರ್ ಅನ್ನು ಭೇಟಿ ಮಾಡುವ ಅವಕಾಶ. ವೀರೇಂದ್ರನನ್ನ ಕೊಲ್ಲಲ್ಲು ವಿಜಯಾಂಬಿಕಾ–ಮದನ್ ಸಂಚು, ಉತ್ಸವಕ್ಕೆ ನಡೆದಿದೆ ಸಕಲ ಸಿದ್ಧತೆ.
Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಂಗಳವಾರದ ಎಪಿಸೋಡ್. ಡ್ಯಾನ್ಸ್ ಮಾಡುತ್ತಿರುವ ಶ್ರೇಷ್ಠಾ ನೋಡಿ ಯಶೋಧಾ ಬೇಸರ ವ್ಯಕ್ತಪಡಿಸುತ್ತಾಳೆ. ಮದುವೆ ನಿಲ್ಲಿಸಲು ಬೇರೆ ದಾರಿ ಕಾಣದೆ ಪೂಜಾ ಟ್ರ್ಯಾಕ್ಟರ್ ಹತ್ತಿ, ರೆಸಾರ್ಟ್ ಗೇಟ್ ಒಡೆದು ಒಳ ನುಗ್ಗುತ್ತಾಳೆ.
ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿರುವ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜಾನಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು , ಸ್ಟಾರ್ ನಟ ಅಲ್ಲು ಅರ್ಜುನ್, ಸಂತ್ರಸ್ತೆ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಹೃದಯ ಹಾಡಿತು, ಸೋಲಿಲ್ಲದ ಸರದಾರ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಮಾಲಾಶ್ರೀ ಹಾಗೂ ಭವ್ಯಾ ಇದೀಗ 32 ವರ್ಷಗಳ ನಂತರ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ತಾಯಿಯೇ ದೇವರ ಎಂಬ ಚಿತ್ರದಲ್ಲಿ ಈ ನಟಿಯರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಚಿತ್ರವನ್ನು ಡಾ ಸತೀಶ್ ತೋಟಯ್ಯ ನಿರ್ದೇಶಿಸುತ್ತಿದ್ದಾರೆ.