LIVE UPDATES
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನರ್, 21 ದಿನಗಳ ಕ್ವಾರಂಟೈನ್ ಜಾರಿ (KPSC)
Karnataka News Live September 18, 2024 : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನರ್, 21 ದಿನಗಳ ಕ್ವಾರಂಟೈನ್ ಜಾರಿ
Sep 18, 2024 09:57 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನರ್, 21 ದಿನಗಳ ಕ್ವಾರಂಟೈನ್ ಜಾರಿ
- ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಎಂ ಪಾಕ್ಸ್ ಪ್ರಕರಣ ಹೆಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ News Live: ಆ್ಯಂಬುಲೆನ್ಸ್ ಸಿಗದೆ ಬೈಕ್‌ನಲ್ಲಿ ವೃದ್ಧನ ಮೃತ ದೇಹ ಸಾಗಣೆ: ತುಮಕೂರು ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಸನ್ನಿವೇಶ
- ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಆಂಬುಲೆನ್ಸ್ ಸಿಗದೇ ವೃದ್ದರೊಬ್ಬರ ಶವವನ್ನು ಬೈಕ್‌ನಲ್ಲಿಯೇ ಊರಿಗೆ ತೆಗೆದುಕೊಂಡು ಹೋದ ಘಟನೆ ನಡೆದಿದೆ.
- ವರದಿ: ಈಶ್ವರ್ ತುಮಕೂರು
ಕರ್ನಾಟಕ News Live: ಮೈಸೂರು ದಸರಾ2024: ಆನೆಗಳಿಗೆ ಅಂಬಾರಿ ತಾಲೀಮು ಶುರು, ಮೊದಲ ದಿನ ಮರಳ ಮೂಟೆ ಜತೆ ಅಂಬಾರಿ ಹೊತ್ತೋರು ಯಾರು
- ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಗಜ ಪಡೆಗೆ ಅಂಬಾರಿ ಹೊರಿಸುವ ತಾಲೀಮು ಬುಧವಾರ ಶುರುವಾಯಿತು. ಅಭಿಮನ್ಯು ಮರದ ಅಂಬಾರಿ ಹೊತ್ತು ಯಶಸ್ವಿಯಾಗಿ ಸಾಗಿದ.
ಕರ್ನಾಟಕ News Live: ವಿಜಯಪುರದ ಬಿಎಲ್‌ಡಿಇ ವಿಶ್ವವಿದ್ಯಾನಿಲಯದ ಇಬ್ಬರು ಪ್ರಾಧ್ಯಾಪಕರಿಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ, ಆಯ್ಕೆ ಹೇಗೆ
- ವಿಜಯಪುರದ ಬಿಎಲ್‌ಡಿಇ ವಿಶ್ವವಿದ್ಯಾನಿಲಯದ ಇಬ್ಬರು ಹಿರಿಯ ಪ್ರಾಧ್ಯಾಪಕರು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕ News Live: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ; ನವೆಂಬರ್ 20 ರವರೆಗೆ ಉಂಟು ಅವಕಾಶ
ಕರ್ನಾಟಕದಲ್ಲಿ ವಾಹನಗಳಿಗೆ ಅಳವಡಿಸುವ ಎಚ್‌ಎಸ್‌ಆರ್ ಪಿ ನಂಬರ್ ಪ್ಲೇಟ್ ನೋಂದಣಿ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು ಮುಂದಿನ ನವೆಂಬರ್ 20ರವರೆಗೂ ಗಡುವು ವಿಸ್ತರಣೆಯಾಗಿದೆ.
ಕರ್ನಾಟಕ News Live: ಕರ್ನಾಟಕದಲ್ಲಿ ಮಾದಕ ವಸ್ತು ಬಳಕೆಗೆ ಬ್ರೇಕ್, ಮಾರಾಟ ಕಂಡರೆ ಎಸ್ಪಿ, ಠಾಣಾಧಿಕಾರಿಗಳೇ ಹೊಣೆ; ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್
- ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಯಥೇಚ್ಛವಾಗಿ ಸರಬರಾಜು ಆಗುತ್ತಿರುವ ಡ್ರಗ್ಸ್ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ಧಾರೆ.
ಕರ್ನಾಟಕ News Live: ಯದುವೀರ್‌ಗೆ ಸಂಸದರಾದ ಬಳಿಕ ಮೊದಲ ಖಾಸಗಿ ದರ್ಬಾರ್, ಹತ್ತು ದಿನ ಹೊರಗೆ ಬರೋಲ್ಲ ಮೈಸೂರು- ಕೊಡಗು ಸಂಸದರು, ಹೇಗಿರಲಿದೆ ದರ್ಬಾರ್ ವೈಭವ
- ಮೈಸೂರು ದಸರಾ ವೇಳೆ ಅರಮನೆಯಲ್ಲಿ ರಾಜವೈಭವ ಮರುಕಳಿಸಲಿದೆ. ಅಲ್ಲಿನ ಖಾಸಗಿ ದರ್ಬಾರ್ ಹಿಂದಿನ ಕಾಲದ ದಿನಗಳನ್ನು ನೆನಪಿಸಿ ಇಲ್ಲಿನ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯಲಿದೆ. ಹೀಗಿರಲಿದೆ ಮೈಸೂರು ಖಾಸಗಿ ದರ್ಬಾರ್.
ಕರ್ನಾಟಕ News Live: ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಜಾರೋಷವಾಗಿ ಫ್ಲೈಓವರ್ ದಾಟಿದ ಚಿರತೆ; ಬೆಂಗಳೂರಿನಲ್ಲಿ ಹೈ ಅಲರ್ಟ್
- ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಚಿರತೆ ಪತ್ತೆಯಾದ ಎರಡು ವಾರಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿಯೂ ಚಿರತೆ ಫ್ಲೈಓವರ್ ದಾಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.
ಕರ್ನಾಟಕ News Live: ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ
- ಕರ್ನಾಟಕದಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳನ್ನು ನಿಯಂತ್ರಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ. ಇದೇ ವೇಳೆ ಪೇನ್ ಕಿಲ್ಲರ್ ಮಾತ್ರೆಗಳನ್ನು ಮೆಡಿಸಿನ್ ಎಂದು ಮಾರಾಟ ಮಾಡುತ್ತಿರುವ ಕುರಿತು ಡ್ರಗ್ ಕಂಟ್ರೋಲರ್‌ಗಳಿಗೆ ತಿಳಿಸಲಾಗುತ್ತದೆ. ಆ ಬಗ್ಗೆ ಸಿಎಂ ಜೊತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕರ್ನಾಟಕ News Live: ಟೊಮೆಟೊ ಬೆಳೆಯಿಂದ ನಷ್ಟ, ಕೆಲಸ ಕೊಟ್ಟ ಕಂಪನಿಯಲ್ಲೇ 57 ಲ್ಯಾಪ್ ಟಾಪ್ ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್;ಸಿನಿಮೀಯ ರೀತಿಯಲ್ಲೇ ಸೆರೆ
- ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿಯೇ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಎಂಜಿನಿಯರ್ ಒಬ್ಬರನ್ನು ಬೆಂಗಳೂರು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಕರ್ನಾಟಕ News Live: Video: ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ; ವ್ಯಾಪಕ ಆಕ್ರೋಶ ಬೆನ್ನಲ್ಲೇ FIR ದಾಖಲು
- ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಲಾ ಬಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ News Live: ಬೆಂಗಳೂರು ಇರೋದು ಭಾರತದಲ್ಲೇ; ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ
- MB Patil on Piyush Goyal: ಉದ್ಯಾನ ನಗರಿ ಬೆಂಗಳೂರಿನಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ದಶಕಗಳೇ ಬೇಕು ಎಂದ ಸಚಿವ ಎಂಬಿ ಪಾಟೀಲ್ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಭಾರತದಲ್ಲಿ ಬೆಂಗಳೂರು ಇರುವಾಗ ಮತ್ತೊಂದು ಸಿಲಿಕಾನ್ ವ್ಯಾಲಿ ಬೇಕಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ News Live: ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ಇದ್ದವರಿಗೆ ಖುಷಿ ಸುದ್ದಿ, ವಯೋಮಿತಿ 3 ವರ್ಷ ಸಡಿಲಿಕೆ; ಅಕ್ಟೋಬರ್ 3 ರ ಒಳಗೆ ಅಪ್ಲೈ ಮಾಡಿ
ಸರ್ಕಾರಿ ಉದ್ಯೋಗ ಅನೇಕರ ಕನಸು. ಇಂತಹ ಕನಸು ಕಾಣುತ್ತಿರುವ ಪದವೀಧರರಿಗೆ ಪಿಡಿಒ ನೇಮಕಾತಿಯ ತಿದ್ದುಪಡಿ ಅಧಿಸೂಚನೆ ಮತ್ತೊಂದು ಸುತ್ತಿನ ಅವಕಾಶ ನೀಡಿದೆ. ಈ ಬಾರಿ 3 ವರ್ಷ ವಯೋಮಿತಿ ಸಡಿಲಿಕೆಯೊಂದಿಗೆ ಈ ಅವಕಾಶ ಬಂದಿದೆ. ಅಕ್ಟೋಬರ್ 3ರ ಒಳಗೆ ಮರೆಯದೇ ಅಪ್ಲೈ ಮಾಡಿ.