logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಈ 4 ಗುಣಗಳಿರುವ ಪುರುಷರೆಂದರೆ ಮಹಿಳೆಯರು ಬಹಳ ಮೆಚ್ಚುತ್ತಾರೆ, ಚಾಣಕ್ಯರು ಹೇಳಿದ ಆ ಗುಣಗಳು ಯಾವುವು ನೋಡಿ

Chanakya Niti: ಈ 4 ಗುಣಗಳಿರುವ ಪುರುಷರೆಂದರೆ ಮಹಿಳೆಯರು ಬಹಳ ಮೆಚ್ಚುತ್ತಾರೆ, ಚಾಣಕ್ಯರು ಹೇಳಿದ ಆ ಗುಣಗಳು ಯಾವುವು ನೋಡಿ

Reshma HT Kannada

Dec 16, 2024 10:36 AM IST

google News

ಚಾಣಕ್ಯ ನೀತಿ

    • ಆಚಾರ್ಯ ಚಾಣಕ್ಯರು ಬದುಕಿನ ಕುರಿತ ವಿವಿಧ ಅಂಶಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅವರು ಹೆಣ್ಣು ತನ್ನ ಸಂಗಾತಿಯಾಗುವವನಲ್ಲಿ ಯಾವ ಗುಣ ಇರಬೇಕು ಎಂದು ಬಯಸುತ್ತಾಳೆ ಎಂಬುದನ್ನು ಹೇಳಿದ್ದಾರೆ. ಈ 4 ಗುಣಗಳಿರುವ ವ್ಯಕ್ತಿಗಳು ಹೆಣ್ಣುಮಕ್ಕಳಿಗೆ ತುಂಬಾ ಇಷ್ಟವಾಗುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ಆ ಗುಣಗಳು ಯಾವುವು ನೋಡಿ.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ತಂತ್ರಜ್ಞರಲ್ಲದೆ ಶ್ರೇಷ್ಠ ಶಿಕ್ಷಕರಾಗಿದ್ದರು. ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರು ಜೀವನದ ಬಹುತೇಕ ಎಲ್ಲಾ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ನೀತಿಶಾಸ್ತ್ರ ಎಂಬ ಗ್ರಂಥವನ್ನು ಬರೆದರು, ಅದು ಚಾಣಕ್ಯ ನೀತಿ ಎಂದು ಬಹಳ ಪ್ರಸಿದ್ಧವಾಗಿದೆ. ಈ ಗ್ರಂಥದಲ್ಲಿ ಚಾಣಕ್ಯರು ಪುರುಷರ ಕೆಲವು ಗುಣಗಳ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ ಮಹಿಳೆಯರು ಈ ಗುಣಗಳನ್ನು ಹೊಂದಿರುವ ಪುರುಷರನ್ನು ಹೆಚ್ಚು ಪ್ರೀತಿಸುತ್ತಾರೆ. ಇಂತಹ ಗುಣಗಳಿರುವ ಪುರುಷರು ತಮ್ಮ ಸಂಗಾತಿಯಾಗಬೇಕು ಎಂದು ಮಹಿಳೆಯರು ಬಯಸುತ್ತಾರೆ. ಅಂತಹ ಗುಣಗಳು ಯಾವುವು ನೋಡಿ.

ಪ್ರಾಮಾಣಿಕ ವ್ಯಕ್ತಿತ್ವ

ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ಮತ್ತು ಶ್ರಮಜೀವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಾಮಾಣಿಕ ವ್ಯಕ್ತಿತ್ವದ ಪುರುಷರನ್ನು ಹೆಣ್ಣುಮಕ್ಕಳು ಪ್ರೀತಿಸುತ್ತಾರೆ, ಅಂತಹವರೊಂದಿಗೆ ತಮಗೆ ಅರಿವಿಲ್ಲದೇ ಪ್ರೀತಿಯಲ್ಲಿ ಬೀಳುತ್ತಾರೆ. ಅಂತಹ ಪುರುಷರ ಪ್ರಾಮಾಣಿಕತೆ ಅವರನ್ನು ಆಕರ್ಷಿಸುತ್ತದೆ.

ಸ್ಥಿರ ಮತ್ತು ಶಾಂತ ಸ್ವಭಾವ

ಮಹಿಳೆಯರು ಸ್ಥಿರವಾಗಿರುವ ಮತ್ತು ಹೆಚ್ಚು ಶಾಂತ ಸ್ವಭಾವದ ಪುರುಷರನ್ನು ಬಹಳ ಇಷ್ಟಪಡುತ್ತಾರೆ. ಏಕೆಂದರೆ ಶಾಂತವಾಗಿರುವವನು ಸಂಬಂಧಗಳನ್ನು ಚೆನ್ನಾಗಿ ನಿರ್ವಹಿಸುತ್ತಾನೆ. ಸ್ಥಿರವಾದ ವ್ಯಕ್ತಿ ಎಂದಿಗೂ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ, ಅವನು ಕೊನೆವರೆಗೂ ಸಂಬಂಧವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಚಾಣಕ್ಯ ಹೇಳುತ್ತಾರೆ.

ಉತ್ತಮ ಕೇಳುಗನಾಗಿರುವುದು

ಉತ್ತಮ ಕೇಳುಗರಾಗಿರುವ ಪುರುಷರತ್ತ ಮಹಿಳೆಯರು ಆಕರ್ಷಿತರಾಗುತ್ತಾರೆ. ಏಕೆಂದರೆ ಮಹಿಳೆಯರು ತಮ್ಮ ಪತಿ ತಾವು ಹೇಳಿದ ಮಾತುಗಳನ್ನು ಚೆನ್ನಾಗಿ ಕೇಳಬೇಕು ಮತ್ತು ಇತರರ ಮುಂದೆ ಪರಿಣಾಮಕಾರಿಯಾಗಿ ಮಾತನಾಡಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ಮಹಿಳೆಯರು ಅಂತಹ ಪುರುಷರನ್ನು ಇಷ್ಟಪಡುತ್ತಾರೆ.

ಪ್ರೀತಿಯಲ್ಲಿ ನಿಷ್ಠಾವಂತ ವ್ಯಕ್ತಿ

ಪ್ರೀತಿಯಲ್ಲಿ ನಿಷ್ಠರಾಗಿರುವ ಪುರುಷರತ್ತ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ. ಇದಲ್ಲದೇ ಪ್ರೀತಿಯಲ್ಲಿ ಒಳ್ಳೆಯ ನಡತೆ, ಗುಣ ಹೊಂದಿರುವ ಪುರುಷರು ಮಹಿಳೆಯರ ಮನಸ್ಸನ್ನು ಬೇಗ ಸೆಳೆಯುತ್ತಾರೆ. ಮಹಿಳೆಯರು ತಮ್ಮ ಸಂಗಾತಿಯಾಗುವವರು ಯಾವಾಗಲೂ ಉತ್ತಮ ನಡವಳಿಕೆ ಮತ್ತು ಗುಣಗಳನ್ನು ಹೊಂದಿರಬೇಕು ಎಂದು ಬಯಸುತ್ತಾರೆ.

ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ತಮ್ಮಿಡಿ ಜೀವನಕ್ಕೆ ಜೊತೆಯಾಗುವ ವ್ಯಕ್ತಿಯಲ್ಲಿ ಈ ಕೆಲವು ಗುಣಗಳು ಇರಲೇಬೇಕು ಎಂದು ಬಯಸುತ್ತಾರೆ. ಇದರಿಂದ ಅವರು ಪ್ರೀತಿ, ಸಂಸಾರಿಕ ಬದುಕು ಸಂತೋಷದಿಂದ ಕೂಡಿರುತ್ತದೆ ಎಂಬುದು ಅವರ ನಂಬಿಕೆ.

ಆಚಾರ್ಯ ಚಾಣಕ್ಯ ಯಾರು?

ಆಚಾರ್ಯ ಚಾಣಕ್ಯ ಚಂದ್ರಗುಪ್ತ ಮೌರ್ಯನ ಗುರು. ಅವರನ್ನು ಮಹಾನ್ ಜ್ಞಾನಿ ಮತ್ತು ವಿದ್ವಾಂಸ ಎಂದು ಹೇಳಲಾಗುತ್ತದೆ. ಚಾಣಕ್ಯರು ‘ಚಾಣಕ್ಯ ನೀತಿ’ ಎಂಬ ನೀತಿ ಗ್ರಂಥವನ್ನು ರಚಿಸಿದ್ದಾರೆ. ಚಾಣಕ್ಯ ನೀತಿ ಎಂದರೆ ಬದುಕಿನ ಸರ್ವವನ್ನೂ ಒಳಗೊಂಡಿರುವ ಮನುಷ್ಯರು ಅನುಸರಿಸಬೇಕಾದ ಪಾಠಗಳ ಸಂಗ್ರಹ. ನಾವು ಚಾಣಕ್ಯ ನೀತಿಯನ್ನು ಸಂಪೂರ್ಣವಾಗಿ ಓದಿ, ಅದನ್ನು ಅನುಸರಿಸಿದರೆ ನಾವು ಯಶಸ್ಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ