logo
ಕನ್ನಡ ಸುದ್ದಿ  /  ಜೀವನಶೈಲಿ  /  ದೇಹದ ಗಡಿಯಾರಕ್ಕೂ ಒಂದು ಹೆಸರಿದೆ, ಅದು ಕೆಲಸ ಮಾಡುವ ರೀತಿಗೆ ಲಾಜಿಕ್ ಇದೆ; ನಿದ್ದೆ, ಎಚ್ಚರ ನಿಭಾಯಿಸುವ ತಂತ್ರವಿದು -ಕಾಳಜಿ

ದೇಹದ ಗಡಿಯಾರಕ್ಕೂ ಒಂದು ಹೆಸರಿದೆ, ಅದು ಕೆಲಸ ಮಾಡುವ ರೀತಿಗೆ ಲಾಜಿಕ್ ಇದೆ; ನಿದ್ದೆ, ಎಚ್ಚರ ನಿಭಾಯಿಸುವ ತಂತ್ರವಿದು -ಕಾಳಜಿ

D M Ghanashyam HT Kannada

Jun 02, 2024 01:28 PM IST

google News

ಕಾಳಜಿ ಅಂಕಣ. ಡಾ ರೂಪಾ ರಾವ್

    • ಬೆಳಿಗ್ಗೆ ಬೇಗ ಎದ್ದು ಚುರುಕಾಗಿ ಕೆಲಸ ಮುಗಿಸುವವರು ಒಂದಿಷ್ಟು ಜನರಾದರೆ ಇನ್ನೊಂದಿಷ್ಟು ಜನರು ರಾತ್ರಿಯ ಹೊತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ, ಇನ್ನಷ್ಟು ಜನರು ಮಧ್ಯಾಹ್ನ ಪಾದರಸದ ಹಾಗೆ ಓಡಾಡುತ್ತಾರೆ. ಆ ವೇಳೆಯಲ್ಲಿ ಕೆಲವರು ನಿದ್ರೆ ಮಾಡುವ ಜೋಂಪಿಗೆ ಹೋಗಿರುತ್ತಾರೆ. ಇದೆಲ್ಲಾ ಏಕೆ? ಉತ್ತರ ಈ ಬರಹದಲ್ಲಿದೆ.
ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ನಾನು ಬೆಳಿಗ್ಗೆ ಬೇಗ ಎದ್ದು ಕೆಲಸ ಮಾಡುತ್ತೇನೆ. ಆದರೆ ನನ್ನ ಪತಿ ಹಾಗಲ್ಲ. ಅವರು ರಾತ್ರಿ ಎಷ್ಟು ಬೇಕಾದರೂ ಎಚ್ಚರವಿರುತ್ತಾರೆ. ಚಟುವಟಿಕೆಯಿಂದ ಕೆಲಸ ಮಾಡುತ್ತಾರೆ. ಏಕೆ ಈ ವ್ಯತ್ಯಾಸ? -ರೂಪಾ, ಮಡಿಕೇರಿ.

ಉತ್ತರ: ನೀವು ನೋಡಿರಬಹುದು, ಕೆಲವರು ಬೆಳಗಿನ ಜಾವದಲ್ಲಿ ಎದ್ದು ದಿನವನ್ನು ಪ್ರಾರಂಭಿಸಲು ಸಿದ್ಧವಾಗಿರುತ್ತಾರೆ. ಕೆಲವರು ಹಲವು ಬಾರಿ ಮಧ್ಯಾಹ್ನವಾದರೂ ಸಂಪೂರ್ಣವಾಗಿ ಎಚ್ಚರಗೊಳ್ಳುವುದಿಲ್ಲ. ಕೆಲವರು ರಾತ್ರಿ ಚುರುಕಾಗಿರುತ್ತಾರೆ. ನೀವೂ ಈ ಪಟ್ಟಿಯಲ್ಲಿ ಬರಬಹುದು. ಬೆಳಿಗ್ಗೆ ಬೇಗ ಎದ್ದು ಚುರುಕಾಗಿ ಕೆಲಸ ಮುಗಿಸುವವರು ಒಂದಿಷ್ಟು ಜನರಾದರೆ ಇನ್ನೊಂದಿಷ್ಟು ಜನರು ರಾತ್ರಿಯ ಹೊತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ, ಇನ್ನಷ್ಟು ಜನರು ಮಧ್ಯಾಹ್ನ ಪಾದರಸದ ಹಾಗೆ ಓಡಾಡುತ್ತಾರೆ. ಆ ವೇಳೆಯಲ್ಲಿ ಕೆಲವರು ನಿದ್ರೆ ಮಾಡುವ ಜೋಂಪಿಗೆ ಹೋಗಿರುತ್ತಾರೆ. ಇದೆಲ್ಲಾ ಏಕೆ? ಇದಕ್ಕೆ ಉತ್ತರ ಕ್ರೋನೋಟೈಪ್‌ನಲ್ಲಿದೆ. ಇದು ಒಂದು ರೀತಿ ಜೈವಿಕ ಗಡಿಯಾರವಿದ್ದಂತೆ.

ಕ್ರೋನೋಟೈಪ್ ಎಂದರೆ ನಿರ್ದಿಷ್ಟ ಸಮಯಗಳಲ್ಲಿ ನಿದ್ರಿಸಲು ಮತ್ತು ಎಚ್ಚರಗೊಳ್ಳಲು ಇರುವ ದೇಹದ ನೈಸರ್ಗಿಕ ಒಲವು. ಇದನ್ನು ನಿಮ್ಮ ದೇಹದ ಆಂತರಿಕ ಗಡಿಯಾರದ ವಿಶೇಷ ಚಲನೆ( ರಿದಮ್) ಅಂತ ಅಂದುಕೊಳ್ಳಿ. ಇದು ನೀವು ನೀವು ಬೆಳಗ್ಗೆ ಏಳುವವರೇ ಅಥವಾ ರಾತ್ರಿ ಎಚ್ಚರವಾಗಿರುವವರೇ ಅಥವಾ ಎರಡರ ನಡುವಲ್ಲಿಯಾ ಎಂಬುದನ್ನು ನಿರ್ಧರಿಸುತ್ತದೆ.

ಈ ಆಂತರಿಕ ಟೈಮಿಂಗ್ ವ್ಯವಸ್ಥೆಯನ್ನು ಸರ್ಕಾಡಿಯನ್ ರಿದಮ್ ನಿರ್ವಹಿಸುತ್ತದೆ. ಇದು ಸುಮಾರು 24 ಗಂಟೆಗಳ ಸೈಕಲ್ ಆಗಿದೆ. ("ಸಿರ್ಕಾ" ಅಂದರೆ "ಬಗ್ಗೆ") ಮತ್ತು "ಡೈಸ್ ಅಥವಾ ಡೈಮ್" (ಅಂದರೆ "ಒಂದು ದಿನ" ಎಂದು ಡಿಕೋಡ್ ಮಾಡಬಹುದು). ಇದು ನಿದ್ರೆ ಎಚ್ಚರ, ಹಾರ್ಮೋನ್ ಬಿಡುಗಡೆ ಮತ್ತು ದೇಹದ ಉಷ್ಣಾಂಶ ಸೇರಿದಂತೆ ವಿವಿಧ ಶಾರೀರಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.

ಆಧುನಿಕ ಜೀವನಶೈಲಿಯಲ್ಲಿ, ನಮ್ಮ ಸಾಮಾಜಿಕ ಚಟುವಟಿಕೆಗಳು ಹಾಗೂ ನಮ್ಮ ನಿದ್ದೆ-ಎಚ್ಚರದ ಸಮಯಗಳ ವೈಯಕ್ತಿಕ ಆದ್ಯತೆಗಳು ಪರಸ್ಪರ ಹೊಂದಿಕೆ ಆಗದಿರಬಹುದು. ಇದು ನಮ್ಮ ಸಾಮಾನ್ಯ ಸಿರ್ಕಾಡಿಯನ್ ರಿದಮ್ ಅನ್ನು ಅಡ್ಡಿಪಡಿಸುತ್ತದೆ. ಇದನ್ನು ಸಿರ್ಕಾಡಿಯನ್ ತಪ್ಪು ಜೋಡಣೆ ಅಥವಾ ಸಾಮಾಜಿಕ ಜೆಟ್ ಲ್ಯಾಗ್ (Social Jet Lag = SJL) ಎಂದು ಕರೆಯಲಾಗುತ್ತದೆ.

ಚಟುವಟಿಕೆ ಮತ್ತು ಕಾರ್ಯಕ್ಷಮತೆಗಾಗಿ ವೈಯಕ್ತಿಕ ಆದ್ಯತೆಗಳನ್ನು ಪ್ರತಿನಿಧಿಸುವ ಈ ಕ್ರೊನೊಟೈಪ್, ಮಾನವನ ಆರೋಗ್ಯ ಸಮಸ್ಯೆಗಳಿಗೆ, ವಿಶೇಷವಾಗಿ ಮನೋವೈದ್ಯಕೀಯ ಅಸ್ವಸ್ಥತೆಗಳನ್ನು ನೇರವಾಗಿ ಪ್ರಭಾವಿಸುತ್ತದೆ.

ಮನೋವಿಜ್ಞಾನಿ ಮತ್ತು ನಿದ್ರಾ ತಜ್ಞ ಡಾ ಮೈಕಲ್ ಬ್ರೂಸ್ ಅವರ ಪುಸ್ತಕದಲ್ಲಿ ಹೇಳಿರುವಂತೆ ನಿಮ್ಮ ಕ್ರೋನೋಟೈಪ್ ಅನ್ನು ಅರ್ಥಮಾಡಿಕೊಂಡರೆ ನಿಮ್ಮ ದೈನಂದಿನ ವೇಳಾಪಟ್ಟಿಯನ್ನು ಉತ್ತಮ ಕಾರ್ಯಕ್ಷಮತೆ ಮತ್ತು ಆರೋಗ್ಯಕ್ಕಾಗಿ ಅತ್ಯುತ್ತಮವಾಗಿಸಲು ಸಹಾಯ ಮಾಡಬಹುದು.

ಡಾ ಮೈಕಲ್ ಬ್ರೂಸ್ (Dr Michael Breus) ಪ್ರಾಣಿಗಳ ಚಲನವಲನ ಹಾಗೂ ನಿದ್ರೆಗಳನ್ನು ಆಧರಿಸಿ, ಮನುಷ್ಯನಿಗೆ ಹೋಲಿಸಿ ಕ್ರೋನೋಟೈಪ್‌ಗಳ ಪರಿಕಲ್ಪನೆಯನ್ನು ಸಾದರಪಡಿಸಿದ್ದಾರೆ.

ಕ್ರೋನೋಟೈಪ್‌ಗಳಲ್ಲಿ ನಾಲ್ಕು ವಿಧ

1) ಸಿಂಹಗಳು (ಬೆಳಗಿನ ಪ್ರಕಾರಗಳು): ಬೆಳಗಿನ ಸಮಯವನ್ನು ಪರಿಣಾಮಕಾರಿಯಾಗಿ ಬಳಸುವವರು ಇವರು. ಈ ಜನ ಅತಿ ಬೇಗ ಎದ್ದೇಳುತ್ತಾರೆ ಮತ್ತು ದಿನದ ಮೊದಲ ಭಾಗದಲ್ಲಿ ಹೆಚ್ಚು ಚಟುವಟಿಕೆ ಹೊಂದಿರುತ್ತಾರೆ. ಅವರು ಸಾಮಾನ್ಯವಾಗಿ ಸಾಯಂಕಾಲ ಬೇಗ ಮಲಗುವ ಸ್ವಭಾವ ಹೊಂದಿರುತ್ತಾರೆ. ಸ್ಲೀಪ್ ಮೆಡಿಸಿನ್‌ನಲ್ಲಿ ನಡೆಸಿದ ಒಂದು ಸಂಶೋಧನೆಯು ಬೆಳಿಗ್ಗೆ ಬೇಗ ಏಳುವ ಈ ಮುಂಜಾವಿನ ಜನರಲ್ಲಿ ಕಾರ್ಟಿಸೋಲ್ ಮಟ್ಟದಲ್ಲಿ ಗಮನೀಯ ಏರಿಕೆ ಆಗಿರುತ್ತದೆ ಎಂದು ತೋರಿಸುತ್ತದೆ, ಇದು ಅವರು ಬೆಳಗಿನ ಸಮಯದಲ್ಲಿ ಎಚ್ಚರಗೊಳ್ಳಲು ಮತ್ತು ಚಟುವಟಿಕೆ ಇಂದು ಇರಲು ಸಹಾಯ ಮಾಡುತ್ತದೆ

ಈ ವ್ಯಕ್ತಿಗಳು ಬೆಳಗಿನ ಸಮಯದಲ್ಲಿ ಹೆಚ್ಚು ಎಚ್ಚರವಾಗಿದ್ದು ಮತ್ತು ಶಕ್ತಿಯುತವಾಗಿರುತ್ತಾರೆ. ಅವರು ಬೇಗ ಎದ್ದೇಳುವುದು ಮತ್ತು ಬೇಗನೆ ಮಲಗುವುದು ಸಾಮಾನ್ಯವಾಗಿರುತ್ತದೆ, ತುಂಬಾ ತಡಸಮಯದವರೆಗೆ ಎಚ್ಚರವಾಗಿದ್ದರೆ ಆಗಾಗ್ಗೆ ಬೇಗ ದಣಿವಾಗಿ ಹೋಗುತ್ತಾರೆ

2) ತೋಳಗಳು (ರಾತ್ರಿ ಪ್ರಕಾರಗಳು) ರಾತ್ರಿ ಗೂಬೆಗಳು (night owl/animals): ಸಂಜೆ ಸಮಯ ಮತ್ತು ರಾತ್ರಿಯಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಅವರು ಬೇಗ ಎದ್ದೇಳಲು ಕಷ್ಟಪಡುತ್ತಾರೆ, ಸಂಜೆ ಆಗುತ್ತಾ ತಮ್ಮ ಶ್ರೇಷ್ಠ ಉತ್ಪಾದಕತೆಯನ್ನು ಅನುಭವಿಸುತ್ತಾರೆ. ಟಿಲ್ ರೋನ್ಬರ್ಗ್ ಅವರ ಪುಸ್ತಕ ಇಂಟರ್ನಲ್ ಟೈಮ್ನಲ್ಲಿ ವಿವರಿಸಿದ ಪ್ರಕಾರ, ಸಂಜೆ ಪ್ರಕಾರಗಳು ಸಾಮಾನ್ಯವಾಗಿ ಮೆಲಟೋನಿನ್ ಮತ್ತು ದೇಹದ ತಾಪಮಾನದಲ್ಲಿ ನಂತರದ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ, ಇದು ತಡವಾಗಿ ಎಚ್ಚರಗೊಳ್ಳುವ ಅವರ ಪ್ರವೃತ್ತಿಯೊಂದಿಗೆ ಹೊಂದಿಕೊಳ್ಳುತ್ತದೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ನೈಟ್ ಅನಿಮಲ್( ನೈಟ್ ಔಲ್) ಪ್ರಕಾರದವರು ಖಿನ್ನತೆಯ ಮತ್ತು ಡ್ರಗ್ ಅಡಿಕ್ಷನ್ ಒಳಗಾಗುವ ಸಾಧ್ಯತೆಗಳನ್ನು ಸೂಚಿಸುತ್ತದೆ

3) ಕರಡಿಗಳು (ನಡುವಿನವರು): ಹೆಚ್ಚಿನ ಜನರು ಕರಡಿಗಳಂತೆ. ಅವರ ಶಕ್ತಿಯ ಮಟ್ಟಗಳು ಸೂರ್ಯನೊಂದಿಗೆ ಏರುತ್ತವೆ ಮತ್ತು ಮುಳುಗಿರುವಾಗ ಇಳಿಯುತ್ತವೆ. ಅದಕ್ಕೆ ತಕ್ಕಂತೆ ಅವರು ಸುಲಭವಾಗಿ ಎದ್ದೇಳುತ್ತಾರೆ, ದಿನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ ಮತ್ತು ರಾತ್ರಿಯ ಹೊತ್ತಿಗೆ ದಣಿದ ಅನುಭವವನ್ನು ಹೊಂದಿರುತ್ತಾರೆ. ಇವರು ಸಾಮಾನ್ಯ 9 ರಿಂದ 5 ವೇಳಾಪಟ್ಟಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ

4) ಡಾಲ್ಫಿನ್‌ಗಳು (ಅನಿಯಮಿತ ನಿದ್ರಾಳುಗಳು): ಲಘು ನಿದ್ರೆ ಮಾಡುವ ಜನರು, ಇವರು ಬಹಳಷ್ಟು ಸಲ ನಿದ್ರಾಹೀನತೆ ಇಂದು ಬಳಲುತ್ತಾರೆ ಇವರು ಬಹಳ ಚುರುಕು, ಬುದ್ಧಿವಂತರಾಗಿರುತ್ತಾರೆ ಆದರೆ ನಿಯಮಿತ ನಿದ್ರೆಯನ್ನು ಕಾಪಾಡಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಾರೆ. ಈ ಡಾಲ್ಫಿನ್ ಬಗೆಯವರು ಕ್ರೋನೋಟೈಪ್ಗಳಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿದ್ದು, ಸಾಂಪ್ರದಾಯಿಕ ವೇಳಾಪಟ್ಟಿಗೆ , ಕೆಲಸ ಕಾರ್ಯಕ್ಕೆ ಹೊಂದಿಕೊಳ್ಳುವುದು ಕಷ್ಟ. ಕ್ರೋನೋಬಯಾಲಜಿ ಇಂಟರ್‌ನ್ಯಾಷನಲ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯು ಅನಿಯಮಿತ ನಿದ್ರೆಯ ತೊಂದರೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ದಾರಿ ಮಾಡಬಹುದು ಎಂದು ಸೂಚಿಸುತ್ತದೆ.

ನಿಮ್ಮ ಕ್ರೋನೋಟೈಪ್ ಗುರುತಿಸುವುದು ಹೇಗೆ

ಲ್ಯೂಮೆನ್ ಯುನಿವರ್ಸಿಟಿಯ ಮ್ಯೂನಿಚ್ ಕ್ರೋನೋಟೈಪ್ ಪ್ರಶ್ನಾವಳಿ (Munich Chronotype Questionnaire - MCTQ) ಯಂತಹ ಸಾಧನಗಳನ್ನು ಬಳಸಿಕೊಂಡು ನಿಮ್ಮ ಕ್ರೋನೋಟೈಪ್ ಅನ್ನು ಗುರುತಿಸಬಹುದು.

ನೀವು ಯಾವ ಬಗೆಯ ಸ್ಲೀಪ್ ಅನಿಮಲ್ ಎಂದು ಅರಿಯಲು ಈ ಚಿಕ್ಕ ಕ್ವಿಜ್

1) ಅಲಾರಾಂ ಇಲ್ಲದೆ ನೀವು ಸ್ವಾಭಾವಿಕವಾಗಿ ಯಾವ ಸಮಯಕ್ಕೆ ಎಚ್ಚರಗೊಳ್ಳುತ್ತೀರಿ?

- A. 6 AM ಅಥವಾ ಅದಕ್ಕಿಂತ ಮೊದಲು

- ಬಿ. 6 AM ಮತ್ತು 8 AM ನಡುವೆ

- C. 8 AM ಮತ್ತು 10 AM ನಡುವೆ

- D. 10 AM ನಂತರ

2) ಎದ್ದ ಮೇಲೆ ನಿಮಗೆ ಹೇಗನಿಸುತ್ತದೆ?

- A. ಪೂರ್ತಿ ಚೈತನ್ಯ ಮತ್ತು ದಿನವನ್ನು ಪ್ರಾರಂಭಿಸಲು ಸಂಪೂರ್ಣ ಸಿದ್ದತೆ

- ಬಿ. ಅಷ್ಟು ರಿಫ್ರೆಶ್ ಅಲ್ಲ .

- ಸಿ. ದಣಿವು ಆದರೆ ಸ್ವಲ್ಪ ಸಮಯದ ನಂತರ ಹೋಗಬಹುದು

- D. ದಣಿದ ಮತ್ತು ಹೆಚ್ಚು ಸಮಯ ಮಲಗಬೇಕು ಎನಿಸುತ್ತದೆ

3) ನೀವು ಯಾವಾಗ ಹೆಚ್ಚು ಕಾರ್ಯ ಕ್ಷಮತೆ ಇಂದು ಇರುವಿರಿ ?

- A. ಮುಂಜಾನೆ

- B. ಮಧ್ಯ ಬೆಳಿಗ್ಗೆಯಿಂದ ಮಧ್ಯಾಹ್ನದ ಆರಂಭದಲ್ಲಿ

- C. ಮಧ್ಯಾಹ್ನದಿಂದ ಸಂಜೆಯವರೆಗೆ

- D. ರಾತ್ರಿ

4. ದಿನದಲ್ಲಿ ಸಣ್ಣ ನಿದ್ದೆ ಮಾಡುವ ಬಗ್ಗೆ ನಿಮಗೆ ಏನನಿಸುತ್ತದೆ?

- A. ನಾನು ನಿದ್ದೆ ಮಾಡುವುದಿಲ್ಲ, ಇದು ನನ್ನ ಸಂಪೂರ್ಣ ನಿದ್ರೆಗೆ ಅಡ್ಡಿಪಡಿಸುತ್ತದೆ

- B. ಸಂದರ್ಭ ಬಿದ್ದರೆ ಮತ್ತು ಅಗತ್ಯವಿದ್ದರೆ

- C ನಿಯಮಿತವಾಗಿ, ಮತ್ತು ಇದು ನನಗೆ ಆರಾಮಾಗಿರಲು ಸಹಾಯ ಮಾಡುತ್ತದೆ

- D. ಆಗಾಗ್ಗೆ ಚಿಕ್ಕನಿದ್ರೆ ಮಾಡುತ್ತಿರುತ್ತೇನೆ , ಆದರೆ ದಣಿವಿನ ಫೀಲ್ ಆಗುತ್ತದೆ

5. ನಿಮ್ಮ ನಿದ್ದೆಯ ಮಾದರಿಗಳನ್ನು ಯಾವುದು ಉತ್ತಮವಾಗಿ ವಿವರಿಸುತ್ತದೆ?

- A. ಆಗಾಗ್ಗೆ ಅರ್ಧಂಬರ್ಧ ನಿದ್ದೆ, ಲೈಟ್ ಸ್ಲೀಪರ್

- B. ಒಳ್ಳೆಯ ಗಾಢ ನಿದ್ರೆ ,ಉತ್ತಮ ಸ್ಲೀಪರ್

- C. ಸ್ವಲ್ಪ ಅನಿಯಮಿತ, ಆದರೆ ಸಾಮಾನ್ಯವಾಗಿ ಸರಿ

- D. ನಿದ್ರಿಸಲು ಮತ್ತು ಏಳಲು ಹೆಣಗಾಡುವೆ

6. ಭಾರಿ ಊಟ ಮಾಡಿದ ನಂತರ ನಿಮಗೆ ಹೇಗನಿಸುತ್ತದೆ?

- A. ಅಷ್ಟೇನೂ ತೊಂದರೆ ಇಲ್ಲ

- B. ಸ್ವಲ್ಪ ನಿದ್ರೆ

- C. ತುಂಬಾ ನಿದ್ದೆ

- D. ಎನರ್ಜಿಟಿಕ್

7. ನೀವು ಯಾವಾಗ ವ್ಯಾಯಾಮ ಮಾಡಲು ಬಯಸುತ್ತೀರಿ?

- A. ಮುಂಜಾನೆ

- B. ಮುಂಜಾನೆಯಿಂದ ಮಧ್ಯಾಹ್ನದ ಆರಂಭದಲ್ಲಿ

- C. ಮಧ್ಯಾಹ್ನದಿಂದ ಸಂಜೆಯವರೆಗೆ

- D. ಸಂಜೆಯಿಂದ ತಡರಾತ್ರಿಯವರೆಗೆ

8. ನೀವು ಸಾಮಾನ್ಯವಾಗಿ ಯಾವ ಸಮಯಕ್ಕೆ ಮಲಗುತ್ತೀರಿ?

- A. 9 PM ಅಥವಾ ಅದಕ್ಕಿಂತ ಮೊದಲು

- ಬಿ. 10 PM ರಿಂದ ಮಧ್ಯರಾತ್ರಿ

- C. ಮಧ್ಯರಾತ್ರಿಯಿಂದ 2 AM

- D. 2 AM ನಂತರ

ಸ್ಕೋರಿಂಗ್:

ನಿಮ್ಮ ಆಯ್ಕೆ

ಹೆಚ್ಚು A: ಸಿಂಹ

ಹೆಚ್ಚು B: ಕರಡಿ

ಹೆಚ್ಚು C: ಡಾಲ್ಫಿನ್

ಹೆಚ್ಚು D: ತೋಳ, ಗೂಬೆ

ಕ್ರೋನೋಟೈಪ್‌ಗಳು ಏಕೆ ಮುಖ್ಯ?

1) ಕೆಲಸ ಮತ್ತು ಕಾರ್ಯಕ್ಷಮತೆ: ನಿಮ್ಮ ಕೆಲಸದ ವೇಳಾಪಟ್ಟಿಯನ್ನು ನಿಮ್ಮ ಕ್ರೋನೋಟೈಪ್‌ಗೆ ಹೊಂದಿಸುವುದು ಕಾರ್ಯಕ್ಷಮತೆಯನ್ನು ಹೆಚ್ಚಿಸುವದಲ್ಲೇದೆ, ಆ ಕೆಲಸದಲ್ಲಿ ಸಂತೋಷವನ್ನು ಹೆಚ್ಚಿಸಬಹುದು. ಉದಾಹರಣೆಗೆ, ರಾತ್ರಿ ಹೆಚ್ಚು ಚಟುವಟಿಕೆಯಿಂದ ಇರುವ ಗೂಬೆಗಳ ಸ್ವಭಾವ (night owl) ಇರುವವರು ಸಂಜೆಯ ನಂತರದ ಸಮಯಗಳೊಂದಿಗೆ ಕೆಲಸಗಳಲ್ಲಿ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

2) ಆರೋಗ್ಯ: ನಮ್ಮ ನೈಸರ್ಗಿಕ ನಿದ್ರೆಯ ಮಾದರಿ ಇಂದ ವಿಮುಖವಾಗುವುದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಇದರಲ್ಲಿ ನಿದ್ರಾ ಭಂಗ, ಖಿನ್ನತೆ ಮತ್ತು ಹೃದಯ ಸಮಸ್ಯೆಗಳು ಸೇರಿವೆ. ತಪ್ಪಾಗಿ ಹೊಂದಾಣಿಕೆಯಾದ ಕ್ರೋನೋಟೈಪ್‌ಗಳು ಮತ್ತು ಕೆಲಸದ ವೇಳಾಪಟ್ಟಿಗಳನ್ನು ಹೊಂದಿರುವ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ.

2) ಸಾಮಾಜಿಕ ಮಾತುಕತೆ ಮತ್ತು ನಡವಳಿಕೆ: ಪರಸ್ಪರರ ಕ್ರೋನೋಟೈಪ್‌ಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಸಂಬಂಧಗಳು ಉತ್ತಮವಾಗಿ ಬೆಳೆಯುತ್ತವೆ. ಒಬ್ಬರು ಹಗಲಿನಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವ ವ್ಯಕ್ತಿಯಾಗಿದ್ದು, ಮತ್ತೊಬ್ಬರು ರಾತ್ರಿ ಹೊತ್ತು ಚಟುವಟಿಕೆಯಿಂದ ಇರುವವರಾಗಿದ್ದರೆ ಪರಸ್ಪರರ ಮನೋಭಾವ ಮತ್ತು ಜೈವಿಕ ಗಡಿಯಾರಗಳನ್ನು ಸರಿಯಾಗಿ ಅರಿಯುವುದರಿಂದ ಆರೋಗ್ಯಕರ ಸಂವಹನ ಮತ್ತು ಸಾಮಾಜಿಕ ಸಂಬಂಧ ಬೆಸೆಯಲು ನೆರವಾಗಬಹುದು.

ಕ್ರೋನೋಟೈಪ್‌ಗಳ ಮೇಲೆ ಪ್ರಭಾವ ಬೀರುವ ಅಂಶಗಳು

1) ಜೈವಿಕ ಅಂಶಗಳು: ನೀವು ಹಗಲು ಚಟುವಟಿಕೆಯಿಂದ ಇರುವ ವ್ಯಕ್ತಿಯೇ ಅಥವಾ ರಾತ್ರಿ ಹೊತ್ತು ಕೆಲಸ ಮಾಡಲು ಇಷ್ಟಪಡುವವರೇ ಎನ್ನುವುದನ್ನು ನಿರ್ಧರಿಸುವಲ್ಲಿ ನಿಮ್ಮ ವಂಶವಾಹಿಗಳು (ಜೀನ್) ಮಹತ್ವದ ಪಾತ್ರ ನಿರ್ವಹಿಸುತ್ತವೆ. 2017 ರಲ್ಲಿ ಫಿಸಿಯಾಲಜಿಯಲ್ಲಿ ನೋಬೆಲ್ ಪ್ರಶಸ್ತಿಯನ್ನು ಗೆದ್ದ ಡಬ್ಲ್ಯೂ.ಯಂಗ್ ಮತ್ತು ಜೆಫ್ರಿ ಸಿ. ಹಾಲ್ ಅವರ ಸಂಶೋಧನೆಯು ದೈನಂದಿನ ಲಯಗಳ (circadian rhythms) ಮತ್ತು ಅನುವಂಶೀಯತೆಯ ನೇರ ಸಂಬಂಧದ ಆಧಾರವನ್ನು ಎತ್ತಿ ತೋರಿಸಿತ್ತು.

2) ವಯಸ್ಸು: ಕ್ರೋನೋಟೈಪ್‌ಗಳು ವಯಸ್ಸಿಗೆ ಅನುಗುಣವಾಗಿ ಬದಲಾಗಬಹುದು. ಯುವಕರು ಸಾಮಾನ್ಯವಾಗಿ ರಾತ್ರಿ ಗೂಬೆ ಮಾದರಿಯತ್ತ ಬದಲಾಗುತ್ತಾರೆ. ಹಾಗೆಯೇ ವಯಸ್ಸಾಗುತ್ತಾ ಮುಂಜಾವಿನ ಸಮಯಗಳ ಮಾದರಿಯಲ್ಲಿ ಬದಲಾಗಬಹುದು.

3) ಜೀವನಶೈಲಿ ಮತ್ತು ಪರಿಸರ: ಪ್ರಖರ (ಮೊಬೈಲ್, ಟಿವಿ ಇತ್ಯಾದಿ) ಬೆಳಕಿಗೆ ಒಡ್ಡಿಕೊಳ್ಳುವಿಕೆ, ಕೆಲಸದ ಅನಿಯಮಿತ ವೇಳಾಪಟ್ಟಿಗಳು ಮತ್ತು ಸಾಮಾಜಿಕ ಚಟುವಟಿಕೆಗಳು ಸಹ ನಿಮ್ಮ ಕ್ರೋನೋಟೈಪ್ ಮೇಲೆ ಪ್ರಭಾವ ಬೀರಬಹುದು. ಉದಾಹರಣೆಗೆ, ರಾತ್ರಿಯಲ್ಲಿ ಕೃತಕ ಬೆಳಕಿಗೆ ಒಡ್ಡುವುದು ನಂತರದ ಕ್ರೋನೋಟೈಪ್ ಬದಲಾವಣೆಗೆ ಕಾರಣವಾಗಬಹುದು.

ನಿಮ್ಮ ಕ್ರೋನೋಟೈಪ್‌ಗೆ ಹೊಂದಿಕೊಳ್ಳುವ ಸಲಹೆಗಳು

1) ವೇಳಾಪಟ್ಟಿ ಹೊಂದಿಸಿಕೊಳ್ಳಿ: ನಿಮ್ಮ ವೇಳಾಪಟ್ಟಿಯನ್ನು ಹೊಂದಿಸಿ ನಿಮ್ಮ ಕೆಲಸ ಮತ್ತು ಮನರಂಜನಾ ಚಟುವಟಿಕೆಗಳನ್ನು ನಿಮ್ಮ ನೈಸರ್ಗಿಕ ಅತ್ಯುತ್ತಮ ಕಾರ್ಯಕ್ಷಮತೆಯ ಸಮಯಗಳೊಂದಿಗೆ ಹೊಂದಿಸಲು ಪ್ರಯತ್ನಿಸಿ. ಸಾಧ್ಯವಾದರೆ, ನಿಮ್ಮ ಕ್ರೋನೋಟೈಪ್‌ಗೆ ಹೊಂದುವಂತಹ ಸಮಯದ ಕೆಲಸಗಳನ್ನು ಮಾಡಿ.

2) ನಿದ್ರೆಯ ಪರಿಸರವನ್ನು ಸುಧಾರಿಸಿ: ನಿಮ್ಮ ಮಲಗುವ ಕೋಣೆ ನಿದ್ರೆಗೆ ಪೂರಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕಿಟಕಿಗೆ ಕಪ್ಪು (ಗಾಢ ಬಣ್ಣದ) ಪರದೆಗಳನ್ನು ಬಳಸಿ, ತಂಪಾದ ತಾಪಮಾನ ಇರಲಿ.

3) ಹಂತಹಂತವಾಗಿ ಬದಲಾಯಿಸಿ: ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಬದಲಾಯಿಸಬೇಕಾದರೆ, ಹಂತಹಂತವಾಗಿ ಬದಲಾವಣೆ ಮಾಡಿ. ನಿಮ್ಮ ಮೋಸ್ಟ್ ಎಫಿಶಿಯೆಂಟ್ ಸಮಯ ಮತ್ತು ಎದ್ದೇಳುವ ಸಮಯವನ್ನು ಪ್ರತಿದಿನ 15-30 ನಿಮಿಷಗಳಂತೆ ಹೊಂದಿಸುತ್ತಾ ಬನ್ನಿ. ನೀವು ಬಯಸಿದ ವೇಳಾಪಟ್ಟಿಯನ್ನು ತಲುಪುವವರೆಗೆ ಇದನ್ನು ಮುಂದುವರಿಸಿ.

4) ಆರೋಗ್ಯಕರ ಚಟುವಟಿಕೆಗಳು: ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಉತ್ತಮ ನಿದ್ರೆಯ ನಿಮ್ಮ ನೈಸರ್ಗಿಕ ರಿದಮ್ ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ