logo
ಕನ್ನಡ ಸುದ್ದಿ  /  ಜೀವನಶೈಲಿ  /  Corn Recipe: ರೆಸ್ಟೋರೆಂಟ್‌ ಶೈಲಿಯ ಗರಿ ಗರಿಯಾದ ಸ್ಪೈಸಿ ಕಾರ್ನ್ ಮನೆಯಲ್ಲೇ ತಯಾರಿಸಲು ಈ ಸಲಹೆಗಳನ್ನು ತಪ್ಪದೆ ಪಾಲಿಸಿ

Corn Recipe: ರೆಸ್ಟೋರೆಂಟ್‌ ಶೈಲಿಯ ಗರಿ ಗರಿಯಾದ ಸ್ಪೈಸಿ ಕಾರ್ನ್ ಮನೆಯಲ್ಲೇ ತಯಾರಿಸಲು ಈ ಸಲಹೆಗಳನ್ನು ತಪ್ಪದೆ ಪಾಲಿಸಿ

HT Kannada Desk HT Kannada

Mar 24, 2024 07:00 AM IST

google News

ಕ್ರಿಸ್ಪಿ ಕಾರ್ನ್ ರೆಸಿಪಿ

  • Crispy Corn Recipe: ರೆಸ್ಟೋರೆಂಟ್‌ ಶೈಲಿಯಲ್ಲಿ ಕ್ರಿಸ್ಪಿ ಕಾರ್ನ್ ತಯಾರಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ..? ಇನ್ಮೇಲೆ ನೀವು ಚಿಂತೆ ಮಾಡಬೇಕಿಲ್ಲ. ಈ ಟಿಪ್ಸ್‌ ಫಾಲೋ ಮಾಡಿದರೆ ಮೂಲಕ ನೀವು ಗರಿ ಗರಿಯಾದ ಕ್ರಿಸ್ಪಿ ಕಾರ್ನ್ ತಯಾರಿಸಬಹುದಾಗಿದೆ.

ಕ್ರಿಸ್ಪಿ ಕಾರ್ನ್ ರೆಸಿಪಿ
ಕ್ರಿಸ್ಪಿ ಕಾರ್ನ್ ರೆಸಿಪಿ

Crispy Corn Recipe: ಗರಿಯಾದ ಗರಿಯಾದ ಮೆಕ್ಕೆಜೋಳದ ಫ್ರೈ ತಿನ್ನುವುದೇ ಮಜಾ, ಈ ಕ್ರಿಸ್ಪಿ ಕಾರ್ನ್‌ಗಳು ಸಾಮಾನ್ಯವಾಗಿ ಔತಣ ಕೂಟಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಸ್ಟಾರ್ಟರ್ಗಳ ರೂಪದಲ್ಲಿ ಲಭ್ಯವಿರುತ್ತದೆ. ಇವುಗಳು ಗರಿ ಗರಿಯಾಗಿ ಇದ್ದಷ್ಟೂ ತಿನ್ನಲು ಖುಷಿ ಎನಿಸುತ್ತದೆ. ಮಕ್ಕಳಂತೂ ಊಟ ಬೇಕಿದ್ದರೂ ಬಿಟ್ಟು ಕ್ರಿಸ್ಪಿ ಕಾರ್ನ್ ತಿನ್ನುತ್ತಲೇ ಇರುತ್ತಾರೆ.

ಹೋಟೆಲ್‌ನಲ್ಲಿ ಇದರ ರುಚಿಗೆ ಮರುಳಾಗಿ ಅನೇಕರು ಮನೆಯಲ್ಲೇ ಗರಿಗರಿಯಾದ ಕಾರ್ನ್ ತಯಾರಿಸಲು ಮುಂದಾಗುತ್ತಾರೆ. ಆದರೆ ಮನೆಯಲ್ಲಿ ಜೋಳವನ್ನು ಈ ರೀತಿ ಕರಿದರೆ ರೆಸ್ಟೋರೆಂಟ್‌ನಲ್ಲಿ ಆದಷ್ಟು ಗರಿ ಗರಿಯಾಗುವುದಿಲ್ಲ. ಹಾಗಾದರೆ ಹೋಟೆಲ್‌ಗಳಲ್ಲಿ, ಔತಣಕೂಟಗಳಲ್ಲಿ ಸಿಗುವಂತೆ ಕ್ರಿಸ್ಪಿ ಕಾರ್ನ್ ತಯಾರಿಸುವಾಗ ನಾವು ಯಾವೆಲ್ಲಾ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

1. ಮೆಕ್ಕೆ ಜೋಳದ ತಾಜಾತನ ಹಾಗೂ ಪ್ರಮಾಣ : ನೀವು ಕ್ರಿಸ್ಪಿ ಕಾರ್ನ್ ತಯಾರಿಸಲು ಆಯ್ಕೆ ಮಾಡಿಕೊಂಡ ಮೆಕ್ಕೆಜೋಳ ತಾಜಾತನದಿಂದ ಕೂಡಿದಷ್ಟೂ ಅವುಗಳನ್ನು ಕರಿದ ಬಳಿಕ ಗರಿ ಗರಿಯಾಗಿ ಇರುತ್ತದೆ. ನೀವು ಆಯ್ಕೆ ಮಾಡಿಕೊಂಡಿರುವ ಮೆಕ್ಕೆ ಜೋಳ ತಾಜಾತನ ಹೊಂದಿರದಿದ್ದರೆ ಇವುಗಳು ಗರಿ ಗರಿಯಾಗಿ ಇರುವುದಿಲ್ಲ.

2. ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ : ಮೆಕ್ಕೆಜೋಳವನ್ನು ನೀವು ಯಾವ ರೀತಿ ಕತ್ತರಿಸುತ್ತೀರಿ ಎನ್ನುವುದು ನಿಮ್ಮ ಆಯ್ಕೆಯಾಗಿದ್ದರೂ ಸಹ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸುವುದರಿಂದ ಗರಿಗರಿಯಾದ ತಿನಿಸನ್ನು ತಯಾರಿಸಲು ಸಾಧ್ಯವಾಗುತ್ತದೆ. ಸಣ್ಣ ಸಣ್ಣದಾಗಿ ಮೆಕ್ಕೆಜೋಳವನ್ನು ಕತ್ತರಿಸಿದರೆ ಫ್ರೈ ಮಾಡಲು ಹೆಚ್ಚು ಸಮಯ ಬೇಕು ಎಂದು ಅನೇಕರು ದೊಡ್ಡ ದೊಡ್ಡದಾಗಿ ಕತ್ತರಿಸುತ್ತಾರೆ. ಆದರೆ ಇದರಿಂದ ನಿಮಗೆ ಗರಿ ಗರಿಯಾದ ಕ್ರಿಸ್ಪಿ ಕಾರ್ನ್ ಪಡೆಯಲು ಸಾಧ್ಯವಾಗುವುದಿಲ್ಲ.

3. ಕಾರ್ನ್‌ ಫ್ಲೋರ್‌ ಬಳಸಿ : ಮೆಕ್ಕೆಜೋಳವನ್ನು ಕತ್ತರಿಸಿಕೊಂಡ ಬಳಿಕ ಒಣ ಬಟ್ಟೆಯಿಂದ ಅವುಗಳನ್ನು ಚೆನ್ನಾಗಿ ಒರೆಸಿಕೊಳ್ಳಿ. ಕೆಲವರು ಸ್ಪೈಸಿ ಕಾರ್ನ್ ತಯಾರಿಸಲು ಕೇವಲ ಮೈದಾ ಹಿಟ್ಟನ್ನು ಮಾತ್ರ ಬಳಕೆ ಮಾಡುತ್ತಾರೆ. ಆದರೆ ನೀವು ಗರಿಗರಿಯಾದ ಕಾರ್ನ್ ತಯಾರಿಸಬೇಕು ಎಂದುಕೊಂಡಿದ್ದರೆ ಮೈದಾ ಹಿಟ್ಟಿನ ಜೊತೆಯಲ್ಲಿ ಕಾರ್ನ್‌ಫ್ಲೋರ್‌ ಬಳಸಬೇಕು. ಇದರಿಂದ ಗರಿಗರಿಯಾದ ಕಾರ್ನ್ ತಯಾರಿಸಬಹುದಾಗಿದೆ.

4. ಸರಿಯಾದ ಉರಿಯಲ್ಲಿ ಫ್ರೈ ಮಾಡಿ : ಜೋಳದ ಕಾಳುಗಳನ್ನು ಫ್ರೈ ಮಾಡುವಾಗ ನೀವು ಯಾವ ಪ್ರಮಾಣದ ಉರಿಯಲ್ಲಿ ಕಾಯಿಸುತ್ತೀರಿ ಎಂಬುದು ತುಂಬಾನೇ ಮುಖ್ಯವಾಗಿದೆ. ಜೋಳದ ಕಾಳುಗಳನ್ನು ಫ್ರೈ ಮಾಡುವಾಗ ನೀವು ಹೆಚ್ಚಿನ ಜ್ವಾಲೆಯಲ್ಲಿ ಬೇಯಿಸಬಾರದು.ಹಾಗಂತ ಕಡಿಮೆ ಉರಿಯಲ್ಲಿ ಕಾಯಿಸಿದಾಗ ಜೋಳ ಹಸಿ ಹಸಿಯಾಗಿ ಉಳಿದುಬಿಡಬಹುದು. ಮಧ್ಯಮ ಉರಿಯಲ್ಲಿ ನೀವು ಜೋಳವನ್ನು ಫ್ರೈ ಮಾಡುವುದರಿಂದ ಅದು ಚೆನ್ನಾಗಿ ಬೇಯುತ್ತದೆ.

ಈ ಟಿಪ್ಸ್‌ ಫಾಲೋ ಮಾಡಿ ಮನೆಯಲ್ಲಿ ರೆಸ್ಟೋರೆಂಟ್‌ ಶೈಲಿಯ ಗರಿ ಗರಿಯಾದ ಸ್ಪೈಸಿ ಕಾರ್ನ್ ತಯಾರಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ