logo
ಕನ್ನಡ ಸುದ್ದಿ  /  ಜೀವನಶೈಲಿ  /  Travel Tips: ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌

Travel Tips: ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌

Jayaraj HT Kannada

Dec 16, 2024 03:42 PM IST

google News

ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌

    • ಹೊಸ ವರ್ಷದ ಸಂಭ್ರಮಕ್ಕೆ ಚಳಿ ಅಡ್ಡಿಯಾಗುವುದು ಸಾಮಾನ್ಯ. ಹೀಗಾಗಿ ಈ ಬಾರಿ ನೀವು ನಿವ್‌ ಇಯರ್‌ ಸಂಭ್ರಮಾಚರಣೆಗೆ ಬೇರೆ ಎಲ್ಲಾದರೂ ಪ್ರವಾಸ ಯೋಜನೆ ಮಾಡಿದ್ದರೆ, ಬ್ಯಾಗ್‌ ಪ್ಯಾಕ್‌ ಮಾಡುವಾಗ ಒಂದಷ್ಟು ವಸ್ತುಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಮುಖ್ಯ.
ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌
ಹೊಸ ವರ್ಷಕ್ಕೆ ಪ್ರವಾಸ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿವೆ ಪ್ಯಾಕಿಂಗ್‌ ಟಿಪ್ಸ್‌ (Pixabay)

ಹೊಸ ವರ್ಷದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. 2024ಕ್ಕೆ ವಿದಾಯ ಹೇಳಿ 2025ನ್ನು ಸ್ವಾಗತಿಸಲು ಹಲವರು ಪ್ರವಾಸ ಯೋಜನೆ ರೂಪಿಸುತ್ತಾರೆ. ಹೊಸ ವರ್ಷವನ್ನು ಹೊಸ ಸ್ಥಳದಲ್ಲಿ ಬರಮಾಡಿಕೊಳ್ಳುವುದು ಹಲವರ ಬಯಕೆ. ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ ದೇಶ-ವಿದೇಶಗಳ ಬಹುತೇಕ ಹೆಚ್ಚಿನ ಪ್ರವಾಸಿ ಸ್ಥಳಗಳಲ್ಲಿ ಚಳಿ ಹೆಚ್ಚಿರುತ್ತದೆ. ಹೀಗಾಗಿ ನಿಮ್ಮ ಪ್ರವಾಸ ಯೋಜನೆ ಜೊತೆಗೆ ಬ್ಯಾಗ್‌ ಪ್ಯಾಕಿಂಗ್‌ ವೇಳೆಯೂ ಕೆಲವೊಂದು ಎಚ್ಚರಗಳು ಇರಬೇಕು. ಭಾರತದಲ್ಲಿ ಚಳಿಗಾಲದ ನಡುವೆ ಹೊಸ ವರ್ಷವನ್ನು ಸಂಭ್ರಮಿಸಲು ಹಲವಾರು ಸ್ಥಳಗಳಿವೆ. ಬೆಂಗಳೂರು, ಉದಯಪುರ, ಕೋಲ್ಕತ್ತಾ, ಗೋವಾ, ಪಾಂಡಿಚೇರಿದಂತಹ ನಗರಗಳ ಜೊತೆಗೆ ಕೇರಳ, ಮನಾಲಿಯಂತಹ ಪ್ರಕೃತಿ ಸೌಂದರ್ಯದ ಸ್ಥಳಗಳಿಗೆ ಹೋಗಬಹುದು.

ಬಹುತೇಕ ಎಲ್ಲಾ ಸ್ಥಳಗಳಲ್ಲೂ ಡಿಸೆಂಬರ್‌ ಕೊನೆ ಮತ್ತು ಜನವರಿ ತಿಂಗಳ ಆರಂಭದಲ್ಲಿ ತಂಪಾದ ವಾತಾವರಣ ಇರುತ್ತದೆ. ಹೀಗಾಗಿ ಬ್ಯಾಗ್‌ ಪ್ಯಾಕಿಂಗ್‌ ಮಾಡುವಾಗ ಒಂದಷ್ಟು ವಸ್ತುಗಳ ನಿಮ್ಮ ಜೊತೆಗಿದ್ದರೆ ಚೆನ್ನ. ವೈವಿಧ್ಯಮಯ ಹವಾಮಾನದಿಂದಾಗಿ ಅದಕ್ಕೆ ಸರಿಯಾಗಿ ಪ್ಯಾಕಿಂಗ್‌ ಮಾಡಬೇಕು.

ಉತ್ತರ ಭಾರತದ ಕೊರೆಯುವ ಚಳಿಗೆ ಥರ್ಮಲ್ಸ್, ಉಣ್ಣೆಯ ಜಾಕೆಟ್‌, ಟೋಪಿಗಳು, ಕೈಗವಸುಗಳು ಮತ್ತು ಇನ್ಸುಲೇಟೆಡ್ ಬೂಟುಗಳು ಜೊತೆಗಿದ್ದರೆ ದೇಹ ಬೆಚ್ಚಗಿರುತ್ತದೆ. ದಕ್ಷಿಣ ಭಾರತಕ್ಕೆ ಹಗಲಿನ ಸಮಯಕ್ಕೆ ಹಗುರವಾದ ಹತ್ತಿ ಬಟ್ಟೆಗಳ ಜೊತೆಗೆ, ಸಂಜೆ ಮತ್ತು ರಾತ್ರಿಗೆ ಲಘು ಜಾಕೆಟ್ ನಿಮ್ಮ ಬ್ಯಾಗ್‌ನಲ್ಲಿದ್ದರೆ ಒಳ್ಳೆಯದು. ನಿಮ್ಮ ಪ್ರವಾಸ ಸ್ಥಳಕ್ಕನುಗುಣವಾಗಿ ಈ ವಸ್ತುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.

ಬ್ಯಾಗ್‌ ಪ್ಯಾಕ್‌ ಮಾಡುವಾಗ ಈ ಅಗತ್ಯ ವಸ್ತುಗಳು ಜೊತೆಗಿರಲಿ

ಔಷಧಿಗಳು: ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ. ಇದರಲ್ಲಿ ಶೀತ ಮತ್ತು ಜ್ವರದ ಔಷಧಿಗಳು, ನಿಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಬೇಕಾದ ಔಷಧಿಗಳು ಹಾಗೂ ಪ್ರಿಸ್ಕ್ರಿಪ್ಷನ್‌ ಕೂಡಾ ಜೊತೆಗೆ ಇಟ್ಟುಕೊಳ್ಳಿ.

ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಮತ್ತು ಲಿಪ್ ಬಾಮ್:‌ ಈ ಮೂರೂ ಅವಶ್ಯಕ. ಚಳಿಗೆ ಮಾಯಿಶ್ಚರೈಸರ್ ಮತ್ತು ಲಿಪ್ ಬಾಮ್ ಬೇಕು. ಇದರ ಜೊತೆಗೆ ಸೂರ್ಯನ ಕಿರಣ ಬೀಳುವಲ್ಲಿ ಉತ್ತಮ ಸನ್‌ಸ್ಕ್ರೀನ್ (SPF 30 ಅಥವಾ ಅದಕ್ಕಿಂತ ಹೆಚ್ಚಿನ) ಇಟ್ಟುಕೊಂಡಿರಿ.

ಪ್ರಯಾಣ ದಾಖಲೆಗಳು, ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್‌ಗಳು: ಪಾಸ್‌ಪೋರ್ಟ್, ಗುರುತಿನ ಚೀಟಿ, ಪ್ರಯಾಣ ವಿಮೆ ಮತ್ತು ಇತರ ಪ್ರಮುಖ ದಾಖಲೆಗಳನ್ನು ವಾಟರ್‌ಪ್ರೂಫ್‌ ಬ್ಯಾಗ್‌ನಲ್ಲಿ ಹಾಕಿಕೊಳ್ಳಿ. ಅಗತ್ಯ ಪ್ರಮಾಣದಲ್ಲಿ ಹಣ ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಕೊಂಡು ಹೋಗಿ.

ಟಾರ್ಚ್ : ಎಲ್ಲಾ ಸಮಯದಲ್ಲಿ ನೀವು ವಿದ್ಯುತ್‌ ಇರುವ ಜಾಗದಲ್ಲೇ ಇರುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಹೊಸ ವರ್ಷ ಪ್ರಯಾಣದ ನಡುವೆ ಎಲ್ಲಾದರೂ ಹೊರಹೋದಾಗ ಕತ್ತಲಿರಬಹುದು. ಹೀಗಾಗಿ ಹೊರಾಂಗಣ ಚಟುವಟಿಕೆಗಳ ಸಮಯದಲ್ಲಿ ಟಾರ್ಚ್ ಅನಿವಾರ್ಯ.

ಹ್ಯಾಂಡ್ ಸ್ಯಾನಿಟೈಸರ್ ಮತ್ತು ಟವೆಲ್: ಅನುಕೂಲಕ್ಕಾಗಿ ಹ್ಯಾಂಡ್ ಸ್ಯಾನಿಟೈಸರ್‌, ಟಿಶ್ಯೂ ಮತ್ತು ಟವೆಲ್‌ಗಳನ್ನು ಜೊತೆಗೆ ಒಯ್ಯಿರಿ.

ಬ್ಯಾಕ್‌ ಪ್ಯಾಕ್‌: ನೀವು ಲಗೇಜ್‌ ಬ್ಯಾಗ್‌ನಲ್ಲಿ ಎಲ್ಲಾ ಪ್ಯಾಕಪ್‌ ಮಾಡುವಾಗ ಒಂದು ಹೆಚ್ಚುವರಿ ಬ್ಯಾಕ್‌ಪ್ಯಾಕ್‌ ಕೂಡಾ ಇಟ್ಟುಕೊಳ್ಳಿ. ಅಗತ್ಯ ವಸ್ತುಗಳನ್ನು ಹೋದಲ್ಲಿ ಕೊಂಡೊಯ್ಯಲು ಇದು ನೆರವಾಗುತ್ತದೆ.

ಪೋರ್ಟಬಲ್ ಚಾರ್ಜರ್ ಮತ್ತು ಪವರ್ ಬ್ಯಾಂಕ್: ಪ್ರಯಾಣದಲ್ಲಿರುವಾಗ ನಿಮ್ಮಲ್ಲಿರುವ ಸಾಧನಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಜೊತೆಗೆ ಇರಲಿ. ಇದು ನಿಮಗೆ ನೆರವಾಗುತ್ತದೆ. ನಿಮ್ಮ ಫೋನ್‌ ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ನಿಮ್ಮದೇ ಪವರ್‌ ಬ್ಯಾಂಕ್‌ ಬಳಸಿ.

ನೀರಿನ ಬಾಟಲ್: ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ ಜೊತೆಗಿಟ್ಟುಕೊಂಡು ಹೈಡ್ರೇಟ್‌ ಆಗಿರಿ. ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ.

ಪ್ಯಾಕಿಂಗ್‌ ವೇಳೆ ಈ ಟಿಪ್ಸ್‌ ಅನುಸರಿಸಿ

ಪ್ರಯಾಣ ಸಮಯದಲ್ಲಿ ಲಗೇಜ್ ಜಾಗವನ್ನು ಉಳಿಸಲು, ದೊಡ್ಡ ಗಾತ್ರದ ಬೂಟುಗಳು ಮತ್ತು ಜಾಕೆಟ್‌ಗಳಂತಹ ಭಾರವಾದ ವಸ್ತುಗಳನ್ನು ಧರಿಸಿರಿ. ಸೂಟ್‌ಕೇಸ್‌ನ ಒಳಗೆ ಹಗುರ ಸ್ವೆಟರ್‌ಗಳನ್ನು ಸೆಟ್‌ ಮಾಡಿ. ಒಂದು ಜೊತೆ ಬೆಚ್ಚಗಿನ ಸಾಕ್ಸ್, ಗ್ಲೌಸ್, ಬೆಚ್ಚಗಿನ ಒಳ ಉಡುಪುಗಳು ಮತ್ತು ಕಾಶ್ಮೀರಿ ಸ್ವೆಟರ್‌ಗಳು ಇಟ್ಟುಕೊಂಡಿರಿ.

ಬ್ಯಾಗ್‌ ಪ್ಯಾಕ್‌ ಮಾಡಿದ ನಂತರ ಅದಕ್ಕೆ ಸ್ವಲ್ಪ ಸುಗಂಧ ದ್ರವ್ಯ ಅಥವಾ ಸೆಂಟ್‌ ಸಿಂಪಡಿಸಿ. ಸುದೀರ್ಘ ಪ್ರಯಾಣದ ಸಮಯದಲ್ಲೂ ಅದು ಪರಿಮಳಯುಕ್ತವಾಗಿರುತ್ತದೆ. ಸಾಕ್ಸ್‌ ತುಂಬಿಸಲು ಬೇರೆಯೇ ಪೌಚ್ ಇಟ್ಟುಕೊಳ್ಳಿ. ಬಟ್ಟೆಗಳನ್ನು ಜೊತೆಜೊತೆಯಾಗಿ ಪ್ಯಾಕ್‌ ಮಾಡಿಕೊಂಡರೆ, ಅದೇ ಕ್ರಮದಲ್ಲಿ ಒಂದರ ನಂತರ ಇನ್ನೊಂದನ್ನು ಧರಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ