logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಸಿಂಪಲ್ ಆಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಸಿಂಪಲ್ ಆಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ

Priyanka Gowda HT Kannada

Nov 26, 2024 11:15 AM IST

google News

ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಸಿಂಪಲ್ ಆಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ

  • ಈ ಚಳಿಗಾಲದಲ್ಲಿ ಏನಾದರೂ ಬಿಸಿ ಬಿಸಿ ತಿಂಡಿ ತಿನ್ನಬೇಕು ಎಂದು ಅನಿಸುವುದು ಸಹಜ. ಹೀಗಾಗಿ ಬಾಳೆಹಣ್ಣಿನ ಬೋಂಡಾವನ್ನು ಪ್ರಯತ್ನಿಸಬಹುದು. ಸಂಜೆ ಚಹಾ ಹೀರುತ್ತಾ ತಿನ್ನಲು ಮಜವಾಗಿರುತ್ತದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯ ತಿನಿಸಾಗಿರುವ ಈ ರೆಸಿಪಿಯನ್ನು ಮಾಡುವುದು ತುಂಬಾ ಸಿಂಪಲ್. ಇಲ್ಲಿದೆ ಬಾಳೆಹಣ್ಣಿನ ಬೋಂಡಾ ರೆಸಿಪಿ ಮಾಡುವ ವಿಧಾನ.

ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಸಿಂಪಲ್ ಆಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಸಂಜೆ ಚಹಾ ಹೀರುತ್ತಾ ತಿನ್ನಲು ಮಾಡಿ ರುಚಿಕರವಾದ ಬಾಳೆಹಣ್ಣಿನ ಬೋಂಡಾ: ಸಿಂಪಲ್ ಆಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ (PC: Slurrp)

ಸಂಜೆ ಚಹಾ ಜತೆ ಏನಾದರೂ ರುಚಿಕರವಾದ ತಿಂಡಿ ತಿನ್ನಬೇಕು ಎಂದೆನಿಸುವುದು ಸಹಜ. ಹಾಗಿದ್ದರೆ ಬಾಳೆಹಣ್ಣಿನ ಬೋಂಡಾವನ್ನು ಪ್ರಯತ್ನಿಸಬಹುದು. ಕರ್ನಾಟಕದ ಕರಾವಳಿ ಭಾಗದಲ್ಲಿ ಬಹಳ ಜನಪ್ರಿಯ ತಿನಿಸಾಗಿರುವ ಈ ರೆಸಿಪಿಯನ್ನು ಮಾಡುವುದು ತುಂಬಾ ಸಿಂಪಲ್. ಸಂಜೆ ವೇಳೆ ಚಹಾ ಹೀರುತ್ತಾ ಈ ತಿಂಡಿಯನ್ನು ಸವಿಯಲು ಚೆನ್ನಾಗಿರುತ್ತದೆ. ಅದರಲ್ಲೂ ಈ ಚಳಿಗಾಲದಲ್ಲಿ ಏನಾದರೂ ಬಿಸಿ ಬಿಸಿ ತಿಂಡಿ ತಿನ್ನಬೇಕು ಎಂದು ಅನಿಸುವುದು ಸಹಜ. ಹೀಗಾಗಿ ಈ ಪಾಕವಿಧಾನವನ್ನು ಪ್ರಯತ್ನಿಸಬಹುದು. ನಿಮಗೂ ಖಂಡಿತಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಮಕ್ಕಳಿಗೂ ಇಷ್ಟವಾಗುತ್ತದೆ. ಸಂಜೆ ಶಾಲೆಯಿಂದ ಬಂದ ಕೂಡಲೇ ಮಕ್ಕಳು ಏನಾದರೂ ತಿಂಡಿಗೆ ತಡಕಾಡುವುದು ಸಹಜ. ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಈ ಬಾಳೆಹಣ್ಣಿನ ಬೋಂಡಾವನ್ನು ತಯಾರಿಸಬಹುದು. ಈ ರೆಸಿಪಿ ಮಾಡುವುದು ತುಂಬಾನೇ ಸರಳ. ಇಲ್ಲಿದೆ ಬಾಳೆಹಣ್ಣಿನ ಬೋಂಡಾ ರೆಸಿಪಿ ಮಾಡುವ ವಿಧಾನ.

ಬಾಳೆಹಣ್ಣಿನ ಬೋಂಡಾ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೈದಾ- 1 ಕಪ್, ಬಾಳೆಹಣ್ಣು- 7 ರಿಂದ 8, ಬೆಲ್ಲ- ಸ್ವಲ್ಪ, ಜೀರಿಗೆ- 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ- ಕರಿಯಲು.

ಮಾಡುವ ವಿಧಾನ: ಬಾಳೆಹಣ್ಣಿನ ಬೋಂಡಾ ತಯಾರಿಸುವುದು ತುಂಬಾ ಸುಲಭ. ಮೊದಲಿಗೆ ಮೈದಾ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಜೀರಿಗೆ, ಬೆಲ್ಲ (ಬೇಕಿದ್ದರೆ ಮಾತ್ರ ಸೇರಿಸಬಹುದು) ಹಾಕಿ ಮಿಕ್ಸ್ ಮಾಡಿ. ನಂತರ ಬಾಳೆಹಣ್ಣು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಾಳೆಹಣ್ಣು ಮಿಶ್ರಣ ಮಾಡುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಇದಕ್ಕಾಗಿ ಮೊದಲೇ ಬಾಳೆಹಣ್ಣನ್ನು ಹಿಚುಕಿ ಇಟ್ಟುಕೊಂಡಿದ್ದರೆ ಒಳ್ಳೆಯದು. ಬಾಳೆಹಣ್ಣು ಕಡಿಮೆ ಅನಿಸಿದರೆ ಮತ್ತೆ ಸೇರಿಸಬಹುದು. ಮಿಶ್ರಣ ತುಂಬಾ ದಪ್ಪವಾಗಿರಬಾರದು. ಹಾಗೆಯೇ ತುಂಬಾ ತೆಳ್ಳಗೆಯೂ ಆಗಬಾರದು. ಇದಕ್ಕೆ ನೀರನ್ನು ಸೇರಿಸುವಂತಿಲ್ಲ. ನಂತರ ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಚೆನ್ನಾಗಿ ಕಾದಾಗ ಬಾಳೆಹಣ್ಣಿನ ಮಿಶ್ರಣವನ್ನು ಒಂದೊಂದಾಗಿ ಬಿಡಬೇಕು. ಇದನ್ನು ಚೆನ್ನಾಗಿ ಫ್ರೈ ಮಾಡಬೇಕು. ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ನಂತರ ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿದರೆ ರುಚಿಕರವಾದ ಬಾಳೆಹಣ್ಣಿನ ಬೋಂಡಾ ಸವಿಯಲು ಸಿದ್ಧ.

ಮೇಲೆ ತಿಳಿಸಿದಂತೆ ಮಾಡಿದರೆ ಬಾಳೆಹಣ್ಣಿನ ಬೋಂಡಾ ಚೆನ್ನಾಗಿ ತಯಾರಾಗುತ್ತದೆ. ಜಾಸ್ತಿ ಬೆಲ್ಲ ಹಾಕಲು ಹೋಗಬೇಡಿ. ನಿಮಗೆ ಸಿಹಿ ಇಷ್ಟವಿದ್ದರೆ ಹಾಕಬಹುದು. ಬೆಲ್ಲ ಅತಿ ಹೆಚ್ಚು ಹಾಕಿದರೆ ಬೋಂಡಾ ಎಣ್ಣೆ ಹೀರಬಹುದು. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈಗಂತೂ ಚಳಿಗಾಲ ಶುರುವಾಗಿದೆ. ಈ ಚಳಿಗೆ ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದೆನಿಸಿದರೆ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ತುಂಬಾ ಬೇಗನೆ ಆಗುವ ರೆಸಿಪಿ ತಿನ್ನಲು ಬಲು ರುಚಿಯಾಗಿರುತ್ತದೆ. ಒಮ್ಮೆ ಮನೆಯಲ್ಲಿ ಮಾಡಿನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ