ಈ ರೀತಿ ಮೆಕ್ಕೆಜೋಳದ ರೊಟ್ಟಿ ರೆಸಿಪಿ ಮಾಡಿನೋಡಿ: ಮನೆಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ
ಮೆಕ್ಕೆಜೋಳದ ರೊಟ್ಟಿಯ ಒಂದೇ ರುಚಿಯನ್ನು ತಿಂದು ನಿಮಗೆ ಬೇಸರವಾಗಿದ್ದರೆ ವಿಭಿನ್ನವಾಗಿ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಮಸಾಲೆಯುಕ್ತ ಮೆಕ್ಕೆಜೋಳದ ರೊಟ್ಟಿ ಮಾಡುವುದು ತುಂಬಾ ಸಿಂಪಲ್. ಬೆಳಗಿನ ಉಪಾಹಾರಕ್ಕೆ ಇದು ಬೆಸ್ಟ್ ತಿಂಡಿ. ರಾತ್ರಿ ಚಪಾತಿ ಬದಲು ಈ ರೊಟ್ಟಿಯನ್ನು ತಯಾರಿಸಿ ತಿನ್ನಬಹುದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಪಂಜಾಬಿ ಮನೆಗಳಲ್ಲಿ ಸಾಸಿವೆ ಸೊಪ್ಪು ಹಾಗೂ ಮೆಕ್ಕೆಜೋಳದ ರೊಟ್ಟಿ ತಿನ್ನುವುದು ಚಳಿಗಾಲದಲ್ಲಿ ಒಂದು ಸಂಪ್ರದಾಯದಂತಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಸಹಕಾರಿಯಾಗಿರುವುದರಿಂದ ಈ ಆಹಾರವನ್ನು ಸೇವಿಸಲಾಗುತ್ತದೆ. ಆದರೆ, ಪಂಜಾಬ್ ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಬಹಳಷ್ಟು ಜನರು ಇದನ್ನು ಇಷ್ಟಪಡುತ್ತಾರೆ. ಮೆಕ್ಕೆಜೋಳಕ್ಕೆ ಸಾಸಿವೆ ಸೊಪ್ಪು ಹಾಕಿ ರೊಟ್ಟಿಗಳನ್ನು ತಯಾರಿಸುತ್ತಾರೆ. ಆದರೆ, ಮೆಕ್ಕೆಜೋಳದ ರುಚಿಯು ಯಾವಾಗಲೂ ಒಂದೇ ಆಗಿರುತ್ತದೆ. ಇದನ್ನು ಬೇರೆ ರೀತಿಯಲ್ಲೂ ತಯಾರಿಸಬಹುದು. ಬೆಳಗಿನ ಉಪಾಹಾರಕ್ಕೂ ತಿನ್ನಬಹುದು ಅಥವಾ ರಾತ್ರಿ ಊಟದ ಜತೆಗೂ ಸವಿಯಬಹುದು. ವಿಭಿನ್ನ ರುಚಿ ನೀಡುವ ಮೆಕ್ಕೆ ಜೋಳದ ರೊಟ್ಟಿ ರೆಸಿಪಿ ತಯಾರಿಸುವ ವಿಧಾನ ಇಲ್ಲಿದೆ.
ಮೆಕ್ಕೆಜೋಳದ ರೊಟ್ಟಿ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು- 2 ಕಪ್, ಕತ್ತರಿಸಿದ ಬೆಳ್ಳುಳ್ಳಿ ಹಸಿರು ಎಲೆಗಳು- 1 ಕಪ್, ನುಣ್ಣಗೆ ಕತ್ತರಿಸಿದ ಮೆಂತ್ಯ ಎಲೆಗಳು- 1/2 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ನೀರು- ಬೇಕಾದಷ್ಟು, ಪುಡಿಮಾಡಿದ ಕೆಂಪು ಮೆಣಸಿನಕಾಯಿ- 1 ಟೀ ಚಮಚ, ಕಸೂರಿ ಮೆಂತ್ಯ- 1 ಟೀ ಚಮಚ, ದೇಸಿ ತುಪ್ಪ- 1 ಟೀ ಚಮಚ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ- 2 ಟೀ ಚಮಚ.
ರೊಟ್ಟಿ ತಯಾರಿಸುವ ಪಾಕವಿಧಾನ: ಮೊದಲನೆಯದಾಗಿ, ಬಾಣಲೆಗೆ ಒಂದು ಟೀ ಚಮಚ ದೇಸಿ ತುಪ್ಪವನ್ನು ಸೇರಿಸಿ ಬಿಸಿ ಮಾಡಿ.
- ತುಪ್ಪ ಬಿಸಿಯಾದಾಗ, ಹಸಿರು ಬೆಳ್ಳುಳ್ಳಿ ಎಲೆಗಳನ್ನು ನುಣ್ಣಗೆ ಕತ್ತರಿಸಿ ಹಾಕಿ.
- ಮೆಂತ್ಯ ಎಲೆಗಳನ್ನು ನುಣ್ಣಗೆ ಕತ್ತರಿಸಿ ಮಿಶ್ರಣ ಮಾಡಿ.
- ಈಗ ಎರಡೂ ಎಲೆಗಳನ್ನು ಸಣ್ಣ ಉರಿಯಲ್ಲಿ ಮೃದುವಾಗುವವರೆಗೆ ಹುರಿಯಿರಿ. ನಂತರ ಒಂದು ಚಮಚ ಜಜ್ಜಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ.
- ಮೆಂತ್ಯ ಎಲೆಗಳು ಮತ್ತು ನುಣ್ಣಗೆ ಕತ್ತರಿಸಿದ ಕೊತ್ತಂಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
- ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ ಬಿಸಿ ನೀರಿಗೆ ಜೋಳದ ಹಿಟ್ಟನ್ನು ಸೇರಿಸಿ.
- ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟೌವ್ ಆಫ್ ಮಾಡಿ.
- ಹಿಟ್ಟನ್ನು ಸ್ವಲ್ಪ ತಣ್ಣಗಾದ ನಂತರ ನಿಮ್ಮ ಕೈಗಳ ಸಹಾಯದಿಂದ ಚೆನ್ನಾಗಿ ನಾದಿ.
- ಈಗ ಹಿಸುಕಿದ ಹಿಟ್ಟನ್ನು ತ್ವರಿತವಾಗಿ ರೊಟ್ಟಿ ಮಾಡಿ, ಅದನ್ನು ಬಾಣಲೆಯಲ್ಲಿ ಬೇಯಿಸಿ. ಬಾಣಲೆಯಲ್ಲಿ ರೊಟ್ಟಿಯನ್ನು ಬೇಯಿಸುವುದರ ಜೊತೆಗೆ, ತುಪ್ಪವನ್ನು ಹಾಕಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಜೋಳದ ರೊಟ್ಟಿ ಸಿದ್ಧವಾಗಿದೆ. ಇದನ್ನು ಚಟ್ನಿ, ಮೊಸರಿನೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
ವಿಭಾಗ