logo
ಕನ್ನಡ ಸುದ್ದಿ  /  ಜೀವನಶೈಲಿ  /  ಕೂದಲ ಪೋಷಣೆಯಿಂದ ಹಿಡಿದು ಬೆಳವಣಿಗೆಯವರೆಗೆ: ಸುಂದರ ಕೇಶರಾಶಿ ಪಡೆಯಲು ಸಹಕಾರಿ ಈ 7 ನೈಸರ್ಗಿಕ ತೈಲಗಳು

ಕೂದಲ ಪೋಷಣೆಯಿಂದ ಹಿಡಿದು ಬೆಳವಣಿಗೆಯವರೆಗೆ: ಸುಂದರ ಕೇಶರಾಶಿ ಪಡೆಯಲು ಸಹಕಾರಿ ಈ 7 ನೈಸರ್ಗಿಕ ತೈಲಗಳು

Priyanka Gowda HT Kannada

Oct 13, 2024 01:32 PM IST

google News

ಕೂದಲ ಪೋಷಣೆಯಿಂದ ಹಿಡಿದು ಬೆಳವಣಿಗೆಯವರೆಗೆ: ಈ ಏಳು ನೈಸರ್ಗಿಕ ತೈಲಗಳು ನಿಮಗೆ ನೀಡುತ್ತೆ ಅದ್ಭುತ ಕೇಶರಾಶಿ

    • ಕೂದಲಿನ ಆರೈಕೆಯಲ್ಲಿ ಹಲವು ಅಂಶಗಳು ಅಡಕವಾಗಿವೆ. ಉತ್ತಮ ಶ್ಯಾಂಪೂ, ಕಂಡೀಷನರ್‌ ಜೊತೆಗೆ ನಿಯಮಿತವಾಗಿ ಎಣ್ಣೆ ಹಚ್ಚುವುದು ಅವಶ್ಯಕವಾಗಿದೆ. ಕೂದಲಿಗೆ ಎಣ್ಣೆ ಹಚ್ಚಿ ಮಸ್ಸಾಜ್ ಮಾಡುವುದರಿಂದ ಕೂದಲಿಗೆ ಪೋಷಣೆ ದೊರೆತು ಬೆಳವಣಿಗೆ ವೇಗವಾಗುತ್ತದೆ. ಇದಕ್ಕೆ ಸಹಾಯ ಮಾಡುವ ಏಳು ಅದ್ಭುತ ಕೇಶತೈಲಗಳು ಇಲ್ಲಿವೆ.
ಕೂದಲ ಪೋಷಣೆಯಿಂದ ಹಿಡಿದು ಬೆಳವಣಿಗೆಯವರೆಗೆ: ಈ ಏಳು ನೈಸರ್ಗಿಕ ತೈಲಗಳು ನಿಮಗೆ ನೀಡುತ್ತೆ ಅದ್ಭುತ ಕೇಶರಾಶಿ
ಕೂದಲ ಪೋಷಣೆಯಿಂದ ಹಿಡಿದು ಬೆಳವಣಿಗೆಯವರೆಗೆ: ಈ ಏಳು ನೈಸರ್ಗಿಕ ತೈಲಗಳು ನಿಮಗೆ ನೀಡುತ್ತೆ ಅದ್ಭುತ ಕೇಶರಾಶಿ (PC: Freepik)

ಸುಂದರವಾದ ಹೊಳಪಿನ ಕೇಶರಾಶಿ ಎಲ್ಲರ ಮನವನ್ನು ಸೆಳೆಯುತ್ತದೆ. ಅಂಥವರನ್ನು ನೋಡಿದಾಗ ನಮಗೂ ಆ ರೀತಿಯ ದಟ್ಟ ಸೊಂಪಾದ ಕೂದಲು ಇರಬಾರದೇ ಎಂಬ ಆಸೆ ಬರದೇ ಇರುವುದಿಲ್ಲ. ಅದಕ್ಕಾಗಿ ಏನೇನೋ ಪ್ರಯತ್ನಗಳನ್ನು ಮಾಡುವವರಿದ್ದಾರೆ. ಕೂದಲಿಗೆ ಶ್ಯಾಂಪೂ, ಕಂಡೀಷನರ್‌ ಮುಂತಾದವುಗಳನ್ನು ಬಳಸುವವರಿದ್ದಾರೆ. ಆದರೆ ಕೂದಲು ಗಟ್ಟಿಮುಟ್ಟಾಗಿ ಬೆಳೆಯಲು, ಹೊಳಪು ಪಡೆಯಲು ಅದಕ್ಕೆ ಸರಿಪ್ರಮಾಣದ ಪೋಷಕಾಂಶಗಳ ಅಗತ್ಯವಿರುತ್ತದೆ. ದೇಹದ ಇತರ ಭಾಗಗಳಿಗೆ ಹೇಗೆ ಪೋಷಕಾಂಶಗಳು ಅಗತ್ಯವಾಗಿರುತ್ತದೆಯೋ ಅದೇ ರೀತಿ ಕೂದಲಿಗೂ ಬೇಕು. ಕೂದಲಿಗೆ ಆಹಾರದಿಂದ ಸಿಗುವ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಕೇಶತೈಲಗಳನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಅಧಿಕವಾಗುತ್ತದೆ. ಕೂದಲಿಗೆ ಅದ್ಭುತವೆನಿಸುವ ತೈಲಗಳು ಇಲ್ಲಿವೆ.

ಬಾದಾಮಿ ಎಣ್ಣೆ: ಬಾದಾಮಿಯಲ್ಲಿರುವ ವಿಟಮಿನ್, ಪ್ರೋಟೀನ್ ಮತ್ತು ಟೊಕೊಫೆರಾಲ್ಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಅದ್ಭುತವಾಗಿದೆ. ಬಾದಾಮಿ ಎಣ್ಣೆಯು ತೆಳುವಾಗಿರುವುದರಿಂದ ನೆತ್ತಿಯಲ್ಲಿರುವ ಕೋಶಗಳು ಸುಲಭವಾಗಿ ಹೀರಿಕೊಳ್ಳುತ್ತದೆ. ಇದರಿಂದ ಕೂದಲ ಬೆಳವಣಿಗೆ ವೇಗವಾಗುತ್ತದೆ.

ಹರಳೆಣ್ಣೆ: ನೆತ್ತಿಯ ಆರೈಕೆ ಮಾಡಲು ಹರಳೆಣ್ಣೆ ಬಹಳ ಉತ್ತಮವಾಗಿದೆ.ಇದರಲ್ಲಿರುವ ಪ್ರೋಟೀನ್, ಖನಿಜ ಮತ್ತು ವಿಟಮಿನ್ ಇ ಕೂದಲಿಗೆ ಹೆಚ್ಚಿನ ಪೋಷಣೆ ನೀಡುತ್ತದೆ. ಹರಳೆಣ್ಣೆಯಲ್ಲಿರುವ ರಿಸಿನೊಲಿಕ್‌ ಆಸಿಡ್‌, ನೆತ್ತಿಯ ಕಿರಿಕಿರಿಯನ್ನು ತಪ್ಪಿಸುತ್ತದೆ.

ತೆಂಗಿನಎಣ್ಣೆ: ಕೂದಲು ದಪ್ಪವಾಗಿ ಬೆಳೆಯಲು ತೆಂಗಿನ ಎಣ್ಣೆ ಬಹಳ ಪ್ರಯೋಜನವಾಗಿದೆ. ಏಕೆಂದರೆ ಇದರಲ್ಲಿರುವ ಫ್ಯಾಟಿ ಆಸಿಡ‌್ಗಳು, ವಿಟಮಿನ್ಸ್‌, ಮಿನರಲ್ಸ್‌ ಮತ್ತು ಕಾರ್ಬೋಹೈಡ್ರೇಟ್‌ಗಳು ಕೂದಲಿಗೆ ಬಹಳ ಲಾಭ ತಂದುಕೊಡುತ್ತವೆ. ಇದು ಕೇವಲ ಕೂದಲನ್ನು ತೇವಾಂಶದಿಂದ ಮಾತ್ರ ಕೂಡಿರುವಂತೆ ನೋಡಿಕೊಳ್ಳುವುದಿಲ್ಲ ಬದಲಿಗೆ ನೆತ್ತಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ.

ಗ್ರೇಪ್‌ಸೀಡ್‌ ಎಣ್ಣೆ: ಗ್ರೇಪ್ಸ್ ಬೀಜದಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಈ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅಷ್ಟೇ ಅಲ್ಲದೇ ಕೂದಲಿನ ಪೋಷಣೆಗೆ ಬೇಕಾದ ಇತರ ಅವಶ್ಯಕ ವಸ್ತುಗಳು ಇದರಲ್ಲಿವೆ. ಈ ಎಣ್ಣೆಯನ್ನು ನೆತ್ತಿ ಮತ್ತು ಕೂದಲಿಗೆ ಕಂಡೀಷನರ್‌ನಂತೆ ಬಳಸಬಹುದಾಗಿದೆ.

ಆಲಿವ್‌ ಎಣ್ಣೆ: ಈ ಎಣ್ಣೆಯಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ನಿಂದ ಇದು ನೈಸರ್ಗಿಕವಾಗಿಯೇ ಕೂದಲಿಗೆ ಪೋಷಣೆ ನೀಡುತ್ತದೆ. ಇದರಲ್ಲಿರುವ ಆಲಿಕ್‌ ಆಸಿಡ್‌ ಮತ್ತು ವಿಟಮಿನ್‌ ಇ ಗಳು ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.

ಪೆಪ್ಪರ್‌ಮಿಂಟ್‌ ಎಣ್ಣೆ: ಕೂದಲು ಬೆಳವಣಿಗೆಯ ಹಂತದಲ್ಲಿದ್ದರೆ ಅದಕ್ಕೆ ಈ ಎಣ್ಣೆ ಅತ್ಯುತ್ತಮವಾಗಿದೆ. ಇದು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುವುದರ ಮೂಲಕ ಕೂದಲಿನ ಕಿರುಚೀಲಗಳನ್ನು ಬಲಡಿಸುತ್ತದೆ. ಇದರಿಂದ ಕೂದಲು ದಟ್ಟವಾಗಿ ಬೆಳೆಯತೊಡಗುತ್ತದೆ.

ರೋಸ್ಮರಿ ಎಣ್ಣೆ: ಈ ಎಣ್ಣೆ ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದರ ಮೂಲಕ ಕೂದಲಿನ ಬೆಳವಣಿಗೆಯಲ್ಲಿ ಮ್ಯಾಜಿಕ್‌ ಅನ್ನೇ ಮಾಡುತ್ತದೆ. ರೋಸ್ಮರಿ ಎಣ್ಣೆಯು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ಕೂದಲು ಉದುರುವಿಕೆ ಹಾಗೂ ಹೊಟ್ಟನ್ನು ಸಮರ್ಪಕವಾಗಿ ನಿಭಾಯಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ