Hair Care: ತಲೆಗೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಪ್ರಯೋಜನಕಾರಿ: ಇದನ್ನು ತಯಾರಿಸುವುದು, ಅನ್ವಯಿಸುವುದು ಹೇಗೆ-hair care onion juice for hair growth how to make onion juice for hair growth onion juice to regrow hair prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ತಲೆಗೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಪ್ರಯೋಜನಕಾರಿ: ಇದನ್ನು ತಯಾರಿಸುವುದು, ಅನ್ವಯಿಸುವುದು ಹೇಗೆ

Hair Care: ತಲೆಗೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಪ್ರಯೋಜನಕಾರಿ: ಇದನ್ನು ತಯಾರಿಸುವುದು, ಅನ್ವಯಿಸುವುದು ಹೇಗೆ

ಈರುಳ್ಳಿ ರಸವು ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ಇದು ತಲೆಹೊಟ್ಟು ಕಡಿಮೆ ಮಾಡುವಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತಲೆಗೂದಲ ಆರೈಕೆಗೆ ಈರುಳ್ಳಿ ರಸವು ಬಹಳ ಪ್ರಯೋಜನಕಾರಿಯಾಗಿದೆ.

ತಲೆಗೂದಲ ಆರೈಕೆಗೆ ಈರುಳ್ಳಿ ರಸವು ಬಹಳ ಪ್ರಯೋಜನಕಾರಿಯಾಗಿದೆ.
ತಲೆಗೂದಲ ಆರೈಕೆಗೆ ಈರುಳ್ಳಿ ರಸವು ಬಹಳ ಪ್ರಯೋಜನಕಾರಿಯಾಗಿದೆ.

ಈರುಳ್ಳಿಯು ದೇಹದ ಆರೋಗ್ಯಕ್ಕೆ ಮಾತ್ರವಲ್ಲ ತಲೆಗೂದಲಿನ ಆರೈಕೆಗೂ ಬಹಳ ಉತ್ತಮವಾಗಿದೆ. ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ರಕ್ತಪರಿಚಲನೆಯನ್ನು ಸುಧಾರಿಸಲು ಈರುಳ್ಳಿ ರಸವು ಪ್ರಯೋಜನಕಾರಿಯಾಗಿದೆ. ಈರುಳ್ಳಿ ರಸವು ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ಇದು ತಲೆಹೊಟ್ಟು ಕಡಿಮೆ ಮಾಡುವಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತಲೆಗೂದಲ ಆರೈಕೆಗೆ ಈರುಳ್ಳಿ ರಸವು ಬಹಳ ಪ್ರಯೋಜನಕಾರಿಯಾಗಿದೆ.

ಈರುಳ್ಳಿ ರಸವನ್ನು ಹೀಗೆ ತಯಾರಿಸಿ

ಎರಡರಿಂದ ಮೂರು ಈರುಳ್ಳಿಯನ್ನು ತೆಗೆದುಕೊಳ್ಳಿ. ಇದನ್ನು ಸಣ್ಣಗೆ ಕತ್ತರಿಸಿ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಅದನ್ನು ಶುದ್ಧವಾದ ಕಾಟನ್ ಬಟ್ಟೆಯಲ್ಲಿ ಸೋಸಿ. ಅದನ್ನು ಶುದ್ಧವಾದ, ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ. ಇದರಿಂದ ಈರುಳ್ಳಿ ರಸ ಒಂದು ವಾರದ ಕಾಲ ಕೆಡದಂತೆ ಇಡಬಹುದು. ಒಂದು ವೇಳೆ ವಾಸನೆ ಹೊಂದಿದ್ದರೆ ಅದನ್ನು ಉಪಯೋಗಿಸಬೇಡಿ.

ಹೆಚ್ಚಿನ ಸಲ್ಫೇಟ್ ಅಂಶವಿರುವ ಕೆಂಪು ಈರುಳ್ಳಿಯ ಬಳಕೆಯನ್ನು ಮಾಡುವುದು ತುಂಬಾ ಪ್ರಯೋಜನಕಾರಿ. ಆದರೆ, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಸಹ ಬಳಸಬಹುದು.

ತಲೆಗೂದಲಿಗೆ ಈರುಳ್ಳಿ ರಸವನ್ನು ಈ ರೀತಿ ಹಚ್ಚಿರಿ

ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡಿ: ಸಂಪೂರ್ಣ ತಲೆಗೆ ಈರುಳ್ಳಿ ರಸವನ್ನು ಹಚ್ಚುವ ಮುನ್ನ, ಪ್ಯಾಚ್ ಪರೀಕ್ಷೆಗಾಗಿ ಸ್ವಲ್ಪ ಈರುಳ್ಳಿ ರಸವನ್ನು ಹಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಯಾವುದೇ ಅಲರ್ಜಿ ಸಮಸ್ಯೆ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ರೀತಿ ಮಾಡಿ.

ಈರುಳ್ಳಿ ರಸವನ್ನು ಅನ್ವಯಿಸಿ: ಬ್ರಷ್ ಅಥವಾ ಹತ್ತಿ ಉಂಡೆಯನ್ನು ಬಳಸಿ, ಈರುಳ್ಳಿ ರಸವನ್ನು ನೇರವಾಗಿ ನಿಮ್ಮ ನೆತ್ತಿಗೆ ಅನ್ವಯಿಸಿ. ಈರುಳ್ಳಿ ರಸವನ್ನು ಹಚ್ಚುತ್ತಾ ನೆತ್ತಿಗೆ ನಿಧಾನವಾಗಿ ಬೆರಳ ತುದಿಯಿಂದ ಮಸಾಜ್ ಮಾಡಿ. ತಲೆಗೂದಲನ್ನು ವಿಂಗಡಿಸುತ್ತಾ ರಸವನ್ನು ಅನ್ವಯಿಸಿ.

ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ: ಈರುಳ್ಳಿ ರಸವನ್ನು ಹಚ್ಚಿದ ನಂತರ ಒಂದು ಗಂಟೆ ಕಾಲ ಹಾಗೆಯೇ ಬಿಡಿ. ಜುಮ್ಮೆನ್ನಿಸುವಿಕೆಯ ಅನುಭವವಾಗಬಹುದು. ಆದರೆ, ಇದರಿಂದ ಏನೂ ತೊಂದರೆಯಾಗುವುದಿಲ್ಲ. ಆದರೆ, ಕಿರಿಕಿರಿ ಅನುಭವಿಸಿದರೆ ತಕ್ಷಣ ತೊಳೆಯಿರಿ.

ಉಗುರು ಬೆಚ್ಚಗಿನಿ ನೀರಿನಿಂದ ತೊಳೆಯಿರಿ: ಈರುಳ್ಳಿ ರಸವನ್ನು ತಲೆಗೆ ಹಚ್ಚಿದ 1 ಗಂಟೆಯ ನಂತರ, ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈರುಳ್ಳಿಯ ವಾಸನೆ ಹೋಗಲಾಡಿಸಲು ಶ್ಯಾಂಪೂವಿನಿಂದ ತಲೆಗೂದಲನ್ನು ತೊಳೆಯಬಹುದು. ಈರುಳ್ಳಿ ರಸವನ್ನು ವಾರಕ್ಕೆ 2 ರಿಂದ 3 ಬಾರಿ ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ.

ಪರಿಗಣಿಸಬೇಕಾದ ಮುನ್ನೆಚ್ಚರಿಕೆಗಳು

ಕಣ್ಣುಗಳ ಸಂಪರ್ಕವನ್ನು ತಪ್ಪಿಸಿ: ಈರುಳ್ಳಿ ರಸವು ಕಣ್ಣುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ರಸವು ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಿ.

ಕಿರಿಕಿರಿಯನ್ನು ಗಮನಿಸಿ: ಅತಿಯಾದ ತುರಿಕೆ ಅಥವಾ ಕಿರಿಕಿರಿಯನ್ನು ಅನುಭವಿಸಿದರೆ, ರಸವನ್ನು ತಕ್ಷಣವೇ ತೊಳೆಯಿರಿ. ಈರುಳ್ಳಿ ರಸವನ್ನು ಮತ್ತೆ ಬಳಸಲು ಮುಂದಾಗದಿರಿ.

ಅತಿಯಾಗಿ ಬಳಸಬೇಡಿ: ಈರುಳ್ಳಿ ರಸದ ಅತಿಯಾದ ಬಳಕೆಯು ನೆತ್ತಿಯ ಶುಷ್ಕತೆಗೆ ಕಾರಣವಾಗಬಹುದು. ಮಾಯಿಶ್ಚರೈಸಿಂಗ್ ಕಂಡಿಷನರ್‌ಗಳು ಅಥವಾ ಹೇರ್ ಮಾಸ್ಕ್‌ಗಳನ್ನು ಅಪ್ಲೈ ಮಾಡಿ.

ವೃತ್ತಿಪರರನ್ನು ಸಂಪರ್ಕಿಸಿ: ನೆತ್ತಿಯಲ್ಲಿ ಏನಾದ್ರೂ ಸಮಸ್ಯೆಯನ್ನು ಹೊಂದಿದ್ದರೆ ಅಥವಾ ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುವ ತಾಯಿಯಾಗಿದ್ದರೆ, ಈರುಳ್ಳಿ ರಸವನ್ನು ಬಳಸುವ ಮೊದಲು ಚರ್ಮರೋಗ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಗಾಯದ ಮೇಲೆ ಅನ್ವಯಿಸದಿರಿ: ಏನಾದರೂ ಗಾಯವಾಗಿದ್ದರೆ ಆ ಜಾಗಕ್ಕೆ ಈರುಳ್ಳಿ ರಸವನ್ನು ಅನ್ವಯಿಸಬೇಡಿ. ಇದರಿಂದ ಕಿರಿಕಿರಿ ಹೆಚ್ಚಾಗಿ, ಅಸ್ವಸ್ಥತೆ ಉಂಟಾಗಬಹುದು.

ಸಂಪೂರ್ಣವಾಗಿ ಸ್ವಚ್ಛಗೊಳಿಸಿ: ತಲೆಗೂದಲನ್ನು ತೊಳೆಯುವ ವೇಳೆ ಶ್ಯಾಂಪೂ ಬಳಸಿ 2 ರಿಂದ 3 ಬಾರಿ ಚೆನ್ನಾಗಿ ತೊಳೆಯಿರಿ. ವಾಸನೆಯನ್ನು ಮತ್ತು ಈರುಳ್ಳಿ ರಸದ ಒಂದು ಚೂರನ್ನು ಬಿಡದಂತೆ ತೊಳೆಯಬೇಕು

ಕೂದಲು ಬೆಳವಣಿಗೆಗೆ ಈರುಳ್ಳಿ ರಸದ ಪ್ರಯೋಜನಗಳು

ಸಲ್ಫರ್ ನಿಂದ ಸಮೃದ್ಧ: ಈರುಳ್ಳಿ ರಸದಲ್ಲಿ ಸಲ್ಫರ್ ಅಧಿಕವಾಗಿದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ಈರುಳ್ಳಿ ರಸವು ನೆತ್ತಿಯ ಸೋಂಕು ಮತ್ತು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುವ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಈರುಳ್ಳಿ ರಸವನ್ನು ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲು ತೆಳುವಾಗುವುದನ್ನು ಕಡಿಮೆ ಮಾಡುತ್ತದೆ: ಈರುಳ್ಳಿ ರಸವನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ತೆಳುವಾಗುವುದು ಮತ್ತು ಒಡೆಯುವುದನ್ನು ಕಡಿಮೆ ಮಾಡುತ್ತದೆ.