logo
ಕನ್ನಡ ಸುದ್ದಿ  /  ಜೀವನಶೈಲಿ  /  Diabetes: ಅತಿಯಾಗಿ ಸಿಹಿ ತಿನ್ನೋದು ಮಾತ್ರ ಮಧುಮೇಹಕ್ಕೆ ಕಾರಣವೇ; ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ; ಏನಿದರ ಹಿಂದಿನ ಸತ್ಯ

Diabetes: ಅತಿಯಾಗಿ ಸಿಹಿ ತಿನ್ನೋದು ಮಾತ್ರ ಮಧುಮೇಹಕ್ಕೆ ಕಾರಣವೇ; ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ; ಏನಿದರ ಹಿಂದಿನ ಸತ್ಯ

Reshma HT Kannada

Oct 28, 2023 10:04 AM IST

google News

ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ

    • Can We Get Diabetes Even if Not Consuming Sugar: ಸಕ್ಕರೆ ಅಥವಾ ಸಿಹಿ ಪದಾರ್ಥ ತಿನ್ನದೇ ಇದ್ರೂ ಶುಗರ್‌ ಬರುತ್ತಾ, ಸಂಪೂರ್ಣವಾಗಿ ಸಿಹಿಯಂಶದಿಂದ ದೂರ ಉಳಿಯುವುದರಿಂದ ಸಕ್ಕರೆ ಕಾಯಿಲೆ ಬರೋದೇ ಇಲ್ವಾ ಈ ರೀತಿ ಹಲವು ಗೊಂದಲಗಳು ನಮ್ಮನ್ನ ಕಾಡುವುದು ಸಹಜ. ಈ ಗೊಂದಲಗಳಿಗೆ ಇಲ್ಲಿದೆ ಪರಿಹಾರ
ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ
ಸಕ್ಕರೆ ತಿನ್ನದೇ ಇದ್ರು ಡಯಾಬಿಟಿಸ್‌ ಬರುತ್ತಾ

ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಹಲವರು ಮಧುಮೇಹದಿಂದ ಬಳಸುತ್ತಿದ್ದಾರೆ. ಭಾರತವೊಂದರಲ್ಲೇ ಸುಮಾರು 70 ಮಿಲಿಯನ್‌ನಷ್ಟು ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲದೆ ಭಾರತವು ವಿಶ್ವದ ಡಯಾಬಿಟಿಕ್‌ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಅತಿಯಾಗಿ ಸಿಹಿ ತಿನ್ನುವುದರಿಂದ ಮಾತ್ರ ಸಕ್ಕರೆ ಕಾಯಿಲೆ ಬರುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ ಇದು ಸುಳ್ಳು ಗ್ರಹಿಕೆ. ಸಂಸ್ಕೃರಿಸಿದ ಆಹಾರಗಳು, ತಂಪು ಪಾನೀಯ ಮತ್ತು ಮಿಠಾಯಿಗಳಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದು ನೇರವಾಗಿ ಮಧುಮೇಹವಾಗಿ ಅಪಾಯವನ್ನು ಹೆಚ್ಚಿಸುವುದಿಲ್ಲ. ಈ ಎಲ್ಲಾ ಪದಾರ್ಥಗಳು ದೇಹದಲ್ಲಿ ಬೊಜ್ಜಿನಾಂಶ ಹೆಚ್ಚುವಂತೆ ಮಾಡುತ್ತದೆ. ಇದು ಮಧುಮೇಹಕ್ಕೆ ಕಾರಣವಾಗಬಹುದು. ಇದಲ್ಲದೇ ಅತಿಯಾದ ಸಕ್ಕರೆ ಸೇವಿಸದೇ ಇರುವುದರಿಂದಲೂ ಕೂಎ ಮಧುಮೇಹ ಬರಲು ಸಾಧ್ಯ. ಮಧುಮೇಹ ಮತ್ತು ಸಕ್ಕರೆ ಸೇವನೆಯ ಸಂಬಂಧದ ಬಗ್ಗೆ ತಿಳಿದುಕೊಳ್ಳಬೇಕಾದ 5 ಪ್ರಮುಖ ವಿಷಯಗಳು ಇಲ್ಲಿವೆ.

ಸಿಹಿ ತಿನ್ನದೇ ಇರುವವರಲ್ಲೂ ಮಧುಮೇಹ ಬರಬಹುದೇ?

ಟೈಪ್‌ 1 ಡಯಾಬಿಟಿಸ್‌: ಟೈಪ್‌ 1 ಮಧುಮೇಹವು ಸ್ವಯಂ ನಿರೋಧಕ ಸ್ಥಿತಿಯಾಗಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್‌ ಉತ್ಪಾದಿಸುವ ಕೋಶಗಳನ್ನು ಆಕ್ರಮಿಸುತ್ತದೆ ಹಾಗೂ ಅವುಗಳನ್ನು ನಾಶಪಡಿಸುತ್ತದೆ. ಹೀಗೆ ಈ ಮಧುಮೇಹವು ಸಕ್ಕರೆ ಸೇವನೆಗೆ ಸಂಬಂಧಿಸಿಲ್ಲ. ಇದು ಬಾಲ್ಯ ಅಥವಾ ಹದಿಹರೆಯದ ಅವಧಿಯಲ್ಲಿ ಬೆಳವಣಿಗೆಯಾಗುತ್ತದೆ.

ಜೆನೆಟಿಕ್ಸ್‌: ಜೆನೆಟಿಕ್ಸ್‌ ಅಥವಾ ಅನುವಂಶೀಯತೆಯು ಮಧುಮೇಹಕ್ಕೆ ಕಾರಣವಾಗಬಹುದು. ಅನುವಂಶೀಯತೆಯು ಮಧುಮೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮನೆಯಲ್ಲಿ ಅಥವಾ ಹಿರಿಯರಿಗೆ ಈ ಸಮಸ್ಯೆ ಇದ್ದರೆ ಅಂದರೆ ಮಧುಮೇಹದ ಕುಟುಂಬ ಇತಿಹಾಸ ಹೊಂದಿದ್ದರೆ, ಸಕ್ಕರೆ ಸೇವನೆಗೆ ಮಧುಮೇಹ ಸಂಬಂಧಿವಿರುವುದಿಲ್ಲ. ಅಲ್ಲದೆ ನೀವು ಸಕ್ಕರೆ ಸೇವಿಸದೇ ಇದ್ದರೂ ಕೂಡ ಮಧುಮೇಹ ಕಾಣಿಸಬಹುದು.

ಟೈಪ್‌ 2 ಡಯಾಬಿಟಿಸ್‌: ಹೆಚ್ಚು ಸಿಹಿಯಂಶ ಸೇವನೆಯು ಟೈಪ್‌ 2 ಡಯಾಬಿಟಿಸ್‌ ಬೆಳವಣಿಗೆಗೆ ಕೊಡುಗೆ ನೀಡಬಹುದು. ಆದರೆ ಸಕ್ಕರೆ ತಿನ್ನದೊಂದೆ ಇದಕ್ಕೆ ಕಾರಣವಲ್ಲ. ಗುಣಮಟ್ಟವಲ್ಲದ ಆಹಾರ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಬೊಜ್ಜು ಇಂತಹ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಅನುವಂಶೀಯತೆ ಕೂಡ ಟೈಪ್‌ 2 ಡಯಾಬಿಟಿಸ್‌ ಹೆಚ್ಚಲು ಕಾರಣವಾಗುತ್ತದೆ.

ಸಂಕೀರ್ಣ ಸಂಬಂಧ: ಸಕ್ಕರೆ ಸೇವನೆ ಮತ್ತು ಮಧುಮೇಹದ ನಡುವಿನ ಸಂಬಂಧವು ಸಂಕೀರ್ಣವಾಗಿದೆ. ಅಧಿಕ ಸಕ್ಕರೆಯಂಶ ಹೊಂದಿರುವ ಆಹಾರ ಪದಾರ್ಥಗಳು ಬೊಜ್ಜು ಮತ್ತು ಇನ್ಸುಲಿನ್‌ ಪ್ರತಿರೋಧಕ್ಕೆ ಕಾರಣವಾಗಬಹುದು. ಇದು ಟೈಪ್‌ 2 ಮಧುಮೇಹಕ್ಕೆ ಅಪಾಯಕಾರಿ ಅಂಶಗಳಾಗಿವೆ. ಅದಾಗ್ಯೂ, ಕೆಲವೊಮ್ಮೆ ಹೆಚ್ಚು ಸಿಹಿ ತಿನ್ನುವ ಎಲ್ಲರಲ್ಲೂ ಮಧುಮೇಹ ಕಾಣಿಸಬೇಕು ಎಂದೇನಿಲ್ಲ. ಹಲವು ಮಧುಮೇಹಿಗಳಲ್ಲಿ ಸಕ್ಕರೆ ಅಥವಾ ಸಿಹಿ ಅಂಶ ತಿನ್ನುವ ಅಭ್ಯಾಸ ಕಡಿಮೆ ಇರುತ್ತದೆ. ಆದರೂ ಅವರಲ್ಲಿ ಮಧುಮೇಹ ಕಾಣಿಸಿರುತ್ತದೆ.

ಸಮತೋಲನ: ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ತೂಕ ನಿರ್ವಹಣೆ ಇದರ ಭಾಗವಾಗಿರುತ್ತದೆ. ಸಿಹಿ ತಿನ್ನುವ ಬಗ್ಗೆ ಗಮನ ಹರಿಸಬೇಕು. ಅದರಲ್ಲೂ ವಿಶೇಷವಾಗಿ ಸಂಸ್ಕರಿಸಿದ ಆಹಾರಗಳು ಮತ್ತು ತಂಪುಪಾನೀಯಗಳ ಸೇವನೆಯ ವಿಚಾರ ವಿಚಾರದಲ್ಲಿ ನಾವು ಎಚ್ಚರ ವಹಿಸಬೇಕು. ಆ ಮೂಲಕ ಮಧುಮೇಹ ತಡೆಗೆ ಪ್ರಯತ್ನಿಸಬಹುದು.

ಅತಿಯಾದ ಸಕ್ಕರೆ ಸೇವನೆಯು ಮಧುಮೇಹ ಹೆಚ್ಚಲು ಕಾರಣವಾಗಬಹುದು. ಆದರೆ ಇದೊಂದೇ ಕಾರಣ ಖಂಡಿತ ಅಲ್ಲ. ಜೀವನಶೈಲಿ ಹಾಗೂ ತಮ್ಮ ಒಟ್ಟಾರೆ ಆರೋಗ್ಯ ಸೇರಿದಂತೆ ಹಲವು ಅಂಶಗಳು ಮಧುಮೇಹ ಉಂಟಾಗಲು ಕಾರಣವಾಗುತ್ತದೆ. ಸಿಹಿ ತಿನ್ನುವುದು ಕಡಿಮೆ ಮಾಡದೇ ಮಧುಮೇಹದ ಅಪಾಯದಿಂದ ದೂರ ಇರಬೇಕು ಎಂದರೆ ಸಮತೋಲಿತ ಆಹಾರ ಸೇವನೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೇಲೆ ಗಮನ ಹರಿಸಬೇಕು. ಒಟ್ಟಾರೆ ಜೀವನಶೈಲಿಯ ಸುಧಾರಣೆಯೇ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ