ದೇಹದ ತೂಕ ಇಳಿಕೆಗೆ ನೆರವು ನೀಡುತ್ತೆ ಕಾಲಿಫ್ಲವರ್; ಹೂಕೋಸು ಪಲ್ಯನಾದ್ರೂ ತಿನ್ನಿ, ಗ್ರೇವಿಯಾದ್ರೂ ಮಾಡಿ, ದಪ್ಪ ಆಗೋ ಚಿಂತೆಯಿಲ್ಲ!
Nov 12, 2024 07:34 PM IST
ದೇಹದ ತೂಕ ಇಳಿಕೆಗೆ ನೆರವು ನೀಡುತ್ತೆ ಕಾಲಿಫ್ಲವರ್
- Cauliflower Good for Weight Loss: ದೇಹದ ತೂಕ ಇಳಿಕೆಗೆ ನೆರವು ನೀಡುವ ಹೂಕೋಸು: ತರಕಾರಿಗಳಲ್ಲಿ ಕೆಲವರಿಗೆ ಹೂಕೋಸು ತುಂಬಾ ಇಷ್ಟವಾಗಿರಬಹುದು. ಗರಿಗರಿ ಪಲ್ಯ ಮಾಡಿ ತಿಂದ್ರೆ ಮಜಾ ಎನಿಸಬಹುದು. ದೇಹದ ತೂಕ ಇಳಿಕೆಗೂ ಈ ಹೂಕೋಸು ನೆರವಾಗುತ್ತದೆ ಎನ್ನುವುದು ನಿಮಗೆ ತಿಳಿದಿರುವುದೇ. ಬನ್ನಿ ಈ ಕುರಿತು ಹೆಚ್ಚಿನ ವಿವರ ತಿಳಿಯೋಣ.
Cauliflower Good for Weight Loss: ತರಕಾರಿಗಳಲ್ಲಿ ಕೆಲವರಿಗೆ ಹೂಕೋಸು ತುಂಬಾ ಇಷ್ಟವಾಗಿರಬಹುದು. ಗರಿಗರಿ ಪಲ್ಯ ಮಾಡಿ ತಿಂದ್ರೆ ಮಜಾ ಎನಿಸಬಹುದು. ದೇಹದ ತೂಕ ಇಳಿಕೆಗೂ ಈ ಹೂಕೋಸು ನೆರವಾಗುತ್ತದೆ ಎನ್ನುವುದು ನಿಮಗೆ ತಿಳಿದಿರುವುದೇ. ಕೆಲವು ಆಹಾರಗಳು ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುತ್ತವೆ. ಜತೆಗೆ, ಪೌಷ್ಟಿಕಾಂಶಗಳೂ ಸಮೃದ್ಧವಾಗಿರುತ್ತವೆ. ಹೂಕೋಸು ಕೂಡ ಇದೇ ರೀತಿಯ ಒಂದು ಆಹಾರ. ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಅಂಶದೊಂದಿಗೆ ಇದು ತೂಕ ಇಳಿಕೆಗೂ ನೆರವಾಗುತ್ತದೆ.
ಹೂಕೋಸು ಹೇಗೆ ತೂಕ ಇಳಿಸಲು ನೆರವಾಗುತ್ತದೆ?
1. ಕಡಿಮೆ ಕ್ಯಾಲೋರಿ
ಹೂಕೋಸಿನಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಇರುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶ ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಕೆಯಾಗುತ್ತದೆ.
2. ನಾರಿನಂಶ ಅಧಿಕ
ಕಾಲಿಫ್ಲವರ್‌ನಲ್ಲಿ ಫೈಬರ್ ಯಥೇಚ್ಛವಾಗಿರುತ್ತವೆ. ಹೂಕೋಸುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಊಟದ ನಡುವೆ ಲಘು ಆಹಾರ ಸೇವನೆ ಕಡಿಮೆ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಹೆಚ್ಚಳ ಮತ್ತು ಕುಸಿತವನ್ನು ತಡೆಯುತ್ತದೆ. ಹಸಿವು ನಿಯಂತ್ರಿಸಲು ಕೂಡ ಸಹಕಾರಿ.
3. ಅಧಿಕ ನೀರಿನಾಂಶ
ಇದರಲ್ಲಿ ನೀರಿನಾಂಶ ಅಧಿಕವಾಗಿದೆ. ಊಟ ತೃಪ್ತಿದಾಯಕವಾಗಿಸುತ್ತದೆ. ಹೆಚ್ಚುವರಿ ಕ್ಯಾಲೋರಿ ಸೇವನೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.
4. ಕಡಿಮೆ ಕಾರ್ಬೋಹೈಡ್ರೇಟ್
ಹೂಕೋಸು ನೈಸರ್ಗಿಕವಾಗಿ ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದೆ. ಅಕ್ಕಿ, ಆಲೂಗಡ್ಡೆ ಮತ್ತು ಪಾಸ್ಟಾದಂತಹ ಹೆಚ್ಚಿನ ಕಾರ್ಬ್ ಆಹಾರಗಳಿಗೆ ಉತ್ತಮ ಪರ್ಯಾಯವಾಗಿದೆ. ಇವುಗಳ ಬದಲು ಹೂಕೋಸು ಆಹಾರ ಹೆಚ್ಚಿಸುವುದರಿಂದ ಒಟ್ಟಾರೆ ಕಾರ್ಬೋಹೈಡ್ರೇಟ್ ಕಡಿಮೆಯಾಗುತ್ತದೆ. ರಕ್ತದಲ್ಲಿ ಸಕ್ಕರೆ ಕಡಿಮೆಯಾಗಿಸಲು ಬಯಸುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
5. ತೃಪ್ತಿ ನೀಡುತ್ತದೆ
ಹಸಿವು ಕಡಿಮೆ ಮಾಡುತ್ತದೆ. ಹೆಚ್ಚು ಕಾಲ ಹೊಟ್ಟೆ ತುಂಬಿದ ಸಂತೃಪ್ತ ಭಾವ ಮೂಡಿಸುತ್ತದೆ. ಹಸಿವು ನಿಯಂತ್ರಿಸಲು ನೆರವಾಗುವುದರಿಂದ ತೂಕ ನಷ್ಟಕ್ಕೆ ನೆರವಾಗುತ್ತದೆ.
6. ದೇಹದ ವಿಷಕಾರಿ ಅಂಶಗಳ ನಿವಾರಣೆಗೆ ಸಹಕಾರಿ
ಹೂಕೋಸು ಗ್ಲುಕೋಸಿನೋಲೇಟ್‌ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಹಾನಿಕಾರಕ ಪದಾರ್ಥಗಳನ್ನು ನಿರ್ವಿಷಗೊಳಿಸಲು ಯಕೃತ್‌ಗೆ ಬೆಂಬಲ ನೀಡುತ್ತದೆ. ಆರೋಗ್ಯಕರ ಪಿತ್ತಜನಕಾಂಗವು ಕೊಬ್ಬನ್ನು ಉತ್ತಮವಾಗಿ ಚಯಾಪಚಯಗೊಳಿಸುತ್ತದೆ. ಇದು ತೂಕ ನಿರ್ವಹಣೆಗೆ ನೆರವು ನೀಡುತ್ತದೆ.
ಇನ್ನುಳಿದಂತೆ ಹೂಕೋಸು ಉತ್ತಮ ಉತ್ಕರ್ಷಣ ನಿರೋಧಕ ಶಕ್ತಿ ಹೊಂದಿದೆ. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ. ಬಿ ಜೀವಸತ್ವ ಹೆಚ್ಚಿದ್ದು, ಚಯಾಪಚಯ ಉತ್ತಮಪಡಿಸುತ್ತದೆ. ಇವೆಲ್ಲವೂ ನಿಮ್ಮ ತೂಕ ಇಳಿಕೆ ಜರ್ನಿಗೆ ನೆರವು ನೀಡುತ್ತದೆ.