logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಮಾನ್ಯ ನಡಿಗೆ, ವೇಗದ ನಡಿಗೆ; ಮಧುಮೇಹ ನಿಯಂತ್ರಣಕ್ಕೆ ಹೇಗೆ ವಾಕ್‌ ಮಾಡಬೇಕು, ಅಧ್ಯಯನ ಏನು ಹೇಳುತ್ತದೆ?

ಸಾಮಾನ್ಯ ನಡಿಗೆ, ವೇಗದ ನಡಿಗೆ; ಮಧುಮೇಹ ನಿಯಂತ್ರಣಕ್ಕೆ ಹೇಗೆ ವಾಕ್‌ ಮಾಡಬೇಕು, ಅಧ್ಯಯನ ಏನು ಹೇಳುತ್ತದೆ?

Rakshitha Sowmya HT Kannada

Nov 25, 2024 01:03 PM IST

google News

ಮಧುಮೇಹ ನಿಯಂತ್ರಣ ಮಾಡುವಲ್ಲಿ ವೇಗದ ನಡಿಗೆ ಸಹಾಯ ಮಾಡುತ್ತದೆ, ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ.

  • Health Tips: ಮಧುಮೇಹ ಇರುವವರು ದೈಹಿಕ ಚಟುವಟಿಕೆ ಮೂಲಕ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸಲು ಬಯಸಿದ್ದರೆ ಸಾಮಾನ್ಯ ನಡಿಗೆಗಿಂತ ವೇಗದ ನಡಿಗೆ ಬಹಳ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. 

ಮಧುಮೇಹ ನಿಯಂತ್ರಣ ಮಾಡುವಲ್ಲಿ ವೇಗದ ನಡಿಗೆ ಸಹಾಯ ಮಾಡುತ್ತದೆ, ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ.
ಮಧುಮೇಹ ನಿಯಂತ್ರಣ ಮಾಡುವಲ್ಲಿ ವೇಗದ ನಡಿಗೆ ಸಹಾಯ ಮಾಡುತ್ತದೆ, ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. (PC: Freepik)

Health Tips: ಪ್ರತಿದಿನ ವಾಕಿಂಗ್‌ ಮಾಡುವುದು ಎಲ್ಲರಿಗೂ ಅತ್ಯವಶ್ಯಕ. ನಡಿಗೆಯಿಂದಲೇ ಬಹುತೇಕ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ. ಅದರಲ್ಲಿ ಮಧುಮೇಹ ಇರುವವರು ಪ್ರತಿದಿನ ಬೆಳಗ್ಗೆ ವಾಕ್‌ ಮಾಡುವುದು ಮಧುಮೇಹವನ್ನು ನಿರ್ವಹಿಸಲು ಅತ್ಯಂತ ಪರಿಣಾಮಕಾರಿಯಾಗಿದೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಪ್ರತಿದಿನ ಏನಿಲ್ಲವೆಂದರೂ 10,000 ಹೆಜ್ಜೆಗಳನ್ನು ನಡೆಯುವುದು ಉತ್ತಮ ಎಂದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಶಿಫಾರಸು ಮಾಡಿದೆ. ಆದರೆ ನಿಮ್ಮ ನಡಿಗೆ ಹೇಗಿರಬೇಕು ಎನ್ನುವುದು ಬಹಳ ಮುಖ್ಯವಾಗಿದೆ.

ಸಾಮಾನ್ಯ ನಡಿಗೆಗಿಂತ ಬಿರುಸಿನ ನಡಿಗೆ ಉತ್ತಮ

ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಚುರುಕು ನಡಿಗೆಯು ನಂತರದ ಜೀವನದಲ್ಲಿ ಟೈಪ್ 2 ಮಧುಮೇಹ ಹೊಂದುವ ಸಾಧ್ಯತೆ 40% ಕಡಿಮೆ ಎಂದು ಹೇಳಿದೆ. ನಿಮ್ಮ ನಡಿಗೆಯ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡರೆ ಸಾಮಾನ್ಯ ನಡಿಗೆ ಹೋಗುವವರಿಗಿಂತ ಮಧುಮೇಹದ ಅಪಾಯ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಗಂಟೆಗೆ 3.2 ರಿಂದ 4.8 ಕಿ.ಮೀ ನಡೆಯುವುದನ್ನು ಸಾಮಾನ್ಯ ನಡಿಗೆ ಹಾಗೂ ಗಂಟೆಗೆ 4.8 ರಿಂದ 6.4 ಕಿಮೀ ನಡೆಯುವುದು ಚುರುಕು ನಡಿಗೆಯಾಗಿದೆ. ಈ ರೀತಿಯ ನಡಿಗೆಯು ಎಷ್ಟೋ ಆರೋಗ್ಯ ಸಮಸ್ಯೆಗಳನ್ನು, ಅದರಲ್ಲೂ ಮಧುಮೇಹದ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ

ಆದ್ದರಿಂದ ಸಾಮಾನ್ಯ ನಡಿಗೆಗಿಂತ ವೇಗದ ನಡಿಗೆ, ಮಧುಮೇಹ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ವೇಗದ ನಡಿಗೆಯ ತೀವ್ರತೆಯು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ಆಮ್ಲಜನಕದ ಬಳಕೆಯನ್ನು ಹೆಚ್ಚಿಸುತ್ತದೆ, ಇದು ಸುಧಾರಿತ ಇನ್ಸುಲಿನ್ ಸಂವೇದನೆ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆಗೆ ಕಾರಣವಾಗುತ್ತದೆ. ಇದು ಮಧುಮೇಹದಿಂದ ಬಳಲುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ, ವೇಗದ ನಡಿಗೆಯಲ್ಲಿನ ಹೆಚ್ಚಿದ ಪ್ರಯತ್ನವು ಹೃದಯರಕ್ತನಾಳದ ಫಿಟ್ನೆಸ್‌ ಹೆಚ್ಚಿಸುತ್ತದೆ ಮತ್ತು ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ.

ತಪ್ಪದೆ ತಜ್ಞರ ಸಲಹೆ ಪಡೆಯಿರಿ

ಡಯಟ್‌ ಮಾತ್ರವಲ್ಲದೆ ದೈಹಿಕ ಚಟುವಟಿಕೆಯ ಮೂಲಕ ಮಧುಮೇಹವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ ಯಾವುದೇ ಹೊಸ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ, ನಿಮ್ಮ ದೇಹಕ್ಕೆ ಏನು ಅಗತ್ಯ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ನಿಮ್ಮ ದೇಹ ವೇಗದ ನಡಿಗೆಗೆ ಸ್ಪಂದಿಸುವುದೇ ಎಂಬುದನ್ನು ಗಮನಿಸಿ. ತಜ್ಞರ ಸಲಹೆ ಇಲ್ಲದೆ ಯಾವುದೇ ಸಾಹಸಕ್ಕೆ ಕೈ ಹಾಕದಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ