Healthy Tips: ನಿಮ್ಮ ಆರೋಗ್ಯದ ಬಗ್ಗೆ ಇನ್ಯಾರೋ ಅಲ್ಲ ನೀವೇ ಕಾಳಜಿವಹಿಸಬೇಕು, ಅದಕ್ಕಾಗಿ ಈ ರೀತಿ ಸೆಲ್ಫ ಕೇರ್ ಮಾಡಿಕೊಳ್ಳಿ-you should take care of your health and not someone else so do this self care smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Tips: ನಿಮ್ಮ ಆರೋಗ್ಯದ ಬಗ್ಗೆ ಇನ್ಯಾರೋ ಅಲ್ಲ ನೀವೇ ಕಾಳಜಿವಹಿಸಬೇಕು, ಅದಕ್ಕಾಗಿ ಈ ರೀತಿ ಸೆಲ್ಫ ಕೇರ್ ಮಾಡಿಕೊಳ್ಳಿ

Healthy Tips: ನಿಮ್ಮ ಆರೋಗ್ಯದ ಬಗ್ಗೆ ಇನ್ಯಾರೋ ಅಲ್ಲ ನೀವೇ ಕಾಳಜಿವಹಿಸಬೇಕು, ಅದಕ್ಕಾಗಿ ಈ ರೀತಿ ಸೆಲ್ಫ ಕೇರ್ ಮಾಡಿಕೊಳ್ಳಿ

Self Care: ನಿಮ್ಮ ಆರೋಗ್ಯದ ಬಗ್ಗೆ ಇನ್ಯಾರೋ ಅಲ್ಲ ನೀವೇ ಕಾಳಜಿವಹಿಸಬೇಕು, ಅದಕ್ಕಾಗಿ ಈ ರೀತಿ ಸೆಲ್ಫ ಕೇರ್ ಮಾಡಿಕೊಳ್ಳಿ. ನೀವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದು. ಹಣ ಸಂಪಾದನೆ ಮಾಡಬಹುದು. ನೀವು ಅಂದುಕೊಂಡ ಹಾಗೆ ಬದುಕಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಇಲ್ಲಿದೆ ಸಲಹೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆಲವು ರೀತಿಯ ಆಹಾರಗಳನ್ನು ಪ್ರತಿದಿನ ಸೇವಿಸಬೇಕು. ನೀವು ಆರೋಗ್ಯವಾಗಿದ್ದರೆ ಮಾತ್ರ ನೀವು ಏನು ಬೇಕಾದರೂ ಮಾಡಬಹುದು. ಒಳ್ಳೆಯ ನಿದ್ದೆ, ಸರಿಯಾದ ಆಹಾರ ಇವು ನಿಮ್ಮನ್ನು ಹೆಚ್ಚು ಕಾಲ ಬದುಕುವಂತೆ ಮಾಡುತ್ತದೆ. ಕೆಲವು ಆಹಾರಗಳನ್ನು ಕಟ್ಟುನಿಟ್ಟಾಗಿ ಸೇವಿಸಬೇಕು. ನಿಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶ ಸಿಗಬೇಕು ಎಂದರೆ ನೀವು ಈ ಎಲ್ಲಾ ಆಹಾರಗಳನ್ನು ಸೇವನೆ ಮಾಡಬೇಕು. ನಿತ್ಯ ಬಳಕೆ ಮಾಡಬೇಕು.

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಸೂಪರ್ ಫುಡ್ ಎಂದು ಹೇಳಬಹುದು. ಇದರಲ್ಲಿ ಅಲಿಸಿನ್ ಅಂಶ ಸಮೃದ್ಧವಾಗಿದೆ. ಇದು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್, ಆಂಟಿಆಕ್ಸಿಡೆಂಟ್ ಗುಣಗಳನ್ನು ಸಹ ಹೊಂದಿದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ನೆಗಡಿ, ಕೆಮ್ಮು, ಜ್ವರ ಮತ್ತು ಗಂಟಲು ನೋವಿನಿಂದ ಪರಿಹಾರ ನೀಡುವ ಗುಣ ಇದೆ.

ಟೊಮೆಟೊ

ಟೊಮೆಟೊ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಲೈಕೋಪೀನ್, ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಇದೆ. ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಟೊಮೆಟೊಗಳು ತುಂಬಾ ಉಪಯುಕ್ತವಾಗಿವೆ. ಚರ್ಮ ಮತ್ತು ಕೂದಲಿಗೆ ಉಪಯುಕ್ತ. ಇದು ತಿನ್ನಲು ಕೂಡ ರುಚಿಕರ.

ಈರುಳ್ಳಿ

ಈರುಳ್ಳಿ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನೂ ಕಾಪಾಡುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಫೈಬರ್ ಹೊಂದಿದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶುಂಠಿ

ಶುಂಠಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಶುಂಠಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶುಂಠಿಯ ತುಂಡನ್ನು ತಿನ್ನುವುದರಿಂದ ಗಂಟಲು ನೋವು, ಶೀತ, ಕೆಮ್ಮು, ವಾಕರಿಕೆ ಅಥವಾ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಬಹುದು. ಅಧಿಕ ತೂಕ ಮತ್ತು ಮಧುಮೇಹ ಇರುವವರಿಗೆ ಶುಂಠಿ ತುಂಬಾ ಉಪಯುಕ್ತವಾಗಿದೆ.

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣದ ಅಂಶ ಹೊಂದಿದೆ. ಇದರಲ್ಲಿ ಕ್ಯಾಪ್ಸೈಸಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹದ ಉಷ್ಣತೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಹಸಿರು ಮೆಣಸಿನಕಾಯಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಂಧಿವಾತ ಅಥವಾ ಆಸ್ಟಿಯೊಪೊರೋಸಿಸ್‌ಗೆ ಅವು ತುಂಬಾ ಉಪಯುಕ್ತವಾಗಿವೆ.

ಬೀಜಗಳು

ಬೀಜಗಳು ಪೋಷಕಾಂಶಗಳಿಂದ ತುಂಬಿರುತ್ತವೆ. ಫೈಬರ್, ಆರೋಗ್ಯಕರ ಕೊಬ್ಬುಗಳು, ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಬಾದಾಮಿಯನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ. ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಬಾದಾಮಿ, ಗೋಡಂಬಿ, ವಾಲ್‌ನಟ್ಸ್, ಪಿಸ್ತಾಗಳನ್ನು ಸೇವಿಸಿ.

mysore-dasara_Entry_Point