ಎಷ್ಟು ದಿನಗಳಿಗೊಮ್ಮೆ ನಾವು ಟೂತ್‌ಬ್ರಷ್ ಬದಲಿಸಬೇಕು? ಹಲ್ಲು, ವಸಡಿನ ಆರೋಗ್ಯಕ್ಕೆ ಈ ನಿಯಮ ಪಾಲನೆ ಅತ್ಯಗತ್ಯ
Sep 17, 2024 01:54 PM IST
ಎಷ್ಟು ದಿನಗಳಿಗೊಮ್ಮೆ ಟೂತ್‌ಬ್ರಷ್ ಬದಲಿಸಬೇಕು?
- ನಮ್ಮ ಬಾಯಿ, ಹಲ್ಲು ಹಾಗೂ ವಸಡಿನ ಆರೋಗ್ಯದಲ್ಲಿ ಟೂತ್‌ಬ್ರಷ್‌ನ ಪ್ರಭಾವ ಮಹತ್ವದ್ದು. ಪ್ರತಿದಿನ ನಾವು ಟೂತ್‌ಬ್ರಷ್‌ಗೆ ಪೇಸ್ಟ್ ಹಾಕಿ ಹಲ್ಲುಜ್ಜುತ್ತೇವೆ. ಆದರೆ ಹಲ್ಲುಜ್ಜುವ ಬ್ರಷ್‌ನ ವಿಚಾರಕ್ಕೆ ಬಂದಾಗ ಅದು ತೀರಾ ಹಳೆಯದಾಗದೇ ನಾವು ಅದನ್ನು ಬದಲಿಸುವುದಿಲ್ಲ. ಹಾಗಾದರೆ ಎಷ್ಟು ದಿನಕ್ಕೊಮ್ಮೆ ಬ್ರಷ್ ಬದಲಿಸಬೇಕು ನೋಡಿ.
ವಸಡಿನ ಆರೋಗ್ಯ ಕಾಪಾಡಿಕೊಳ್ಳುವುದು ಕೇವಲ ಹಲ್ಲಿನ ದೃಷ್ಟಿಯಿಂದ ಮಾತ್ರವಲ್ಲ, ನಮ್ಮ ಸಂಪೂರ್ಣ ಆರೋಗ್ಯಕ್ಕೂ ವಸಡಿನ ಆರೋಗ್ಯ ಚೆನ್ನಾಗಿರುವುದು ಬಹಳ ಮುಖ್ಯವಾಗುತ್ತದೆ. ಆ ಕಾರಣಕ್ಕೆ ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಬ್ರಷ್ ಮಾಡುವುದು ಬಹಳ ಮುಖ್ಯ ಎನ್ನುವುದು ಎಷ್ಟು ನಿಜವೋ ಸರಿಯಾದ ಕ್ರಮದಲ್ಲಿ ಬ್ರಷ್ ಬಳಸುವುದು ಹಾಗೂ ಆಗಾಗ ಬದಲಿಸುವುದು ಕೂಡ ಅಷ್ಟೇ ಮುಖ್ಯ.
ಹಲ್ಲು ಹಾಗೂ ವಸಡಿನಿಂದ ಫ್ಲೇಕ್ ಹಾಗೂ ಆಹಾರದ ತುಣುಕುಗಳನ್ನು ಸ್ವಚ್ಛ ಮಾಡಲು ನೆರವಾಗುವ ಉದ್ದೇಶದಿಂದ ಟೂತ್‌ಬ್ರಷ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಆದರೆ ಬ್ರಷ್ ಸೆವೆದಂತೆ ಅವು ನೀಟಾಗಿ ಸ್ವಚ್ಛ ಮಾಡುವುದಿಲ್ಲ. ಶುಚಿಗೊಳಿಸುವ ಶಕ್ತಿಯನ್ನು ಅವು ಕಳೆದುಕೊಳ್ಳುತ್ತವೆ. ಇದರಿಂದ ಫ್ಲೇಕ್ ಸಂಗ್ರಹವಾಗಬಹುದು. ಇದು ಹಲ್ಲಿನ ಹುಳುಕು ಹಾಗೂ ವಸಡಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ದಂತವೈದ್ಯರಾದ ಡಾ. ನಿಶಾ ಟಕ್ಕರ್ ಹೇಳುತ್ತಾರೆ.
ಟೂತ್‌ಬ್ರಷ್ ನಿಯಮಗಳೇನು
ಡಾ. ನಿಶಾ ಅವರ ಪ್ರಕಾರ ನಾವು ಕನಿಷ್ಠ 2–3 ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಿಸಬೇಕು. ಆಗ ಮಾತ್ರ ಬ್ರಷ್ ಮೇಲಿನ ಬ್ರಿಸ್ಟಲ್‌ಗಳು ಪರಿಣಾಮಕಾರಿಯಾಗಿ ಇರುತ್ತವೆ ಹಾಗೂ ಹಲ್ಲಿನ ರಕ್ಷಣೆ ಮಾಡುತ್ತವೆ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ನೀವು ಬಹಳ ಬೇಗ ಬ್ರಷ್ ಬದಲಿಸಬೇಕಾಗಬಹುದು. ಅಂತಹ ನಿಯಮಗಳು ಹೀಗಿವೆ:
ಇದನ್ನೂ ಓದಿ: ಹಲ್ಲಿನ ಮೇಲಿನ ಹಳದಿ ಕಲೆ ಹೋಗಲಾಡಿಸಲು ಟಿಪ್ಸ್
ಸವೆಯುವುದು, ಬ್ರಿಸ್ಟಲ್ ಕಿತ್ತು ಬರುವುದು: 2–3 ತಿಂಗಳಿಗೂ ಮೊದಲು ಬ್ರಷ್ ಬಾಗಿದಂತಾಗುವುದು, ಬ್ರಿಷ್ಟಲ್ ಕಿತ್ತು ಬರುವುದು, ಸವೆದಂತಾಗುವುದು ಕಂಡರೆ ನೀವು ತಕ್ಷಣಕ್ಕೆ ಬ್ರಷ್ ಬದಲಿಸಬೇಕು.
ಅನಾರೋಗ್ಯದ ನಂತರ: ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ತಡೆಗಟ್ಟಲು, ನೀವು ಅಥವಾ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದ ನಂತರ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಿಸಲು ಡಾ ಥಕ್ಕರ್ ಸಲಹೆ ನೀಡುತ್ತಾರೆ. ಇದು ಮರು-ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ಸಂದರ್ಶನದಲ್ಲಿ ಇವರು ಹೇಳಿದ್ದಾರೆ.
ನಿಯಮಿತವಾಗಿ ಬ್ರಷ್ ಬದಲಿಸುವ ಪ್ರಯೋಜನಗಳು
ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಲು ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಬಾಯಿಯ ಉತ್ತಮ ಆರೋಗ್ಯಕ್ಕಾಗಿ ಹಲವಾರು ಪ್ರಯೋಜನಗಳನ್ನು ಹೊಂದಿರಬಹುದು ಡಾ. ಥಕ್ಕರ್ ಹೇಳುತ್ತಾರೆ.
ಹೆಚ್ಚು ಪರಿಣಾಮಕಾರಿ ಶುಚಿಗೊಳಿಸುವಿಕೆ: ತಾಜಾ ಬಿರುಗೂದಲುಗಳು (ಬ್ರಿಷ್ಟಲ್) ಪ್ಲೇಕ್ ಮತ್ತು ಆಹಾರದ ಕಣಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಬಾಯಿಯನ್ನು ಸ್ವಚ್ಛ ಮಾಡುವುದು ಮಾತ್ರವಲ್ಲ ಬಾಯಿಯ ಆರೋಗ್ಯ ಬಹಳ ಮುಖ್ಯ ಎನ್ನಿಸುತ್ತದೆ.
ಹಲ್ಲು ಹುಳುಕು ಮತ್ತು ವಸಡಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ: ಸರಿಯಾದ ಪ್ಲೇಕ್ ತೆಗೆಯುವುದು ಕುಳಿಗಳ ರಚನೆಯನ್ನು ಮತ್ತು ವಸಡಿನ ಕಾಯಿಲೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
ತಾಜಾ ಉಸಿರು: ಸ್ವಚ್ಛವಾದ ಬಾಯಿಯು ಕೆಟ್ಟ ಉಸಿರಾಟಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಆಶ್ರಯಿಸುವ ಸಾಧ್ಯತೆ ಕಡಿಮೆ. ಇದರಿಂದ ಉಸಿರಿನ ದುರ್ನಾತವನ್ನೂ ತಡೆಯಬಹುದು.
ಮರೆಯದೇ ಬದಲಿಸಿ
ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಲು ನಿಮ್ಮ ಫೋನ್ ಅಥವಾ ಕ್ಯಾಲೆಂಡರ್‌ನಲ್ಲಿ ರಿಮೈಂಡರ್ ಹಾಕಿಕೊಳ್ಳಿ. ಮರೆಯದೇ ಬ್ರಷ್ ಬದಲಿಸಿ.
ದೊಡ್ಡ ಪ್ರಮಾಣ ಖರೀದಿಸಿ: ಹಲವಾರು ಟೂತ್‌ಬ್ರಶ್‌ಗಳನ್ನು ಏಕಕಾಲದಲ್ಲಿ ಖರೀದಿಸುವುದರಿಂದ ನೀವು ಸಂಗ್ರಹಿಸಲು ಸಹಾಯ ಮಾಡಬಹುದು ಮತ್ತು ಅವುಗಳನ್ನು ಬದಲಾಯಿಸಲು ಮರೆಯುವುದನ್ನು ತಪ್ಪಿಸಬಹುದು. ಅನಾರೋಗ್ಯದ ನಂತರ ತಕ್ಷಣವೇ ಅದನ್ನು ಬದಲಾಯಿಸಲು ಹೊಸ ಟೂತ್ ಬ್ರಷ್ ಅನ್ನು ನಿಮಗೆ ಸಿಗುವಂತೆ ಇರಿಸಿ.
ಈ ಮೇಲಿನ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಹಲ್ಲು ಹಾಗೂ ವಸಡಿನ ಆರೋಗ್ಯದ ಜೊತೆಗೆ ಸಂಪೂರ್ಣ ದೇಹಾರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ವಿಭಾಗ