logo
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಮ್ಮು, ಲೂಸ್ ಮೋಷನ್‍ ಸಮಸ್ಯೆಗೆ ರಾಮಬಾಣ ದಾಳಿಂಬೆ ಸಿಪ್ಪೆಯ ಚಹಾ: ಈ ಮನೆಮದ್ದು ತಯಾರಿಸುವುದು ತುಂಬಾನೇ ಸಿಂಪಲ್

ಕೆಮ್ಮು, ಲೂಸ್ ಮೋಷನ್‍ ಸಮಸ್ಯೆಗೆ ರಾಮಬಾಣ ದಾಳಿಂಬೆ ಸಿಪ್ಪೆಯ ಚಹಾ: ಈ ಮನೆಮದ್ದು ತಯಾರಿಸುವುದು ತುಂಬಾನೇ ಸಿಂಪಲ್

Priyanka Gowda HT Kannada

Oct 11, 2024 12:54 PM IST

google News

ದಾಳಿಂಬೆ ಸಿಪ್ಪೆಯಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

  • ದಾಳಿಂಬೆ ಸಿಪ್ಪೆಯ ಚಹಾವನ್ನು ಕುಡಿಯುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗಲು ಸಹಾಯಕವಾಗಿದೆ. ಅಷ್ಟೇ ಅಲ್ಲ, ಲೂಸ್ ಮೋಷನ್ ಅಥವಾ ಭೇದಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದಾಳಿಂಬೆ ಸಿಪ್ಪೆಯ ಚಹಾ ದಿವ್ಯೌಷಧವಾಗಿದೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದಾಳಿಂಬೆ ಸಿಪ್ಪೆಯಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ದಾಳಿಂಬೆ ಸಿಪ್ಪೆಯಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ದಾಳಿಂಬೆ ಹಣ್ಣು ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ, ದಾಳಿಂಬೆ ಬೀಜಗಳನ್ನು ತಿಂದು ಇದರ ಸಿಪ್ಪೆ ಅಪ್ರಯೋಜಕ ಬಹುತೇಕರು ಎಸೆಯುತ್ತಾರೆ. ಆದರೆ, ದಾಳಿಂಬೆ ಸಿಪ್ಪೆಯಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಇನ್ನೇನು ಚಳಿಗಾಲ ಶುರುವಾಗುತ್ತಿದೆ. ಶೀತ, ಕೆಮ್ಮು ಬರುವುದು ಸಾಮಾನ್ಯ. ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು ಈ ದಾಳಿಂಬೆ ಸಿಪ್ಪೆ. ಅಷ್ಟೇ ಅಲ್ಲ, ಭೇದಿ (loose motion) ಸಮಸ್ಯೆಗೂ ದಾಳಿಂಬೆ ಸಿಪ್ಪೆ ಪರಿಣಾಮಕಾರಿ ಮನೆಮದ್ದು. ಇನ್ಮುಂದೆ ದಾಳಿಂಬೆ ಸಿಪ್ಪೆಯನ್ನು ಎಸೆಯದೆ, ಒಣಗಿಸಿಡಿ. ಒಣಗಿದ ಅಥವಾ ತಾಜಾ ದಾಳಿಂಬೆ ಸಿಪ್ಪೆಗಳಿಂದ ಬಿಸಿ ಪಾನೀಯವನ್ನು ತಯಾರಿಸಿ ಕುಡಿದರೆ ಕೆಮ್ಮು ಹೊರಟು ಹೋಗುತ್ತದೆ. ಈ ಬಿಸಿ ಪಾನೀಯವು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ತುಂಬಿದೆ. ಇದು ಗಂಟಲು ನೋವು ಶಮನಗೊಳಿಸಲು ಕೂಡ ಸಹಾಯ ಮಾಡುತ್ತದೆ. ಅಲ್ಲದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಹೃದಯದ ಆರೋಗ್ಯ ಮತ್ತು ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:

ದಾಳಿಂಬೆ ಸಿಪ್ಪೆಯ ಚಹಾ ಎಂದರೇನು?

ಇದು ಬಿಸಿ ನೀರಿನಲ್ಲಿ ದಾಳಿಂಬೆ ಹಣ್ಣಿನ ಒಣಗಿದ ಅಥವಾ ತಾಜಾ ಸಿಪ್ಪೆಗಳನ್ನು ನೆನೆಸಿ ತಯಾರಿಸುವ ಪಾನೀಯವಾಗಿದೆ. ದಾಳಿಂಬೆ ಬೀಜಗಳಿಂದ ಅನೇಕ ಪ್ರಯೋಜನಗಳಿದ್ದರೂ, ಸಿಪ್ಪೆಯು ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು, ವಿಟಮಿನ್‌ಗಳು ಸೇರಿದಂತೆ ಇತರೆ ಸಂಯುಕ್ತಗಳನ್ನು ಹೊಂದಿದೆ. ಈ ಚಹಾವನ್ನು ಸಾಂಪ್ರದಾಯಿಕವಾಗಿ ಅದರ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ. ಇದರಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.

ದಾಳಿಂಬೆ ಸಿಪ್ಪೆಯ ಚಹಾ ಕೆಮ್ಮಿಗೆ ಉತ್ತಮ ಮನೆಮದ್ದಾಗಿದೆಯೇ?

ಈ ಚಹಾವು ಕೆಮ್ಮುಗೆ ಪರಿಣಾಮಕಾರಿ ಮನೆಮದ್ದು. ಇದರ ಸಿಪ್ಪೆಗಳು ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಇದು ಉರಿಯೂತದ, ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಗಂಟಲು ನೋವನ್ನು ಶಮನಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೆಮ್ಮಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಭೇದಿ ಸಮಸ್ಯೆ ಇದ್ದರೂ ಇದರ ಚಹಾ ಅಥವಾ ಕಷಾಯವನ್ನು ಕುಡಿದರೆ ಒಮ್ಮೆಲೆ ನಿಂತು ಹೋಗುತ್ತದೆ. ಲೂಸ್ ಮೋಷನ್‍ಗೂ ಇದು ಅತ್ಯುತ್ತಮ ಹಾಗೂ ಶೀಘ್ರ ಪರಿಹಾರವಾಗಿದೆ.

ದಾಳಿಂಬೆ ಸಿಪ್ಪೆಯ ಚಹಾ ಮಾಡುವ ಸರಳ ವಿಧಾನ

ಬೇಕಾಗುವ ಪದಾರ್ಥಗಳು: ಒಣಗಿದ ದಾಳಿಂಬೆ ಸಿಪ್ಪೆಗಳು (ಅಥವಾ ಒಂದು ದಾಳಿಂಬೆಯಿಂದ ತಾಜಾ ಸಿಪ್ಪೆಗಳು)- 2 ರಿಂದ 3 ಸಿಪ್ಪೆ, ನೀರು- 2 ಕಪ್, ಜೇನುತುಪ್ಪ ಅಥವಾ ನಿಂಬೆ (ಬೇಕಿದ್ದರೆ, ರುಚಿಗಾಗಿ ಬಳಸಬಹುದು).

ಮಾಡುವ ವಿಧಾನ: ತಾಜಾ ದಾಳಿಂಬೆ ಸಿಪ್ಪೆಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಣಗಿದ ಸಿಪ್ಪೆಗಳಾಗಿದ್ದರೆ ಪುಡಿ ಮಾಡಬಹುದು ಅಥವಾ ಹಾಗೆಯೇ ಬೇಯಿಸಬಹುದು. 2 ಕಪ್ ನೀರಿಗೆ ದಾಳಿಂಬೆ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಸೋಸಿ ಹಾಗೆಯೇ ಕುಡಿಯಿರಿ. ಲೋಸ್ ಮೋಷನ್‍ಗೆ ಇವಿಷ್ಟನ್ನು ಮಾಡಿ ಕುಡಿದರೆ ಸಾಕು, ಶೀಘ್ರ ಪರಿಹಾರ ಪಡೆಯುವಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ