logo
ಕನ್ನಡ ಸುದ್ದಿ  /  ಜೀವನಶೈಲಿ  /  ಆಯಾಸದಿಂದ ಸ್ನಾಯು ಸೆಳೆತದವರೆಗೆ, ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಿವು, ನಿವಾರಣೆಗೆ ಈ ಆಹಾರಗಳೇ ಔಷಧಿ

ಆಯಾಸದಿಂದ ಸ್ನಾಯು ಸೆಳೆತದವರೆಗೆ, ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಿವು, ನಿವಾರಣೆಗೆ ಈ ಆಹಾರಗಳೇ ಔಷಧಿ

Reshma HT Kannada

Nov 18, 2024 06:21 PM IST

google News

ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳು

    • ನಮ್ಮ ದೇಹಕ್ಕೆ ಪ್ರೊಟೀನ್‌ ಅತಿ ಅಗತ್ಯ. ಪ್ರೊಟೀನ್ ಕೊರತೆ ಇದ್ದರೆ ದೇಹದಲ್ಲಿ ವಿವಿಧ ಲಕ್ಷಣಗಳು ಕಾಣಿಸುತ್ತವೆ. ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದಕ್ಕೆ ನಿವಾರಿಸಲು ವೈದ್ಯರು ನೀಡಿದ ಸಲಹೆಗಳು ಹೀಗಿವೆ ನೋಡಿ.
ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳು
ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳು

ನಮ್ಮ ದೇಹವು ಆರೋಗ್ಯಕರವಾಗಿ, ಫಿಟ್ ಆಗಿರಲು ಪ್ರೊಟೀನ್ ಪ್ರಮುಖ ಪೋಷಕಾಂಶವಾಗಿದೆ. ದೇಹದ ಕಾರ್ಯಚಟುವಟಿಕೆಗೆ ಇದು ಸಾಕಷ್ಟು ಅಗತ್ಯ. ಪ್ರೊಟೀನ್ ಕೊರತೆಯಾದರೆ ನಿಧಾನಕ್ಕೆ ಒಂದೊಂದೆ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಹಿರಿಯ ಆಹಾರ ತಜ್ಞ ಉಮಾಶಕ್ತಿ ಪ್ರೊಟೀನ್ ಕೊರತೆಯ ಲಕ್ಷಣಗಳನ್ನು ಬಹಿರಂಗಪಡಿಸಿದರು. ಜೊತೆಗೆ ದೇಹಕ್ಕೆ ಪ್ರೊಟೀನ್ ಒದಗಿಸುವ ವಿಧಾನಗಳ ಬಗ್ಗೆಯೂ ಹೇಳಿದ್ದಾರೆ. ಅವರು ಹೇಳಿರುವ ಸಲಹೆಗಳು ಹೀಗಿವೆ ನೋಡಿ.

ಪ್ರೊಟೀನ್ ಕೊರತೆಯ ಲಕ್ಷಣಗಳು

ಆಹಾರದ ಮೂಲಕ ದೇಹವು ಸಂಪೂರ್ಣ ಪ್ರೊಟೀನ್ ಅನ್ನು ಪಡೆಯಬೇಕು. ಆದಾಗ್ಯೂ, ಸಾಕಷ್ಟು ಪ್ರೊಟೀನ್ ಇಲ್ಲದಿದ್ದರೆ, ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ‘ನೀವು ಆಹಾರದ ಮೂಲಕ ಸಾಕಷ್ಟು ಪ್ರೊಟೀನ್ ಪಡೆಯದಿದ್ದರೆ, ಅದರ ಕೊರತೆ ಕಾಡಲು ಆರಂಭವಾಗುತ್ತದೆ. ಕೆಲವು ರೋಗಲಕ್ಷಣಗಳಿಂದ ಪ್ರೊಟೀನ್ ಕೊರತೆಯನ್ನು ಗುರುತಿಸಬಹುದು. ಅದರಲ್ಲಿ ಆಯಾಸವು ಮುಖ್ಯ ಲಕ್ಷಣವಾಗಿದೆ. ಇತರ ಲಕ್ಷಣಗಳು ಪಾದಗಳಲ್ಲಿ ನಡುಕ, ಕೂದಲು ಉದುರುವಿಕೆ, ಉಗುರುಗಳು ತುಂಡಾಗುವುದು, ಚರ್ಮದ ಸಮಸ್ಯೆಗಳು, ಹಲ್ಲಿನ ಸಮಸ್ಯೆಗಳು, ಹಾರ್ಮೋನ್‌ ಏರುಪೇರಿನಿಂದ ಉಂಟಾಗುವ ಮನಸ್ಥಿತಿ, ಅನಿಯಮಿತ ಮುಟ್ಟು, ಜೀರ್ಣಕ್ರಿಯೆ ಸಮಸ್ಯೆಯಾಗುವುದು, ಸ್ನಾಯು ಮತ್ತು ಕಾಲು ನೋವು ಮತ್ತು ಸ್ಥಿರವಾಗಿ ನಡೆಯಲು ಆಗದೇ ಇರುವುದು ಈ ಎಲ್ಲವೂ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಾಗಿವೆ ಎಂದು ಹೇಳುತ್ತಾರೆ ಉಮಾಶಕ್ತಿ.

ಉತ್ತಮ ರೋಗನಿರೋಧಕ ಶಕ್ತಿಗೆ ಪ್ರೊಟೀನ್ ಕೂಡ ಬಹಳ ಮುಖ್ಯ ಎಂದು ಉಮಾಶಕ್ತಿ ಬಹಿರಂಗಪಡಿಸಿದ್ದಾರೆ. ದೇಹದಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸುವಲ್ಲಿ ಪ್ರೊಟೀನ್ ನಿರ್ಣಾಯಕ ಪಾತ್ರ ವಹಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಪ್ರೊಟೀನ್ ಕೊರತೆ ನೀಗಿಸುವ ಆಹಾರಗಳು 

ಪ್ರೋಟೀನ್ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳ ಬಗ್ಗೆಯೂ ಹೇಳಿದ್ದಾರೆ ಉಮಾಶಕ್ತಿ. ನಮ್ಮ ದೈನಂದಿನ ಆಹಾರದಲ್ಲಿ ಪ್ರೊಟೀನ್ ಸಮೃದ್ಧ ಆಹಾರವನ್ನು ತಪ್ಪದೇ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಹಾಗಾದರೆ ಅತ್ಯದಿಕ ಪ್ರೊಟೀನ್ ಅಂಶ ಇರುವ ಆಹಾರಗಳು ಯಾವುದು ನೋಡಿ.

ಸಸ್ಯಾಹಾರಿ ಆಹಾರಗಳು: ಬಾದಾಮಿ, ವಾಲ್‌ನಟ್ಸ್, ಪಿಸ್ತಾಗಳಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು ಮತ್ತು ಮಸೂರ ಸೇರಿದಂತೆ ದ್ವಿದಳ ಧಾನ್ಯಗಳು ಪ್ರೊಟೀನ್‌ನಲ್ಲಿ ಸಮೃದ್ಧವಾಗಿವೆ. ತೋಫು ಪ್ರೊಟೀನ್‌ನ ಉತ್ತಮ ಮೂಲವಾಗಿದೆ.

ಹಾಲು, ಪನೀರ್, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳು ಪ್ರೊಟೀನ್‌ನಲ್ಲಿ ಸಮೃದ್ಧವಾಗಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ತೆಗೆದುಕೊಳ್ಳಬೇಕು.

ಮಾಂಸಾಹಾರ: ಮೀನು, ಚಿಕನ್ ಮತ್ತು ಮೊಟ್ಟೆಯಂತಹ ಮಾಂಸಾಹಾರಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಮಟನ್‌ನಲ್ಲಿ ಪ್ರೊಟೀನ್ ಇದೆ, ಆದರೆ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಪ್ರೊಟೀನ್ ಕೊರತೆಯಿರುವ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು. ಪೂರಕಗಳನ್ನು ಬಳಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ