logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಪದೇ ಪದೇ ಕಣ್ಣು ಒಣಗುವ ಸಮಸ್ಯೆಯಿಂದ ಕಿರಿಕಿರಿ ಆಗ್ತಿದ್ಯಾ; ಇದಕ್ಕೆ ಕಾರಣ, ಪರಿಹಾರ ತಿಳಿಯಿರಿ

ಚಳಿಗಾಲದಲ್ಲಿ ಪದೇ ಪದೇ ಕಣ್ಣು ಒಣಗುವ ಸಮಸ್ಯೆಯಿಂದ ಕಿರಿಕಿರಿ ಆಗ್ತಿದ್ಯಾ; ಇದಕ್ಕೆ ಕಾರಣ, ಪರಿಹಾರ ತಿಳಿಯಿರಿ

Reshma HT Kannada

Nov 30, 2024 07:01 AM IST

google News

ಚಳಿಗಾಲದಲ್ಲಿ ಕಣ್ಣು ಒಣಗುವ ಸಮಸ್ಯೆಗೆ ಕಾರಣ, ಪರಿಹಾರ

    • ಚಳಿ ಜೋರಾಗುತ್ತಿದ್ದ ಹಾಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುವುದು ಸಹಜ. ಚಳಿಗಾಲದಲ್ಲಿ ಕಾಡುವ ಪ್ರಮುಖ ತೊಂದರೆಗಳಲ್ಲಿ ಕಣ್ಣು ಒಣಗುವುದು ಕೂಡ ಒಂದು. ಈ ಸಮಸ್ಯೆ ನಮಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಇದಕ್ಕೆ ಕಾರಣ, ಪರಿಹಾರ ಮಾರ್ಗವೇನು ನೋಡಿ.
ಚಳಿಗಾಲದಲ್ಲಿ ಕಣ್ಣು ಒಣಗುವ ಸಮಸ್ಯೆಗೆ ಕಾರಣ, ಪರಿಹಾರ
ಚಳಿಗಾಲದಲ್ಲಿ ಕಣ್ಣು ಒಣಗುವ ಸಮಸ್ಯೆಗೆ ಕಾರಣ, ಪರಿಹಾರ (PC: Canva)

ಚಳಿಗಾಲದಲ್ಲಿ ಕಣ್ಣು ಒಣಗುವ ಸಮಸ್ಯೆ ಸಾಮಾನ್ಯ. ಕಣ್ಣಿನಿಂದ ಸಾಕಷ್ಟು ಕಣ್ಣೀರು ಉತ್ಪಾದನೆಯಾಗದೇ ಇರುವುದು ಅಥವಾ ಕಣ್ಣೀರು ಬೇಗನೆ ಆವಿಯಾಗುವುದು ಇದಕ್ಕೆ ಪ್ರಮುಖ ಕಾರಣ. ಪದೇ ಪದೇ ಒಣಗುವುದರಿಂದ ಕಣ್ಣು ಕೆಂಪಾಗುವುದು, ಕಿರಿಕಿರಿ, ಚುಚ್ಚಿದಂತಾಗುವುದು ಇಂತಹ ಅನುಭವಗಳು ಎದುರಾಗಬಹುದು. ಶೀತ ವಾತಾವರಣ, ಶುಷ್ಕ ಗಾಳಿ, ಒಳಾಂಗಣ ತಾಪನದಂತಹ ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಂದ ಪರಿಸ್ಥಿತಿ ಹದಗೆಡುತ್ತದೆ. ಅಂತಹ ಸಂದರ್ಭದಲ್ಲಿ ತೇವಾಂಶದ ಮಟ್ಟ ಕಡಿಮೆಯಾಗಿ, ಕಣ್ಣೀರು ಆವಿಯಾಗುವ ಸಮಸ್ಯೆ ಹೆಚ್ಚುತ್ತದೆ. ಚಳಿಗಾಲದಲ್ಲಿ ಪ್ರಮುಖವಾಗಿ ಗಾಳಿಯಲ್ಲಿ ತೇವಾಂಶದ ಕೊರತೆಯು ಕಣ್ಣು ಒಣಗಲು ಕಾರಣವಾದ್ರು ಇದಕ್ಕೆ ಕಾರಣವಾಗುವ ಇನ್ನಿತರ ಅಂಶಗಳು ಹಾಗೂ ಇದಕ್ಕೆ ಪರಿಹಾರವೇನು ನೋಡಿ.

ಚಳಿಗಾಲದಲ್ಲಿ ಕಣ್ಣು ಒಣಗಲು ಕಾರಣ

ಆದ್ರತೆಯ ಮಟ್ಟ ಕಡಿಮೆಯಾಗಿರುವುದು: ಚಳಿಗಾಲದ ಸಮಯದಲ್ಲಿ ಗಾಳಿಯಲ್ಲಿ ತೇವಾಂಶ ಸಹಜವಾಗಿ ಕಡಿಮೆ ಇರುತ್ತದೆ. ಒಳಾಂಗಣ ಪ್ರದೇಶದಲ್ಲಿ ಹೀಟರ್‌ನಂತಹ ವಸ್ತುಗಳ ಬಳಕೆಯು ತೇವಾಂಶವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಒಟ್ಟಾರೆ ಶುಷ್ಕ ವಾತಾವರಣವು ಬೇಗನೆ ಕಣ್ಣೀರು ಆವಿಯಾಗಲು ಕಾರಣವಾಗುತ್ತದೆ. 

ಶೀತ ಗಾಳಿ

ಶೀತ, ಅತಿಯಾದ ಗಾಳಿಗೆ ಒಡ್ಡಿಕೊಳ್ಳುವುದರಿಂದ ಕಣ್ಣುಗಳಿಂದ ತೇವಾಂಶ ಕಡಿಮೆಯಾಗುತ್ತದೆ. ಅದರಲ್ಲೂ ಮಾಲಿನ್ಯದ ಕೊರತೆಯು ಇನ್ನಷ್ಟು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಇದು ಗಮನಾರ್ಹ ಮಟ್ಟದಲ್ಲಿ ಕಣ್ಣೀರಿನ ಕೊರತೆಗೆ ಕಾರಣವಾಗುತ್ತದೆ.

ಸ್ಕ್ರೀನ್ ಟೈನ್ ಅವಧಿ ಹೆಚ್ಚುವುದು

ಚಳಿಗಾಲದಲ್ಲಿ ಜನರು ಹೆಚ್ಚು ಹೊರಗಡೆ ಹೋಗಲು ಇಷ್ಟಪಡುವುದಿಲ್ಲ. ಮನೆಯೊಳಗೆ ಇದ್ದು ಹೆಚ್ಚು ಹೊತ್ತು ಸ್ಕ್ರೀನ್ ನೋಡುತ್ತಾರೆ. ಮೊಬೈಲ್‌, ಕಂಪ್ಯೂಟರ್‌, ಟಿವಿಯಂತಹ ಸ್ಕ್ರೀನ್ ವೀಕ್ಷಣೆಯಿಂದ ಕಣ್ಣು ಮಿಟುಕಿಸುವುದು ಕಡಿಮೆಯಾಗುತ್ತದೆ. ಕಣ್ಣೀರು ಕಣ್ಣಿನ ಮೇಲ್ಮೈ ಮೇಲೆ ಸಮವಾಗಿ ಹರಡುವುದನ್ನು ತಡೆಯುತ್ತದೆ. ಇದು ಕಣ್ಣೀರು ಒಣಗಲು ಕಾರಣವಾಗುತ್ತದೆ.

ಒಳಾಂಗಣ ಹೀಟ್ ಮಾಡುವ ವ್ಯವಸ್ಥೆ

ಬಹುತೇಕ ಕಡೆ ಚಳಿ ಹೆಚ್ಚಿರುವ ಕಾರಣ ಮನೆಯೊಳಗೆ ಹೀಟಿಂಗ್ ಸಿಸ್ಟಂ ಅಳವಡಿಸಿ ಇರುತ್ತಾರೆ. ಇದರಿಂದ ಚಳಿಯಿಂದ ರಕ್ಷಿಸಿಕೊಳ್ಳಬಹುದಾದರೂ ಕಣ್ಣಿನ ಸಮಸ್ಯೆ ಕಾಣುತ್ತದೆ. ಇದು ಕಣ್ಣು ಒಣಗಲು ಪ್ರಮುಖ ಕಾರಣವಾಗುತ್ತದೆ.

ಚಳಿಗಾಲದ ಅಲರ್ಜಿ

ಋತುಮಾನಕ್ಕೆ ತಕ್ಕಂತೆ ಕಂಡುಬರುವ ಅಲರ್ಜಿಯು ಚಳಿಗಾಲದಲ್ಲಿ ಕಣ್ಣುಗಳು ಒಣಗಲು ಪ್ರಮುಖ ಕಾರಣವಾಗಿದೆ. ಅಲರ್ಜಿ, ಧೂಳು ಸೂಕ್ಷ್ಮವಾಗಿರುವ ವ್ಯಕ್ತಿಗಳಲ್ಲಿ ಕಣ್ಣು ಒಣಗುವ ಸಮಸ್ಯೆಯನ್ನು ಉಂಟು ಮಾಡಬಹುದು.

ಚಳಿಗಾಲದ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ

ಒಳಾಂಗಣ ಪ್ರದೇಶದಲ್ಲಿ ತಾಪಮಾನ ಹೆಚ್ಚಿಸಿ: ನಿಮ್ಮ ಮನೆ ಅಥವಾ ಕಚೇರಿಯಲ್ಲಿ ತೇವಾಂಶದ ಮಟ್ಟವನ್ನು ಹೆಚ್ಚಿಸಿ. ಆದ್ರಕಗಳನ್ನು ಅಥವಾ ಹ್ಯೂಮಿಡಿಫೈರ್ ಅನ್ನು ಬಳಸಿ. ಇದು ತಾಪನ ವ್ಯವಸ್ಥೆ ಅಥವಾ ಹೀಟಿಂಗ್ ಸಿಸ್ಟಂನಿಂದ ಒಣಗುವ ಪರಿಣಾಮವನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ. ಇದರಿಂದ ಗಾಳಿ ಹಾಗೂ ನಿಮ್ಮ ಕಣ್ಣುಗಳು ಹೈಡ್ರೇಟ್ ಆಗಿರುತ್ತದೆ.

ಕೃತಕ ಕಣ್ಣೀರು: ಕೃತಕವಾಗಿ ಕಣ್ಣೀರು ಬರಿಸುವ ಓವರ್-ದಿ-ಕೌಂಟರ್ ಲೂಬ್ರಿಕೇಟಿಂಗ್ ಐ ಡ್ರಾಪ್‌ಗಳು ತಕ್ಷಣದ ಪರಿಹಾರವನ್ನು ನೀಡಬಹುದು. ಆದರೆ ಕಣ್ಣಿಗೆ ಯಾವುದೇ ಡ್ರಾಪ್ ಬಳಸುವ ಮುನ್ನ ತಜ್ಞರಿಂದ ಸಲಹೆ ಪಡೆಯಿರಿ.

ಹೊರಗೆ ಹೋದಾಗ ಕಣ್ಣಿನ ಕಾಳಜಿ ಇರಲಿ: ತಂಪಾದ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಲು ಸನ್ಗ್ಲಾಸ್ ಅಥವಾ ಕನ್ನಡಕಗಳನ್ನು ಧರಿಸಿ. ಇದು ಕಣ್ಣೀರು ಆವಿಯಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣು ಒಣಗಿಸುವ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಡೆಯುತ್ತದೆ.

ಸ್ಕ್ರೀನ್‌ಟೈಮ್‌ಗೆ ಬ್ರೇಕ್ ನೀಡಿ: 20-20-20 ನಿಯಮವನ್ನು ಅನುಸರಿಸಿ: ಪ್ರತಿ 20 ನಿಮಿಷಗಳಿಗೊಮ್ಮೆ, 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಿ. ಇದು ಮಿಟುಕಿಸುವಿಕೆಯನ್ನು ಉತ್ತೇಜಿಸುತ್ತದೆ. ಇದರಿಂದ ಕಣ್ಣಿನಲ್ಲಿ ನೀರಿನಾಂಶ ಸಂಗ್ರಹವಾಗುತ್ತದೆ.

ಹೈಡ್ರೇಟ್ ಆಗಿರಿ: ನೀರು ದೇಹಕ್ಕಷ್ಟೇ ಅಲ್ಲ, ಕಣ್ಣಿಗೂ ಅವಶ್ಯ. ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಿರಿ. ಇದು ಕಣ್ಣೀರಿನ ಉತ್ಪಾದನೆಗೆ ಸಹಕರಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್, ಅಗಸೆಬೀಜಗಳು ಮತ್ತು ವಾಲ್‌ನಟ್‌ಗಳಂತಹ ಆಹಾರಗಳನ್ನು ಸೇವಿಸುವುದು ಕೂಡ ಕಣ್ಣಿನ ಆರೋಗ್ಯ ಸುಧಾರಿಸಲು ಕಾರಣವಾಗುತ್ತದೆ.

ನೇರ ಶಾಖಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ: ರೇಡಿಯೇಟರ್‌ಗಳು ಅಥವಾ ಬೆಂಕಿಗೂಡುಗಳಂತಹ ನೇರ ಶಾಖದ ಮೂಲಗಳಿಂದ ದೂರ ಕುಳಿತುಕೊಳ್ಳಿ. ಗಾಳಿಯ ಶುಷ್ಕತೆಯನ್ನು ಕಡಿಮೆ ಮಾಡಲು ಅಂತರ್ನಿರ್ಮಿತ ಆರ್ದ್ರಕಗಳೊಂದಿಗೆ ಕೊಠಡಿ ಹೀಟರ್‌ಳನ್ನು ಬಳಸಿ.

‌ಕಣ್ಣಿನ ತಜ್ಞರನ್ನು ಸಂಪರ್ಕಿಸಿ: ರೋಗಲಕ್ಷಣಗಳು ಮುಂದುವರಿದರೆ, ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಉರಿಯೂತದ ಕಣ್ಣಿನ ಹನಿಗಳು, ಪಂಕ್ಟಲ್ ಪ್ಲಗ್‌ಗಳು ಅಥವಾ ವಿಶೇಷ ಚಿಕಿತ್ಸೆಗಳಂತಹ ಪ್ರಿಸ್ಕ್ರಿಪ್ಷನ್ ಚಿಕಿತ್ಸೆಗಳು ತೀವ್ರತರವಾದ ಪ್ರಕರಣಗಳಿಗೆ ಅಗತ್ಯವಾಗಬಹುದು.

(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ದೊರೆತ ಹಾಗೂ ಸಾಮಾನ್ಯಜ್ಞಾನವನ್ನು ಆಧರಿಸಿದ್ದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ