ದೀಪಾವಳಿಗೆ ಪಟಾಕಿ ಅಂಗಡಿ ತೆರೆಯುವಿರಾ? ಕರ್ನಾಟಕದಲ್ಲಿ ಲೈಸನ್ಸ್ ಪಡೆಯುವುದು ಹೇಗೆ? ಆನ್‌ಲೈನ್ ಅರ್ಜಿ ಸಲ್ಲಿಕೆ ವಿವರ
Sep 24, 2024 01:11 PM IST
ಪಟಾಕಿ ಅಂಗಡಿಗೆ ಲೈಸನ್ಸ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
- Crackers License in Karnataka: ದೀಪಾವಳಿ ಹತ್ತಿರದಲ್ಲಿದೆ. ಸಾಕಷ್ಟು ಜನರು ಪಟಾಕಿ ಅಂಗಡಿ ತೆರೆದು ಒಂದಿಷ್ಟು ಹಣ ಸಂಪಾದನೆಯ ಯೋಚನೆಯಲ್ಲಿರಬಹುದು. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತಂದು ಮಾರಾಟ ಮಾಡಲು ಕರ್ನಾಟಕದಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಪರವಾನಿಗೆ ಪಡೆಯಬೇಕು. ಈ ಕುರಿತು ಹಂತಹಂತದ ಮಾರ್ಗದರ್ಶಿ ಇಲ್ಲಿದೆ.
ಪಟಾಕಿ ಅಂಗಡಿಗೆ ಲೈಸನ್ಸ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
Crackers License in Karnataka: ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಸಡಗರ. ದೀಪಾವಳಿ ಹಬ್ಬಕ್ಕೆ ಪಟಾಕಿಗಳು ಬೇಕೇಬೇಕು. ಇದೇ ಕಾರಣಕ್ಕೆ ತಮಿಳುನಾಡಿನ ಶಿವಕಾಶಿಯಲ್ಲಿ ಶ್ರಮಜೀವಿಗಳು ಪಟಾಕಿ ಕಟ್ಟುತ್ತಿದ್ದಾರೆ. ತಮಿಳುನಾಡಿನ ಶಿವಕಾಶಿಯಲ್ಲಿ ತಯಾರಾದ ಪಟಾಕಿಗಳನ್ನು ಬೆಂಗಳೂರು, ಮಂಗಳೂರು, ಹಾಸನ, ಮೈಸೂರು, ಕಲಬುರಗಿ, ಉಡುಪಿ, ಕುಂದಾಪುರ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ದೊಡ್ಡ ಪಟ್ಟಣಗಳಿಂದ ಸಣ್ಣಪುಟ್ಟ ಪಟ್ಟಣಗಳಲ್ಲಿ ಮಾರಾಟ ಮಾಡಲು ಒಂದಿಷ್ಟು ನಿಯಮಗಳಿವೆ. ಇದಕ್ಕೆ ಸೂಕ್ತ ಪರವಾನಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಜಿಲ್ಲಾಧಿಕಾರಿಯಿಂದ, ಸಂಬಂಧಪಟ್ಟ ನಗರಸಭೆ, ಪೊಲೀಸ್ ಇಲಾಖೆಯಿಂದ, ಫೈರ್ ಡಿಪಾರ್ಟ್‌ಮೆಂಟ್‌ನಿಂದ ಅನುಮತಿ ಪಡೆಯಬೇಕು. ಇದೇ ಸಮಯದಲ್ಲಿ ಪಟಾಕಿ ಮಾರಾಟ ಮಾಡುವ ಸ್ಥಳದ ಎನ್‌ಒಸಿ ಕೂಡ ಸಲ್ಲಿಸಬೇಕು.
ಪಟಾಕಿ ಮಾರಾಟಕ್ಕಾಗಿ ತಾತ್ಕಾಲಿಕ ಪರವಾನಿಗೆ ಪಡೆಯುವುದು ಹೇಗೆ?
- ಹಂತ 1: ಮೊದಲಿಗೆ ಕರ್ನಾಟಕ ಸರಕಾರದ ಸೇವಾಸಿಂಧು ವೆಬ್ ಸೈಟ್‌ಗೆ (sevasindhu.karnataka.gov.in) ಭೇಟಿ ನೀಡಿ. ಅಲ್ಲಿ ಇಲಾಖೆಗಳು ಮತ್ತು ಸೇವೆಗಳು ವಿಭಾಗ ಕ್ಲಿಕ್ ಮಾಡಿ.
- ಹಂತ 2: ಇಲಾಖೆಗಳು ಆಯ್ಕೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಆಯ್ಕೆ ಮಾಡಿ. ಅಲ್ಲಿ ಟೆಂಪರರಿ ಲೈಸನ್ಸ್ ಫಾರ್ ಸೇಲ್ ಆಫ್ ಕ್ರ್ಯಾಕರ್ಸ್ ಕ್ಲಿಕ್ ಮಾಡಿ. ಇದೇ ವೆಬ್‌ಸೈಟ್‌ನ ಸರ್ಚ್ ಆಯ್ಕೆಯಲ್ಲಿ Temporary License for Sale of Crackers ಎಂದು ಹುಡುಕಾಟವನ್ನೂ ನಡೆಸಬಹುದು.
- ಹಂತ 3: ಅಪ್ಲೈ ಆನ್‌ಲೈನ್ ಕ್ಲಿಕ್ ಮಾಡಿ. ಅಫಿಡವಿತ್, ಆಧಾರ್, ಜಿಎಸ್‌ಟಿ/ಟಿಐಎನ್ ಸರ್ಟಿಫಿಕೇಟ್, ಎಸ್‌ಸಿ/ಎಸ್‌ಟಿ ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ), ಸಂಸ್ಥೆಗಳು ಅರ್ಜಿ ಸಲ್ಲಿಸುವುದಾದರೆ ಬೈ ಇನ್ ಲಾ ಪ್ರತಿ ರೆಡಿಯಾಗಿರಲಿದೆ. ಅರ್ಜಿ ಶುಲ್ಕ: 5000 ರೂಪಾಯಿ, ಆನ್‌ಲೈನ್ ಅರ್ಜಿ ಸಲ್ಲಿಕೆಗೆ 20 ರೂಪಾಯಿ ಶುಲ್ಕ.
- ಹಂತ 4: ಆನ್‌ಲೈನ್ ಲಾಗಿನ್ ಆಗಿರಿ. ಅಲ್ಲಿ ನೀಡಲಾದ ಅರ್ಜಿ ನಮೂನೆ ಭರ್ತಿ ಮಾಡಿ. ಸಂಬಂಧಪಟ್ಟ ದಾಖಲೆಪತ್ರಗಳನ್ನು ಅಪ್‌ಲೋಡ್ ಮಾಡಬೇಕು.
- ಹಂತ 5: ಇಸೈನ್ ಮಾಡಿ, ಪೇಮೆಂಟ್ ಕ್ಲಿಕ್ ಮಾಡಿ ಪಾವತಿಸಿ. ಸಂಬಂಧಪಟ್ಟ ಷರತ್ತುಗಳು ಮತ್ತು ನಿಬಂಧನೆಗಳಿಗೆ ಅನುಮತಿ ನೀಡಿ ಅರ್ಜಿ ಸಲ್ಲಿಸಿ.
- ಹಂತ 5: ಸುಮಾರು ಒಂದು ವಾರದ ಬಳಿಕ ಇದೇ ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ ಅರ್ಜಿಯ ಸ್ಥಿತಿ ಪರಿಶೀಲಿಸಿ. ಅಲ್ಲಿ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್ ಆಯ್ಕೆ ಇರುತ್ತದೆ. ಅನುಮತಿ ದೊರಕಿದ್ದರೆ ಅಲ್ಲಿರುವ ಲೈಸನ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.