logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಹೇಗೆ ಮಾಡಿದ್ರು ಇಡ್ಲಿ ಗಟ್ಟಿಯಾಗುತ್ತಾ, ಹೋಟೆಲ್ ರೀತಿ ಮೃದುವಾದ ಇಡ್ಲಿ ತಯಾರಿಸಲು ಈ ಟಿಪ್ಸ್‌ಗಳನ್ನ ತಪ್ಪದೇ ಪಾಲಿಸಿ

ನೀವು ಹೇಗೆ ಮಾಡಿದ್ರು ಇಡ್ಲಿ ಗಟ್ಟಿಯಾಗುತ್ತಾ, ಹೋಟೆಲ್ ರೀತಿ ಮೃದುವಾದ ಇಡ್ಲಿ ತಯಾರಿಸಲು ಈ ಟಿಪ್ಸ್‌ಗಳನ್ನ ತಪ್ಪದೇ ಪಾಲಿಸಿ

Reshma HT Kannada

Sep 08, 2024 05:36 PM IST

google News

ಮೃದುವಾದ ಇಡ್ಲಿ ತಯಾರಿಸಲು ಟಿಪ್ಸ್‌

    • Tips For Making Soft Edli: ಭಾರತದ ಉಪಾಹಾರಗಳಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿರುವುದು ಇಡ್ಲಿ. ಎಷ್ಟು ಬಾರಿ ತಿಂದರೂ ಬೇಸರವಾಗದ ಇಡ್ಲಿ ಮನೆಗಿಂತ ಹೋಟೆಲ್‌ನಲ್ಲೇ ಹೆಚ್ಚು ರುಚಿ ಎನ್ನಿಸೋದು ಸುಳ್ಳಲ್ಲ. ಮನೆಯಲ್ಲಿ ಕೂಡ ಹೋಟೆಲ್‌ನಂತೆ ಮೃದುವಾದ, ರುಚಿಯಾದ ಇಡ್ಲಿ ಮಾಡಬಹುದು. ಇದಕ್ಕಾಗಿ ನೀವು ಈ ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸಬೇಕು.
ಮೃದುವಾದ ಇಡ್ಲಿ ತಯಾರಿಸಲು ಟಿಪ್ಸ್‌
ಮೃದುವಾದ ಇಡ್ಲಿ ತಯಾರಿಸಲು ಟಿಪ್ಸ್‌

Tips For Making Soft Idli: ಭಾರತದ ಹೋಟೆಲ್‌ಗಳಲ್ಲಿ ಎಂದಿಗೂ ಸಿಗುವ ತಿನಿಸುಗಳಲ್ಲಿ ಇಡ್ಲಿಗೆ ಪ್ರಮುಖ ಸ್ಥಾನ. ಇಡ್ಲಿ ಆರೋಗ್ಯಕರ ತಿಂಡಿಯೂ ಹೌದು. ಆರಾಮಿಲ್ಲದವರಿಗೂ ಇಡ್ಲಿ ಕೊಡಲು ಹೇಳುತ್ತಾರೆ. ಇದು ಹೊಟ್ಟೆ ತುಂಬಿಸುವ ಖಾದ್ಯವೂ ಹೌದು. ಆರೋಗ್ಯಕ್ಕೂ ಉತ್ತಮವಾಗಿರುವ ಇಡ್ಲಿ ರುಚಿಗೂ ಕಡಿಮೆ ಏನಿಲ್ಲ. ಭಾರತೀಯರಿಗೂ ಇಡ್ಲಿಗೂ ಅವಿನಾಭಾವ ಸಂಬಂಧ. ಇಂತಿಪ್ಪ ಇಡ್ಲಿ ಕೆಲವರ ಮನೆಯಲ್ಲಿ ಗಟ್ಟಿಯಾಗುತ್ತದೆ, ಹೇಗೆ ಮಾಡಿದ್ರೂ ಸಾಫ್ಟ್ ಆದ ಇಡ್ಲಿ ಮಾಡುವುದು ಕಷ್ಟವಾಗುತ್ತದೆ. 

ಬೆಳಗಿನ ಉಪಾಹಾರದ ಹೊತ್ತು ಹಲವರಿಗೆ ಇಡ್ಲಿ ತಿನ್ನುವುದು ಇಷ್ಟವಾಗುತ್ತದೆ. ಆದರೆ ಮನೆಯಲ್ಲಿ ತಯಾರಿಸಿದ ಇಡ್ಲಿಗಳು ಅಷ್ಟು ಮೃದುವಾಗಿರುವುದಿಲ್ಲ. ಹೋಟೆಲ್‌ನಲ್ಲಿ ಮಾಡುವ ಇಡ್ಲಿಗಳು ತುಂಬಾ ಮೃದು ಮತ್ತು ರುಚಿಯಾಗುತ್ತವೆ. ಅಂತಹ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬೇಕೆಂದಿದ್ದರೆ, ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು.

ಇಡ್ಲಿ ಮೃದುವಾಗಲು ಈ ಸಲಹೆ ಪಾಲಿಸಿ

1. ಇಡ್ಲಿ ಹಿಟ್ಟು ತಯಾರಿಸುವಾಗ ಅಕ್ಕಿ ಮತ್ತು ಉದ್ದಿನಬೇಳೆಯ ಪ್ರಮಾಣವು ಮುಖ್ಯವಾಗಿದೆ. ಪ್ರತಿ ಎರಡು ಬಟ್ಟಲು ಅಕ್ಕಿಗೆ ಒಂದು ಲೋಟ ಉದ್ದಿನಬೇಳೆ ಬಳಸಬೇಕು. ಉದ್ದಿನಬೇಳೆ ಹೆಚ್ಚು ಬಳಸಿದರೂ ಇಡ್ಲಿಗಳು ಮೃದುವಾಗಿರುವುದಿಲ್ಲ.

2. ಮೃದುವಾದ ಇಡ್ಲಿಗಳನ್ನು ತಯಾರಿಸಲು ದೋಸೆ ಮಾಡುವಾಗ ಬಾಸ್ಮತಿ ಅಕ್ಕಿಯನ್ನು ಎಂದಿಗೂ ಬಳಸಬಾರದು. ಇಡ್ಲಿ ಅಕ್ಕಿ ಅಥವಾ ಬೇಯಿಸಿದ ಅಕ್ಕಿ ಉತ್ತಮ. ಇಡ್ಲಿ ಹಿಟ್ಟಿಗೆ ಮಧ್ಯಮ ಅಥವಾ ಸಣ್ಣ ಧಾನ್ಯದ ಅಕ್ಕಿಯನ್ನು ಮಾತ್ರ ಬಳಸಿ. ತೆಳುವಾದ ಅಕ್ಕಿಯನ್ನು ಬಳಸಬೇಡಿ.

3. ನೆನೆಸಿದ ಅಕ್ಕಿ ಮತ್ತು ಉದ್ದಿನಬೇಳೆ ರುಬ್ಬಲು ಫುಡ್ ಪ್ರೊಸೆಸರ್ ಬದಲಿಗೆ ವೆಟ್ ಗ್ರೈಂಡರ್ ಬಳಸಿ. ಉದ್ದಿನಬೇಳೆ ಮತ್ತು ಅಕ್ಕಿಯನ್ನು ರುಬ್ಬಲು ಫ್ರಿಜ್‌ನಲ್ಲಿಟ್ಟ ತಣ್ಣೀರನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಬಿಸಿ ಮಾಡುವುದನ್ನು ತಪ್ಪಿಸಲು ರುಬ್ಬುವಾಗ ತಣ್ಣೀರು ಬಳಸಬೇಕು. ತಣ್ಣೀರು ಇಡ್ಲಿಯನ್ನು ಮೃದುಗೊಳಿಸುತ್ತದೆ.

4. ಮೆಂತ್ಯವು ಇಡ್ಲಿಯನ್ನು ಮೃದುವಾಗಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಒಂದೂವರೆ ರಿಂದ ಎರಡು ಚಮಚ ಮೆಂತ್ಯವನ್ನು ನೆನೆಸಿ, ಅಕ್ಕಿ ಮತ್ತು ಬೇಳೆಗಳೊಂದಿಗೆ ರುಬ್ಬಬೇಕು. ಇಡ್ಲಿ ಮೃದುವಾಗುವುದಲ್ಲದೆ ರುಚಿಯೂ ಹೆಚ್ಚುತ್ತದೆ.

5. ಹಿಟ್ಟನ್ನು ರುಬ್ಬಿದ ನಂತರ, ಇಡ್ಲಿ ಮೃದುವಾಗಲು ನಿಮ್ಮ ಕೈಗಳಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಬೀಟ್ ಮಾಡಿ. ನಂತರ ಹುದುಗಲು ಬಿಡಿ. ಹೀಗೆ ಮಾಡುವುದರಿಂದ ಗಾಳಿಯು ಹಿಟ್ಟಿನೊಳಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಇಡ್ಲಿಗಳು ಮೃದುವಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್ ಪೆಟ್ಟಿಗೆಗಳು ಮತ್ತು ಗಾಳಿಯಾಡದ ಪಾತ್ರೆಗಳನ್ನು ಹುದುಗುವಿಕೆಗೆ ಬಳಸಬಾರದು.

ಈ 5 ಸಿಂಪಲ್ ಟ್ರಿಕ್‌ಗಳನ್ನು ಪಾಲಿಸಿದ್ರೆ ಇಡ್ಲಿ ಮೃದುವಾಗಿ ಕೈಯಲ್ಲಿಟ್ಟರೆ ಕರಗುವಂತೆ ಬರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ