logo
ಕನ್ನಡ ಸುದ್ದಿ  /  ಜೀವನಶೈಲಿ  /  Kissing: ಕಿಸ್‌ ಮಾಡೋದು ಹೇಗೆ? ಮತ್ತು ತರಿಸೋ ಮುತ್ತು ಬಯಸೋರಿಗೆ ಇಲ್ಲಿದೆ ಚುಂಬನ ಪಾಠ

Kissing: ಕಿಸ್‌ ಮಾಡೋದು ಹೇಗೆ? ಮತ್ತು ತರಿಸೋ ಮುತ್ತು ಬಯಸೋರಿಗೆ ಇಲ್ಲಿದೆ ಚುಂಬನ ಪಾಠ

Reshma HT Kannada

Jan 06, 2024 04:00 PM IST

google News

ಸಾಂಕೇತಿಕ ಚಿತ್ರ

    • ಕಿಸ್‌ ಕೊಡೋದು ಯಾರಿಗೆ ಇಷ್ಟವಿಲ್ಲ ಹೇಳಿ. ಕಿಸ್‌ ಕೊಡೋದ್ರಲ್ಲಿ ನಾವೇ ಪಂಟ್ರು ಅಂತ ಎಲ್ರೂ ಅಂದ್ಕೋತಾ ಇರ್ತಾರೆ. ಆದ್ರೆ ಕಿಸ್‌ ಕೊಡೋದಕ್ಕೂ ಕ್ರಮ ಇದೆ ಅಂದ್ರೆ ನಂಬ್ಲೇಬೇಕು. ನೀವು ಫಸ್ಟ್‌ ಟೈಮ್‌ ಕಿಸ್‌ ಮಾಡ್ತಾ ಇರ್ಲಿ, ಪದೇ ಪದೇ ಕಿಸ್‌ ಮಾಡೋರಾಗಿರ್ಲಿ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮುತ್ತೇ ಪ್ರಥಮ ಅದುವೇ ಜಗದ ನಿಯಮ... ರವಿಚಂದ್ರನ್‌ ಸಿನಿಮಾದ ಈ ಹಾಡುಗಳನ್ನು ಬಹುತೇಕ ಎಲ್ಲರೂ ಕೇಳಿರುತ್ತಾರೆ. ಮುತ್ತು ಎನ್ನುವುದು ಪ್ರೀತಿಯ ಸಂಕೇತ. ಒಲವಿನ ಭಾಷೆಯನ್ನು ವ್ಯಕ್ತಪಡಿಸುವ ಮಾಧ್ಯಮ. ಪ್ರೀತಿ, ಒಲುವೆ, ರೊಮಾನ್ಸ್‌ ಈ ಎಲ್ಲದರ ಪರಿಭಾಷೆ ಮುತ್ತು. ಆದ್ರೆ ನೀವು ಹೇಗೆ ಮುತ್ತು ಕೊಡುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ.

ಕಿಸ್‌ ಮಾಡುವ ವಿಚಾರದಲ್ಲಿ ನಿಮ್ಮ ವರ್ತನೆಯು ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ಇದು ನಿಮ್ಮ ಲವ್‌ಸ್ಟೋರಿಯ ದಿಕ್ಕನ್ನೇ ಬದಲಿಸಬಹುದು. ಕೆಲವರು ಮುತ್ತು ಕೊಡುವಾಗ ಕೆಲವು ತಪ್ಪು ಮಾಡುತ್ತಾರೆ. ಇನ್ನೂ ಕೆಲವರು ಬಾಯಿ ನೈರ್ಮಲ್ಯ ಕಾಪಾಡಿಕೊಂಡಿರುವುದಿಲ್ಲ. ಹೀಗೆ ಏನೇನೋ ತಪ್ಪುಗಳು ನಡೆದು ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಬೇಸರ ಮೂಡಬಹುದು ಅಥವಾ ನಿಮಗೆ ಮುಜುಗರ ಉಂಟಾಗಬಹುದು.

ನೀವು ಮೊದಲ ಬಾರಿ ಕಿಸ್‌ ಮಾಡುತ್ತಿರಲಿ ಅಥವಾ ಆಗಾಗ ನಿಮ್ಮ ಸಂಗಾತಿಗೆ ಕಿಸ್‌ ಮಾಡುತ್ತಿರಲಿ ಕಿಸ್‌ನ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಂಡಿರಬೇಕು. ಮೊದಲ ಬಾರಿ ನಿಮಗೆ ಪರ್ಫೆಕ್ಟ್‌ ಕಿಸ್‌ ಮಾಡಲು ಬಾರದೇ ಇರಬಹುದು. ಆದರೆ ಪರಿಪೂರ್ಣವಾಗಿ ಮನಃಸ್ಫೂರ್ತಿಯಿಂದ ಕಿಸ್‌ ಮಾಡಬೇಕು.

ಕಿಸ್‌ನ ಪರಿಪೂರ್ಣತೆಗೆ ಟಿಪ್ಸ್‌

ಮುತ್ತು ಎನ್ನುವುದು ದೈಹಿಕ ಬಯಕೆಯ ಭಾಗವಲ್ಲ. ಇದು ಸಂಗಾತಿಗಳಿಬ್ಬರ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ವೃದ್ಧಿಸುತ್ತದೆ. ಹೈದರಾಬಾದ್‌ನ ವೈದ್ಯರಾದ ಡಾ. ಶರ್ಮಿಳಾ ಮಜುಂದಾರ್‌ ಅವರು ಸರಿಯಾದ ಕ್ರಮದಲ್ಲಿ ಕಿಸ್‌ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಟಿಪ್ಸ್‌ ನೀಡಿದ್ದಾರೆ.

ಒಪ್ಪಿಗೆ ಮುಖ್ಯ

ನಿಮ್ಮ ಹಾಗೂ ಸಂಗಾತಿಯ ನಡುವೆ ಎಂತಹದ್ದೇ ಬಾಂಧವ್ಯವಿರಲಿ. ಮುತ್ತು ನೀಡುವ ಮುನ್ನ ಒಪ್ಪಿಗೆ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಕಿಸ್‌ ಎನ್ನುವುದು ಇಬ್ಬರಿಗೂ ಇಷ್ಟವಿದ್ದು ನೀಡುವ ಪ್ರಕ್ರಿಯೆ. ಅಲ್ಲದೇ ಮೊದಲ ಡೇಟ್‌, ಕಿಸ್‌ ಯಾವುದೇ ಆಗಿರಲಿ ಒಂದಿಷ್ಟು ಸಿದ್ಧತೆ ನಡೆಸುವುದು ಮುಖ್ಯವಾಗುತ್ತದೆ. ನಿಮ್ಮ ರೋಮ್ಯಾಂಟಿಕ್‌ ಬದುಕನ್ನು ಮುತ್ತು ಇನ್ನಷ್ಟು ಸುಮಧುರಗೊಳಿಸಬಹುದು. ಆದರೆ ಇದಕ್ಕೆ ಸಂಗಾತಿಯು ಮನಃಪೂರ್ವಕವಾಗಿ ಒಪ್ಪಿಗೆ ನೀಡುವುದು ಸಹ ಬಹಳ ಮುಖ್ಯವಾಗುತ್ತದೆ.

ಹಣೆಗೆ ಹಣೆ ತಾಕದಿಲಿ

ಕಿಸ್‌ ಮಾಡುವಾಗ ಮುಖವನ್ನು ನೇರವಾಗಿ ಇರಿಸಿ ಕಿಸ್‌ ಮಾಡದಿರಿ. ಹಣೆಗೆ ಹೆಣೆ ತಾಕುವುದು, ಮೂಗಿಗೆ ಮೂಗು ತಾಕುವುದು ಈ ರೀತಿ ಮಾಡುವುದರಿಂದ ಖುಷ ಸಿಗದೇ ಇರಬಹುದು. ಮುಖವನ್ನು ಕೊಂಚ ಬಾಗಿಸಿ ತುಟಿಗೆ ತುಟಿಯೊತ್ತಿ. ಕಿಸ್‌ ಮಾಡುವಾಗ ನೋವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.

ಕಣ್ಣೋಟ ಸಂಧಿಸಲಿ

ಹಲವರು ಕಿಸ್‌ ಮಾಡುವ ಕಣ್ಣು ಮುಚ್ಚುತ್ತಾರೆ. ಆದರೆ ಆತ್ಮೀಯತೆ ಹೆಚ್ಚಬೇಕು ಅಂದ್ರೆ ಕಣ್ಣು ಕಣ್ಣು ಕಲೆತಿರಬೇಕು. ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಿಸ್‌ ಮಾಡುವುದರಿಂದ ಒಲುಮೆ ಹೆಚ್ಚುತ್ತದೆ.

ಚುಂಬನಕ್ಕಾಗಿ ಒಲವು ತೋರುವುದು

ಚುಂಬನ ಎನ್ನುವುದು ಒಲುಮೆಯಿಂದ ತುಂಬಿರಬೇಕೇ ಹೊರತು ಇದು ಒತ್ತಾಯದಿಂದ ಮಾಡುವುದಲ್ಲ. ಚುಂಬಿಸುವ ಮೊದಲು ಸಂಗಾತಿಯ ದೇಹಭಾಷೆಯನ್ನು ಅರ್ಥೈಸಿಕೊಳ್ಳಿ. ನಿಮ್ಮ ಚುಂಬನವು ಸಂಗಾತಿಯ ಮನ ಸಂತೈಸುವಂತಿರಲಿ.

ನಿಧಾನಕ್ಕೆ ಸೌಮ್ಯವಾಗಿ ಚುಂಬಿಸಿ

ಸಂಗಾತಿಗೆ ಕಿಸ್‌ ಮಾಡುವಾಗ ಉತ್ಸಾಹ ಇರುವುದು ಸಹಜ. ಆದರೆ ಈ ಉತ್ಸಾಹ ಅತಿಯಾಗುವುದು ಒಳ್ಳೆಯದಲ್ಲ. ಸೌಮ್ಯವಾಗಿ, ನಿಧಾನಕ್ಕೆ ಚುಂಬಿಸಿ. ಭಾವನೆ ಇರಲಿ ಆದರೆ ಒತ್ತಡ ಬೇಡ

ದೀರ್ಘ ಚುಂಬನ

ನೀವು ನಿಮ್ಮ ಸಂಗಾತಿ ಇಬ್ಬರೂ ಚುಂಬನವನ್ನು ಇಷ್ಟಪಟ್ಟರೆ ದೀರ್ಘ ಚುಂಬನ ನೀಡಿ. ಫ್ರೆಂಚ್‌ಕಿಸ್‌ನಂತಹ ವಿಧವನ್ನೂ ಪ್ರಯತ್ನಿಸಬಹುದು. ದೀರ್ಘ ಚುಂಬನ ಹಲವರಿಗೆ ಇಷ್ಟವಾಗುತ್ತದೆ.

ಭಾವ ಚೆನ್ನಾಗಿರಲಿ

ನೀವು ಮುತ್ತು ನೀಡುವ ರೀತಿಯಿಂದಲೇ ನಿಮ್ಮ ಉದ್ದೇಶ ಏನು ಎಂಬುದು ಅರಿವಾಗುತ್ತದೆ. ಮುತ್ತು ನೀಡುವಾಗ ನಿಮ್ಮ ಭಾವ ಹೇಗಿರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಇದು ಕೊಡುವ, ತೆಗೆದುಕೊಳ್ಳುವ ಭಾವ ಎಲ್ಲವೂ ಮುಖ್ಯವಾಗುತ್ತದೆ.

ಕೈಗಳನ್ನು ಬಳಸಿ

ಚುಂಬನ ಎಂದರೆ ಕೇವಲ ಕೈ ಹಾಗೂ ತುಟಿ ಬಳಸುವುದು ಮಾತ್ರವಲ್ಲ. ತುಟಿಗಳಿಗೆ ಕಿಸ್‌ ಮಾಡುವಾಗ ಕೈಗಳಿಂದ ಸೊಂಟ ಹಿಡಿದುಕೊಳ್ಳುವುದು, ಕೈ ಹಿಡಿದುಕೊಳ್ಳುವುದು ಮಾಡುವುದರಿಂದ ನಿಮ್ಮ ನಡುವಿನ ಬಾಂಧವ್ಯ ವೃದ್ಧಿಯಾಗುತ್ತದೆ. ಚುಂಬಿಸುವಾಗ ಕೂದಲು ನೇವರಿಸುವುದು ಕೂಡ ಮಾಡಬಹುದು.

ಬಾಯಿಯ ನೈರ್ಮಲ್ಯ

ತುಟಿಗೆ ಚುಂಬಿಸುವಾಗ ಹಲ್ಲು, ಬಾಯಿ, ನಾಲಿಗೆಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಾಯಿ ಸ್ವಚ್ಛವಾಗಿಲ್ಲ ಎಂದರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಅಹಸ್ಯ, ಬೇಸರ ಮೂಡಬಹುದು. ಇದರಿಂದ ನೀವು ಕೂಡ ಮುಜುಗರ ಅನುಭವಿಸಬಹುದು.

ಕಿಸ್‌ ಮಾಡುವುದರಿಂದಾಗುವ ಆರೋಗ್ಯ ಪ್ರಯೋಜನಗಳು

  1. ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಚುಂಬಿಸುವಾಗ, ಬಹಳಷ್ಟು ಲಾಲಾರಸವು ಸ್ರವಿಸುತ್ತದೆ, ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

2. ಚುಂಬನವು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ

ಚುಂಬನವು ಒತ್ತಡದ ಮಟ್ಟ ಹಾಗೂ ಆತಂಕವನ್ನು ನಿವಾರಿಸುತ್ತದೆ. ಚುಂಬನ ಖುಷಿಯಿಂದಾಗಿ ಮೆದುಳು ಆಕ್ಸಿಟೋನಿನ್‌, ಡೊಪಮೈನ್‌ ಹಾಗೂ ಸಿರೋಟೋನಿನ್‌ನಂತಹ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡದ ಭಾವವನ್ನು ತಗ್ಗಿಸುತ್ತದೆ.

ಸಂಗಾತಿ ಹಾಗೂ ನೀವು ಚುಂಬಿಸುವಾಗ ಉಗುಳು ವಿನಿಮಯವಾಗುವ ಕಾರಣ ಇದು ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೊಸ ಸೂಕ್ಷ್ಮಜೀವಿಗಳು ದೇಹ ಪ್ರವೇಶಿಸದಂತೆ ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.

4. ಲೈಂಗಿಕ ತೃಪ್ತಿಯನ್ನು ಹೆಚ್ಚಿಸುತ್ತದೆ

ಚುಂಬನವು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಇದು ಪರಾಕಾಷ್ಠೆಗೆ ಕಾರಣವಾಗಬಹುದು.

5. ಚುಂಬನವು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ

ದೀರ್ಘಕಾಲ ಚುಂಬಿಸುವುದರಿಂದ ಕ್ಯಾಲೊರಿ ಬರ್ನ್‌ ಆಗುತ್ತದೆ. ದೀರ್ಘಕಾಲದ ಚುಂಬನವು ದೇಹ ತೂಕ ಕಡಿಮೆ ಮಾಡಲು ಸಹಕಾರಿ.

ಚುಂಬನಕ್ಕೆ ಹೇಗೆ ಸಿದ್ಧವಾಗಬೇಕು?

ಚುಂಬನ ವಿಷಯಕ್ಕೆ ಬಂದಾಗ ಬಾಯಿ ಅಥವಾ ಉಸಿರಿನ ದುರ್ನಾತದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಉಸಿರಿನ ದುರ್ನಾತ ಬಾರದಂತೆ ನೋಡಿಕೊಳ್ಳಿ. ಇದಕ್ಕಾಗಿ ಸರಿಯಾಗಿ ಬ್ರಪ್‌ ಮಾಡಿ ಅಥವಾ ಮೌತ್‌ ಪ್ರೆಶನರ್‌ ಬಳಸಿ.

* ಬಾಯಿಯ ನೈರ್ಮಲ್ಯ ತಡೆಯಲು ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುವುದು ಅವಶ್ಯ. ಚುಂಬಿಸುವ ಮೊದಲು ಬಾಯಿಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ಮೌತ್‌ವಾಶ್‌ ಬಳಸಿ.

* ಫ್ಲೋಸಿಂಗ್‌ ಮಾಡುವ ಮೂಲಕ ಹಲ್ಲುಗಳ ನಡುವೆ ಸಿಲುಕಿರುವ ಕೊಳೆಯನ್ನು ತೆಗೆದು ಹಾಕಬಹುದು.

* ಹಲ್ಲುಜ್ಜಿದ ನಂತರ ನಾಲಿಗೆ ಸ್ವಚ್ಛ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಾಲಿಗೆ ಸ್ವಚ್ಛವಾಗಿಲ್ಲದೇ ಇದ್ದರೆ ಬಾಯಿಯ ದುರ್ನಾತಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಕೂಡ ಉತ್ಪತ್ತಿಯಾಗಬಹುದು.

* ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಉಸಿರಿನ ದುರ್ಗಂಧ ನಿವಾರಣೆಯಾಗುತ್ತದೆ.

* ಸಕ್ಕರೆ ಸೇವನೆ ಕಡಿಮೆ ಮಾಡಿ. ಹೆಚ್ಚು ಸಕ್ಕರೆ ತಿಂದಷ್ಟು ಬ್ಯಾಕ್ಟೀರಿಯಾಗಳ ಉತ್ಪತ್ತಿ ಹೆಚ್ಚುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ