ಇಹಾನ್, ದರ್ಶಿತ್, ಅನ್ಶುಲ್‌ನಿಂದ ಅಹನಾ, ಆರುಷಿವರೆಗೆ; ಮಗುವಿಗೆ ಇಡಬಹುದಾದ ಅರ್ಥಪೂರ್ಣ, ಟ್ರೆಂಡಿಂಗ್ ಹೆಸರುಗಳ ಪಟ್ಟಿ ಇಲ್ಲಿದೆ ಗಮನಿಸಿ
Oct 11, 2024 03:52 PM IST
ಮಕ್ಕಳಿಗೆ ಇಡಬಹುದಾದ ಅರ್ಥಪೂರ್ಣ ಹೆಸರುಗಳು
- ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಕಾಲದ, ಅರ್ಥಪೂರ್ಣ ಹೆಸರುಗಳನ್ನು ಮಗುವಿಗೆ ಇರಿಸುವ ಟ್ರೆಂಡ್ ಶುರುವಾಗಿದೆ. ಹಳೆಯ ಕಾಲದಲ್ಲೂ ಇಂದಿನ ಟ್ರೆಂಡ್‌ಗೆ ಹೊಂದಿಕೆಯಾಗುವ ಹಾಗೂ ಬಹಳ ಅರ್ಥಪೂರ್ಣ ಹೆಸರುಗಳಿದ್ದವು. ಋಷಿ–ಮುನಿಗಳು, ದೇವತೆಗಳಿಗಿದ್ದ ಹೆಸರುಗಳು ಈಗ ಟ್ರೆಂಡ್‌ನಲ್ಲಿವೆ. ನೀವು ಮಗುವಿಗೆ ಹೆಸರಿಡಲು ಯೋಚಿಸುತ್ತಿದ್ದರೆ ಈ ಹೆಸರುಗಳನ್ನೊಮ್ಮೆ ಗಮನಿಸಿ.
ಮಗುವನ್ನು ಪಾಲನೆ ಮಾಡುವಷ್ಟೇ ಕಷ್ಟಕರವಾಗಿರುವುದು ಮಗುವಿಗೆ ಹೆಸರಿಡುವುದು ಎಂದು ಹಲವು ಪೋಷಕರು ಹೇಳಿದ್ದನ್ನು ನೀವು ಗಮನಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಒಂದು ಸುಂದರ ಹಾಗೂ ವಿಭಿನ್ನ ಎನ್ನಿಸುವ ಮಕ್ಕಳ ಹೆಸರುಗಳನ್ನು ನೀವು ಕೇಳಿರಬಹುದು. ಈ ಎಲ್ಲದರ ನಡುವೆ ಪ್ರಾಚೀನ ಹೆಸರುಗಳನ್ನು ಮಕ್ಕಳಿಗೆ ಇರಿಸುವ ಟ್ರೆಂಡ್ ಕೂಡ ಶುರುವಾಗಿದೆ.
ಮಗುವಿಗೆ ಹೆಸರಿಡುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಗುವಿನ ಹೆಸರು ಅವನ ವ್ಯಕ್ತಿತ್ವ ಮತ್ತು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ. ಮಗುವಿಗೆ ಹೆಸರನ್ನು ಆಯ್ಕೆಮಾಡುವಾಗ ಕುಟುಂಬದ ಪ್ರತಿಯೊಬ್ಬರೂ ಹೆಚ್ಚಿನ ಗಮನವನ್ನು ಕೊಡಲು ಇದು ಕಾರಣವಾಗಿದೆ. ನಿಮ್ಮ ಮಗುವಿನ ಹೆಸರು ಇತರ ಮಕ್ಕಳಿಗಿಂತ ವಿಭಿನ್ನ ಮತ್ತು ಅರ್ಥಪೂರ್ಣವಾಗಿರಬೇಕು ಎಂದು ನೀವು ಬಯಸಿದರೆ, ಈ ಕೆಳಗಿನ ಪಟ್ಟಿಯಲ್ಲಿರುವ ಹೆಸರುಗಳನ್ನ ಒಮ್ಮೆ ಗಮನಿಸಿ. ಇಲ್ಲಿರುವ ಪ್ರಾಚೀನ ಕಾಲ, ಟ್ರೆಂಡಿ ಆಗಿರುವ, ಅರ್ಥಪೂರ್ಣ ಹೆಸರುಗಳು. ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳು ಇಬ್ಬರಿಗೂ ಸೂಕ್ತವಾಗುವ ಹೆಸರುಗಳು ಇಲ್ಲಿವೆ ನೋಡಿ.
ಗಂಡುಮಕ್ಕಳ ಹೆಸರುಗಳು
ಭಾನು - ಬೆಳಕಿನ ಕಿರಣ
ಭಾಸ್ಕರ್- ಸೂರ್ಯ
ಇಶಾನ್ - ಸೂರ್ಯ
ಕಪಿಲ್-ಸೂರ್ಯ
ಕಯಾನ್- ನಕ್ಷತ್ರ
ದೀಪ - ದೀಪ, ಬೆಳಕು
ಆಕರ್ಷ್ - ಆಕರ್ಷಿತ, ಆಕರ್ಷಕ
ದಿವಿಜ್ - ಸ್ವರ್ಗದಲ್ಲಿ ಜನಿಸಿದ ಮಗು
ದರ್ಶಿತ್ - ಗೌರವವನ್ನು ಪಡೆಯುವವನು
ವಿಹಾನ್ - ಮುಂಜಾವು
ಕಿಯೋನ್ - ಉದಯಿಸುವ ಸೂರ್ಯ
ಅನ್ಶುಲ್ - ಸೂರ್ಯನ ಬೆಳಕು
ಮೆಹುಲ್ - ಮಳೆ
ಅಯುಕ್ತ್-ಶ್ರೀ ಕೃಷ್ಣ
ಲವಿತ್-ಭಗವಾನ್ ಶಿವ
ರಿಶನ್ – ಮಹಾಶಿವನನ್ನು ರಿಶನ್ ಎಂದು ಕರೆಯಲಾಗುತ್ತದೆ
ರಿಷಿತ್- ರಿಷಿತ್ ಎಂಬ ಹೆಸರಿನ ಅರ್ಥ ಸರ್ವೋಚ್ಚ, ಉತ್ತಮ ಎಂದು.
ಯಶ್ಮಿತ್ - ಯಶ್ಮಿತ್ ಹೆಸರು ಎಂದರೆ ಜನಪ್ರಿಯ, ಪ್ರಸಿದ್ಧ ಎಂದರ್ಥ.
ಹೆಣ್ಣುಮಕ್ಕಳ ಹೆಸರುಗಳು
ತಂಗಾಳಿ- ತಂಪಾದ ಗಾಳಿ
ಅಹನಾ - ಸೂರ್ಯನ ಮೊದಲ ಕಿರಣ
ಅರ್ನಾ – ಲಕ್ಷ್ಮಿ
ಕಿಯಾರಾ - ಆತ್ಮೀಯ
ಹಾರೈಕ್ಯಾ - ಹಾರೈಕೆ ಮಾಡುವವಳು
ಆರುಷಿ - ಸೂರ್ಯನ ಮೊದಲ ಕಿರಣ
ಅವನಿ-ಭೂಮಿ
ಇರಾ - ಭೂಮಿ
ಅಶ್ರುತಿ - ಅಶ್ರುತಿ ಎಂಬ ಹೆಸರು ಧೈರ್ಯ, ವೇಗ ಮತ್ತು ಚಲನೆ ಎಂದರ್ಥ.
ಕಾರ್ಣಿಕಾ - ಕಾರ್ಣಿಕಾ ಎಂಬ ಹೆಸರು ಕಮಲದ ಹೃದಯ ಎಂದರ್ಥ.
ಪಾನ್ವಿ-ಪಾನ್ವಿ ಎಂಬ ಹೆಸರಿನ ಅರ್ಥ ದೇವರು, ಈಶ್ವರ ಮತ್ತು ಹಬ್ಬ ಎಂಬೆಲ್ಲ ಅರ್ಥವನ್ನು ಹೊಂದಿವೆ.
ನಿಮಗೆ ಇತ್ತೀಚೆಗೆ ಮಗು ಜನಿಸಿದ್ದು ನೀವು ಮಗುವಿಗೆ ವಿಶೇಷವಾದ ಹೆಸರು ಇಡಬೇಕು ಎಂದು ಯೋಚಿಸುತ್ತಿದ್ದರೆ ಈ ಪಟ್ಟಿಯಲ್ಲಿರುವ ಹೆಸರು ಖಂಡಿತ ನಿಮಗೆ ಇಷ್ಟವಾಗುತ್ತದೆ. ಒಮ್ಮೆ ಗಮನಿಸಿ.
ವಿಭಾಗ