ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆಧಾರ್ ಕಾರ್ಡ್ ಮಾಹಿತಿಯನ್ನು ಪರಿಶೀಲಿಸುವುದು ಹೇಗೆ; ಇಲ್ಲಿದೆ ಮಾಹಿತಿ
Feb 28, 2024 04:32 PM IST
ಆಧಾರ್ ಕಾರ್ಡ್‌ನಲ್ಲಿರುವ ಕ್ಯೂಆರ್ ಬಳಸಿ ಅದರಲ್ಲಿನ ಮಾಹಿತಿಯನ್ನು ಪರಿಶೀಲನೆ ಮಾಡಬಹದು. ಅದರ ವಿಧಾನವನ್ನು ಇಲ್ಲಿ ತಿಳಿಯಿರಿ.
- ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅವನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಆಧಾರಿತ ಆ್ಯಪ್‌ಗಳ ಮೂಲಕ ಸ್ಕ್ಯಾನ್ ಮಾಡಿ ಮಾಹಿತಿ ಪರಿಶೀಲನೆ ಮಾಡಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ.
ಬೆಂಗಳೂರು: ಭಾರತದ ವಿಶಿಷ್ಟ ಗುರಿತಿನ ಪ್ರಾಧಿಕಾರ-(UIDAI) ಭಾರತ ಪ್ರತಿಯೊಬ್ಬ ಪ್ರಜೆಗೂ 12 ಸಂಖ್ಯೆಯ ಆಧಾರ್ ಅನ್ನು ನೀಡುತ್ತದೆ. ಈ ವಿಶಿಷ್ಟ ಗುರಿತಿನ ಸಂಖ್ಯೆನ್ನು ಎಲ್ಲಾ ಭಾರತೀಯ ಹೊಂದುವುದು ಕಡ್ಡಾಯವಾಗಿದೆ. ದೇಶದ ಯಾವುದೇ ಮೂಲೆಗೆ ಹೋದರೂ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ತೋರಿಸಬಹುದು.
ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳು, ಬ್ಯಾಂಕ್ ವಹಿವಾಟು, ಸಿಮ್ ಕಾರ್ಡ್ ಪಡೆಯಲು ಯಾವುದೇ ವ್ಯವಹಾರ ಮಾಡಬೇಕಾದರೆ ಆದಾರ್ ಕಾರ್ಡ್ ಬೇಕೇ ಬೇಕು. ಆಧಾರ್‌ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಲು ಕ್ಯೂಆರ್ ಕೋಡ್ ಬಳಸಬಹುದು ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ.
ಆಧಾರ್ ಕಾರ್ಡ್‌ನಲ್ಲಿರುವ ಕ್ಯುಆರ್ ಅನ್ನು ಯುಐಡಿಎಐ ಎಂಆಧಾರ್ ಅಪ್ಲಿಕೇಶನ್ ಬಳಸಿ ಮಾತ್ರ ಮಾಹಿತಿ ನೋಡಬಹುದು. ಇಲ್ಲವೇ ಆಧಾರ್ ಪ್ರಾಧಿಕಾರ ಮನುಮತಿ ನೀಡಿರುವ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿರುವ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ ಹಾಗೂ ವಿಂಡೋಸ್ ಆಧಾರಿತ ಆ್ಯಪ್‌ಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಅಪ್ಲಿಕೇಶನ್‌ಗಳನ್ನ ಬಳಸಿ ಪರಿಶೀಲನೆ ಮಾಡಬಹುದು. ಇದಷ್ಟೇ ಅಲ್ಲ, ಯುಐಡಿಎಐ ವೆಬ್‌ಸೈಟ್ ಆನ್‌ಲೈನ್, ಆಫ್‌ಲೈನ್‌ಗಳೂ ಅವಕಾಶ ಕಲ್ಪಿಸಲಾಗಿದೆ. ಟೋಲ್ ಫ್ರಿ ನಂಬರ್ 1947 ಕರೆ ಮಾಡಿ ಅಥವಾ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕವು ಮಾಹಿತಿನ್ನು ತಿಳಿಯಬಹುದು.
ಆಧಾರ್ ಆ್ಯಪ್‌ನಲ್ಲಿ ಕ್ಯೂರ್‌ಆರ್ ಕೋಡ್ ಬಳಿಸಿ ಆಧಾರ್ ಮಾಹಿತಿ ಪರಿಶೀಲಿಸುವುದು ಹೇಗೆ
ಹಂತ 1: ಮೊದಲು ಎಂಆಧಾರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಆ್ಯಪ್ ಡೌನ್‌ಲೋಡ್ ನಂತರ ಅದನ್ನು ಓಪನ್ ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನರ್ ತೆರೆಯಿರಿ
ಹಂತ 3: ಪ್ರಸ್ತುತ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
ಹಂತ 4: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಆಧಾರ್ ಕಾರ್ಡ್ ಹೊಂದಿರುವವರ ಹೆಸರು, ಲಿಂಗ, ವಿಳಾಸ, ಹುಟ್ಟಿದ ದಿನಾಂಕ ಹಾಗೂ ಅವರ ಭಾವಚಿತ್ರ ತೆರೆದುಕೊಳ್ಳುತ್ತದೆ
ಹಂತ 5: ಆಧಾರ್‌ನಲ್ಲಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಅಥವಾ ಯಾವುದಾದರು ಮಾಹಿತಿಯನ್ನು ಅಪ್ಡೇಟ್ ಮಾಡಬೇಕಾ ಎಂಬುದನ್ನು ಪರಿಶೀಸಿಕೊಳ್ಳಬಹುದು
ಇದನ್ನು ಹೊರತು ಪಡಿಸಿ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ನಿಮ್ಮ ಆಧಾರ್ ಕಾಡ್‌ನ 12 ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಬೇಕು. ಆ ನಂತರ ಆಧಾರ್‌ನ ಮಾಹಿತಿ ವೀಕ್ಷಿಸಬಹುದು.
5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್
ಯುಐಡಿಎಐ ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಆಧಾರ್ ನೀಡುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ಇದು ನೀಲಿ ಬಣ್ಣದಲ್ಲಿ ಇರುತ್ತದೆ. ಹೀಗಾಗಿ ಇದನ್ನು ಬ್ಲೂ ಆಧಾರ್ ಕಾರ್ಡ್ ಅಂತಲೂ ಕರೆಯಲಾಗುತ್ತದೆ. ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟವರಿಗೆ ನೀಡುವ ಆಧಾರ್ ಕಾರ್ಡ್ ಬಿಳಿ ಬಣ್ಣದಿಂದ ಕೂಡಿರುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com )