logo
ಕನ್ನಡ ಸುದ್ದಿ  /  ಜೀವನಶೈಲಿ  /  ಐಫೋನ್‌ 16 ಸರಣಿ ಪ್ರಿಆರ್ಡರ್‌ ಭಾರತದಲ್ಲಿ ಸೆಪ್ಟೆಂಬರ್‌ 13ರಿಂದ ಆರಂಭ; ಹಳೆ ಐಫೋನ್‌ ವಿನಿಮಯ ಮಾಡಿಕೊಂಡ್ರೆ ಎಷ್ಟು ಲಾಭ?

ಐಫೋನ್‌ 16 ಸರಣಿ ಪ್ರಿಆರ್ಡರ್‌ ಭಾರತದಲ್ಲಿ ಸೆಪ್ಟೆಂಬರ್‌ 13ರಿಂದ ಆರಂಭ; ಹಳೆ ಐಫೋನ್‌ ವಿನಿಮಯ ಮಾಡಿಕೊಂಡ್ರೆ ಎಷ್ಟು ಲಾಭ?

Praveen Chandra B HT Kannada

Sep 13, 2024 10:22 AM IST

google News

ಐಫೋನ್‌ 16 ಸರಣಿ ಪ್ರಿಆರ್ಡರ್‌ ಭಾರತದಲ್ಲಿ ಸೆಪ್ಟೆಂಬರ್‌ 13ರಿಂದ ಆರಂಭ

  • iPhone 16 series pre-order: ಐಫೋನ್‌ 16 ಸೀರಿಸ್‌ ಖರೀದಿದಾರರಿಗೆ ಆಪಲ್‌ ಕಂಪನಿಯು ದೊಡ್ಡಮಟ್ಟದಲ್ಲಿ ಟ್ರೇಡ್‌ ಇನ್‌ ಆಫರ್‌ ನೀಡುತ್ತಿದೆ. ಹಳೆಯ ಐಫೋನ್‌ಗಳನ್ನು ವಿನಿಮಯ ಮಾಡಿಕೊಂಡು ಹೊಸತು ಖರೀದಿಸಬೇಕು. ಪ್ರಿಆರ್ಡರ್‌ ಮತ್ತು ಐಫೋನ್‌ 16 ಮಾರಾಟದ ದಿನಾಂಕಗಳ ವಿವರವೂ ಇಲ್ಲಿದೆ.

ಐಫೋನ್‌ 16 ಸರಣಿ ಪ್ರಿಆರ್ಡರ್‌ ಭಾರತದಲ್ಲಿ ಸೆಪ್ಟೆಂಬರ್‌ 13ರಿಂದ ಆರಂಭ
ಐಫೋನ್‌ 16 ಸರಣಿ ಪ್ರಿಆರ್ಡರ್‌ ಭಾರತದಲ್ಲಿ ಸೆಪ್ಟೆಂಬರ್‌ 13ರಿಂದ ಆರಂಭ (Apple)

iPhone 16 series pre-order: ಸೆಪ್ಟೆಂಬರ್‌ 9ರಂದು ಜಾಗತಿಕವಾಗಿ ಆಪಲ್‌ ಕಂಪನಿಯು ತನ್ನ ನೂತನ ಐಫೋನ್‌ 16 ಸರಣಿಗಳನ್ನು ಬಿಡುಗಡೆ ಮಾಡಿತ್ತು. ಹಳೆಯ ಐಫೋನ್‌ಗೆ ಹೋಲಿಸಿದರೆ ಒಂದಿಷ್ಟು ಅಪ್‌ಗ್ರೇಡ್‌ ಮತ್ತು ಹೊಸ ಫೀಚರ್‌ಗಳು ಹೊಸ ಐಫೋನ್‌ನಲ್ಲಿವೆ. ಸಾಕಷ್ಟು ಐಫೋನ್‌ ಪ್ರಿಯರು ಹೊಸ ಐಫೋನ್‌ ಬುಕ್ಕಿಂಗ್‌ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇಂದು ಅಂದ್ರೆ ಸೆಪ್ಟೆಂಬರ್‌ 13 ಸಂಜೆಯಿಂದ ಐಫೋನ್‌ 13 ಪ್ರಿಆರ್ಡರ್‌ ಆರಂಭವಾಗಲಿದೆ. ಸೆಪ್ಟೆಂಬರ್‌ 20ರಿಂದ ಅಧಿಕೃತವಾಗಿ ಮಾರಾಟ ಆರಂಭವಾಗಿದೆ. ಈ ಐಫೋನ್‌ 16 ಖರೀದಿಸಲು ಏನೆಲ್ಲ ಆಫರ್‌ಗಳಿವೆ, ಏನೆಲ್ಲ ಡೀಲ್‌ಗಳು, ಟ್ರೇಡ್‌ ಇನ್‌ ಪ್ರಯೋಜನಗಳಿವೆ ಎಂದು ತಿಳಿಯೋಣ. ಇಂತಹ ಆಫರ್‌ಗಳನ್ನು ಬಳಸಿದ್ರೆ ಮಾತ್ರ ಐಫೋನ್‌ ಅನ್ನು ಕಡಿಮೆ ದರದಲ್ಲಿ ಖರೀದಿಸಲು ಸಾಧ್ಯವಿದೆ.

ಭಾರತದಲ್ಲಿ ಆಪಲ್‌ ಐಫೋನ್‌ 16 ಪ್ರಿಆರ್ಡರ್‌ ದಿನಾಂಕ ಮತ್ತು ಸಮಯ

ಸೆಪ್ಟೆಂಬರ್‌ 13ರ ಸಂಜೆ 5.30 ಗಂಟೆಗೆ ಪ್ರಿಆರ್ಡರ್‌ ಆರಂಭವಾಗಲಿದೆ. ಆಪಲ್‌ ಇಂಡಿಯಾ ವೆಬ್‌ ಸೈಟ್‌ನಲ್ಲಿ ಹೊಸ ಐಫೋನ್‌ 16 ಮಾಡೆಲ್‌ಗಳನ್ನು ಆಸಕ್ತರು ರಿಸರ್ವ್‌ ಮಾಡಿಡಬಹುದು. ಬಿಕೆಸಿ ಮುಂಬೈ, ಸಾಕೇತ್‌ ಡೆಲ್ಲಿ, ಬೆಂಗಳೂರು ಆಪಲ್‌ ಸ್ಟೋರ್‌ಗಳು ಸೇರಿದಂತೆ ಆಫ್‌ಲೈನ್‌ ಆಪಲ್‌ ಅಂಗಡಿಗಳಲ್ಲಿಯೂ ಐಫೋನ್‌ ಪ್ರಿಬುಕ್ಕಿಂಗ್‌ ಮಾಡಬಹುದಾಗಿದೆ. ಹೊಸ ಲಾಂಚ್‌ ಆಫರ್‌ ಆಗಿ ಆಪಲ್‌ ಕಂಪನಿಯು ಸಾಕಷ್ಟು ಬ್ಯಾಂಕ್‌ ಮತ್ತು ಟ್ರೇಡ್‌ ಇನ್‌ ಆಫರ್‌ಗಳನ್ನು ನೀಡುತ್ತಿದೆ.

ಐಫೋನ್‌ 16 ಸೀರಿಸ್‌: ಆಪಲ್‌ನಿಂದ ಟ್ರೇಡ್‌ ಇನ್‌ ಆಫರ್‌ಗಳು

ಆಪಲ್‌ನ ಟ್ರೇಡ್‌ ಇನ್‌ ಪ್ರೋಗ್ರಾಮ್‌ನಿಂದಾಗಿ ಐಫೋನ್‌ ಖರೀದಿದಾರರು ತಮ್ಮ ಹಳೆಯ ಐಫೋನ್‌ಗಳನ್ನು ಹೊಸ ಐಫೋನ್‌ ಮಾಡೆಲ್‌ಗಳ ಜತೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಐಫೋನ್‌ 16 ಖರೀದಿಸಲು ಬಯಸುವವರು ತಮ್ಮ ಐಫೋನ್‌ 15, ಐಫೋನ್‌ 14, ಐಫೋನ್‌ 13 ಮತ್ತು ಇತರೆ ಐಫೋನ್‌ ಪ್ರೊ ಮಾಡೆಲ್‌ಗಳನ್ನು ನೀಡಿ ಹೊಸ ಐಫೋನ್‌ ಖರೀದಿಸಬಹುದು.

ಐಫೋನ್‌ 16 ಮಾಡೆಲ್‌ ಖರೀದಿಸಲು ಬಯಸುವವರು ನಿಮ್ಮಲ್ಲಿರುವ ಐಫೋನ್‌ 15 ಅನ್ನು ಎಕ್ಸ್‌ಚೇಂಜ್‌ ಮಾಡಿಕೊಂಡರೆ 37900 ರೂಪಾಯಿ ಡಿಸ್ಕೌಂಟ್‌ ದೊರಕುತ್ತದೆ. ಐಫೋನ್‌ 14 ಬಳಕೆದಾರರಿಗೆ 32100 ರೂಪಾಯಿ ಡಿಸ್ಕೌಂಟ್‌ ದೊರಕುತ್ತದೆ. ಐಫೋನ್‌ 13 ಎಕ್ಸ್‌ಚೇಂಜ್‌ ಮಾಡಿದ್ರೆ 31000 ರೂಪಾಯಿ ದೊರಕುತ್ತದೆ. ನಿಮ್ಮಲ್ಲಿ ಪ್ರೊ ಮಾಡೆಲ್‌ ಇದ್ದರೆ ಉದಾಹರಣೆಗೆ ಐಫೋನ್‌ 14 ಪ್ರೊ ಮ್ಯಾಕ್ಸ್‌ ಹೊಂದಿದ್ದರೆ 57000 ರೂಪಾಯಿವರೆಗೆ ಡಿಸ್ಕೌಂಟ್‌ ದೊರಕುತ್ತದೆ.

ಐಫೋನ್‌ 16 ಸೀರಿಸ್‌ ದರಗಳು ಮತ್ತು ಬ್ಯಾಂಕ್‌ ಆಫರ್‌ಗಳು

ಭಾರತದಲ್ಲಿ ವೆನಿಲ್ಲಾ ಐಫೋನ್‌ 16 ದರ 79900 ರೂಪಾಯಿ ಇದೆ. ಐಫೋನ್‌ 16 ಪಲ್ಸ್‌ 128GB ಆವೃತ್ತಿಯ ರಿಟೇಲ್‌ ದರ 89900 ರೂಪಾಯಿ ಇದೆ. ಐಫೋನ್‌ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ದರಗಳು ಕ್ರಮವಾಗಿ 119900 ರೂ ಮತ್ತು 144900 ರೂ ಇವೆ. ಆಪಲ್‌ ಇಂಡಿಯಾ ವೆಬ್‌ ಸೈಟ್‌ನಲ್ಲಿ ಅಮೆರಿಕನ್‌ ಎಕ್ಸ್‌ಪ್ರೆಸ್‌, ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಬಳಸಿ ಖರೀದಿಸುವವರಿಗೆ 5 ಸಾವಿರ ರೂಪಾಯಿ ಡಿಸ್ಕೌಂಟ್‌ ದೊರಕಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ