ಆಹಾರದಲ್ಲೇ ಇದೆ ಪರಿಹಾರ; ಭಾರತದಲ್ಲಿದೆ ಮನುಷ್ಯ ಸೇವಿಸಬಹುದಾದ 200ಕ್ಕೂ ಅಧಿಕ ಹಸಿರು ಸೊಪ್ಪುಗಳು - ಆಹಾರ ತಜ್ಞೆ ಡಾ. ಎಚ್. ಎಸ್ ಪ್ರೇಮಾ
Sep 24, 2024 08:55 AM IST
ಆಹಾರ ತಜ್ಞೆ ಡಾ. ಎಚ್. ಎಸ್ ಪ್ರೇಮಾ
- ಹಸಿರು ಸೊಪ್ಪುಗಳಿಂದ ಎಷ್ಟೆಲ್ಲ ಪ್ರಯೋಜನ ಇದೆ. ಮತ್ತು ಮಾನವ ತಿನ್ನಬಹುದಾದ ಸೊಪ್ಪುಗಳೆಷ್ಟಿದೆ ಎಂಬುದರ ಬಗ್ಗೆ ವಿವರವಾಗಿ ಪೌಷ್ಟಿಕ ಆಹಾರ ತಜ್ಞೆ ಡಾ. ಎಚ್. ಎಸ್ ಪ್ರೇಮಾ ತಿಳಿಸಿಕೊಟ್ಟಿದ್ದಾರೆ. ಅವರ ಮಾತುಗಳನ್ನೇ ನಾವಿಲ್ಲ ನೀಡಿದ್ದೇವೆ. ಸಂವಾದ ಫೇಸ್ಬುಕ್ ಫೇಜ್‌ನಲ್ಲಿ ಹಂಚಿಕೊಂಡ ವಿಡಿಯೋ ವಿಷಯಗಳು ಇಲ್ಲಿದೆ ಗಮನಿಸಿ.
ತರಕಾರಿ ಹಾಗೂ ಸೊಪ್ಪು ಇವುಗಳನ್ನು ತಿನ್ನಬೇಕು. ತಿಂದರೆ ಆರೋಗ್ಯ ವೃದ್ದಿ ಆಗುತ್ತದೆ ಎಂಬ ಅಂಶ ಎಲ್ಲರಿಗೂ ತಿಳಿದಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸೊಪ್ಪುಗಳನ್ನಷ್ಟೇ ನಾವು ಇಂದು ಬಳಕೆ ಮಾಡುತ್ತಾ ಇದ್ದೇವೆ. ಇದರ ಹೊರತಾಗಿಯೂ ಹಲವು ರೀತಿಯ ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಅವುಗಳ ಕುರಿತು ಜನರಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಕೈಗೆಟಕುವ ಮತ್ತು ಸುಲಭವಾಗಿ ಬೆಳೆಯಲು ಸಾಧ್ಯವಾಗುವ ಸೊಪ್ಪುಗಳನ್ನು ಮಾತ್ರ ಬಳಕೆ ಮಾಡುತ್ತಾ ಬಂದಾಗಿದೆ. ಆದರೆ ಹಿಂದೆ ಎಷ್ಟು ರೀತಿಯ ಸೊಪ್ಪುಗಳನ್ನು ಬಳಕೆ ಮಾಡಲಾಗುತ್ತಿತ್ತೋ ಇಂದು ಅಷ್ಟು ಸೊಪ್ಪುಗಳನ್ನು ಬಳಕೆ ಮಾಡುತ್ತಿಲ್ಲ. ಆದರೆ ಇವುಗಳಿಂದ ಏನೆಲ್ಲ ಪ್ರಯೋಜನ ಇದೆ. ಮತ್ತು ಎಷ್ಟೊಂದು ಬೇರೆ ಬೇರೆ ವಿಧನಾದ ಸೊಪ್ಪುಗಳನ್ನು ಮಾನವ ತಿನ್ನಬಹುದು ಈ ಬಗ್ಗೆ ಮಾಹಿತಿಯನ್ನು ಡಾ. ಎಚ್. ಎಸ್ ಪ್ರೇಮಾ ಸಂವಾದ ಫೇಸ್ಬುಕ್ ಫೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಚಾರ ಏನು ಎಂಬುದು ಇಲ್ಲಿದೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ನಾಲ್ಕಾರು ಬಗೆಯ ಸೊಪ್ಪುಗಳನ್ನು ಮಾತ್ರ ನೀವು ಬಳಸುತ್ತಾ ಇರುತ್ತೀರಿ. ಆದರೆ ಪ್ರಾಕೃತಿಕವಾಗಿ ಹಾಗೂ ನೈಸರ್ಗಿಕವಾಗಿ ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಲು ತುಂಬಾ ಈ ಸೊಪ್ಪುಗಳು ಪ್ರಯೋಜನಕಾರಿಯಾಗಿದೆ. ಇದು ಎಷ್ಟೆಲ್ಲಾ ಪ್ರಯೋಜನ ನೀಡುತ್ತದೆ ಎಂದು ನಿಮಗೆ ತಿಳಿದರೆ ಸೊಪ್ಪುಗಳ ಮೇಲೆ ನಿಮ್ಮ ಪ್ರೀತಿ ಖಂಡಿತ ಹೆಚ್ಚಾಗುತ್ತದೆ ಎನ್ನುತ್ತಾರೆ ಪ್ರೇಮಾ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಹೇಳಿದ್ದೇನು?
‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್’ (NIN) ಮಾನವ ತಿನ್ನಬಹುದಾದ ಸಾವಿರಕ್ಕೂ ಅಧಿಕ ಸೊಪ್ಪುಗಳನ್ನು ಗುರುತಿಸಿದೆ. ಅದರಲ್ಲೂ ನಮ್ಮ ಭಾರತದಲ್ಲಿ 200 ಬಗೆಯ ಸಸ್ಯಗಳು ತಿನ್ನಲು ಅರ್ಹವಾಗಿದೆ ಎಂದು ತಿಳಿಸಿದೆ. ಈಗ ನೀವೇ ಯೋಚಿಸಿ ನಿಮಗೆಷ್ಟು ಬಗೆಯ ಸೊಪ್ಪುಗಳು ಗೊತ್ತಿದೆ ಎಂದು.
ಕೃಷಿಯ ಫಲವಾಗಿ ಸಿಕ್ಕ ಸೊಪ್ಪುಗಳು
ಪಾಲಕ್ ಸೊಪ್ಪು, ದಂಟು ಸೊಪ್ಪು, ನುಗ್ಗೆ ಸೊಪ್ಪು, ಕರಿಬೇವಿನ ಸೊಪ್ಪು ,ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು, ಹರಿವೆ ಸೊಪ್ಪು ಹೀಗೆ ಇನ್ನೊಂದಷ್ಟು ಸೊಪ್ಪುಗಳು ನಿಮಗೆ ಗೊತ್ತಿದೆ. ಕೃಷಿಯ ಮೂಲಕ ಯಾವ ಸೊಪ್ಪುಗಳನ್ನು ಬೆಳೆದರೋ ಅದನ್ನಷ್ಟೇ ನಾವಿಂದು ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಲಾಭದ ಅಂಶ ಹಾಗೆ ಕೃಷಿ ಅಂಶ ಎಲ್ಲವೂ ಬರುತ್ತದೆ. ಮತ್ತೆ ಬೆಳೆಯಲು ಸುಲಭವಾದದ್ದು, ಯಾವುದನ್ನು ಬೆಳೆದರೆ ಹೆಚ್ಚಿನ ಪ್ರಮಾಣದಲ್ಲಿ ಫಲ ಸಿಗುತ್ತೆ? ಇದೆಲ್ಲದರ ಪ್ರತಿಫಲವಾಗಿ ನಾವು ಇಂದು ಕೆಲವು ಸೊಪ್ಪುಗಳನ್ನು ಮಾತ್ರ ತಿನ್ನುತ್ತಿದ್ದೇವೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸೊಪ್ಪು ಕೊಡು ಮನುಷ್ಯನ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ನೀಡುತ್ತದೆ.
ಹಿಂದೆ ಮಾನವ ಎಲ್ಲ ರೀತಿಯ ಸೊಪ್ಪುಗಳನ್ನು ತಿನ್ನುತ್ತಿದ್ದ. ಅಥವಾ ಹಸಿಯಾಗಿ ಕೆಲವು ಸೊಪ್ಪುಗಳನ್ನು ತಿನ್ನುತ್ತಿದ್ದ. ಇನ್ನು ಕೃಷಿ ಬಂದಮೇಲೆ ಅದನ್ನು ಬೆಳೆಯುವಾಗ ಅಲ್ಲಿ ಸಾಕಷ್ಟು ರೀತಿಯ ಸೊಪ್ಪುಗಳು ಅಥವಾ ಸಸ್ಯಗಳು ಹುಟ್ಟಿಕೊಂಡರೂ ಅದನ್ನು ಕಳೆ ಎಂದು ಪರಿಗಣಿಸಿ ಕಿತ್ತು ಬಿಸಾಕಲಾಯಿತು.
ದಂಟು ಸೊಪ್ಪಿನ ವಿಶೇಷತೆ
ದಂಟು ಸೊಪ್ಪು ತುಂಬಾ ಆರೋಗ್ಯಕರ. ಇದಕ್ಕೆ ದೇವರು ಒಂದು ವರವನ್ನು ನೀಡಿದ್ದಾನೆ. ಇದರಿಂದ ಹುಟ್ಟುವ ಬೀಜಗಳು ಅದರ ಪ್ರಮಾಣ ಎಷ್ಟಿರುತ್ತದೆ ಎಂದರೆ ಒಂದು ಮಿಲಿಯನ್ ಬೀಜವನ್ನು ಉತ್ಪತ್ತಿ ಮಾಡುತ್ತದೆ. ಹರಿವೆ ಸೊಪ್ಪಿನಲ್ಲಿ ನೀವು ನೋಡಬಹುದು ಅದಕ್ಕೆ ಎಷ್ಟೊಂದು ಬೀಜಗಳಿರುತ್ತದೆ ಎಂದರೆ ಭೂಮಿಯಿಂದ ಅದನ್ನು ನಾಶ ಮಾಡಲು ಸಾಧ್ಯವಿಲ್ಲ ಅಷ್ಟೊಂದು ಬೀಜಗಳು ಅದರಲ್ಲಿ ಇರುತ್ತವೆ.
ಸೊಪ್ಪು ಎಲ್ಲೆಲ್ಲಿ ಬೆಳೆಯುತ್ತದೆ?
ಸೊಪ್ಪುಗಳು ಎಲ್ಲೆಲ್ಲಿ ಸಿಗುತ್ತವೆ ಎಂದು ನೋಡೋದಾದ್ರೆ ಬರೀ ನೆಲದಲ್ಲಿ ಸಿಗುವ ಸೊಪ್ಪುಗಳು ಮಾತ್ರ ಅಲ್ಲ. ಮರದಲ್ಲಿ, ನೀರಿನಲ್ಲಿ ಕೂಡ ಈ ಸೊಪ್ಪುಗಳು ಬೆಳೆಯುತ್ತದೆ. ಬಳ್ಳಿಯಾಗಿ ಬೆಳೆಯುತ್ತದೆ. ಮಲೆನಾಡು ಮತ್ತು ಹಿಮಾಲಯ ಈ ರೀತಿ ಪರ್ವತಗಳು ಇರುವ ಪ್ರದೇಶಗಳಲ್ಲಿನ ಜನರು ಹೆಚ್ಚಾಗಿ ಸೊಪ್ಪನ್ನು ತಿನ್ನುತ್ತಾರೆ. ಅವರಿಗೆ ಗೊತ್ತಿದೆ ಯಾವಾಗ ಯಾವ ಮಾಸದಲ್ಲಿ, ಯಾವ ಋತುವಿನಲ್ಲಿ ಯಾವ ಸೊಪ್ಪನ್ನು ತಿನ್ನಬೇಕು? ಯಾವ ಸುಪ್ಪನ್ನು ಬಳಕೆ ಮಾಡಿದರೆ ಏನಾಗುತ್ತದೆ? ಎಂಬ ಜ್ಞಾನ ಇದೆ ಎಂದಿದ್ದಾರೆ.
ಎಲ್ಲಿರಿಗೂ ತಿಳಿದಿರುವ ಸೊಪ್ಪುಗಳ ಪ್ರಯೋಜನ
ಇನ್ನೂ ನಮಗೆ ಸುಲಭವಾಗಿ ಲಭ್ಯವಿರುವ ಮತ್ತು ಎಲ್ಲರಿಗೂ ಗೊತ್ತಿರುವ ಸೊಪ್ಪು ಎಂದರೆ ಅದು ಪಾಲಕ್ ಸೊಪ್ಪು. ಹಾಗಾದ್ರೆ ಈ ಪಾಲಕ್ ಸೊಪ್ಪು ಯಾವ ರೀತಿ ಪ್ರಯೋಜನವನ್ನು ನೀಡುತ್ತದೆ?
ಪಾಲಕ್ ಸೊಪ್ಪು ಬೆಳೆಯುವ ಮಕ್ಕಳಿಗೆ
ಗರ್ಭಿಣಿಯರಿಗೆ
ಹದಿಹರೆಯದವರಿಗೆ
ಬಾಣಂತಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಇದರಲ್ಲಿ ರಕ್ತ ಹೆಚ್ಚಿಸುವ ಅಂಶಗಳಿದೆ.
ಸಾಸಿವೆ ಸೊಪ್ಪು
ಸರಸೊಂಖಾ ಸಾಗು, ಮಕ್ಕಿ ರೊಟ್ಟಿ ಅಂತ ಮಾಡುವ ಸಾಸಿವೆ ಸೊಪ್ಪಿನ ಪದಾರ್ಥ ತುಂಬಾ ಪ್ರಸಿದ್ಧ. ಸಾಸಿವೆ ಸೊಪ್ಪು ಕೂಡ ತುಂಬಾ ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ. ಇದು ತುಂಬಾ ಕಠುವಾದ ಪರಿಮಳ ಮತ್ತು ಉತ್ತಮ ರುಚಿಯನ್ನು ಸಹ ಹೊಂದಿರುತ್ತದೆ.
ಹೆಣ್ಣು ಮಕ್ಕಳನ್ನು ಕಾಡುವ ಅನೇಮಿಯಾಕ್ಕೆ ಪರಿಹಾರ
ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಅನೇಮಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದನ್ನು ತಡೆಕೊಟ್ಟೋಕೆ ಸೊಪ್ಪುಗಳು ತುಂಬಾ ಉಪಯುಕ್ತವಾದವು. ಹಸಿ ಸೊಪ್ಪುಗಳು ಹಿಮೋಗ್ಲೋಬಿನ್ ವೃದ್ಧಿ ಮಾಡುತ್ತವೆ.
ಒಂದೆಲಗ ಕರಿಬೇವು, ಪಾಲಕ್ ಪುದಿನ ಕೊತ್ತಂಬರಿ ಸೊಪ್ಪು ಇವೆಲ್ಲವನ್ನೂ ನಾವು ದಿನನಿತ್ಯ ಬಳಸುತ್ತೇವೆ. ಇವುಗಳನ್ನು ಕಡೆಗಣಿಸುವಂತಿಲ್ಲ ಇದೆಲ್ಲದರಲ್ಲೂ ಆರೋಗ್ಯಕರ ಅಂಶಗಳಿದೆ. ಕರಿಬೇವಿನ ಸೊಪ್ಪಿನಲ್ಲಿರುವ ಎಣ್ಣೆ ಅಂಶ ಜೀವಕ್ಕೆ ಬಹಳ ಉಪಯುಕ್ತ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಕೂದಲು ಕಪ್ಪಾಗುವಂತೆ ಮಾಡುತ್ತದೆ. ಪ್ರೋಟೀನ್, ಫೈಬರ್ ಮತ್ತು ಕಾರ್ಬೋಹೈಡ್ರೇಟ್ಸ್ ನಮಗೆ ದೊರೆಯುವಂತೆ ಮಾಡಿ ನಮ್ಮ ಸರ್ವತೋಮುಖ ಆರೋಗ್ಯ ಬೆಳವಣಿಗೆಗೆ ಇವು ಸಹಾಯ ಮಾಡುತ್ತದೆ.
ವಿಭಾಗ