logo
ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಾಯಾಮ, ಸರಿಯಾದ ಡಯೆಟ್‌ ಕ್ರಮ ಪಾಲಿಸಿದ್ರೂ ತೂಕ ಇಳಿಕೆ ಆಗ್ತಿಲ್ಲ ಅಂದ್ರೆ ನೀವು ಈ ತಪ್ಪು ಮಾಡ್ತಾ ಇರಬಹುದು, ಗಮನಿಸಿ

ವ್ಯಾಯಾಮ, ಸರಿಯಾದ ಡಯೆಟ್‌ ಕ್ರಮ ಪಾಲಿಸಿದ್ರೂ ತೂಕ ಇಳಿಕೆ ಆಗ್ತಿಲ್ಲ ಅಂದ್ರೆ ನೀವು ಈ ತಪ್ಪು ಮಾಡ್ತಾ ಇರಬಹುದು, ಗಮನಿಸಿ

Reshma HT Kannada

Dec 16, 2024 12:57 PM IST

google News

ತೂಕ ಇಳಿಕೆ ಸಲಹೆ

    • ತೂಕ ಇಳಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಹಲವರಿಗೆ ಸವಾಲಾಗಿರುವುದು ಸುಳ್ಳಲ್ಲ. ಆರೋಗ್ಯಕರ ಆಹಾರ ಸೇವನೆ, ಸರಿಯಾದ ವ್ಯಾಯಾಮ ಮಾಡಿದ್ರೂ ತೂಕ ಕಡಿಮೆ ಆಗುತ್ತಿಲ್ಲ ಅಂದ್ರೆ ನೀವು ಈ ತಪ್ಪುಗಳನ್ನು ಮಾಡುತ್ತಿರಬಹುದು ಎಂದರ್ಥ. ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ, ಇದರಿಂದ ತೂಕ ಹೆಚ್ಚಾಗಿ ಕಾಣಿಸಬಹುದು.
ತೂಕ ಇಳಿಕೆ ಸಲಹೆ
ತೂಕ ಇಳಿಕೆ ಸಲಹೆ (PC: Canva)

ತೂಕ ಹೆಚ್ಚಿಸಿಕೊಳ್ಳುವುದು ಖಂಡಿತ ಕಷ್ಟವಲ್ಲ, ಆದರೆ ಒಮ್ಮೆ ತೂಕ ಹೆಚ್ಚಾದ್ರೆ ಇಳಿಸಿಕೊಳ್ಳುವುದು ಖಂಡಿತ ಸವಾಲು. ಇದಕ್ಕಾಗಿ ಸಾಕಷ್ಟು ಸಮಯ ಬೇಕಾಗುತ್ತದೆ. ಅಧಿಕ ತೂಕ ಹಾಗೂ ಸ್ಥೂಲಕಾಯ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹೇಗೆಪ್ಪಾ ತೂಕ ಇಳಿಸಿಕೊಳ್ಳೋದು ಎನ್ನುವುದು ಹಲವರ ಚಿಂತೆಯಾಗಿದೆ. ಇದಕ್ಕಾಗಿ ಸಾಕಷ್ಟು ಸರ್ಕಸ್ ಮಾಡಲಾಗುತ್ತದೆ. ಆದರೂ ಕೆಲವೊಮ್ಮೆ ತೂಕ ಇಳಿಕೆಯಾಗುವುದಿಲ್ಲ.

ತೂಕ ಹೆಚ್ಚಾಗುವುದರಿಂದ ಅಂದ ಕೆಡುವುದು ಮಾತ್ರವಲ್ಲ, ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೀಲು ನೋವು ಮುಂತಾದ ಸಮಸ್ಯೆಗಳಿಗೆ ಅಧಿಕ ತೂಕ ಕಾರಣವಾಗಬಹುದು. ಆದ್ದರಿಂದ ತೂಕ ನಿಯಂತ್ರಿಸುವುದು ಅತಿಮುಖ್ಯವಾಗಿದೆ.

ಹಲವರು ತೂಕ ಇಳಿಸಿಕೊಳ್ಳಲು ‍ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಸರಿಯಾದ ಡಯೆಟ್ ಕ್ರಮವನ್ನು ಪಾಲಿಸುತ್ತಾರೆ. ಜಂಕ್ ಫುಡ್ ಸೇವನೆಗೆ ಕಡಿವಾಣ ಹಾಕುತ್ತಾರೆ. ಆದರೆ ಇಷ್ಟೆಲ್ಲಾ ಮಾಡಿದ ಮೇಲೂ ಅವರು ತೂಕ ಕಡಿಮೆಯಾಗುತ್ತಿಲ್ಲ ಅಂತ ಚಿಂತೆ ಮಾಡ್ತಾರೆ. ಅಂತಹವರು ತಮಗೆ ಯಾಕೆ ತೂಕ ಇಳಿಯುತ್ತಿಲ್ಲ ಎನ್ನುವ ಯೋಚನೆ ಶುರುವಾಗುತ್ತದೆ. ಅಂತಹವರು ಈ ಕೆಲವು ತಪ್ಪುಗಳನ್ನು ಮಾಡುತ್ತಿರಬಹುದು, ಅದಕ್ಕಾಗಿ ಅವರಲ್ಲಿ ತೂಕ ಹೆಚ್ಚಾಗಿ ಕಾಣಿಸಬಹುದು.

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ನಿಮಗೆ ಅರಿವಾಗದಂತೆ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ತೂಕ ಕಡಿಮೆಯಾಗುವುದನ್ನು ತಪ್ಪಿಸಬಹುದು. ಫಿಟ್ನೆಸ್ ಟ್ರೈನರ್ ಶಿತಿಜಾ ವ್ಯಾಯಾಮ, ಡಯೆಟ್ ಕ್ರಮ ಸರಿ ಇದ್ದರೂ ತೂಕ ಇಳಿಕೆಗೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.

ಈ ತಪ್ಪುಗಳನ್ನು ಮಾಡಬೇಡಿ

ನೀವು ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಿಲ್ಲ ಎಂದಾದಲ್ಲಿ ಈ ತಪ್ಪುಗಳನ್ನು ನೀವು ಮಾಡುತ್ತಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ.

  • ರಾತ್ರಿ ಹೊತ್ತು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸುವುದು ತೂಕ ಹೆಚ್ಚಲು ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
  • ಅತಿಯಾದ ಒತ್ತಡವೂ ಕೂಡ ತೂಕ ಏರಿಕೆಗೆ ಪ್ರಮುಖ ಕಾರಣವಾಗಿದೆ.
  • ಭಾರವಾದ ವ್ಯಾಯಾಮಗಳನ್ನು ಮಾಡುವುದರಿಂದ, ಸ್ನಾಯುಗಳನ್ನು ಕಳೆದುಕೊಳ್ಳುವ ಬದಲು ಬಲವನ್ನು ಪಡೆಯುತ್ತದೆ. ಇದರಿಂದ ತೂಕ ಹೆಚ್ಚಾದಂತೆ ಕಾಣಿಸಬಹುದು.
  • ತಡರಾತ್ರಿಯಲ್ಲಿ ತಿನ್ನುವುದು ಕೂಡ ತೂಕ ಏರಿಕೆಗೆ ಕಾರಣವಾಗುವುದು.
  • ಅಸಮರ್ಪಕ ನಿದ್ದೆ, ನಿದ್ದೆ ಕಡಿಮೆಯಾದರೂ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.

ತೂಕ ಮಾಡುವ ಮುನ್ನ ನಿಮ್ಮ ಹೊಟ್ಟೆ ಖಾಲಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಶೌಚಾಲಯಕ್ಕೆ ಹೋಗದೆ ನಿಮ್ಮ ತೂಕ ಅಳತೆ ಮಾಡಬೇಡಿ. ಅಂತಹ ಸಮಯದಲ್ಲೂ, ತೂಕವು ಹೆಚ್ಚು ಕಾಣಿಸಿಕೊಳ್ಳುತ್ತದೆ.

ಹೆಚ್ಚು ಉಪ್ಪು ಮತ್ತು ಸೋಡಿಯಂ ಭರಿತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಧಾರಣ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ, ತೂಕವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ನೀವು ತೂಕವನ್ನು ಕಳೆದುಕೊಳ್ಳುತ್ತಿದ್ದರೆ ನಿಮಗೆ ಹೇಗೆ ಗೊತ್ತು?

- ತೂಕದ ಯಂತ್ರದ ಮೇಲೆ ನಿಂತಿರುವಾಗ ನೀವು ತೂಕವನ್ನು ಕಳೆದುಕೊಂಡಂತೆ ತೋರದಿದ್ದರೆ ಗಾಬರಿಯಾಗಬೇಡಿ. ನೀವು ಪ್ರತಿದಿನ ತೂಕವನ್ನು ಕಳೆದುಕೊಳ್ಳುವ ಬದಲು ತೂಕ ಹೆಚ್ಚಾಗುವುದನ್ನು ನೋಡುತ್ತಿದ್ದರೆ, ಅದು ನಿಮ್ಮ ವ್ಯಾಯಾಮ ಅಥವಾ ಮೇಲೆ ತಿಳಿಸಿದ ತಪ್ಪುಗಳಿಂದಾಗಿ ಎಂದು ತಿಳಿಯಿರಿ.

ಪ್ರತಿದಿನ ಮೆಟ್ಟಿಲುಗಳ ಮೇಲೆ ಮತ್ತು ಕೆಳಗೆ ನಡೆಯುವುದು ತೂಕ ಇಳಿಸಿಕೊಳ್ಳಲು ಸುಲಭವಾದ ಮಾರ್ಗವಾಗಿದೆ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ