logo
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: 11 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ತೂಕನಷ್ಟಕ್ಕೆ ಇವರು ನೀಡಿದ 4 ಫಾರ್ಮುಲಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

Weight Loss: 11 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ತೂಕನಷ್ಟಕ್ಕೆ ಇವರು ನೀಡಿದ 4 ಫಾರ್ಮುಲಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

Praveen Chandra B HT Kannada

Nov 25, 2024 01:17 PM IST

google News

Weight Loss: 11 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ತೂಕ ಇಳಿಕೆಗೆ 4 ಸೂತ್ರಗಳು

    • Weight Loss: ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ? ಎನ್ನುವುದು ಬಹುತೇಕರ ಪ್ರಶ್ನೆ. ಇಲ್ಲೊಬ್ಬರು 18 ಕೆಜಿ ತೂಕ ಇಳಿಸಿಕೊಳ್ಳಲು 4 ಸೂತ್ರಗಳನ್ನು ಅನುಸರಿಸಿದ್ದಾರೆ. ಇವರು ಹಂಚಿಕೊಂಡ ಈ ಸೂತ್ರಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Weight Loss: 11 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ,  ತೂಕ ಇಳಿಕೆಗೆ 4 ಸೂತ್ರಗಳು
Weight Loss: 11 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ತೂಕ ಇಳಿಕೆಗೆ 4 ಸೂತ್ರಗಳು

Weight Loss: ಈಗಿನ ಜೀವನಶೈಲಿ, ಆಹಾರ ಕ್ರಮ, ಕೆಲಸದ ರೀತಿಗಳಿಂದ ಸಾಕಷ್ಟು ಜನರ ದೇಹದಲ್ಲಿ ಕೊಬ್ಬು ಹೆಚ್ಚುತ್ತಿದೆ. ಸ್ಥೂಲಕಾಯ ಸಮಸ್ಯೆಯಿಂದ ಬಳಲುವವರು ತೂಕ ಇಳಿಕೆ ಮಾಡಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಕಷ್ಟಪಟ್ಟು ಪ್ರಯತ್ನಿಸಿದರೆ ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ತೂಕ ಇಳಿಕೆ ವಿಚಾರದಲ್ಲೂ ಸಾಕಷ್ಟು ಜನರು ಈ ರೀತಿ ಮಾಡಿ ಸಾಧಿಸಿ ತೋರಿಸಿದ್ದಾರೆ. ಕೆಲವರು ತೂಕ ಇಳಿಕೆ ಜರ್ನಿಯ ತಮ್ಮ ಸಕ್ಸಸ್‌ ಸ್ಟೋರಿಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ. ಇದು ಇತರರಿಗೂ ಸ್ಫೂರ್ತಿಯಾಗುತ್ತದೆ. ಇತ್ತೀಚೆಗೆ ಮ್ಯಾಡಿ ಸೇ ಎಂಬ ಮಹಿಳೆ ತನ್ನ ವೇಟ್‌ ಲಾಸ್‌ ಜರ್ನಿಯಲ್ಲಿ ಅನುಸರಿಸಿದ ಅಮೂಲ್ಯ ಸೂತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸೂತ್ರಗಳನ್ನು ಅನುಸರಿಸಿ ಅವರು 11 ತಿಂಗಳಲ್ಲಿ 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ. ತೂಕ ಇಳಿಸಲು ಅವರು ನೀಡಿರುವ 4 ಸೂತ್ರಗಳು ಈ ಮುಂದಿನಂತೆ ಇದೆ.

ಈಕೆ ಮಾಡಿರುವ ವ್ಯಾಯಾಮಗಳು

ಮ್ಯಾಡಿ ತನ್ನ ಚಯಾಪಚಯ ಪ್ರಕ್ರಿಯೆ ಸುಧಾರಿಸು ಮತ್ತು ಸ್ನಾಯು ಬಲ ಹೆಚ್ಚಿಸಲು ಪವರ್‌ ಟ್ರೇನಿಂಗ್‌ ಮತ್ತು ಕಾರ್ಡಿಯೋ ವರ್ಕೌಟ್‌ ಮಾಡಿದ್ದೇನೆ ಎಂದಿದ್ದಾರೆ. ಈ ರೀತಿಯ ವ್ಯಾಯಮಗಳಿಂದ ಕ್ಯಾಲೊರಿ ಬರ್ನ್‌ ಆಗುತ್ತದೆ, ಫಿಟ್‌ನೆಸ್‌ ದೊರಕುತ್ತದೆ, ಇದು ತೂಕ ಇಳಿಕೆಗೂ ಉಪಯುಕ್ತ ಎಂದು ಅವರು ಹೇಳಿದ್ದಾರೆ.

ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ

ತೂಕ ಇಳಿಸಿಕೊಳ್ಳಲು ಪ್ರತಿದಿನ 2 ಲೀಟರ್ ನಿಂದ 3 ಲೀಟರ್ ನೀರು ಕುಡಿಯುವುದು ಮುಖ್ಯ ಎಂದು ಮ್ಯಾಡಿ ಹೇಳಿದ್ದಾರೆ. ದೇಹವು ಹೈಡ್ರೇಟೆಡ್ ಆಗಿರುವುದರಿಂದ ಅನೇಕ ಪ್ರಯೋಜನಗಳಿವೆ. ಸಾಕಷ್ಟು ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದು ದೇಹದ ಶಕ್ತಿ ಹೆಚ್ಚಿಸುತ್ತದೆ. ದೇಹದ ತ್ಯಾಜ್ಯ ಹೊರಹಾಕಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆಹಾರಕ್ಕಾಗಿ 80/20 ನಿಯಮ

ಮ್ಯಾಡಿ ತನ್ನ ತೂಕ ನಷ್ಟ ಪ್ರಯಾಣದ ಸಮಯದಲ್ಲಿ ಆಹಾರ ಸೇವನೆಗೆ 80/20 ಆಹಾರ ನಿಯಮವನ್ನು ಅನುಸರಿಸಿದ್ದರಂತೆ. ಪೋಷಕಾಂಶ ಹೇರಳವಾಗಿರುವ ಶೇಕಡ 80ರಷ್ಟು ಆಹಾರಗಳು ಮತ್ತು ಶೇಕಡ 20 ಪ್ರತಿನಿತ್ಯ ತಿನ್ನುವ, ಇಷ್ಟದ, ರುಚಿಕರವಾದ, ಆಸೆ ಹುಟ್ಟಿಸುವಂತಹ ಸಾಮಾನ್ಯ ಆಹಾರಗಳು. ಇಂತಹ ಸಮತೋಲಿತ ಆಹಾರ ಕ್ರಮದಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ದೊರಕುತ್ತದೆ. ಇದರಿಂದ ತೂಕ ಇಳಿಸುವ ಪ್ರಯಾಣವೂ ಖುಷಿಯಿಂದ ಕೂಡಿತ್ತು ಎಂದು ಅವರು ಹೇಳಿದ್ದಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರೋಟೀನ್, ಫೈಬರ್ ಮತ್ತು ಅಗತ್ಯ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

10 ದಿನಗಳಿಗೊಮ್ಮೆ ಫೋಟೋ ಕ್ಲಿಕ್ಕಿಸಿ

10 ದಿನಕ್ಕೊಮ್ಮೆ ನಾನು ನನ್ನ ಫೋಟೋ ತೆಗೆಯುತ್ತಿದ್ದೆ ಎಂದು ಅವರು ಹೇಳಿದ್ದಾರೆ. ದೇಹದಲ್ಲಿ ಎಷ್ಟು ಬದಲಾವಣೆಯಾಗಿದೆ ಎಂಬುದನ್ನು ಪರೀಕ್ಷಿಸಲು ಮತ್ತು ವಿಶ್ಲೇಷಿಸಲು ಫೋಟೋಗಳು ನೆರವಾಗುತ್ತದೆ. ದೇಹದ ಆಕಾರ ಬದಲಾಗುತ್ತಿರುವುದನ್ನು ನೋಡುತ್ತಿದ್ದರೆ, ಮತ್ತಷ್ಟು ತೂಕ ಇಳಿಕೆ ಮಾಡಲು ಸ್ಪೂರ್ತಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡಿಸ್‌ಕ್ಲೈಮರ್‌/ಹಕ್ಕುತ್ಯಾಗ: ಇದು ಮಾಹಿತಿಗಾಗಿ ನೀಡಿದ ಬರಹ. ಇದೇ ರೀತಿ ತೂಕ ಇಳಿಕೆ ಮಾಡಲು ಪ್ರಯತ್ನಿಸಿ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಓದುಗರಿಗೆ ಶಿಫಾರಸು ಮಾಡುವುದಿಲ್ಲ. ತೂಕ ಇಳಿಕೆ ಮಾಡಲು ಬಯಸುವವರು ತಜ್ಞರ ನೆರವು ಪಡೆದು ಮುಂದುವರೆಯಬೇಕು. ಪ್ರತಿಯೊಬ್ಬರ ದೇಹದ ಸ್ಥಿತಿ, ಆರೋಗ್ಯ ಬೇರೆ ಬೇರೆ ಇರುತ್ತದೆ. ಎಲ್ಲರ ದೇಹ ಒಂದೇ ರೀತಿ ಇರುವುದಿಲ್ಲ. ನಿಮ್ಮ ಆರೋಗ್ಯ, ಮಾನಸಿಕ ಸ್ಥಿತಿ, ಕಾಯಿಲೆ ಇತಿಹಾಸ ಇತ್ಯಾದಿಗಳು ತೂಕ ಇಳಿಕೆ ಪ್ರಯಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ, ಇಲ್ಲಿ ನೀಡಲಾದ ವಿವರವನ್ನು ಮಾಹಿತಿ ಎಂದಷ್ಟೇ ಪರಿಗಣಿಸಬೇಕು. ನೀವು ತೂಕ ಇಳಿಕೆ ಮಾಡಬೇಕೆಂದಿದ್ದರೆ ತಜ್ಞರನ್ನು ಸಂಪರ್ಕಿಸಿ ಮುಂದುವರೆಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ